Morning Digest: ಮಳೆಗೆ ಬೆಂಗಳೂರಲ್ಲಿ ಇಬ್ಬರು ಬಲಿ, ಅಸ್ಸಾಂನಲ್ಲಿ ಭಾರೀ ಪ್ರವಾಹ! ಇಂದಿನ ಟಾಪ್‌ ನ್ಯೂಸ್‌ಗಳು ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

 • Share this:
  ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

  ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಮಳೆ (Rain) ಅಬ್ಬರ ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿದ್ದಾರೆ. ಉಲ್ಲಾಳ (Ullala) ಉಪನಗರದ ಉಪಕಾರ್ ಲೇಔಟ್‌ನಲ್ಲಿ (Upakar Layout) ಪೈಪ್‌ ಲೈನ್ (Pipeline) ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಅಲ್ಲಿಂದ ಪಾರಾಗಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ.  ಮೃತರನ್ನು ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಅಂತ ಗುರುತಿಸಲಾಗಿದೆ.

  ರಾಜಧಾನಿಯಲ್ಲಿ ನಿನ್ನೆಯಿಂದಲೇ ಭಾರೀ ಮಳೆ

  ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ. ವಿದ್ಯಾಪೀಠ 113 mm ಮಳೆ, ಸಂಪಂಗಿರಾಮನಗರ 100.3 mm ಮಳೆ, ನಾಗಪುರ 100 mm ಮಳೆ, ಅಗ್ರಹಾರ ದಾಸರಹಳ್ಳಿ 97.5 mm ಮಳೆ, ಹಂಪಿ ನಗರ 93.5 mm ಮಳೆ, ರಾಜಮಹಲ್ ಗುಟ್ಟಹಳ್ಳಿ 95 mm ಮಳೆ, ದಯಾನಂದ ನಗರ 82 mm ಮಳೆ, ಹೊರಮಾವು 12.5 ಸೆ.ಮೀ ಮಳೆ,ಸಂಪಂಗಿರಾಮನಗರ 11.85 ಸೆ.ಮೀ ಮಳೆ,ಕೆ.ನಾರಾಯಣಪುರ 11.75 ಸೆ.ಮೀ, ವಿದ್ಯಾಪೀಠ 11.05 ಸೆ.ಮೀ ಮಳೆ, ಅಗ್ರಹಾರ ದಾಸರಹಳ್ಳಿ 10.2 ಸೆ.ಮೀ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.

  ಇದನ್ನೂ ಓದಿ: Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

  Assam Floods: ವಿಪರೀತ ಮಳೆ, ಪ್ರವಾಹಕ್ಕೆ ತತ್ತರಿಸಿದ ಅಸ್ಸಾಂ

  Assam Flood: ಅಸ್ಸಾಂನಲ್ಲಿ ಕಳೆದ ಮೂರು ದಿನಗಳಿಂದ ವಿಪರೀತ ಮಳೆಯ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ರಾಜ್ಯಾದ್ಯಾಂತ ಹಲವು ಕಡೆ ಪ್ರವಾಹದಿಂದಾಗಿ ಮೂಲಭೂತ ಸೌಕರ್ಯಗಳು ಹಾನಿಯಾಗಿವೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೂರು ದಿನಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಈಶಾನ್ಯ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ ಎಂದು ಎರಡು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.  ಸೋಮವಾರ ಬಿಡುಗಡೆಯಾದ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಕ್ಯಾಚಾರ್ ಜಿಲ್ಲೆಯಲ್ಲಿ ಎರಡು ಸಾವುಗಳು ವರದಿಯಾಗಿದ್ದು, ಶುಕ್ರವಾರದಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿದೆ.

  Jilted Lover: ಮಾಜಿ ಲವರ್​ನ ದ್ವೇಷ, ಆಗಷ್ಟೇ ಮದುವೆಯಾದ ಯುವಕನಿಗೆ ಸಿಕ್ಕಿತು ಶಾಕಿಂಗ್ ಗಿಫ್ಟ್!

  ಗುಜರಾತ್(ಮೇ.18): ಲವರ್​ಗೆ ಕೈಕೊಟ್ಟು ಬೇರೆ ಮದುವೆಯಾಗುವ ಅಥವಾ ಬ್ರೇಕಪ್ ನಂತರ ಬೇರೆ ಮದುವೆಯಾಗುತ್ತಿರುವವರಿಗೆ ನಿಜಕ್ಕೂ ಶಾಕಿಂಗ್ ಸುದ್ದಿ ಇದು. ವಿವಾಹದ ಮೊದಲು ಹಾಗು ನಂತರದ ಸಂಬಂಧಗಳು ಎಷ್ಟು ಪರಿಣಾಮಕಾರಿಯಾಗಿರಬಹುದೆಂದು ಇಲ್ಲಿ ನೋಡಬಹುದು. ಮದುವೆ ದಿನವೇ ಖುಷಿ ಖುಷಿಯಾಗಿ ಮದುವೆ ಗಿಫ್ಟ್​ಗಳನ್ನ ಓಪನ್ ಮಾಡುತ್ತಿದ್ದ ಯುವಕನಿಗೆ ಶಾಕಿಂಗ್ ಗಿಫ್ಟ್ ಕಾದಿತ್ತು. ಸಂಭ್ರಮದಿಂದ ಗಿಫ್ಟ್ ಕವರ್ ಓಪನ್ ಮಾಡುತ್ತಿದ್ದ ವೇಳೆ ಅನಾಹುತ ಆಗಿಹೋಗಿದೆ.  ನವವಿವಾಹಿತರು ಮತ್ತು ಅವರ ಸೋದರಳಿಯನಿಗೆ ಆಟಿಕೆ ರೀಚಾರ್ಜ್ ಮಾಡುವಾಗ ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾದ ಗಾಯಗಳಾಗಿವೆ. ಇದು ನವವಿವಾಹಿತ ದಂಪತಿಗಳಿಗೆ ಅವರ ಮದುವೆಯಲ್ಲಿ ಉಡುಗೊರೆಯಾಗಿ ದೊರೆತ ಉಡುಗೊರೆಯಾಗಿತ್ತು. ಇದನ್ನು ಮಹಿಳೆಯ ಹಿರಿಯ ಸಹೋದರಿಯ ಮಾಜಿ ಗೆಳೆಯ ಹೇಳಿದ್ದಾನೆ ಎನ್ನಲಾಗಿದೆ.

  90ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡ

  ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ… ಅಂದರೆ ಎಚ್ಡಿ ದೇವೇಗೌಡ ಅವರ ಹುಟ್ಟಿದ ಹಬ್ಬ ಇಂದು. ಮಾಜಿ ಪ್ರಧಾನಿ ದೇವೇಗೌಡರು ಮಣ್ಣಿನ ಮಗ ಅಂತಾನೇ ಫೇಮಸ್. ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ, ಶಾಸಕನಾಗಿ, ಸಂಸದನಾಗಿ, ರೈತ ನಾಯಕನಾಗಿ, ಹೋರಾಟಗಾರನಾಗಿ ಅವರು ಮಾಡಿರುವ ಸೇವೆ ಅಸಂಖ್ಯಾತ. ಕೆಂಪುಕೋಟೆಯಲ್ಲಿ ಪ್ರಧಾನಿಯಾಗಿ ರಾಷ್ಟ್ರಧ್ವಜ ಹಾರಿಸಿದ ಮೊದಲ ಮತ್ತು ಸದ್ಯದ ಏಕೈಕ ಕನ್ನಡಿಗ ಎಚ್ಡಿ ದೇವೇಗೌಡ. 90ರ ಹರೆಯಕ್ಕೆ ಕಾಲಿಟ್ಟಿರುವ ದೇವೇಗೌಡರು ಇನ್ನೂ 100 ಕಾಲ ನಮ್ಮೊಂದಿಗಿರಲಿ ಎನ್ನುವುದು ಎಲ್ಲರ ಹಾರೈಕೆ.

  ಇದನ್ನೂ ಓದಿ: HD Deve Gowda Birthday: 'ಮಣ್ಣಿನ ಮಗ'ನಿಗೆ 90ರ ಹರೆಯ! ದೇವೇಗೌಡರಿಗೆ ಪ್ರಧಾನಿಯಿಂದ ಶುಭಾಶಯ

  Gold Price: ಆಭರಣ ಪ್ರಿಯರಿಗೆ ಕೊಂಚ ನಿರಾಸೆ, ಚಿನ್ನ-ಬೆಳ್ಳಿ ಬೆಲೆ ಏರಿಕೆ! ಇಂದು ಎಷ್ಟಿದೆ ದರ ತಿಳಿದುಕೊಳ್ಳಿ

  Gold and Silver price on May 18, 2022: ದೇಶದಲ್ಲಿ ನಿರಂತರವಾಗಿ ಚಿನ್ನದ ಬೆಲೆಯು (Gold Price) ಕುಸಿತ ಕಾಣುತ್ತಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ನಿನ್ನೆಯಷ್ಟೆ ರೂ. 4,625 ಆಗಿದ್ದ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು ಇಂದು 4,655 ರೂಪಾಯಿ ಆಗಿದೆ. ಎರಡು ದಿನದಿಂದ ಯಥಾಸ್ಥಿತಿ ಕಾಯ್ದಿರಿಸಿಕೊಂಡಿದ್ದ ಚಿನ್ನ ಇಂದು ಬೆಲೆ ಏರಿಕೆ ಕಂಡಿದೆ. ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ (Silver Price) ಏರಿಕೆ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 59,400 ಇದ್ದದ್ದು ಇಂದು ಸಹ ರೂ. 61,550 ಆಗಿದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.
  Published by:Annappa Achari
  First published: