Morning Digest: ಬೆಳಗಾವಿಗೂ ಕಾಲಿಟ್ಟ ವಿವಾದ, ದುಬಾರಿಯಾದ ಚಿನ್ನ, ಬೆಂಗಳೂರು ಕೆರೆಗೆ ಸಂಸ್ಕರಿಸಿದ ನೀರು: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Belagavi: ಬೆಳಗಾವಿಗೂ ಕಾಲಿಟ್ಟ ಮಸೀದಿ, ಮಂದಿರ ವಿವಾದ; ಕುಂದಾನಗರಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿಕೆಯ ಕಿಚ್ಚು

ಮಂಗಳೂರು, ಕಲಬುರಗಿ, ಬೀದರ್ ಬಳಿಕ ಮಸೀದಿ-ಮಂದಿರ (Mosque- Temple Row) ವಿವಾದ ಇದೀಗ ಬೆಳಗಾವಿಗೂ ಕಾಲಿಟ್ಟಿದೆ. ಬೆಳಗಾವಿಯಲ್ಲಿ (Belagavi) ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಿಸಿದ್ದಾರೆ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ್ (BJP MLA Abhay Patil) ಹೊಸ ಬಾಂಬ್ ಸಿಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮಸೀದಿ-ಮಂದಿರ ವಿವಾದ ಹೊಸ ಕಿಚ್ಚು ಹೊತ್ತಿಸಿದೆ. ಹಿಜಾಬ್ (Hijab), ಹಲಾಲ್ ಕಟ್ (Halalcut), ಅಜಾನ್ (Azan) ವಿವಾದ ರಾಜ್ಯದಲ್ಲಿ ತಣ್ಣಗಾಗುತ್ತಿದ್ದಂತೆ ಮಸೀದಿ-ಮಂದಿರ ವಿವಾದ ಹುಟ್ಟಿಕೊಂಡಿದೆ. ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದು ಬೆಳಗಾವಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

2.Bagalkot: ಮುಸ್ಲಿಂ ಟೋಪಿ ಧರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ: 6 ಪೊಲೀಸರು, ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಮುಸ್ಲಿಂ ಟೋಪಿ ಧರಿಸಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಲೇಜಿನ ಪ್ರಾಂಶುಪಾಲ ಮತ್ತು ಆರು ಜನ ಪೊಲೀಸರ ವಿರುದ್ಧ ಎಫ್ಐಆರ್ ದಾಖಲು ಆಗಿದ್ದು, ಸ್ಥಳೀಯ ನ್ಯಾಯಾಲಯ ತನಿಖೆ ನಡೆಸುವಂತೆ ಸೂಚನೆ ನೀಡಿದೆ. 19 ವರ್ಷದ ನವೀದ್ ಹಸನ್ ಸಾಬ್ ಥರಾತರಿ ಹಲ್ಲೆಗೊಳಗಾದ ವಿದ್ಯಾರ್ಥಿ. ಬಾಗಲಕೋಟೆ ಜಿಲ್ಲೆಯ ತೇರದಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದಾನೆ. ಫೆಬ್ರವರಿ 18ರಂದು ಈ ಘಟನೆ ನಡೆದಿದೆ. ಟೋಪಿ ಧರಿಸಿದ್ದಕ್ಕೆ ನವೀದ್ ನನ್ನು ಅವಮಾನಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

3.Bengaluru Lakes: ಬೆಂಗಳೂರಿನ ಕೆರೆಗಳಿಗೆ ಸಂಸ್ಕರಿಸಿದ ನೀರು; ಸರ್ಕಾರದಿಂದ ಮಹತ್ವದ ನಿರ್ಧಾರ

ಕೆಂಪೇಗೌಡರು ಕಟ್ಟಿದ ಬೆಂಗಳೂರು (Bengaluru) ಒಂದು ಕಾಲದಲ್ಲಿ ಕೆರೆಗಳ ನಗರ (City Of Lake) ಎಂದು ಕರೆಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರೀಕರಣದಿಂದಾಗಿ ಬೆಂಗಳೂರಿನಲ್ಲಿರುವ ಕೆರೆಗಳು (Bengaluru Lakes) ಒಂದೊಂದಾಗಿ ಮಾಯವಾಗುತ್ತಿವೆ. ಇತ್ತ ಉಳಿದ ಕೆರೆಗಳು ಕೊಳಚೆ ನೀರಿನಿಂದ (Sewage Water) ತುಂಬಿಕೊಂಡು ಮಲೀನಗೊಂಡಿವೆ. ಈ ಕೆರೆಗಳ ನೀರು (Lake Water) ಬಳಕೆಗೆ ಯೋಗ್ಯವಾಗಿಲ್ಲ ಎಂಬ ಅಂಶ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಕೆರೆಗಳ ಮಲೀನತೆ ಮತ್ತು ಅದರ ನೀರು ಬಳಕೆ ಬಗ್ಗೆ ನ್ಯೂಸ್ 18 ಕನ್ನಡ ಡಿಜಿಟಲ್ ವಿವರವಾದ ವರದಿಯನ್ನು ಪ್ರಕಟಿಸಿತ್ತು. ಇದೀಗ ಬರಿದಾಗುತ್ತಿರುವ ಕೆರೆಗಳ ಪುನರ್ಜೀವನಕ್ಕೆ (Lake) ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಕೆರೆಗಳಿಗೆ (Recycle Water) ತುಂಬಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆ ಜಲಚರ ಜೀವಿಗಳ ನಿರ್ವಹಣೆ ಆಗಲಿದೆ.

4.Gold Price: ಮತ್ತೆ ದುಬಾರಿಯಾಯ್ತು ಚಿನ್ನ! ಇಂದಿನ ಗೋಲ್ಡ್-ಸಿಲ್ವರ್ ರೇಟ್ ಎಷ್ಟಿದೆ ಅಂತ ನೋಡಿ

ಮಾರುಕಟ್ಟೆಯಲ್ಲಿ (Market) ಮೂರ್ನಾಲ್ಕು ದಿನಗಳಿಂದ ಕೊಂಚ ತಗ್ಗಿದ ಬೆಲೆ ಮತ್ತೆ ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,775 ಇದ್ದದ್ದು ಇಂದು ಸಹ 4,775 ರೂಪಾಯಿಯ ಸಹಜ ಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ಇಂದು ಬೆಂಗಳೂರಿನಲ್ಲಿ (Bengaluru) 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,775 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,800, ರೂ. 47,750, ರೂ. 47,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,750 ರೂ. ಆಗಿದೆ.

5.Crazy Star Birthday: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್

ಮಿಗಳ ಪಾಲಿನ ಪ್ರೇಮಲೋಕ ಸೃಷ್ಟಿಸಿದ ಕ್ರೇಜಿಸ್ಟಾರ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಈ ದಿವನ್ನು ವಿಶೇಷ ರೀತಿಯಾಗಿ ಆಚರಿಸಲು ಸಹ ಸಿದ್ದತೆ ಮಾಡಿಕೊಂಡಿದ್ದು, ಸಿನಿಮಾ ರಂಗದ ಗಣ್ಯಾತಿ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಸಿದ್ದಾರೆ. ಚಿತ್ರರಂಗದಲ್ಲಿ ಎಲ್ಲಾ ರೀತಿಯ ಏಳು ಬೀಳುಗಳನ್ನು ನೋಡಿದ ನಟರಲ್ಲಿ ರವಿಚಂದ್ರನ್ ಒಬ್ಬರೂ, ಮೊದಲು ಸ್ಯಾಂಡಲ್​ವುಡ್​ ಹೇಗಿತ್ತು, ಈಗ ಹೇಗಿದೆ ಎಲ್ಲವನ್ನು ಬಲ್ಲ ನಟನ ಚತುರ ಇವರು. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ವಿಲನ್ ಆಗಿ , ನಂತರ ನಟನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರೇಜಿ ಸ್ಟಾರ್​ ಆಗಿ ಮೆರೆದ ಈ ನಟ, ಇಂದಿನ ಅದೆಷ್ಟೋ ನಟರಿಗೆ ಸ್ಫೂರ್ತಿ. ಕುಲಗೌರವ’ ಚಿತ್ರದಲ್ಲಿ ಬಾಲನಟನಾಗಿ ಡಾ ರಾಜ್​ಕುಮಾರ್ ಜೊತೆಗೆ ರವಿಚಂದ್ರನ್ ಮೊದಲು ಬಣ್ಣ ಹಚ್ಚಿದ್ದರು. ನಂತರ 1982ರಲ್ಲಿ ‘ಖದೀಮ ಕಳ್ಳರು’ ಚಿತ್ರದಲ್ಲಿ ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ, ಈ ಹೀರೋ ನಂತರ ತಿರುಗಿ ನೋಡಿಲ್ಲ.
Published by:Mahmadrafik K
First published: