• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಪೆಟ್ರೋಲ್ ಇಳಿಕೆ, ಚಿನ್ನ ಏರಿಕೆ! ದತ್ತಪೀಠದಲ್ಲಿ ಮತ್ತೆ ವಿವಾದ, ಇವು ಇಂದಿನ ಟಾಪ್ ಸುದ್ದಿಗಳು

Morning Digest: ಪೆಟ್ರೋಲ್ ಇಳಿಕೆ, ಚಿನ್ನ ಏರಿಕೆ! ದತ್ತಪೀಠದಲ್ಲಿ ಮತ್ತೆ ವಿವಾದ, ಇವು ಇಂದಿನ ಟಾಪ್ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

  • Share this:

Petrol-Diesel Price Today: ಗುಡ್​ನ್ಯೂಸ್! ಎಲ್ಲಾ ಜಿಲ್ಲೆಗಳಲ್ಲಿಯೂ ಪೆಟ್ರೋಲ್ ಬೆಲೆ ಭಾರೀ ಇಳಿಕೆ


ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶನಿವಾರ (ಮೇ 21) ಕೇಂದ್ರವು ಕ್ರಮವಾಗಿ ಲೀಟರ್‌ಗೆ 8 ಮತ್ತು 6 ರೂ.  ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರಕ್ಕೆ ವರ್ಷಕ್ಕೆ ಸುಮಾರು 1 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟರ್‌ನಲ್ಲಿ ಹಣದುಬ್ಬರವನ್ನು ನಿಗ್ರಹಿಸುವ ಮತ್ತು ಉಜ್ವಲ ಯೋಜನೆಯಡಿ ಸಿಲಿಂಡರ್‌ಗಳನ್ನು ಒದಗಿಸುವ ಕುರಿತು ಇತರ ಹೇಳಿಕೆಗಳೊಂದಿಗೆ ಪ್ರಕಟಿಸಿದ್ದಾರೆ.


ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ (Petrol Diesel Price) ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿತ್ತು. ಕಳೆದ ನಾಲ್ಕು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿತ್ತು. ಆದರೆ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆಯಾಗಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.


ಇಂದು ಚಿನ್ನದ ದರದಲ್ಲಿ ಏರಿಕೆ


Gold and Silver Price on May 22, 2022: ವೀಕೆಂಡ್‌ನಲ್ಲಿ (Weekend) ಆಭರಣ (Jewellery) ಪ್ರಿಯರಿಗೆ ಬೆಲೆ ಏರಿಕೆ (Price hike) ಸರಿಯಾಗಿಯೇ ಶಾಕ್ ಕೊಟ್ಟಿದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ. ಹೀಗಾಗಿ ಇಂದು ಮೇ 22 ಭಾನುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ (Gold price) 5,133 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ (Bengaluru)1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,133 ರೂಪಾಯಿ ನಿಗದಿಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ (Silver Price) ಏರಿಕೆಯಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 61,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಇದೆ.


ಇದನ್ನೂ ಓದಿ: Gold Price: ಆಭರಣ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್! ಇಂದು ಚಿನ್ನದ ದರದಲ್ಲಿ ಏರಿಕೆ


Assam Flood: ನೆರೆಯಿಂದ ಜನಜೀವನ ಅಸ್ತವ್ಯಸ್ತ! ರೈಲ್ವೇ ಹಳಿಯಲ್ಲಿ ಬದುಕುತ್ತಿವೆ 500 ಕುಟುಂಬ


Assam Flood: ಅಸ್ಸಾಂ ನೆರೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. 500ಕ್ಕೂ ಹೆಚ್ಚು ಕುಟುಂಬಗಳು ರೈಲ್ವೇ ಹಳಿಯಲ್ಲಿ ತಾತ್ಕಾಲಿಕ ನೆಲೆ ಕಂಡುಕೊಂಡಿದ್ದು ಅಲ್ಲಿಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತ ಆರಂಭವಾಗಿದೆ.


Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!


3 ತಿಂಗಳ ಹಿಂದೆ ಕಮಲಾ ಎಂಬ ಫೇಸ್‌ಬುಕ್‌ ಪ್ರೊಫೈಲ್‌ನ ಅಪರಿಚಿತ ಮಹಿಳೆ ಜೊತೆ ಮಂಡ್ಯ ಮೂಲದ ಹುಡುಗನೊಬ್ಬ ಚಾಟಿಂಗ್‌ಗೆ ಶುರು ಮಾಡಿಕೊಂಡಿದ್ದಾನೆ. ಅದು ಸ್ನೇಹಕ್ಕೆ ತಿರುಗಿ, ಪ್ರೀತಿವರೆಗೂ ಬಂದು ನಿಂತಿತ್ತು. 3 ತಿಂಗಳ ಬಳಿಕ ಆಕೆ ಮೇಲೆ ಆತನಿಗೆ ಲವ್ ಆಗಿ, ಅದನ್ನು ಆಕೆ ಹತ್ತಿರ ಹೇಳಿಕೊಂಡಿದ್ದಾನೆ. ಫೇಸ್‌ಬುಕ್‌ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಹುಡುಗ, ಆಕೆಯ ಕಷ್ಟ ಸುಖಕ್ಕೆ ಸ್ಪಂದಿಸೋಕೆ ಶುರು ಮಾಡಿದ್ದಾನೆ. ಇದನ್ನು ಎನ್‌ಕ್ಯಾಶ್ ಮಾಡಿಕೊಂಡ ಆಕೆ, ಟೈಮ್ ಸಿಕ್ಕಾಗೆಲ್ಲ ದುಡ್ಡು ವಸೂಲಿ ಮಾಡೋಕೆ ಶುರು ಮಾಡಿದ್ದಾಳೆ. ಯುವತಿ ತನ್ನ ಕಷ್ಟಹೇಳಿಕೊಂಡು ಯುವಕನಿಂದ  3.5 ಲಕ್ಷ ಪಡೆದಿದ್ದಾಳೆ. 30 ಸಾವಿರ ಮೌಲ್ಯದ ದಿನಸಿ ಸಾಮಗ್ರಿಯನ್ನೂ ತರಿಸಿಕೊಂಡಿದ್ದಾಳಂತೆ. ಕೊನೆಗೆ ಸುಮಾರು 50 ವರ್ಷದ ಈಕೆಯೇ ಯುವತಿ ಹೆಸರಲ್ಲಿ ನಾಟಕವಾಡಿದ್ದು ತಿಳಿದಿದೆ. ಆಕೆಯಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗಿದೆ ಅಂತ ವರದಿಯಾಗಿದೆ.


ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!

Datta Peetha: ದತ್ತಪೀಠದಲ್ಲಿ ಮತ್ತೊಂದು ವಿವಾದ; ಮಾಂಸದೂಟ ಆಯ್ತು, ಈಗ ವಿವಾದಿತ ಸ್ಥಳದ ಆವರಣದಲ್ಲೇ ನಡೆಯಿತಾ ನಮಾಜ್?


ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ (Ayodhye of Karnataka) ಎಂದೇ ಕರೆಸಿಕೊಳ್ಳೋ ಕಾಫಿನಾಡ ದತ್ತಪೀಠದಲ್ಲಿ (Datta Peetha) ಒಂದಾದ ಮೇಲೊಂದು ವಿವಾದಗಳು (Controversy) ತಲೆ ಎತ್ತುತ್ತಲೇ ಇವೆ. ಹೋಮ ಮಂಟಪದಲ್ಲಿ ಮಾಂಸದೂಟ, ಗುಹೆಯಲ್ಲಿ ಗೋರಿ ಪೂಜೆ ಬಳಿಕ ಪೀಠದ ಆವರಣದಲ್ಲಿ ನಮಾಜ್ (Namaz) ಮಾಡುವ ವಿಡಿಯೋ ವೈರಲ್ (Video Viral) ಆಗಿದ್ದು ಹಿಂದೂ ಸಂಘಟಕರ ಕಣ್ಣನ್ನ ಕೆಂಪಾಗಿಸಿದೆ. ಆದರೆ, ನಮಾಜ್ ಮಾಡುವುದನ್ನ ಮುಸ್ಲಿಮರು (Muslim) ಸಮರ್ಥಿಸಿಕೊಳ್ತಿದ್ದಾರೆ. ಜಿಲ್ಲಾಧಿಕಾರಿ (DC) ಅದು ವಿವಾದಿತ ಪ್ರದೇಶವೇ ಅಲ್ಲ ಅಂತಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು