Morning Digest: ರೋಹಿಣಿ ಸಿಂಧೂರಿಗೆ ಸಂಕಷ್ಟ, ಅತ್ತ ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪು! ಇಂದಿನ ಟಾಪ್‌ ನ್ಯೂಸ್‌ಗಳು ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
Canada Parliament: ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ

ಕೆನಡಾದ ಸಂಸತ್ತಿನಲ್ಲಿ ಕನ್ನಡ ಮಾತು ಕೇಳಿಬಂದಿದೆ. ಕೆನಡಾದ ಪಾರ್ಲಿಮೆಂಟ್​ನಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಅಪ್ಪಟ ಕನ್ನಡದಲ್ಲಿ ಮಾತುಗಳನ್ನು ಆರಂಭಿಸಿದ್ದಾರೆ. ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಇದೇ ಮೊದಲ ಬಾರಿ ಕನ್ನಡ ಮಾತನಾಡಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಹೆಮ್ಮೆಯಿಂದ ಕನ್ನಡದಲ್ಲಿ ಮಾತನಾಡುವ ವಿಡಿಯೋ ಈಗ ಕನ್ನಡಿಗರಿಗೆ ಆಪ್ತವಾಗಿದೆ.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಈ ಹಿಂದೆ ಜಿಲ್ಲಾಧಿಕಾರಿಯಾಗಿ (DC) ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ (Rohini Sindhuri) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರೋಹಿಣಿ ಸಿಂಧೂರಿ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತಂತೆ ತನಿಖೆ (Enquiry) ನಡೆಸುವಂತೆ ರಾಜ್ಯ ಸರ್ಕಾರ (State Government) ಆದೇಶ ನೀಡಿದೆ. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ (Bag) ಖರೀದಿ ಹಗರಣದ ಆರೋಪ, ಜಿಲ್ಲಾಧಿಕಾರಿ ಸರ್ಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ (Swimming Pool) ಹಾಗೂ ಜಿಮ್ (Gym) ನಿರ್ಮಾಣ ವಿವಾದ, ಪಾರಂಪರಿಕ ಕಟ್ಟಡಕ್ಕೆ ಹಾನಿ ಆರೋಪ, ಕೊರೋನ (Corona) ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಟ್ಟ ಆರೋಪ ಸೇರಿದಂತೆ ನಾಲ್ಕು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ 30 ದಿನಗಳಲ್ಲಿ ವರದಿ ನೀಡುವಂತೆ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಅಧೀನ ಕ್ರಾಯದರ್ಶಿ ಜಯರಾಂರವರನ್ನು ಸರ್ಕಾರ ನೇಮಿಸಿದೆ. ಶಾಸಕ ಸಾರಾ ಮಹೇಶ್ (MLA Sara Mahesh) ಅವರು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ! ಅಷ್ಟಕ್ಕೂ ಐಎಎಸ್ ಅಧಿಕಾರಿ ಮೇಲಿರುವ ಆರೋಪಗಳೇನು?

Bomb Threat Call: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ! "ಏನ್ ಮಾಡ್ಕೋತೀರಿ" ಎಂದ ಅಪರಿಚಿತ ಯಾರು?

ಬೆಂಗಳೂರು: ದೇವನಹಳ್ಳಿಯಲ್ಲಿ (Devanahalli) ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಾಂಬ್ ಬೆದರಿಕೆ ಕರೆ (Bomb threat call) ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ (Unknown person) ಬೆಳ್ಳಂ ಬೆಳಗ್ಗೆ ಏರ್‌ಪೋರ್ಟ್‌ನ ಪೊಲೀಸ್‌ ಕಂಟ್ರೋಲ್‌ ರೂಂಗೆ (Police Control room) ಕರೆ ಮಾಡಿದ್ದಾನೆ. “ಏರ್‌ ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಅಂತ ಹೇಳಿದ್ದಾನೆ. “ಈಗಲೇ ಬಾಂಬ್ ಬ್ಲಾಸ್ಟ್ (Blast) ಆಗುತ್ತೆ, ಏನು ಮಾಡ್ಕೋತೀರಿ” ಅಂತ ಬೆದರಿಸಿ, ಕಾಲ್ ಕಟ್ ಮಾಡಿದ್ದಾನೆ.

ಈ ಹಿನ್ನೆಲೆಯಲ್ಲಿ ಏರ್‌ ಪೋರ್ಟ್‌ನಲ್ಲಿ ತೀವ್ರ ಪರಿಶೀಲನೆ ನಡೆಸಲಾಯ್ತು. ಇದರಿಂದ ಏರ್‌ಪೋರ್ಟ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾದರು. 2 ಗಂಟೆಗಳ ಕಾಲ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಏರ್‌ಪೋರ್ಟ್‌ನ ಮೂಲೆ ಮೂಲೆಯನ್ನು ಹುಡುಕಾಡಿದ್ದಾರೆ. ಕೊನೆಗೆ ಇದೊಂದು ಹುಸಿ ಬಾಂಬ್ ಕರೆ ಎನ್ನುವುದು ಗೊತ್ತಾಗಿದೆ. ಬಳಿಕ ಸಿಬ್ಬಂದಿ, ಪೊಲೀಸರು ನೆಮ್ಮದಿಯ  ನಿಟ್ಟುಸಿರು ಬಿಟ್ಟಿದ್ದಾರೆ.

Gold Price: ಶುಕ್ರವಾರ ಬಂಗಾರ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಇಂದು ಚಿನ್ನದ ದರದಲ್ಲಿ ಏರಿಕೆ

Gold and Silver price on May 20, 2022: ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಕಳೆದೆರೆಡು ದಿನಗಳಲ್ಲಿ ಹಾವು ಏಣಿ ಆಟ ನಡೆಸುತ್ತಿದೆ. ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ (Hike). ನಿನ್ನೆಯಷ್ಟೆ ರೂ. 4,610 ಆಗಿದ್ದ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು ಇಂದು 4,630 ರೂಪಾಯಿ ಆಗಿದೆ. ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನ ಮತ್ತೆ ಇಂದು ತುಟ್ಟಿಯಾಗಿದೆ. ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ (Silver Price) ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 61,000 ಇದ್ದದ್ದು ಇಂದು ರೂ. 65,000 ಆಗಿದೆ.

ಇದನ್ನೂ ಓದಿ: Gold Price: ಶುಕ್ರವಾರ ಬಂಗಾರ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಇಂದು ಚಿನ್ನದ ದರದಲ್ಲಿ ಏರಿಕೆ

Petrol-Diesel Price Today: ರಾಜ್ಯದಲ್ಲಿ ಇಂದು ಹೇಗಿದೆ ಪೆಟ್ರೋಲ್-ಡಿಸೇಲ್ ಬೆಲೆ? ಇಲ್ಲಿದೆ ಮಾಹಿತಿ

ಭಾರತದಲ್ಲಿ ವಾಹನ ಸವಾರರಿಗೆ ಇಂಧನ ಬೆಲೆ (Fuel Price) ಬಿಸಿ ತಟ್ಟತ್ತಲೇ ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು, 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಯಷ್ಟೇ ಇಂದೂ ಸಹ ಪೆಟ್ರೋಲ್ ಬೆಲೆ ಮುಂದುವರೆದಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.
Published by:Annappa Achari
First published: