• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Morning Digest: ಕಿರುತೆರೆ ನಟಿ ಸಾವು, ಇನ್ನೂ ಮುಗಿದಿಲ್ಲ ಮಳೆ ಅಬ್ಬರ! ಚಿನ್ನದ ಬೆಲೆಯಲ್ಲಿ ಸ್ಥಿರತೆ, ಇವು ಇಂದಿನ ಟಾಪ್ ನ್ಯೂಸ್‌ಗಳು

Morning Digest: ಕಿರುತೆರೆ ನಟಿ ಸಾವು, ಇನ್ನೂ ಮುಗಿದಿಲ್ಲ ಮಳೆ ಅಬ್ಬರ! ಚಿನ್ನದ ಬೆಲೆಯಲ್ಲಿ ಸ್ಥಿರತೆ, ಇವು ಇಂದಿನ ಟಾಪ್ ನ್ಯೂಸ್‌ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

 • Share this:

ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ದುರ್ಮರಣ! 


ಕನ್ನಡ ಕಿರುತೆರೆಯ ಯುವ ನಟಿ ಚೇತನಾ ರಾಜ್ ಎಂಬುವರು ಇಂದು ಸಾವನ್ನಪ್ಪಿದ್ದಾರೆ. 21 ವರ್ಷದ ಚೇತನಾ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿದ್ದರು. ಇದೀಗ ನವರಂಗ ಸರ್ಕಲ್‌ನ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಕೊನೆಯುಸಿರೆಳೆದಿದ್ದಾರೆ.


ಚೇತನಾ ರಾಜ್ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ. ಬೆಂಗಳೂರಿನ ನವರಂಗ ಸರ್ಕಲ್‌ನ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಫ್ಯಾಟ್ ಸರ್ಜರಿ ನಡೆಯುವಾಗಲೇ ಚೇತನಾ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Actress Death: ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ದುರ್ಮರಣ! ಫ್ಯಾಟ್ ಸರ್ಜರಿ ವೇಳೆ ಚೇತನಾ ರಾಜ್ ಸಾವು


Rain Alert: ನಿಂತಿಲ್ಲ ಮಳೆ, ಕೊಡೆ ಹಿಡಿದು ನಡೆ! ಕರಾವಳಿ ಸೇರಿ ಹಲವೆಡೆ ಎಚ್ಚರ, ಕಟ್ಟೆಚ್ಚರ


ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ರಾಜ್ಯಾದ್ಯಂತ ಮಳೆ (Rain) ಸುರಿಯುತ್ತಿದೆ. ಬಿರು ಬೇಸಿಗೆಯಲ್ಲಿ (Summer) ಅಬ್ಬರಿಸಿದ ವರುಣನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೇ ತಿಂಗಳ (May Month) ಬಿಸಿಲಲ್ಲವೇ, ಇಂದು ಮಳೆ ಕಡಿಮೆಯಾಗುತ್ತೆ, ನಾಳೆ ಮಳೆ ನಿಲ್ಲುತ್ತೆ ಅಂತಿದ್ದ ಜನರಿಗೆ ಇದೀಗ ಶಾಕ್ (Shock) ಎದುರಾಗಿದೆ.


ಯಾಕೆಂದ್ರೆ ಭಾರತೀಯ ಹವಾಮಾನ ಇಲಾಖೆ (Indian Meteorological Department) ಬೆಂಗಳೂರು (Bengaluru), ಕರಾವಳಿ (Coastal) ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯ (Heavy Rain) ಮುನ್ಸೂಚನೆ ನೀಡಿದೆ. ನಾಳೆಯಿಂದ ಅಂದರೆ ಮೇ 18ರಿಂದ ಮೇ 21ರವರೆಗೆ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರಿ‌ ಮಳೆ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


Kodagu: ಶಾಲಾ ಆವರಣದಲ್ಲಿ ತ್ರಿಶೂಲದೀಕ್ಷೆ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ದೂರು


ಕೊಡಗು(ಮೇ.17): ಹಿಜಬ್ ಧರಿಸಿ ಶಾಲೆಗೆ ಬರಲು ಅವಕಾಶವಿಲ್ಲ ಎಂದಿದ್ದ ಸರ್ಕಾರ (Government) ಅದಕ್ಕೆ ನಿರ್ಭಂಧ ಹೇರಿತ್ತು. ಆದರೆ ಶಾಲಾ ಕಟ್ಟಡದೊಳಗೆ ಭಜರಂಗದ ದಕ್ಷಿಣ ಕರ್ನಾಟಕ (Karnataka) ಪ್ರಾಂತೀಯ ಶೌರ್ಯ ಪ್ರಶಿಕ್ಷಾ ವರ್ಗ ನಡೆಸಿರೋದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೇ ಐದರಿಂದ 11 ರವರೆಗೆ ಕೊಡಗಿನ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ಶಾಲೆಯಲ್ಲಿ (School) ಪ್ರಶಿಕ್ಷಾ ವರ್ಗ ನಡೆಸಲಾಗಿದೆ.


ಈ ಸಂದರ್ಭ ತರಬೇತಿಯಲ್ಲಿ ತ್ರಿಶೂಲ ದೀಕ್ಷೆ ಜೊತೆಗೆ ಗನ್ ಗಳಿಂದ ಶೂಟ್ ಮಾಡಿಸಿ ತರಬೇತಿ ನೀಡಿದೆ ಎನ್ನುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ತ್ರಿಶೂಲ ಮತ್ತು ಗನ್ ಗಳ ಬಳಸಿ ತರಬೇತಿ ನೀಡಿರುವ ಫೋಟೋಗಳನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಮತ್ತು ಡಿಜಿಪಿ ಅವರಿಗೆ ಟ್ಯಾಗ್ ಮಾಡಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವಿಟ್ ಮಾಡಿದ್ದಾರೆ.


KGF Chapter 2: ಸಿನಿರಂಗದಲ್ಲಿ ಬಂಗಾರದ ಬೆಳೆ ತೆಗೆದ 'ಕೆಜಿಎಫ್‌-2'


ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ  ಕೆಜಿಎಫ್ ಚಾಪ್ಟರ್  2  (KGF Chapter 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿ ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿರುವ ಈ ಚಿತ್ರ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೂಡ ಭರ್ಜರಿಯಾಗಿತ್ತು. ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ.


ಕೆಜಿಎಫ್ (KGF-2) ಸಿನಿಮಾ ರಿಲೀಸ್ ಆಗಿ 3 ವಾರ ಕಳೆದರು ರಾಕಿಭಾಯ್ ಖದರ್ ಮಾತ್ರ ಕಮ್ಮಿಯಾಗಿಲ್ಲ. ಬಾಲಿವುಡ್ (Bollywood) ಬಾಕ್ಸ್ಆಫೀಸ್ನಲ್ಲಿ ಹಿಂದಿ ಸಿನಿಮಾಗಳೇ ಮಾಡಿರದ ದಾಖಲೆಯನ್ನ ಕೆಜಿಎಫ್ 2′ ಸಿನಿಮಾ ಮಾಡಿದೆ. ಅದೇನು ಅಂದ್ರೆ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಸಾವಿರ ಕೋಟಿ ಕ್ಲಬ್​ ಸೇರಿರುವ 2ನೇ ಚಿತ್ರ ಎಂಬ ದಾಖಲೆಯನ್ನು ಬರೆದಿದೆ.


ಇದನ್ನೂ ಓದಿ: KGF Chapter 2: ಸಿನಿರಂಗದಲ್ಲಿ ಬಂಗಾರದ ಬೆೆಳೆ ತೆಗೆದ 'ಕೆಜಿಎಫ್‌-2'! 1000 ಕೋಟಿ ಗಳಿಸಿದ 2ನೇ ಭಾರತೀಯ ಸಿನಿಮಾ


ಸ್ಥಿರತೆ ಕಾಯ್ದುಕೊಂಡ ಚಿನ್ನ! ಇಂದು ಎಷ್ಟಿದೆ ನೋಡಿ ಗೋಲ್ಡ್, ಸಿಲ್ವರ್ ರೇಟ್

top videos


  Gold and Silver price on May 17, 2022: ಆಭರಣ (Jewellery) ಖರೀದಿ ಮಾಡಲು ಬಯಸುವವರಿಗೆ ಈ ದಿನ ಕೊಂಚ ಸೂಕ್ತವಾಗಿದ್ದು, ನಿಮ್ಮಿಷ್ಟದ ಆಭರಣಗಳನ್ನು ಖರೀದಿ ಮಾಡಬಹುದು. ಯಾಕೆಂದರೆ ಹಳದಿ ಲೋಹದ ದರದಲ್ಲಿ ಕಳೆದೆರೆಡು ದಿನಗಳಲ್ಲಿ ಯಾವುದೇ ಬದಲಾವಣೆ (Changes) ಆಗಿಲ್ಲ. ನಿನ್ನೆ ಒಂದು ಗ್ರಾಂ ಆಭರಣ ಚಿನ್ನದ ಬೆಲೆ (Gold Price) 4,625 ರೂ. ಆಗಿತ್ತು. ದಿನದ ಕೊನೆಯಲ್ಲೂ ಸಹ ಅದರ ಬೆಲೆ ಸ್ಥಿರವಾಗಿದೆ, ಇಂದು ಸಹ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,625 ರೂ. ಇದೆ. ದೇಶದಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ರೂ. 46,250 ಆಗಿದೆ. ಇನ್ನು ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ (Silver Price) 59,400 ಇದ್ದದ್ದು ಇಂದು ಸಹ ರೂ. 59,400 ಆಗಿದೆ.

  First published: