Morning Digest: ಗ್ಯಾಸ್ ಬೆಲೆ ಏರಿಕೆ, ಚಿನ್ನದ ದರ ಇಳಿಕೆ! ಮಗುವನ್ನು ಕಸದ ಬುಟ್ಟಿಗೆ ಎಸೆದ ತಾಯಿ! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ; ಅಡುಗೆ ಅನಿಲದ ದರ ಮತ್ತೆ ಏರಿಕೆ!

ನವದೆಹಲಿ: ಜನಸಾಮಾನ್ಯರಿಗೆ (Common People) ಬರೆ ಮೇಲೆ ಬರೆ ಬೀಳುತ್ತಾ ಇದೆ. ಬೆಲೆ ಏರಿಕೆ (Price Hike) ಬಿಸಿಗೆ ಸುಟ್ಟು ಸಂಕಷ್ಟಪಡುವಂತೆ ಆಗಿದೆ. ಯಾಕೆಂದ್ರೆ ಒಂದೆಡೆ ಅಕಾಲಿಕ ಮಳೆಯಿಂದ (Rain) ಭಾರೀ ಅವಾಂತರ ಸೃಷ್ಟಿಯಾಗಿದೆ. ಇದರ ಜೊತೆ ತರಕಾರಿ (Vegetables) ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳ (Food Items) ಬೆಲೆ ಏರುತ್ತಿದೆ. ಇವೆಲ್ಲ ಸಾಲದು ಅಂತ ಇದೀಗ ದಿನ ಬಳಕೆಗೆ ಅಗತ್ಯವಾಗಿ ಬೇಕಾದ ಅಡುಗೆ ಅನಿಲದ (Cooking Gas) ಬೆಲೆ ಏರಿಕೆಯಾಗಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳು (LPG Cylinder) ಪ್ರತಿ ಕಿಲೋಗ್ರಾಂಗೆ 3.50 ರೂ.ಗಳಷ್ಟು ದುಬಾರಿಯಾಗಿದೆ, ಈಗ ದೇಶದಾದ್ಯಂತ ಬೆಲೆ 1000 ರೂ. ವಾಣಿಜ್ಯ ಸಿಲಿಂಡರ್ (Commercial Cylinder) ಬೆಲೆ ಪ್ರತಿ ಕಿಲೋಗ್ರಾಂಗೆ 8 ರೂಪಾಯಿಗಳಷ್ಟು ಏರಿಕೆಯಾಗಿದೆ.

Gold Price: ಆಭರಣ ಪ್ರಿಯರಿಗೆ ಗುರುವಾರದ ಗುಡ್ ನ್ಯೂಸ್! ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ

Gold and Silver Price on May 19, 2022: ಆಭರಣ (Jewellery) ಪ್ರಿಯರಿಗೆ ಇಂದು ಗುರುವಾರ (Thursday) ಗುಡ್ ನ್ಯೂಸ್ (Good News) ಸಿಕ್ಕಿದೆ. ಯಾಕೆಂದರೆ ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ (Gold Price) ಇಳಿಕೆ ಕಂಡಿದೆ. ನಿನ್ನೆಯಷ್ಟೆ ರೂ. 4,655 ಆಗಿದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆಯು ಇಂದು 4,610 ರೂಪಾಯಿ ಆಗಿದೆ. ಎರಡು, ಮೂರು ದಿನದಿಂದ ಯಥಾಸ್ಥಿತಿ ಕಾಯ್ದಿರಿಸಿಕೊಂಡಿದ್ದ ಚಿನ್ನ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ. ದೇಶದಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ರೂ. 46100 ಆಗಿದೆ.

ಇದನ್ನೂ ಓದಿ: Gold Price: ಆಭರಣ ಪ್ರಿಯರಿಗೆ ಗುರುವಾರದ ಗುಡ್ ನ್ಯೂಸ್! ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ

Crime News: ಮತ್ತೊಂದು ಮದುವೆಯಾಗಲು 15 ದಿನದ ಮಗುವನ್ನು ಕಸದಬುಟ್ಟಿಗೆಸೆದ ಮಹಿಳೆ

ಮುಂಬೈ(ಮೇ.19): 9 ತಿಂಗಳು ಗರ್ಭದಲ್ಲಿಟ್ಟು ಹೊತ್ತ ಮಗು ಹುಟ್ಟುವ ಕ್ಷಣಕ್ಕಾಗಿ ಪ್ರತಿ ತಾಯಿಯೂ ಕಾಯುತ್ತಿರುತ್ತಾಳೆ. ಒಮ್ಮೆ ಕಂದನ ಮುಖ ನೋಡಬೇಕೆಂದು ಕನವರಿಸುತ್ತಾಳೆ. ಆದರೆ ಇಲ್ಲೊಬ್ಬ ತಾಯಿ (Mother) ಹುಟ್ಟಿದ ಮಗುವನ್ನು (Baby) ಬೇಡವೆಂದು ಎಸೆದಿದ್ದಾಳೆ. ಬಹಳಷ್ಟು ಜನರಿಗೆ ಮಕ್ಕಳಿರುವುದಿಲ್ಲ, ಮಕ್ಕಳಿದ್ದರೂ ಕೆಲವರಿಗೆ ಮಕ್ಕಳು ಬೆಳೆಯುವುದನ್ನು ನೋಡುವ ಸೌಭಾಗ್ಯವಿರುವುದಿಲ್ಲ. ಇದೆಲ್ಲ ಇದ್ದರೂ ಹುಟ್ಟಿದ ಮಗುವನ್ನು ಎಸೆದರೆ ಅಂಥವರಿಗೆ ಏನೆಂದು ಹೇಳುವುದು? ಇಲ್ಲೊಬ್ಬ ಮಹಿಳೆ (Woman) ತನಗೆ ಹುಟ್ಟಿದ ಮಗುವನ್ನು ಬೇಡ ಎಂದು ತಿರಸ್ಕರಿಸಿದ್ದಾಳೆ. ಇದಕ್ಕೆ ಈಕೆ ಕೊಟ್ಟ ಕಾರಣವನ್ನು ಕೇಳಿದರೆ ಯಾರೇ ಆದರೂ ಶಾಕ್ ಆಗುವುದು ಗ್ಯಾರಂಟಿ.

PSI Exam Scam: ಮದುವೆ ಮುಗಿಸಿದವನನ್ನು 'ಮಾವನ ಮನೆ'ಗೆ ಕರೆದೊಯ್ದ ಸಿಐಡಿ ಪೊಲೀಸ್!

ಬಾಗಲಕೋಟೆ: ಪಿಎಸ್‌ಐ ನೇಮಕಾತಿ ಹಗರಣ (PSI Recruitment Scam) ಬಗೆದಷ್ಟು ಬಯಲಾಗುತ್ತಿದೆ. ಈ ಬಗ್ಗೆ ತನಿಖೆ (Investigation) ನಡೆಸುತ್ತಿರುವ ಸಿಐಡಿ ಅಧಿಕಾರಿಗಳು (CID Officers) ರಾಜ್ಯದ ಮೂಲೆ ಮೂಲೆಯಿಂದ ಶಂಕಿತ ಆರೋಪಿಗಳನ್ನ (Accused) ಹೊರ ತರುತ್ತಿದ್ದಾರೆ. ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ (Jamakhandi) ತಾಲೂಕಿನ ತೊದಲಾಬಾಗಿ ಗ್ರಾಮದಲ್ಲಿ ಓರ್ವನನ್ನು ವಶಕ್ಕೆ ಪಡೆದಿರುವುದು ವರದಿಯಾಗಿದೆ. ಶ್ರೀಕಾಂತ್ ಚೌರಿ ಎಂಬಾತನೇ ಬಂಧಿತ ಆರೋಪಿ ಅಂತ ತಿಳಿದು ಬಂದಿದೆ. ಇನ್ನು ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್‌ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಗಳ ಬಳಿಕ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಮನೆ ದೇವರ ದರ್ಶನಕ್ಕೆಂದು ಹೋಗಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದು ಬನಹಟ್ಟಿಯ ಪೋಲಿಸ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: PSI Exam Scam: ಮದುವೆ ಮುಗಿಸಿದವನನ್ನು 'ಮಾವನ ಮನೆ'ಗೆ ಕರೆದೊಯ್ದ ಸಿಐಡಿ ಪೊಲೀಸ್!

ಇಂದು SSLC ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ

ಇಂದು ಮಧ್ಯಾಹ್ನ 12.30ಕ್ಕೆ SSLC ಫಲಿತಾಂಶ ಪ್ರಕಟವಾಗಲಿದೆ.  ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಚಿವ ಬಿ.ಸಿ ನಾಗೇಶ್​  ಅವರು ನಾಳೆ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ.  SSLC ಬೋರ್ಡ್​ ಕೂಡ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದೆ.  ವಿದ್ಯಾರ್ಥಿಗಳಿಗೆ ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರಲಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ನಂಬರ್ ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಬರಲಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ  ಚೆಕ್‌ ಮಾಡಬಹುದಾಗಿದೆ.
Published by:Annappa Achari
First published: