• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Moring Digest: ಮೋದಿ ಮಾತು ಮೆಚ್ಚಿದ ಕಿಚ್ಚ, ಧಾರವಾಡದಲ್ಲಿ ಅಪಘಾತಕ್ಕೆ 7 ಬಲಿ! ಈತ ನೋಡಿ ಬರ್ಗರ್ ತಿಂದೇ ಬದುಕ್ತಾನಂತೆ!

Moring Digest: ಮೋದಿ ಮಾತು ಮೆಚ್ಚಿದ ಕಿಚ್ಚ, ಧಾರವಾಡದಲ್ಲಿ ಅಪಘಾತಕ್ಕೆ 7 ಬಲಿ! ಈತ ನೋಡಿ ಬರ್ಗರ್ ತಿಂದೇ ಬದುಕ್ತಾನಂತೆ!

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

  • Share this:

Accident: ಮದುವೆಗೆ ಹೊರಟವರಿಗೆ ಮರದ ರೂಪದಲ್ಲಿ ಕಾದಿತ್ತು ಸಾವು! ಕ್ರೂಸರ್‌ ಡಿಕ್ಕಿಗೆ 7 ಮಂದಿ ಬಲಿ


ಧಾರವಾಡ: ಅವರೆಲ್ಲ ನಿಶ್ಚಿತಾರ್ಥ (Engagement) ಮುಗಿಸಿ ಬರುತ್ತಾ ಇದ್ದರು. ಇಂದು ಮದುವೆ (Marriage) ಕಾರ್ಯವೂ ನಡೆಯಬೇಕಿತ್ತು. ಕ್ರೂಸರ್‌ (Cruiser) ವಾಹನದಲ್ಲಿ ಕುಳಿತಿದ್ದ ಅವರೆಲ್ಲ ಇನ್ನೆನು ಮನೆ (Home) ತಲುಪಿ ಬಿಡುತ್ತೇವೆ ಅಂದುಕೊಂಡಿದ್ದರು. ಅಷ್ಟರಲ್ಲಿ ಅದೇನಾಯ್ತೋ ಏನೋ, ರಸ್ತೆ ಪಕ್ಕದಲ್ಲಿದ್ದ ಮರಕ್ಕೆ (Tree) ಕ್ರೂಸರ್‌ ಡಿಕ್ಕಿ ಹೊಡೆದು ಬಿಟ್ಟಿದೆ. ಪರಿಣಾಮ ಮಕ್ಕಳು (Children), ಮಹಿಳೆಯರು (Ladies) ಸೇರಿದಂತೆ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಧಾರವಾಡ (Dharwad) ತಾಲೂಕಿನ ಬಾಡ ಗ್ರಾಮದ ಬಳಿ‌ ತಡರಾತ್ರಿ ಒಂದು ಗಂಟೆ ಸುಮಾರಿಗೆ ಇಂಥದ್ದೊಂದು ಭೀಕರ ಅಪಘಾತ ನಡೆದಿದೆ. ನಿಶ್ಚಿತಾರ್ಥ, ಮದುವೆ ಸಂಭ್ರಮದಲ್ಲಿದ್ದ ಮನೆ ಸ್ಮಶಾನದಂತಾಗಿದೆ. ಇನ್ನು 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಿ, ಚಿಕಿತ್ಸೆ (Treatment) ಕೊಡಿಸಲಾಗುತ್ತಿದೆ.


Kichcha Sudeep: ಪ್ರಧಾನಿ ಮಾತಿಗೆ ಕಿಚ್ಚನ ಮೆಚ್ಚುಗೆ! ಅಷ್ಟಕ್ಕೂ ಮೋದಿ ಹೇಳಿದ್ದೇನು? ಸುದೀಪ್ ಏನ್ ಹೇಳಿದ್ರು?


ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಹೌದೋ, ಅಲ್ಲವೋ ಎಂಬ ವಿಚಾರಕ್ಕೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅವರು, ಯಾವುದೇ ಗಲಭೆ ಅಥವಾ ವಾದ–ವಿವಾದವನ್ನು ಆರಂಭಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಅಭಿಪ್ರಾಯದ ಹಿಂದೆ ಯಾವುದೇ ಅಜೆಂಡಾ ಇಲ್ಲ. ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ’ ಎಂಬುದಷ್ಟೇ ನನ್ನ ಅಭಿಪ್ರಾಯವಾಗಿತ್ತು. ಇದೀಗ ಪ್ರಧಾನಿ ಮೋದಿಯವರು ಪ್ರಾದೇಶಿಕ ಭಾಷೆಗಳ ಮಹತ್ವದ ಬಗ್ಗೆ ಮಾತನಾಡಿರುವುದು ನನಗೆ ಸಂತಸ ತರಿಸಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Kichcha Sudeep: ಪ್ರಧಾನಿ ಮಾತಿಗೆ ಕಿಚ್ಚನ ಮೆಚ್ಚುಗೆ! ಅಷ್ಟಕ್ಕೂ ಮೋದಿ ಹೇಳಿದ್ದೇನು? ಸುದೀಪ್ ಏನ್ ಹೇಳಿದ್ರು?


Text Book Controversy: "ಮಕ್ಕಳಿಗೆ ಗೋಡ್ಸೆ ಬಗ್ಗೆಯೂ ಪಾಠ ಬರಬಹುದು"! ಪರಿಷ್ಕೃತ ಪಠ್ಯ ವಿರೋಧಿಸಿ ಸರ್ಕಾರಕ್ಕೆ ಸಾಹಿತಿಗಳಿಂದ ಪತ್ರ


ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳ (School Students) ಪರಿಷ್ಕೃತ ಪಠ್ಯ ಪುಸ್ತಕ (Text Book) ಈಗ ವಿವಾದಕ್ಕೆ (Controversy) ಕಾರಣವಾಗಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ (Revised) ಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರಬಾರದು ಅಂತ ಆಗ್ರಹಿಸಿ ನಾಡಿನ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ರಾಜ್ಯ ಸರ್ಕಾರಕ್ಕೆ (State Government) ಪತ್ರ (Letter) ಬರೆದಿದ್ದಾರೆ.  ‘ಶಿಕ್ಷಣ ಇಲಾಖೆ (Education Department) ಪಠ್ಯಪುಸ್ತಕ ಮರು ಪರಿಷ್ಕರಣೆ ಪ್ರಕ್ರಿಯೆ ಪೂರ್ವಗ್ರಹಪೀಡಿತವಾಗಿದೆ. ಇದೇ ಪದ್ಧತಿ ಮುಂದುವರಿದರೆ ಮುಂದೆ ಗೋಡ್ಸೆ (Nathuram Godse) ಕುರಿತ ಅಧ್ಯಾಯವು (Lesson) ಪಠ್ಯಪುಸ್ತಕಗಳಲ್ಲಿ ಸೇರಿಸುವ ದಿನಗಳು ದೂರವಿಲ್ಲ’ ಎಂದು ಸಾಹಿತಿಗಳು ಪತ್ರದಲ್ಲಿ ಆರೋಪಿಸಿದ್ದಾರೆ.


32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್


ಎರಡು ದಿನ ಸೇಮ್ ತಿಂಡಿ ತಿಂದರೆ ಸಾಕು ಅಮ್ಮಾ ನಾಳೆಗೆ ಬೇರೇನಾದ್ರೂ ಮಾಡು ಅಂತಾರೆ ಮಕ್ಕಳು. ಮಕ್ಕಳು ಎಂದಲ್ಲ ಎಲ್ಲ ವಯಸ್ಸಿನವರಿಗೂ ಒಂದೇ ತೆರನಾದ ತಿಂಡಿ ತಿಂಡಿ ಹಿಡಿಸುವುದಿಲ್ಲ. ನಾಳೆ ಏನು ಮಾಡ್ಲಿ ಎಂದು ಅಮ್ಮ ಸುಮ್ಮನೆ ನಿಮ್ಮ ತಲೆ ತಿನ್ನುವುದಲ್ಲ, ಅಮ್ಮನಿಗೂ ಒಂದೇ ತಿಂಡಿ ಇಷ್ಟವಾಗಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ಬರೀ ಒಂದೇ ತಿಂಡಿ ತಿಂದು ಬದುಕಿದ್ದಾನೆ. ಅಬ್ಬಾ ನೆನೆದುಕೊಂಡರೇ ತಲೆ ಸುತ್ತುತ್ತೆ ಅಲ್ವಾ? ದಿನವ ಮೂರು ಹೊತ್ತೂ ಒಂದೇ ತಿಂಡಿ ಹೇಗೆ ತಿನ್ನೋಕೆ ಸಾಧ್ಯ? ಇದನ್ನೇ 50 ವರ್ಷದಿಂದ ಮಾಡುತ್ತಿದ್ದಾನೆ ಈ ವ್ಯಕ್ತಿ. ಈತನಿಗೆ ರೋಗವೂ ಇಲ್ಲ, ಏನೂ ಇಲ್ಲ, ಆದರೆ ಈಗೊಂದು ಡೌಟ್ ಏನಂದ್ರೆ ಈತನಿಗೆ ನಾಲಗೆಗೆ ರುಚಿಯೂ ಸಿಕ್ತಿಲ್ವಾ ಹೇಗೆ? ಅನ್ನೋದು


ಇದನ್ನೂ ಓದಿ: Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್


Gold Price: ಇಂದು ಏರಿಕೆಯಾಯ್ತು ಚಿನ್ನದ ಬೆಲೆ! ಇಂದಿನ ಗೋಲ್ಡ್, ಸಿಲ್ವರ್ ರೇಟ್ ಎಷ್ಟಿದೆ ನೋಡಿ


Gold and Silver price on May 21, 2022: ಇಂದು ವೀಕೆಂಡ್ (Weekend), ಇಂದು ಸ್ವಲ್ಪ ಆಭರಣ (Jewellery) ಖರೀದಿ ಮಾಡೋಣ ಅಂತ ಪ್ಲಾನ್ ಮಾಡಿದ್ರಾ? ಹಾಗಿದ್ರೆ ನಿಮಗೆ ಇಲ್ಲಿದೆ ಶಾಕಿಂಗ್ ನ್ಯೂಸ್ (Shocking news). ಯಾಕೆಂದ್ರೆ ಇಂದು ಚಿನ್ನದ ಬೆಲೆ (Gold Price) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Price) ಏರಿಕೆಯಾಗಿದೆ. ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಕಳೆದೆರೆಡು ದಿನಗಳಲ್ಲಿ ಹಾವು ಏಣಿ ಆಟ ನಡೆಸುತ್ತಿದೆ. ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ (Hike).  ಇಂದು ಬೆಳಗಿನ ವೇಳೆಗೆ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ (Indian Gold Market) 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,095 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru) 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 5,095 ರೂಪಾಯಿ ನಿಗದಿಯಾಗಿದೆ. ದೇಶದಲ್ಲಿ ಬೆಳ್ಳೆ ದರದ ಒಂದು ಕೆಜಿಗೆ 61,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಆಗಿದೆ.

Published by:Annappa Achari
First published: