MLC Election 2022: ವಿಧಾನ ಪರಿಷತ್ ಚುನಾವಣೆಗೆ (Vidhana Parishat Election) ಬಿಜೆಪಿ ಅಭ್ಯರ್ಥಿಗಳ (BJP Candidates) ಹೆಸರನ್ನು ಘೋಷಣೆ ಮಾಡಿದೆ. ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್ (BJP high Command) ನೋ ಅಂದಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್ ತಪ್ಪಿದೆ. ಒಕ್ಕಲಿಗ, ದಲಿತ, ಲಿಂಗಾಯತ ಮತ್ತು ಒಬಿಸಿ ಜಾತಿ ಸಮೀಕರಣದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನಿನ್ನೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಆದ್ರೆ ಜೆಡಿಎಸ್ (JDS) ಇದುವರೆಗೂ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.
ಹುಬ್ಬಳ್ಳಿ - ಧಾರವಾಡ ಬೈಪಾಸ್ (Hubballi-Dharwad Bypass) ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ (National Highway) ಆಗಿರೋ ಇಲ್ಲಿ, ಆಗಾಗ ಅಪಘಾತಗಳು (Accident) ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ (Ten Lane) ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ (Private Bus And Lorry) ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ (Hubballi) ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಅಯೋಧ್ಯೆಯ (Ayodhya) ಬಾಬರಿ ಮಸೀದಿ (Babari Masajid) ಪ್ರಕರಣದ ಬೆನ್ನಲ್ಲೇ ವಾರಣಾಸಿಯ ಜ್ಞಾನವಾಪಿ ಮಸೀದಿ (Varanasi Gyanvapi Masajid) ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು (District Sessions Court) ಇಂದು ಐವರು ಹಿಂದೂ ಮಹಿಳೆಯರು (Women) ಸಲ್ಲಿಸಿರುವ ಅರ್ಜಿಯನ್ನು (Plea) ಮೊದಲು ವಿಚಾರಣೆ ನಡೆಸಬೇಕೋ ಅಥವಾ ವಾರಣಾಸಿಯ ಜ್ಞಾನವಾಪಿ ಮುಸೀದಿ ನಿರ್ವಹಣೆ ಮಾಡುತ್ತಿರುವ ಅಂಜುಮಾನ್ ಇಂತೆ ಝಾಮಿಯಾ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಬೇಕೋ ಎಂಬ ಬಗ್ಗೆ ಆದೇಶ ಹೊರಡಿಸಲಿದೆ.
ಸಿಲಿಕಾನ್ ಸಿಟಿ ಬೆಂಗಳೂರು (Silicone City) ಉಗ್ರರ (Terrorist) ಹಾಟ್ ಸ್ಪಾಟ್ (Hotspot) ಆಗಿತ್ತು ಎಂಬ ಸ್ಫೋಟಕ ವಿಚಾರ ಎನ್ಐಎ (NAI) ತನಿಖೆಯಿಂದ (Investigation) ಬಯಲಾಗಿದೆ. ನಾಲ್ಕು ವರ್ಷಗಳ ಕಾಲ ಹೇಗೆಲ್ಲಾ ನಗರದಲ್ಲಿ (City) ಕಾರ್ಯ ಚಟುವಟಿಕೆ ಮಾಡಿದ್ರು, ಅವರ ಫ್ಲಾನಿಂಗ್ (Planning) ಹೇಗಿತ್ತು ಅನ್ನೋ ಕಂಪ್ಲೀಟ್ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ (Charge sheet) ಉಲ್ಲೇಖ ಮಾಡಿದ್ದಾರೆ. ಎನ್ಐಎ ಚಾರ್ಜ್ ಶೀಟ್ ನ್ಯೂಸ್ 18 ಕನ್ನಡಕ್ಕೆ (News18 Kannada) ಎಕ್ಸ್ಕ್ಲೂಸಿವ್ (Exclusive) ಆಗಿ ಸಿಕ್ಕಿದ್ದು ಕೆಲವೊಂದು ಭಯಾನಕ ವಿಚಾರಗಳು ಹೊರಬಿದ್ದಿದೆ.
ಎರಡು ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಯಾದವ ಸಮುದಾಯದ ನಾಗರಾಜ್ ಯಾದವ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಜಬ್ಬಾರ್ ಗೆ ಮಣೆ ಹಾಕಿದೆ. ಆದ್ರೆ ಸಿದ್ದರಾಮಯ್ಯ ಅವರು ಎಂ.ಆರ್.ಸೀತಾರಂ ಹೆಸರು ಶಿಫಾರಸ್ಸು ಮಾಡಿದ್ದರು. ಇತ್ತ ಅಲ್ಪಸಂಖ್ಯಾತರ ಪೈಕಿ ಆಪ್ತ ಐವಾನ್ ಡಿಸೋಜಾ ಅವರ ಹೆಸರು ಸೂಚಿಸಿದ್ದರು. ಆದ್ರೆ ಹೈಕಮಾಂಡ್ ಮಾತ್ರ ಡಿ.ಕೆ.ಶಿವಕುಮಾರ್ ಸೂಚಿಸಿದ ಹೆಸರುಗಳಿಗೆ ಮಣೆ ಹಾಕಿದಂತೆ ಕಾಣಿಸುತ್ತಿದೆ. ಮಾಜಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ತಪ್ಪಿಸಿದ್ದು ಸಿದ್ದರಾಮಯ್ಯ ಅವರೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಇದೀಗ ಡಿಕೆಶಿ ತಮ್ಮದೇ ತಂತ್ರ ರೂಪಿಸಿ, ತಾವು ಸೂಚಿಸಿದವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ .
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ