1.MLA T Raghumurthy: ಶಾಸಕ ಟಿ. ರಘುಮೂರ್ತಿ ಕಾರ್ ಅಪಘಾತ, ಪ್ರಾಣಾಪಾಯದಿಂದ ಪಾರು
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೊಳಗಾಗಿದೆ. ಮೇ 24 ರಂದು ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹೊರ ವಲಯದಲ್ಲಿ ರಾತ್ರಿ ಅಪಘಾತ (Accident) ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾಸಕರು ಚಳ್ಳಕೆರೆಯಿಂದ ಮಸ್ಕರ್ ಟಿ.ಬಿ. ಗೊಲ್ಲರಹಟ್ಟಿಯ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಶಾಸಕರ ಇನ್ನೋವಾ ಕಾರ್ ಗೆ ಮಸ್ಕಲ್ ಕಡೆಯಿಂದ ಬಂದ ಜೈಲೋ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಜೈಲೋ ಕಾರ್ ಮುಂಭಾಗ ನಜ್ಜುಗುಜ್ಜಾಗಿದೆ. ಶಾಸಕರ ಕಾರ್ ಗೆ ಯಾವುದೇ ತೊಂದರೆ ಆಗಿಲ್ಲ. ಜೈಲೋ ಕಾರ್ ಬಂದು ಡಿಕ್ಕಿಯಾಗುತ್ತಿದ್ದಂತೆ ಶಾಸಕರ ಕಾರ್ ರಸ್ತೆ ಬದಿಯಲ್ಲಿ ನಿಂತಿದೆ. ಜೈಲೋ ಕಾರ್ ನಲ್ಲಿದ್ದ ಪ್ರಯಾಣಿಕರು ಮದುವೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
2.Murder: ಯುವಕನ ಪ್ರಾಣ ತೆಗೆಯಿತು 5 ರೂಪಾಯಿಯ ಗುಟ್ಕಾ! ಅಂಗಡಿ ಮುಂದೆಯೇ ಬರ್ಬರ ಹತ್ಯೆ
ಆ ಒಂದು ಪುಟ್ಟ ವಸ್ತುವಿಗೆ (Small things) ಇಲ್ಲಿ ಕೊಲೆ (Murder) ನಡೆದೇ ಹೋಯಿತು. ಐದು ರೂಪಾಯಿ ಕಿಮ್ಮತ್ತಿನ (5 rupees value) ವಸ್ತುವನ್ನು ಕೊಡಲಿಲ್ಲ ಅಂತ ಯುವಕನ (Young Boy) ಬರ್ಬರ ಹತ್ಯೆ ನಡೆದಿದೆ. “ಹೇ ಅದ್ನ ತೊಗೊಂಡು ಬಾ” ಅಂತ ಆ ರೌಡಿಶೀಟರ್ (Rowdy Sheeter) ಹೇಳ್ದ, “ನನ್ನ ಹತ್ರ ಹಣ (Money) ಇಲ್ಲಾ ಅಣ್ಣಾ” ಅಂತ ಇವ್ನು ಹೇಳಿದ. ಅಷ್ಟೇ ಸಾಕಾಯಿತು ಒಂದು ಕೊಲೆಗೆ. ಅಂದಹಾಗೆ ವಾಣಿಜ್ಯ ವಹಿವಾಟು ಇತ್ಯಾದಿ ಕಾರಣಕ್ಕೆ ಹುಬ್ಬಳ್ಳಿ (Hubballi) ‘ಛೋಟಾ ಮುಂಬೈ’ (Chota Mumbai) ಅಂತಾನೇ ಪ್ರಸಿದ್ಧಿ. ಆದ್ರೆ ಬರ ಬರ್ತಾ ಈ ಊರು ‘ಮಿನಿ ಬಿಹಾರ’ (Mini Bihar) ಆಗ್ತಾ ಇದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳಲಾರಂಭಿಸಿದೆ. ಅದಕ್ಕೂ ಕಾರಣಗಳು ಇಲ್ಲದಿಲ್ಲ. ಈ ಛೋಟಾ ಮುಂಬೈಯಲ್ಲಿ ಆಗಾಗ ಕೊಲೆಗಳು ನಡೆಯುತ್ತಲೇ ಇವೆ. ಅದೂ ಸಹ ಕ್ಷುಲಕ ಕಾರಣಗಳಿಗಾಗಿ. ಇದೀಗ ಅಂಥದ್ದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಕೊಲೆಯೊಂದು ನಡೆದು ಹೋಗಿದೆ.
3.Minister Viswarup: ಮನವಿ ಸಲ್ಲಿಸಲು ಹೋದಾಗ ಸಚಿವರು ಅಲ್ಲಿಲ್ಲ! ಸಿಟ್ಟಲ್ಲಿ ಮಿನಿಸ್ಟರ್ ಮನೆಗೆ ಬೆಂಕಿ ಹಚ್ಚಿದ್ರು
ಜಿಲ್ಲೆಗಳ ಘೋಷಣೆ ಹಾಗೂ ಜಿಲ್ಲೆಗಳ (District) ನಾಮಕರಣ (Naming) ಸಂದರ್ಭ ವಿವಾದಗಳು ಅತ್ಯಂತ ಸಾಮಾನ್ಯ. ಅದು ನಮ್ಮ ರಾಜ್ಯದಲ್ಲಿರಲಿ (State) ಅಥವಾ ದೇಶದ ಯಾವುದೇ ಭಾಗದಲ್ಲಾದರೂ ಇಂಥಹ ಸೂಕ್ಷ್ಮ ವಿಚಾರಕ್ಕಾಗಿ ಹೆಚ್ಚಿನ ಚರ್ಚೆ ನಡೆಯುತ್ತದೆ. ಪರ ವಿರೋಧ ವಾದಗಳೂ ಜೋರಾಗುತ್ತವೆ. ಇಂಥದ್ದೇ ಒಂದು ಬೆಳವಣಿಗೆಯಲ್ಲಿ ನೆರೆಯ ಆಂಧ್ರಪ್ರದೇಶದ (Andhra Pradesh) ಜಿಲ್ಲೆಯೊಂದರಲ್ಲಿ ಈಗ ಚರ್ಚೆ ತೀವ್ರ ಸ್ವರೂಪ ಪಡೆಯುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಅಲ್ಲಿನ ಸಾರಿಗೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ. ಕೋಣಸೀಮಾ (Konaseema) ಪರಿರಕ್ಷಣಾ ಸಮಿತಿ, ಕೋಣಸೀಮಾ ಸಾಧನಾ ಸಮಿತಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಸಾರಿಗೆ ಸಚಿವ ವಿಶ್ವರೂಪ್ ಅವರ ಮನೆಗೆ ತೆರಳಿ ಮನವಿ ಸಲ್ಲಿಸಿದರು.
4.ಎಲಿಮೆಂಟರಿ ಸ್ಕೂಲ್ನ 19 ಮಕ್ಕಳ ಶೂಟ್ ಮಾಡಿ ಕೊಂದ 18 ವರ್ಷದ ಯುವಕ!
ಟೆಕ್ಸಾಸ್‌ನಲ್ಲಿ (Texas) ನಡೆದ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ (Gun Firing) 19 ಎಲಿಮೆಂಟರಿ ಶಾಲೆ ಮಕ್ಕಳು (School Children) ಮೃತಪಟ್ಟಿದ್ದಾರೆ. ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾದ 18 ವರ್ಷದ ಬಂದೂಕುಧಾರಿಯು ಮಂಗಳವಾರ ರಾಬ್ ಎಲಿಮೆಂಟರಿ ಶಾಲೆಯಲ್ಲಿ 19 ಮಕ್ಕಳು ಮತ್ತು 2 ವಯಸ್ಕರನ್ನು ಶೂಟ್ ಮಾಡಿ ಕೊಂದಿದ್ದಾನೆ. ಬಫಲೋ ಸೂಪರ್‌ಮಾರ್ಕೆಟ್ (Super Market) ಗುಂಡಿನ ದಾಳಿ ನಡೆದ 10 ದಿನಗಳ ನಂತರ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಸಿಎನ್‌ಎನ್ ಪ್ರಕಾರ, ಫ್ಲೋರಿಡಾದ ಪಾರ್ಕ್‌ಲ್ಯಾಂಡ್‌ನಲ್ಲಿ 2018 ರಲ್ಲಿ ಮಾರ್ಜೊರಿ ಸ್ಟೋನ್‌ಮ್ಯಾನ್ ಡೌಗ್ಲಾಸ್ ಹೈಸ್ಕೂಲ್ ಗುಂಡಿನ ದಾಳಿಯ ನಂತರ ಇದು ಅತ್ಯಂತ ಭೀಕರ ದಾಳಿಯಾಗಿದೆ. ಅಲ್ಲಿ 17 ಜನರು ಸಾವನ್ನಪ್ಪಿದ್ದಾರೆ.
ತೆಲುಗು ಸಿನಿಮಾ ನಿರ್ದೇಶಕರೊಬ್ಬರು (Telugu Cinema Director) ಕನ್ನಡ ಚಿತ್ರರಂಗ (Kannada Film Industry), ಚಂದನವನದ ನಟ (Hero), ನಟಿಯರ (Heroin) ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದಾರೆ. ಕೆಲವು ಸಿನಿಮಾ ಮಾಡಿರುವ ತೆಲುಗು ನಿರ್ದೇಶಕ ಗೀತಕೃಷ್ಣ (Geeth Krishna) ಎಂಬುವರು ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಕಾಮೆಂಟ್ (Comment) ಮಾಡಿದ್ದಾರೆ. "ಕಾಸ್ಟಿಂಗ್ ಕೌಚ್ (Casting couch) ವಿಚಾರದಲ್ಲಿ ತಮಿಳು ಚಿತ್ರರಂಗದವರು (Tamil Film Industry) ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ” ಅಂತ ಗೀತಕೃಷ್ಣ ಆರೋಪಿಸಿದ್ದಾರೆ. ಇತ್ತೀಚಿಗೆ ತೆಲುಗು ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಅವರು, “ಕನ್ನಡ ಸಿನಿಮಾ ರಂಗದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಅವಕಾಶ ಬೇಕು ಅಂತ ಮಂಚ ಏರುವುದು ಅಲ್ಲಿ ಕಾಮನ್ ಆಗಿದೆ” ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಅವರ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ