1. Vidhana Parishath Elections: 7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ (Vidhana Parishat) ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಗೆ ನಾಮಪತ್ರ (Nomination) ಸಲ್ಲಿಸಲು ನಾಳೆಯೇ ಕಡೆ ದಿನ. ಆದರೆ ಈವರೆಗೆ ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಆಕಾಂಕ್ಷಿಗಳ ಸಂಖ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ವರಿಷ್ಠರಿಗೂ ಅಭ್ಯರ್ಥಿಗಳನ್ನು (Candidate) ಆಯ್ಕೆ ಮಾಡುವುದು ಕಗ್ಗಂಟಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಹಿರಿಯ ನಾಯಕರು ಇಂದು ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
2.Assam Floods: ನೆರೆ ಸಂತ್ರಸ್ತರ ರಕ್ಷಣೆಗೆ ಬಂದ ಏರ್ಫೋರ್ಸ್
ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಏರ್‌ಲಿಫ್ಟ್ ರಕ್ಷಣಾ ತಂಡಗಳ (ಚಾಪರ್ಸ್) ಸಹಾಯದಿಂದ ಫೋರ್ಸ್ ಭಾನುವಾರ ತನ್ನ ಪರಿಹಾರ ಕಾರ್ಯಗಳನ್ನು ಮುಂದುವರೆಸಿತು ಮತ್ತು ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿತು. "#FloodReliefInAssam ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಕಡಿತಗೊಂಡಿರುವ ಪ್ರದೇಶಗಳಿಗೆ ನಾಗರಿಕರನ್ನು ಮತ್ತು ಏರ್‌ಲಿಫ್ಟ್ ರಕ್ಷಣಾ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಸ್ಥಳಾಂತರಿಸಲು ಕಾರ್ಯಾಚರಣೆ ಮುಂದುವರೆದಿದೆ. #IAF ತನ್ನ ಸಾರಿಗೆ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಕಾರ್ಯಕ್ಕಾಗಿ ನಿಯೋಜಿಸಿದೆ," IAF ಟ್ವೀಟ್ ಮಾಡಿದೆ. ಐಎಎಫ್ ಎಎನ್-32 ಸಾರಿಗೆ ವಿಮಾನ, ಎರಡು ಎಂಐ-17 ಹೆಲಿಕಾಪ್ಟರ್‌ಗಳು, ಚಿನೂಕ್ ಹೆಲಿಕಾಪ್ಟರ್ ಮತ್ತು ಎಎಲ್‌ಎಚ್ ಧ್ರುವ್ ಅನ್ನು ನಿಯೋಜಿಸಿದೆ ಮತ್ತು ಡಿಟೊಕ್ಚೆರಾ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 119 ಪ್ರಯಾಣಿಕರನ್ನು ಎಂಐ-17 ಹೆಲಿಕಾಪ್ಟರ್‌ಗಳ ಸಹಾಯದಿಂದ ಶನಿವಾರ ಸ್ಥಳಾಂತರಿಸಿದೆ.
3.Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!
'ಏ ದೋಸ್ತೀ.. ಹಮ್ ನಹೀ ಚೋಡೆಂಗೇ...' ಎಂಬ ಹಾಡೊಂದು (Songs) ಗೆಳೆತನದ (Friendship) ಮಹತ್ವವನ್ನು ಹೇಳುತ್ತೆ. ಯುವಕರು (Youth) ಗೆಳೆತನಕ್ಕೆ ಕೊಡುವಷ್ಟು ಮಹತ್ವವನ್ನು (Importance) ಮತ್ಯಾವುದಕ್ಕೂ ಕೊಡಲ್ಲ. ಅದು ಹೊಡೆದಾಟಕ್ಕೂ ಸೈ... ಬಡಿದಾಟಕ್ಕೂ ಸೈ ಅನ್ನವವರೂ ಇದ್ದಾರೆ. ಇಲ್ಲಿ ಮೂವರು ಗೆಳೆಯರು (Three Friends) ತನ್ನ ಫ್ರೆಂಡ್ ಕರೆದಿದ್ದಾನೆಂದು ಬ್ಲೈಂಡ್ ಆಗಿ ಅವನನ್ನು ಫಾಲೋ ಮಾಡಿ, ಇದೀಗ ಕೊಲೆ (Murder) ಆರೋಪದ ಮೇಲೆ ಜೈಲು (Jail) ಪಾಲಾಗಿದ್ದಾರೆ. ಯುವತಿಯನ್ನು ಪ್ರೀತಿಸಿದ (Love) ಕಾರಣಕ್ಕೆ ಯುವಕನನ್ನು (Youth Murder Case) ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು (Hubballi Navanagara Police Station) ಮೂವರು ಆರೋಪಿಗಳನ್ನು (Three Accused) ಬಂಧಿಸಿದ್ದಾರೆ.
4. ನಿನ್ನೆ ಚಿನ್ನ ಖರೀದಿಸೋದು ಮಿಸ್ ಮಾಡ್ಕೊಂಡ್ರಾ? ಅದೇ ಬೆಲೆಯಲ್ಲಿ ಬಂಗಾರವನ್ನ ಇವತ್ತು ಖರೀದಿಸಿ
ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (India Market) ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಇಂದು ಒಂದು ಗ್ರಾಂ ಆಭರಣದ ಚಿನ್ನದ ಬೆಲೆ (Gold Price) ರೂ. 4,705 ಆಗಿದೆ. ಮೇ 18 ರಂದು ಹತ್ತು ಗ್ರಾಂ 22 ಕ್ಯಾರಟ್ಟಿನ ಬಂಗಾರದ ಬೆಲೆ ರೂ. 46,100 ಇದ್ದದ್ದು ತದನಂತರ ಮೂರು ದಿನಗಳ ಕಾಲ ಸತತವಾಗಿ ಏರಿಕೆ ಕಂಡು ರೂ. 47,050 ಕ್ಕೆ ಹೋಗಿ ತಲುಪಿತ್ತು. ನಿನ್ನೆ ಹಾಗೂ ಇಂದು ಬೆಲೆ ಸ್ಥಿರವಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,170, ರೂ. 47,050, ರೂ. 47,050 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,050 ರೂ. ಆಗಿದೆ.
5. Belagavi: ಮರಾಠ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ! ಸರ್ಕಾರದ ಮೇಲೆ ಒತ್ತಡ ತಂದ ಶ್ರೀಗಳು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಇನ್ನೂ ವರ್ಷ ಬಾಕಿ ಉಳಿದಿದೆ. ಆದರೇ ಈಗಿನಿಂದಲೇ ಭರ್ಜರಿ ತಯಾರಿಗಳು ಆರಂಭವಾಗಿವೆ. ರಾಜ್ಯದಲ್ಲಿ ಯಾವುದೇ ಸರ್ಕಾರ (Govt) ರಚನೆ ಮಾಡುವಲ್ಲಿ ಬೆಳಗಾವಿ (Belagavi) ಪಾತ್ರ ಪ್ರಮುಖವಾಗಿದೆ. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಹೆಚ್ಚಿನ ಸ್ಥಾನ ಪಡೆಯಲು ಕಾಂಗ್ರೆಸ್- ಬಿಜೆಪಿ ದೊಡ್ಡ ಪ್ರಮಾಣದಲ್ಲಿ ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ. ಈ ನಡುವೆ ಜಿಲ್ಲೆಯ 7-8 ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಮರಾಠ (Marata) ಸಮೂದಾಯ ಹೆಚ್ಚಿನ ಶಾಸಕರು ತಮ್ಮವರೇ ಆಯ್ಕೆಯಾಗಬೇಕು ಜತೆಗೆ ಬೊಮ್ಮಾಯಿ ಸಂಪುಟದಲ್ಲಿ ತಮಗು ಸಚಿವ ಸ್ಥಾನಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ. ಜಿಲ್ಲೆಯಾದ್ಯಂತ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರ ಸಂದೇಶ ನೀಡುತ್ತಿದ್ದಾರೆ. ಮರಾಠ ಸಮೂದಾಯದ ಒಗ್ಗಟ್ಟು ಹಾಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ (BJP MLA) ನಿದ್ದೆಗೆಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ