Morning Digest: ಹಿಜಾಬ್ ವಿವಾದ ಅಪ್ ಡೇಟ್, SDPI ನಾಯಕನ ಹೇಳಿಕೆ, ಮುಂಗಾರು ಪ್ರವೇಶ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Mangaluru Hijab Row: ವಿದ್ಯಾರ್ಥಿ ನಾಯಕ ರಾಜೀನಾಮೆ, ಹಿಜಾಬ್ ವಿದ್ಯಾರ್ಥಿನಿಯರಿಂದ ದಾಖಲೆ ಬಿಡುಗಡೆ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangalore University College) ಹಿಜಾಬ್ ವಿವಾದ (Hijab Row) ತಾರಕಕ್ಕೇರಿದೆ. ಹಿಜಾಬ್ ಗಲಾಟೆ ವಿಚಾರವಾಗಿ ಕಾಲೇಜು ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಬಿವಿಪಿ (ABVP) ಒತ್ತಾಯಕ್ಕೆ ಮಣಿದಿದ್ದಾರೆ‌‌. ಇನ್ನೊಂದೆಡೆ ಎಲ್ಲಾ ಆರೋಪಗಳಿಗೆ ಕಾಲೇಜು ಪ್ರಾಂಶುಪಾಲೆ ಸುಧೀರ್ಘ ಉತ್ತರ ನೀಡಿದ್ದು ಕೆಲ ಶಾಸಕರ ಬಗ್ಗೆ ಆರೋಪವನ್ನೂ ಮಾಡಿದ್ದಾರೆ. ಕಾಲೇಜು ಕ್ಯಾಂಪಸ್ ನಲ್ಲಿ (College Campus) ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮಂಗಳೂರಿನ ಪ್ರಭಾವಿ ಶಾಸಕರು (MLAs) ಕರೆ ಮಾಡಿ ಜೋರು ಮಾಡಿದ್ದಾರೆ ಅಂತಾ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿದ್ದಾರೆ.

2.Malali Mosque: ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು: SDPI ರಾಜ್ಯಾಧ್ಯಕ್ಷ

ಮಳಲಿ ಜುಮ್ಮಾ ಮಸೀದಿಯಲ್ಲಿ (Malali Jumma Mosque) ಹಿಂದೂ ದೇವರ (Hindu Temple) ಕುರುಹು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ (SDPI State President Abdul Mazeed) ಹೇಳಿಕೆ ನೀಡಿದ್ದಾರೆ. ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ (Congress) ಮುಸ್ಲಿಮರ (Muslim) ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ (Tambula Prashne) ಎಂದು ಬರುವವರನ್ನು ಪೊಲೀಸರು (Police) ಒದ್ದು ಒಳಗೆ ಹಾಕಬೇಕು ಎಂದು ಹೇಳಿದ್ದಾರೆ.

3.Rain Update: ಇನ್ನೆರಡು ದಿನದಲ್ಲಿ ಭಾರತದಲ್ಲಿ ಮುಂಗಾರು ಪ್ರವೇಶ! ಹೇಗಿರಲಿದೆ ಆರಂಭಿಕ ದಿನಗಳ ಹವಾಮಾನ?

Rain Update: ಹವಾಮಾನ ವರದಿಗಳ ಪ್ರಕಾರ, ದಕ್ಷಿಣದಿಂದ ಗಾಳಿಯು ದಕ್ಷಿಣ ಅರೇಬಿಯನ್ ಸಮುದ್ರದ ಗಾಳಿಯ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ. ಭಾರತದಲ್ಲಿ ಬಹುತೇಕ ಮಳೆಯಾಗಿದೆ! ಮುಂಗಾರು ಭಾರತಕ್ಕೆ ಯಾವಾಗ ಪ್ರವೇಶಿಸಲಿದೆ ಎಂದು ದೆಹಲಿ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. IMD ಪ್ರಕಾರ, ನೈಋತ್ಯ ಮಾನ್ಸೂನ್ ಮಾರುತಗಳು ಕೇರಳವನ್ನು ಪ್ರವೇಶಿಸಲಿವೆ. IMD ಪ್ರಕಾರ, ನೈಋತ್ಯ ಮಾನ್ಸೂನ್ ದಕ್ಷಿಣ ಅರೇಬಿಯನ್ ಸಮುದ್ರ ಮತ್ತು ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವೇಶಿಸಿದೆ.

4.Sruthi Hariharan: ಸಿನಿರಂಗದಲ್ಲಿ ಮತ್ತೆ ಬ್ಯುಸಿಯಾದ ಶ್ರುತಿ ಹರಿಹರನ್

Sandalwood Actress: ಶ್ರುತಿ ಹರಿಹಾರನ್ ಕಳೆದ 2 ರಿಂದ 3 ವರ್ಷಗಳ ಕಾಲ ಸ್ಯಾಂಡಲ್ ವುಡ್ ನಿಂದ ದೂರವಿದ್ದರು, ಇದೀಗ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮಲಯಾಳಂ ಸಿನೆಮಾಗಳಲ್ಲಿ ಅವಕಾಶ ಪಡೆದ ಶ್ರುತಿ, ಮಲಯಾಳಂ ಚಿತ್ರರಂಗದಲ್ಲಿ ಹೆಸರು ಗಳಿಸಿ ನಂತರ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಕಾಮಿಡಿ ಶೋ ಜಡ್ಜ್ ಆಗುವ ಮುಲಕ ಆರಂಭ ಮಾಡಿದ್ದು, `ಸಾಲುಗಾರ’, `ಸ್ಟ್ರಾಬೆರಿ’, ಹೆಡ್‌ಬುಷ್’, `ಏಜೆಂಜ್ ಕನ್ನಾಯಿರಾಮ್’, ಸೇರಿದಂತೆ ಇನ್ನು ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅಭಿಮಾನಿಗಳು ಶ್ರುತಿಯನ್ನು ಮತ್ತೆ ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

5.IAS couple: ಸ್ಟೇಡಿಯಂನಲ್ಲಿ ನಾಯಿ ವಾಕಿಂಗ್ ಮಾಡಿಸ್ತಿದ್ದ IAS ದಂಪತಿಗೆ ಶಿಕ್ಷೆ! ಇದು ಬೇಕಿತ್ತಾ?

ನಾಯಿ (Dog) ಜೊತೆ ವಾಕಿಂಗ್‌ಗಾಗಿ (Walking) ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡ (Abused the stadium) ಆರೋಪದ ಹಿನ್ನೆಲೆ ಐಎಎಸ್‌ ಅಧಿಕಾರಿಗಳ (IAS officer) ದಂಪತಿಯನ್ನು (Couple) ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಎತ್ತಂಗಡಿ ಮಾಡಿದೆ. ಸಂಜೀವ್‌ ಖಿರ್ವಾರ್‌ ಮತ್ತು ರಿಂಕು ದಿಗ್ಗಾ (Sanjeev Khirwar and Rinku Dugga) ಅವರನ್ನು ವರ್ಗಾವಣೆ ಮಾಡಿ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ. ಸಂಜೀವ್‌ ಖಿರ್ವಾರ್ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ (Ladakh) ವರ್ಗಾಯಿಸಿದ್ದರೆ, ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ (Arunachal Pradesh) ನಿಯೋಜಿಸಲಾಗಿದೆ.
Published by:Mahmadrafik K
First published: