ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರನ್ನು ಮತ್ತಷ್ಟು ಹೈರಾಣಾಗಿಸಲಿದೆ. ಬೇಸಿಗೆಯ (Summer) ಸೆಖೆ ಮತ್ತು ಮಳೆಯ ಅವಾಂತರ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಎಸಿ, ಫ್ಯಾನ್ ಇಲ್ಲದೆ ಪರದಾಡುವ ಸ್ಥಿತಿ ಇದೆ. ಇತ್ತ ಆಗಾಗ್ಗೆ ಬರುವ ಮಳೆಯ ಆರ್ಭಟ, ಮರಗಳು ಉರುಳುವುದು, ಲೈನ್ ಗಳು ಕಟ್ ಆಗುವುದು ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.
ಗುಜರಾತ್ನ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ನರೇಂದ್ರ ಮೋದಿ (PM Narendra Modi) ಇಂದು ದೇಶದ ಉನ್ನತ ಹುದ್ದೆ ಪ್ರಧಾನಿ ಪಟ್ಟಕ್ಕೆ ಏರಿದ್ದು ಸ್ಟಾರ್ಟ್-ಅಪ್ಗಳನ್ನು (Startups) ಆರಂಭಿಸುವವರಿಗೆ ಹಲವಾರು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಜೀವನದಿಂದ ಸ್ಪೂರ್ತಿ ಪಡೆದ (Modi Inspiration) ಹುಬ್ಬಳ್ಳಿಯ ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯು ಬಡ ವ್ಯಾಪಾರಿಗಳಿಗೆ ಸಹಾಯ ಮಾಡಲು ಟೀ, ಕಾಫಿ ಡಿಸ್ಪೆನ್ಸರ್ವೊಂದನ್ನು ಸಿದ್ಧಪಡಿಸಿದೆ. ಭಾರ ಹೊತ್ತು ಚಹಾ ಮಾರಾಟ ಮಾರುವ ಬಡ ವ್ಯಾಪಾರಿಗಳಿಗೆ ನೆರವಾಗಲು ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯು (Steira Technovations Hubballi) ಡಿಸ್ಪೆನ್ಸರ್ ಎಂಬ ಹೊಸ ಸಾಧನದ ಸಂಶೋಧನೆಯೊಂದನ್ನು ಮಾಡಿದೆ.
ಸಂತರು ಹಾಗೂ ಅನೇಕ ಇತಿಹಾಸಕಾರರು ಇದು ತಾಜ್ಮಹಲ್ ಅಲ್ಲ ತೇಜೋ ಮಹಾಲಯ (Tejo Mahalaya) ಅಂದರೆ ಶಿವ ದೇವಾಲಯ ಎಂದು ಹೇಳುತ್ತಿದ್ದಾರೆ. ಆದರೆ ಕೆಲ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ (Mughal Emperor) ಷಹಜಹಾನ್ ನಿರ್ಮಿಸಿದ ಎಂದು ನಂಬುತ್ತಾರೆ. ಹಿಂದೂ ದೇವತೆಗಳ ವಿಗ್ರಹಗಳು (Hindu Gods Statue) ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು (Door) ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಅದನ್ನು ವಜಾ ಮಾಡಿತ್ತು. ಇದೀಗ ಬಿಜೆಪಿ ಸಂಸದೆಯೊಬ್ಬರು ತಾಜ್ಮಹಲ್ ನಮಗೆ ಸೇರಿದ್ದು, ಈ ಬಗ್ಗೆ ನನ್ನ ಬಳಿ ಅಗತ್ಯ ದಾಖಲೆಗಳು ಇವೆ ಎಂದಿದ್ದಾರೆ.
ವಧು ತನ್ನ ವಿವಾಹವನ್ನು ಸ್ಮರಣೀಯವಾಗಿಸಲು ತನ್ನ ನೆಚ್ಚಿನ ಆಸಕ್ತಿಯನ್ನೇ (Interest) ಬಳಸಿಕೊಂಡಿದ್ದಾಳೆ. ಹೌದು ಈ ವಧುವಿಗೆ ಮೀನು ಹಿಡಿಯೋ (Fishing) ಕೆಲಸ ತುಂಬಾ ಇಷ್ಟ. ಇದು ಇವಳ ಹವ್ಯಾಸ ಕೂಡಾ. ಮೊದಲ ರಾತ್ರಿ (First Night) ಈಕೆ ಮೀನು ಹಿಡಿಯಲು ಹೊರಟು ದೊಡ್ಡ ಮೀನನ್ನೇ ಹಿಡಿದು ದೊಡ್ಡ ನಗುಬೀರಿದ್ದಾಳೆ. 34 ವರ್ಷ ವಯಸ್ಸಿನ US ವಧು ತನ್ನ ಮದುವೆಯ ಉಡುಪಿನಲ್ಲಿ (Wedding Gown) ಇನ್ನೂ 50 ಪೌಂಡ್ (23 ಕೆಜಿ) ಡ್ರಮ್ ಮೀನನ್ನು ಹಿಡಿದಳು. ನ್ಯೂಸ್ವೀಕ್ ಪ್ರಕಾರ, ಎಲಿಯಟ್ ವ್ಯಾಗನರ್ ಗ್ರಾನ್ವಿಲ್ಲೆ ಭಾನುವಾರ ಟೆಕ್ಸಾಸ್ನ ಚಾಪೆಲ್ನಲ್ಲಿ ವಿವಾಹವಾದರು, ಅದರ ನಂತರ ನವವಿವಾಹಿತರು ಕಡಲತೀರದ ಬಳಿ ಮೀನುಗಾರಿಕೆಗೆ ಹೋಗಲು ನಿರ್ಧರಿಸಿದರು.
ಕಳೆದ ಒಂದು ತಿಂಗಳಿನಿಂದ ಮುಂಗಾರು ಪೂರ್ವ ಮಳೆಯಾಗುತ್ತಿದೆ (Pre Monsoon Rain). ಕೊಪ್ಪಳ (Koppal) ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಈ ಮಳೆಗೆ (Rain) ರೈತರು (Farmer) ಖುಷಿಗೊಂಡು ಬಿತ್ತನೆ ಆರಂಭಿಸಿದ್ದಾರೆ. ಆದರೆ ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡುವುದು ಸರಿ ಅಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರವಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ 126 ಪಟ್ಟು ಅಧಿಕವಾಗಿದೆ. ಜಿಲ್ಲೆಯಲ್ಲಿ ಈ ದಿನಗಳಲ್ಲಿ ವಾಡಿಕೆಯಂತೆ 61 ಎಂ ಎಂ ಮಳೆಯಾಗಬೇಕಿತ್ತು, ಆದರೆ ಆಗಿದ್ದು 139 ಎಂಎಂ ಮಳೆಯಾಗಿದೆ. ಅದರಲ್ಲಿಯೂ ಕನಕಗಿರಿ, ಕುಷ್ಟಗಿ, ಕುಕನೂರು ಹಾಗು ಯಲಬುರ್ಗಾದಲ್ಲಿ ಅತ್ಯಧಿಕ ಮಳೆಯಾಗಿದೆ. ಪೂರ್ವ ಮುಂಗಾರು ಮಳೆಯು ಇಷ್ಟು ಪ್ರಮಾಣದಲ್ಲಿ ಆಗಿರುವುದು ಸುಮಾರು ವರ್ಷಗಳ ನಂತರ ಇದೇ ಮೊದಲು ಎನ್ನಲಾಗಿದೆ. ಹೀಗಾಗಿ ಕೃಷಿಕರು ಖುಷಿಯಾಗಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ