Morning Digest: ತಮ್ಮನ ಶವದೊಂದಿಗೆ ರಸ್ತೆ ಬದಿ ಕುಳಿತ ಬಾಲಕ; ಪ್ರೀತಿಗೆ ಅಡ್ಡ ಬಂದ ಚಿಕ್ಕಪ್ಪನ ಕೊಲೆ: ಬೆಳಗಿನ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

  • Share this:
ತಮ್ಮನ ಶವದೊಂದಿಗೆ ರಸ್ತೆ ಬದಿ ಕುಳಿತ ಬಾಲಕ : ಕೆಲವೊಂದು ಫೋಟೋಗಳು ಮನವನ್ನು ಇನ್ನಿಲ್ಲದಂತೆ ಕಲಕಿಬಿಡುತ್ತವೆ. ಇದೇ ರೀತಿ ಇಡೀ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. 8 ವರ್ಷದ ಬಾಲಕ (8-year-old Gulshan) ತನ್ನ 2 ವರ್ಷದ ತಮ್ಮನ (2-year-old brother Raja) ಶವನ್ನು ಅವಚಿ ಕುಳಿತಿರುವ ಫೋಟೋ ಎಂಥವರ ಕಣ್ಣಾಲಿಗೆಗಳನ್ನೂ ತೇವವಾಗಿಸುತ್ತಿದೆ. ಬಿಳಿ ಬಟ್ಟೆಯಲ್ಲಿ ಸುತ್ತಿರುವ ತಮ್ಮನ ಶವವನ್ನು ಬಿಗಿದಪ್ಪಿ ಹಿಡಿದಿರುವ ಬಾಲಕನ ಕಣ್ಣಿನಲ್ಲಿ ವಿಷಾದ, ಅಸಮಾಯಕತೆ ಮನೆ ಮಾಡಿದೆ. ಹೃದಯವಿದ್ರಾವಕ ಘಟನೆ, ಮಾನವೀಯತೆಯನ್ನು ನಾಚಿಕೆಪಡಿಸುವ ಮತ್ತು ಆರೋಗ್ಯ ಸೌಲಭ್ಯಗಳ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂಬಂಥ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Madhya Pradesh Boy: 2 ವರ್ಷದ ತಮ್ಮನ ಶವವನ್ನು ಮಡಿಲಲ್ಲಿ ಹಿಡಿದು ರಸ್ತೆ ಪಕ್ಕ ಕುಳಿತ 8 ವರ್ಷದ ಬಾಲಕ; ಹೃದಯವಿದ್ರಾವಕ ಘಟನೆ

ಕುರಿಯನ್ನು ಅರೆಸ್ಟ್ ಮಾಡಿದ ಪೊಲೀಸ್

ನಾವು ಹಲವಾರು ಹಾಸ್ಯಮಯ (Comedy) ವಿಡಿಯೋಗಳನ್ನು (Video) ನೋಡಿದ್ದೇವೆ. ಅದರಲ್ಲಿ ಹಲವು ಥರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ (Viral) ಆಗುತ್ತವೆ. ಹೆಚ್ಚು ವೀವ್ಸ್ (Views) ಕೂಡ ಪಡೆದುಕೊಂಡಿವೆ. ಆದರೆ ಇಂದು ನಾವು ತುಂಬಾ ತಮಾಷೆಯ ಸುದ್ದಿಯೊಂದನ್ನು ಇಲ್ಲಿ ನೋಡೋಣ. ಅಷ್ಟೊಂದು ಸೀರಿಯಸ್ ಮತ್ತು ತಮಾಷೆಯಾಗಿರುವ ಸುದ್ದಿ ಏನಪ್ಪಾ ಅಂದ್ರೆ ಕುರಿಯೊಂದನ್ನ ಬಂಧಿಸಲಾಗಿದ್ದು, ಆರಾಧ್ಯ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಅರೇ.. ಕುರಿಯನ್ನ ಬಂಧಿಸಿದ್ರಾ? ಅದೇನಪ್ಪಾ ಮಾಡಿತ್ತು? ಮನುಷ್ಯರಷ್ಟೇ ಅಲ್ಲ, ಕುರಿಯನ್ನು ಪೊಲೀಸರು ಬಂಧಿಸಿದ್ದಾರೆ ಅಂದ್ರೆ ಸೀರಿಯಸ್ ಇಶ್ಯು ಏನೋ ಇದೆ..   ಇಲ್ಲ ರೀ ಇಂಟ್ರೋದಲ್ಲೇ ಎಲ್ಲಾನೂ ಹೇಳಿ ಬಿಡೋಕೆ ಆಗುತ್ತಾ? ಹಾಗಾದ್ರೆ ನಾವು ಕುರಿಯನ್ನು ಯಾಕೆ ಬಂಧಿಸಿದ್ರು, ಎಲ್ಲಿ ಬಂಧಿಸಿದ್ರು ಅನ್ನೋ ವಿಷಯವನ್ನಾ ಈ ಕೆಳಗೆ ನೋಡೋಣ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Sheep Arrested: ಇನ್ನೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ ಕುರಿಯನ್ನು ಅರೆಸ್ಟ್ ಮಾಡಿದ ಪೊಲೀಸ್, ವಿಡಿಯೋ ವೈರಲ್

ಪ್ರೀತಿಗೆ ಅಡ್ಡ ಬಂದ ಚಿಕ್ಕಪ್ಪನ ಕೊಲೆ

ಪ್ರೀತಿಸಿದ್ದ (Love) ಯುವತಿ ಜೊತೆ ಮದುವೆ (Marriage) ಆಗೋಕೆ ಅಡ್ಡಿ ಮಾಡಿ, ಕೊಟ್ಟ ಹಣವನ್ನ (Money) ವಾಪಸ್ ಕೇಳುತ್ತಾನೆ ಅನ್ನೋ ಕಾರಣಕ್ಕೆ ಚಿಕ್ಕಪ್ಪನಿಗೆ ಸ್ಕೆಚ್ ಹಾಕಿ‌ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಸೇಡು ತೀರಿಸಿಕೊಳ್ಳೋಕೆ ಆವೇಶದಲ್ಲಿ ಕೊಲೆ ಮಾಡಿದ ಆರೋಪಿ ಯುವಕ ಈಗ ಜೈಲು ಸೇರಿ ಮುದ್ದೆ ಮುರಿಯುತ್ತಿದ್ದಾನೆ. ಆಸ್ತಿಗಾಗಿ ಚಿಕ್ಕಪ್ಪ, ದೊಡ್ಡಪ್ಪ , ಅಣ್ಣ, ತಮ್ಮಂದಿರು ದ್ವೇಷ ಮೂಡಿ ಕೊಲೆ ಮಾಡಿರೋದನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಪ್ರೀತಿಸಿದ ಯುವತಿಯನ್ನ ಮದುವೆ ಆಗೋದು ಬೇಡ ಅಂತ ತಡೆದು ಬುದ್ದಿ ಹೇಳಿದ್ದ ಚಿಕ್ಕಪ್ಪನ ಮೇಲೆ ಅಣ್ಣನ ಮಗ ಇಟ್ಟ ಸೇಡು ಕೊಲೆ ಮಾಡಿಸಿದೆ.  ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅರಸನಘಟ್ಟ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಮುಂದುವರಿದ ಮಳೆಯ ಅಬ್ಬರ

ರಾಜ್ಯದಲ್ಲಿ ವರುಣನ ಅಬ್ಬರ (Karnataka Rains) ಮುಂದುವರೆದಿದೆ. 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ (Red Alert) ಘೋಷಿಸಲಾಗಿದೆ. ಕರ್ನಾಟಕದ ಹಲವೆಡೆ ಭಾನುವಾರ ಧಾರಾಕಾರ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಬುಧವಾರದವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

  ಚಿನ್ನ ಖರೀದಿಸಲು ಬೆಸ್ಟ್ ಟೈಂ

ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ (Gold Price) ಏರಿಕೆ ಕಾಣುತ್ತಲೇ ಇದ್ದು, ಇಂದು ಕೊಂಚ ಇಳಿಕೆ ಕಂಡಿದೆ. ಕಳೆದ ವಾರದಲ್ಲಿ ಏರಿಕೆ ಕಾಣುತ್ತಿದ್ದ ಚಿನ್ನ ಎರಡು ದಿನಗಳಲ್ಲಿ ಇಳಿಕೆಯಾಗಿದೆ. ಆದರೆ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸುತ್ತಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ (Gold Rate) 4,695 ಇದ್ದದ್ದು, ಇಂದೂ ಸಹ ಅದೇ ಬೆಲೆಯನ್ನು ಕಾಯ್ದುಕೊಂಡು ಬಂದಿದೆ. ಹಾಗಾಗಿ ಚಿನ್ನ ಇನ್ನಷ್ಟು ದುಬಾರಿ ಆಗೋ ಮುಂಚೆ ಇಂದೇ ಅದನ್ನು ಕೊಳ್ಳಲು ಉತ್ತಮ ಸಮಯ. ಅಲ್ಲದೆ, ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  (Global Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.
Published by:Kavya V
First published: