• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ದರ್ಗಾದಲ್ಲಿದ್ಯಾ ಅನುಭವ ಮಂಟಪ, ಸಿಧು ಭೋಜನ, ಇಳಿಕೆಯಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ದರ್ಗಾದಲ್ಲಿದ್ಯಾ ಅನುಭವ ಮಂಟಪ, ಸಿಧು ಭೋಜನ, ಇಳಿಕೆಯಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Sidhu Diet: ಇದೇನು ಜೈಲಾ ಅಥವಾ ಸ್ಪಾನಾ? ಸಿಧುಗೆ ಜೈಲಲ್ಲಿ ಜ್ಯೂಸ್, ಹಣ್ಣು, ರೊಟ್ಟಿಯ ಭೋಜನ!


ಒಂದು ವರ್ಷ ಜೈಲು ಶಿಕ್ಷೆ (Imprisonment) ಅನುಭವಿಸುತ್ತಿರುವ ಕಾಂಗ್ರೆಸ್ (Congress) ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ವಿಶೇಷ ಆಹಾರ ಪಡೆಯಲಿದ್ದಾರೆ. ಅವರ ಮೆಡಿಕಲ್ ಚೆಕಪ್ ನಂತರ ಅವರಿಗೆ ಡಯೆಟ್ ಆಹಾರ (Diet Food) ಸೂಚಿಸಲಾಗಿದೆ. ಸಿಧು ಇರೋದು ಜೈಲಲ್ಲೋ ಅಥವಾ ಸ್ಪಾನಲ್ಲೋ ಎನ್ನುವಂತಿದೆ ಈ ಲಕ್ಷುರಿ ಮೆನು. ಮೆನುವಿನಲ್ಲಿ ಸುಲಭವಾಗಿ ಇರಬಹುದಾದ ವಿಶೇಷ ಆಹಾರಕ್ರಮ ಇವರಿಗೆ ಲಭ್ಯವಾಗಲಿದೆ. ಕ್ರಿಕೆಟಿಗ-ರಾಜಕಾರಣಿಗೆ ನ್ಯಾಯಾಲಯವು ಅನುಮತಿಸಿದ ಆಹಾರದ ಭಾಗವಾಗಿ ತರಕಾರಿಗಳು, ಪೆಕನ್ ನಟ್ಸ್, ಆವಕಾಡೊ ಸೇರಿ ಪೌಷ್ಟಿಕಾಂಶಭರಿತ ಆಹಾರ ಸಿಗಲಿದೆ. ಅವರ ಆರೋಗ್ಯದ ವಿಶ್ಲೇಷಣೆಯ ನಂತರ ಅವರ ವೈದ್ಯಕೀಯ ಸ್ಥಿತಿಯನ್ನು (Medical Condition) ಪರಿಗಣಿಸಿ ಡಯಟ್ ಚಾರ್ಟ್ (Diet Chart) ಅನ್ನು ಶಿಫಾರಸು ಮಾಡಲಾಗಿದೆ ಎಂದು ಶ್ರೀ ಸಿಧು ಅವರ ಸಹಾಯಕರು ಹೇಳುತ್ತಾರೆ.


2.Anubhava Mantapa Vs Peer Pasha Dargah: ಪೀರ್ ಪಾಶಾ ದರ್ಗಾದಲ್ಲಿದೆಯಾ ಅನುಭವ ಮಂಟಪ?


ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ (Srirangapattana Jamia Mosque), ಮಳಲಿಯ ಮಸೀದಿ (Malali Mosque) ಬಳಿಕ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಹಜರತ್ ಪೀರ್ ಪಾಶಾ ದರ್ಗಾ (Hazarat Peer Pasha Darga Or Peerapasha Bunglow) ಮುನ್ನಲೆಗೆ ಬಂದಿದೆ. ಅನುಭವ ಮಂಟಪದ ವ್ಯಾಪ್ತಿಯಲ್ಲಿಯೇ ಪೀರ್ ಪಾಶಾ ದರ್ಗಾವಿದೆ. ಮೂಲ ಅನುಭವ ಮಂಟಪ (Anubhava Mantapa) ಈ ಪೀರ್ ಪಾಶಾ ದರ್ಗಾದಲ್ಲಿದೆ ಎಂಬ ವಾದ ಚರ್ಚೆಗೆ ಗ್ರಾಸವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣವರ (Basavanna) ಅನುಭವ ಮಂಟಪ ನಿರ್ಮಾಣ ಮಾಡಿದ್ರು. ತದನಂತರ ಆಡಳಿತಕ್ಕೆ ಬಂದ ನವಾಬರು (Nawab) ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಅನುಮಾನಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ. ಈ ಸಂಬಂಧ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.


3.Bail Denied: 10 ಜನ ಯಾತ್ರಿಗಳ ಫೇಕ್ ಎನ್​ಕೌಂಟರ್, 34 ಪೊಲೀಸರಿಗೆ ಜಾಮೀನು ನಿರಾಕರಣೆ!


34 ಕಾನ್‌ಸ್ಟೆಬಲ್‌ಗಳಿಗೆ ಅಲಹಾಬಾದ್ ಹೈಕೋರ್ಟ್ (High court) ಮಹತ್ವದ ಆದೇಶವೊಂದರಲ್ಲಿ ಜಾಮೀನು (Bail) ನಿರಾಕರಿಸಿದೆ. 1991ರಲ್ಲಿ 10 ಸಿಖ್‌ ಪುರುಷರನ್ನು ನಕಲಿ ಎನ್‌ಕೌಂಟರ್‌ನಲ್ಲಿ (Fake Encounter) ಕೊಂದ ಆರೋಪ ಹೊತ್ತಿರುವ ಪ್ರಾದೇಶಿಕ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ (PAC) ಕಾನ್‌ಸ್ಟೆಬಲ್‌ಗಳಿಗೆ ಜಾಮೀನು ನಿರಾಕರಣೆಯಾಗಿದೆ. ಪ್ರಕರಣ ವಿಚಾರಣೆಯನ್ನು ಅವಲೋಕಿಸಿದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಬ್ರಿಜ್ ರಾಜ್ ಸಿಂಗ್ ಅವರ ಪೀಠವು ಆರೋಪಿತ ಪೊಲೀಸರು (Police) ಅಮಾಯಕರನ್ನು ಭಯೋತ್ಪಾದಕರು ಎಂದು ಕರೆಯುವ ಮೂಲಕ ಬರ್ಬರ ಮತ್ತು ಅಮಾನವೀಯ ಹತ್ಯೆಯಲ್ಲಿ ತೊಡಗಿದ್ದಾರೆ ಎಂಬ ಅಂಶವನ್ನು ಗಮನಿಸಿದರು.


4.Govt School: ವಿವಾದಕ್ಕೆ ಗ್ರಾಸವಾದ ಸರಕಾರಿ ಶಾಲೆಯಲ್ಲಿ ನಡೆದ ಗಣಪತಿ ಹವನ


ದಕ್ಷಿಣ ಕನ್ನಡ (Dakshiba Kannada) ಜಿಲ್ಲೆಯ‌ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು (Padibagilu School) ಎನ್ನುವ ಶಾಲೆಯಲ್ಲಿ ಶಾಲೆಯ ಆರಂಭೋತ್ಸವದ ಸಂದರ್ಭ ಗಣಪತಿ ಹವನ (Ganapati Havana) ಮಾಡಿ ಪ್ರಾರಂಭ ಮಾಡಿದ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಬಂಟ್ವಾಳ (Bantwala) ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕ ತನಿಖೆಯನ್ನು ನಡೆಸಿ ಡಿಡಿಪಿಐಗೆ (DDPI) ವರದಿ ನೀಡಿದ ಘಟನೆ ನಡೆದಿದೆ. ವಿಟ್ಲ ಹೋಬಳಿ ವ್ಯಾಪ್ತಿಯ ಪಡಿಬಾಗಿಲು ದ. ಕ. ಜಿ. ಪಂ. ಹಿ. ಪ್ರಾ ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರುವ ಸಂಪ್ರದಾಯವನ್ನು ಇಟ್ಟುಕೊಳ್ಳಲಾಗಿದೆ.


5.Gold Price: ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಇಂದು ಬೆಲೆ ಇಳಿಕೆಯಾಗಿದೆ ನೋಡಿ


ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ (Gold Price) ಕುಸಿತವಾಗಿದ್ದು ಆಭರಣ ಖರೀದಿಸಬೇಕೆನ್ನುವವರು ಇಂದು ಆ ಕೆಲಸವನ್ನು ಮಾಡಬಹುದು. ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,790 ಇದ್ದದ್ದು ಇಂದು 4,765 ರೂಪಾಯಿಗೆ ಇಳಿದಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,650 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,650, ರೂ. 47,650, ರೂ. 47,650 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,650 ರೂ. ಆಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು