Morning Digest: ಉಮೇಶ್ ಕತ್ತಿ Vs ಜಾರಕಿಹೊಳಿ, ಮೆಸ್ಕಾಂನಲ್ಲಿ ಮಸಾಲೆ ರುಬ್ತಾನೆ ಈತ, ಮೋದಿ ಸ್ಪಷ್ಟನೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Belagavi Politics: ಲಖನ್ ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ ಖಡಕ್ ಮಾತು

ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ (Election) ನಡೆಯುತ್ತಿದೆ. ಚುನಾವಣೆ ಎದುರಿಸಲು ಕಾಂಗ್ರೆಸ್, ಬಿಜೆಪಿ (Congress And BJP) ಒಗ್ಗಟ್ಟಿನ ಮಂತ್ರ ಜಪಿಸಿದೆ. ಬೆಳಗಾವಿ (Belagavi) ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ‌ ಸರಿಯಲ್ಲ ಎನ್ನುವುದು ಪದೇ ಪದೇ ಬಹಿರಂಗ ಆಗುತ್ತಿದೆ. ಕಳೆದ 6 ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ನಡೆದ ಚುನಾವಣೆಯಲ್ಲಿ (Vidhanaparishat Election) ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ (Mahantesh Kavatagimutt) ಸೋತಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಎರಡು ಬಣ ನಿರ್ಮಾಣವಾಗಿದ್ದು, ಪಕ್ಷದ ಮುಖಂಡರು ಏನಿಲ್ಲ ಮೇಲ್ನೋಟಕ್ಕೆ ಹೇಳುತ್ತಿದ್ದಾರೆ.

2.MESCOM ಕೇಂದ್ರದಲ್ಲಿಯೇ ಮಸಾಲೆ ರುಬ್ಬಿಕೊಂಡು ಹೋಗುವ ವ್ಯಕ್ತಿ: ಯಾವ ಅಧಿಕಾರಿಯೂ ತುಟಿಕ್ ಪಿಟಕ್ ಅಂತಿಲ್ಲ

ಗ್ರಾಮೀಣ ಭಾಗದಲ್ಲಿ (Rural Area() ವಿದ್ಯುತ್ ಸಮಸ್ಯೆ (Power Supply) ಸಾಮಾನ್ಯವಾಗಿರುತ್ತದೆ. ಒಂದೆರಡು ಗಂಟೆಗಳಾದ್ರೆ ಜನರು ಸಹ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಆದ್ರೆ ಸುಮಾರು ಸಮಯದವರೆಗೆ ವಿದ್ಯುತ್ (Electricity) ಕೈ ಕೊಟ್ಟ್ಟರೆ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸರಿಯಾದ ಸಮಯಕ್ಕೆ ವಿದ್ಯುತ್ ಪೂರೈಕೆ ಆಗದಿದ್ದಲ್ಲಿ ಹಲವು ಕೆಲಸಗಳು ಸ್ಥಗಿತಗೊಳ್ಳುತ್ತವೆ. ಇಲ್ಲೊಬ್ಬ ವ್ಯಕ್ತಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಪ್ರತಿನಿತ್ಯ ಸ್ಥಳೀಯ ಮೆಸ್ಕಾಂ ಕಚೇರಿಗೆ (MESCOM Office) ಆಗಮಿಸಿ, ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾನೆ. ಇದರ ಜೊತೆಗೆ ತನ್ನ ಮೊಬೈಲ್ ಗಳನ್ನು ಚಾರ್ಜ್ (Mobile Charge) ಮಾಡಿಕೊಳ್ಳುತ್ತಾನೆ. ಕಳೆದ 10 ತಿಂಗಳಿನಿಂದ ಪ್ರತಿನಿತ್ಯ ಮಿಕ್ಸಿ ಜೊತೆ ಬಂದು ಮಸಾಲೆ ರುಬ್ಬಿಕೊಳ್ಳುತ್ತಿದ್ದಾನೆ. ಆದ್ರೆ ಅಚ್ಚರಿ ಅಂದ್ರೆ ಮೆಸ್ಕಾಂನ ಯಾವ ಅಧಿಕಾರಿಯು (MESCOM Staff) ಈತನನ್ನು ತಡೆಯಲು ಮುಂದಾಗಿಲ್ಲ. ಇದಕ್ಕೆ ಕಾರಣ ಅಧಿಕಾರಿ ಆಡಿದ ಆ ಒಂದು ಮಾತು.

3.Moid@8: ಈ 8 ವರ್ಷಗಳಲ್ಲಿ ದೇಶ ತಲೆತಗ್ಗಿಸುವ ಒಂದೇ ಒಂದು ಕೆಲಸ ನಾನು ಮಾಡಿಲ್ಲ -ಪ್ರಧಾನಿ ಮೋದಿ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Government) ಅಸ್ವಿತ್ವಕ್ಕೆ ಬಂದು ಇದೇ ಮೇ 26ರಂದು 8 ವರ್ಷಗಳು (8 Years) ಪೂರ್ಣವಾಗಿವೆ. ಈ ಹಿನ್ನೆಲೆಯಲ್ಲಿ ತಮ್ಮ ಆಡಳಿತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯಿಸಿದ್ದಾರೆ. ಗುಜರಾತ್‌ (Gujarat) ರಾಜ್ಯದ ರಾಜ್‌ಕೋಟ್‌ ಜಿಲ್ಲೆಯ ಅತ್ಕೋಟ್‌ ನಗರದಲ್ಲಿ ನಿನ್ನೆ 200 ಹಾಸಿಗೆಯ (200 Beds) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು (Multi Specialty Hospital) ಉದ್ಘಾಟಿಸಿ ಮಾತನಾಡಿದ ಅವರು, “ನನ್ನ ಆಡಳಿತದ ಈ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ” ಅಂತ ಹೇಳಿದ್ದಾರೆ. “ದೇಶದ ಯಾವುದೇ ಪ್ರಜೆ ತಲೆತಗ್ಗಿಸುವಂತಹ ಕೆಲಸವನ್ನು ನಾನು ವೈಯಕ್ತಿಕವಾಗಿ ಮಾಡಿಲ್ಲ ಮತ್ತು ಇತರರಿಗೆ ಮಾಡಲು ಅವಕಾಶವನ್ನೂ ಕೊಟ್ಟಿಲ್ಲ” ಅಂತ ಮೋದಿ ಅವರು ವಿಶ್ವಾಸದ ಮಾತನ್ನಾಡಿದ್ದಾರೆ.

4.Monkeypox: ಮತ್ತಷ್ಟು ಹೆಚ್ಚಲಿದೆ ಮಂಕಿಪಾಕ್ಸ್, ಎಚ್ಚರವಾಗಿರಿ! ಎಲ್ಲಾ ದೇಶಗಳಿಗೆ WHO ಸೂಚನೆ

ಒಂದು ಕಡೆ ಕೊರೋನಾ (Corona) ಮಹಾಮಾರಿ ಅಬ್ಬರ, ಮತ್ತೊಂದು ಕಡೆ ಅದಕ್ಕೆ ಸವಾಲೊಡ್ಡುವಂತೆ ಬಾಧಿಸುತ್ತಿರುವ ಮಂಕಿಪಾಕ್ಸ್ (Monkeypox) ರೋಗ. ಇವೆರಡು ಸೋಂಕುಗಳಿಂದ ವಿಶ್ವದ ಜನರು ಮತ್ತೆ ಕಂಗಾಲಾಗಿದ್ದಾರೆ. ಮಂಕಿಪಾಕ್ಸ್ ನಿಧಾನಕ್ಕೆ ವಿಶ್ವದ ಹಲವು ದೇಶಗಳಿಗೆ ಹಬ್ಬುತ್ತಿದೆ. ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು (Viral zoonotic disease), ಇದು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ (Africa) ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದೀಗ ವಿಶ್ವದ 11 ದೇಶಗಳಲ್ಲಿ (Countries) 200ಕ್ಕೂ ಹೆಚ್ಚು ಪ್ರಕರಣಗಳನ್ನು (Case) ವಿಶ್ವ ಆರೋಗ್ಯ ಸಂಸ್ಥೆ (World Health Organization) ದೃಢೀಕರಿಸಿದೆ. ಇನ್ನು ವಿಶ್ವದ ಎಲ್ಲಾ ದೇಶಗಳು ಮಂಕಿಪಾಕ್ಸ್ ಕುರಿತಂತೆ ಜಾಗೃತೆ ವಹಿಸಬೇಕು, ಈಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಅಂತ ವಿಶ್ವ ಆರೋಗ್ಯ ಸಂಸ್ಖೆ (WHO) ಎಲ್ಲಾ ದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿದೆ.

5.Happy Birthday Ambareesh: ಸ್ಯಾಂಡಲ್​ವುಡ್​ ಕರ್ಣನಿ​ಗೆ 70ನೇ ವರ್ಷದ ಜನ್ಮದಿನ, ರೆಬೆಲ್ ಸ್ಟಾರ್ ಅಂಬರೀಶ್ ಕುರಿತ ಇಂಟ್ರಸ್ಟಿಂಗ್ ಸ್ಟೋರಿ

ಸ್ಯಾಂಡಲ್ ವುಡ್ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು 70 ವರ್ಷ ಜನ್ಮದಿನ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಸ್ಯಾಂಡಲ್​ವುಡ್ ನ ಕರ್ಣನಾಗಿ, ಅಭಿಮಾನಿಗಳ ಪಾಲಿನ ರೆಬಲ್ ಸ್ಟಾರ್ ಆಗಿ ಅಂಬರೀಶ್ ಜನಮಾನಸದಲ್ಲಿ ಉಳಿದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ರಾಜಕಾರಿಣಿಯಾಗೂ ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಪ್ರಿಯರಾದವರು ಅಂಬಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು.
Published by:Mahmadrafik K
First published: