Morning Digest: ಪಿಯು ಕಾಲೇಜುಗಳು ಪುನಾರಂಭ: ಇಂದಿನ ಚಿನ್ನ-ಬೆಳ್ಳಿ ಬೆಲೆ, ಪೆಟ್ರೋಲ್-ಡಿಸೇಲ್ ದರ ಎಷ್ಟಿದೆ? ಇಂದಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್ ವಿವಾದದ ನಡುವೆ ಇಂದಿನಿಂದ ಪಿಯು ಕಾಲೇಜುಗಳು ಆರಂಭ ಆಗಿವೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಇಂದಿನಿಂದ  ಆರಂಭವಾಗುತ್ತಿವೆ. ಕಳೆದ 2 ವರ್ಷ ಕೋವಿಡ್ ಕಾರಣದಿಂದ ತರಗತಿ ಸರಿಯಾಗಿ ನಡೆದಿಲ್ಲ. ಈ ವರ್ಷ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ಗುರಿ ಶಿಕ್ಷಣ ಇಲಾಖೆಗಿದೆ. ಈ ಭಾರಿ ದಾಖಲೆ ಪ್ರಮಾಣದಲ್ಲಿ SSLC ವಿದ್ಯಾರ್ಥಿಗಳು ಪಾಸ್ ಆಗಿರುವುದರಿಂದ ಪಿಯು ಕಾಲೇಜುಗಳ ದಾಖಲೆಯ ದಾಖಲಾತಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ತರಗತಿ ಆರಂಭಕ್ಕೆ ಪಿಯು ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ. 3 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರ ಅಗತ್ಯವಿದೆ. ಈ ಬಗ್ಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಜೊತೆಗೆ ಮೂಲಸೌಕರ್ಯ ಸಹಿತ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:PU Colleges Reopening: ಇಂದಿನಿಂದ ಪಿಯು ಕಾಲೇಜುಗಳು ಪುನಾರಂಭ: ಹಿಜಾಬ್​​ಗೆ ಅವಕಾಶವೇ ಇಲ್ಲ

ದೇವಸ್ಥಾನಗಳಲ್ಲಿ QR ಕೋಡ್ ಬಳಸಿ ಹುಂಡಿಗೆ ಹಣ ಹಾಕಬಹುದು!

ಕೊರೊನಾ (Coronavirus) ಬಳಿಕ ಡಿಜಿಟಲ್​​ ಪೇಮೆಂಟ್​ (Digital Payments) ಹಿಂದೆಂದಿಗಿಂತಲು ಹೆಚ್ಚು ಮುನ್ನಲೆಗೆ ಬಂತು. ಅದರಲ್ಲೂ ಕರ್ನಾಟಕ ಆನ್​​ಲೈನ್​ ಹಣ ವರ್ಗಾವಣೆಯಲ್ಲಿ (Online Money Transfer) ದೇಶದ ಇತರೆ ರಾಜ್ಯಗಳಿಗಿಂತಲೂ ಮುಂದಿದೆ ಎನ್ನುತ್ತದೆ ಅಂಕಿಅಂಶ. ಇದಕ್ಕೆ ಈಗ ಹೊಸ ಸೇರ್ಪಡೆಯಾಗಿದೆ, ಅದುವೆ ದೇವಸ್ಥಾನಗಳಲ್ಲಿ ಡಿಜಿಟಲ್​ ಹುಂಡಿ. ಕರ್ನಾಟಕದ ದೇವಾಲಯಗಳು ಶೀಘ್ರದಲ್ಲೇ ಡಿಜಿಟಲ್ ಮೂಲಕ ಹುಂಡಿಗೆ ಕಾಣಿಕೆಗಳನ್ನು ನೀಡಲು ಭಕ್ತರನ್ನು ಉತ್ತೇಜಿಸಬಹುದು. ರಾಜ್ಯದಲ್ಲೇ ಪ್ರಪಥಮವಾಗಿ ತುಮಕೂರಿನ ಲಕ್ಷ್ಮಿ ನರಸಿಂಹ ಸ್ವಾಮಿಯ ಬೆಟ್ಟದ ದೇವಾಲಯವು ತನ್ನ ಆವರಣದಲ್ಲಿ ದೇಣಿಗೆಗಳಿಗಾಗಿ ಕ್ಯೂಆರ್ ಕೋಡ್‌ನೊಂದಿಗೆ ಸೌಲಭ್ಯವನ್ನು ಪರಿಚಯಿಸಿದೆ.

ಮತ್ತೆ ಸ್ವಲ್ಪ ಏರಿಕೆಯಾದ ಚಿನ್ನದ ಬೆಲೆ

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,760, ರೂ. 47,700, ರೂ. 47,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,700 ರೂ. ಆಗಿದೆ.   ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಅತ್ಯಲ್ಪ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 62,100 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಪೆಟ್ರೋಲ್​​​-ಡಿಸೇಲ್​ ದರ ಎಷ್ಟಿದೆ?

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕಾಸ್ಟ್ಲಿ ಕಾರ್​ ಖರೀದಿಸಿದ್ರಾ ಸಮಂತಾ?

ವೈರಲ್​ ಆಗಿರುವ ವಿಡಿಯೋದಲ್ಲಿ ಸಮಂತಾ ಇಳಿದು ಬಂದ  ಕಾರು ರೋಲ್ಸ್ ರಾಯ್ಸ್ ಎಂದು ಕೆಲವರು ಹೇಳುತ್ತಾರೆ. ಆದಾಗ್ಯೂ ಸಮಂತಾ ರೋಲ್ಸ್ ರಾಯ್ಸ್ ಯಾವಾಗ ಖರೀದಿಸಿದರು ಎಂದು ಮತ್ತೊಬ್ಬ ನೆಟಿಜನ್ ಪ್ರಶ್ನಿಸಿದ್ದಾರೆ. ಸಮಂತಾಗೆ ರೋಲ್ಸ್ ರಾಯಲ್ಸ್ ಇದೆಯೇ ಎಂದು ಇನ್ನೊಬ್ಬ ನೆಟಿಜನ್ ಕಮೆಂಟ್ ಮಾಡಿದ್ದಾರೆ.ಮತ್ತೊಬ್ಬ ನೆಟ್ಟಿಗರು ದೀಪಿಕಾರನ್ನು ಕಾಪಿ ಮಾಡಿದ ಸಮಂತಾ ಶೈಲಿಯನ್ನು ಟೀಕಿಸಿದ್ದಾರೆ. ಇತರರು ಸಮಂತಾ ಅವರ ಅದ್ಭುತ ನೋಟಕ್ಕಾಗಿ ಹೊಗಳಿದ್ದಾರೆ. ತನ್ನ ಬಳಿ ರೋಲ್ಸ್ ರಾಯ್ಸ್ ಕಾರು ಇದೆಯೋ ಇಲ್ಲವೋ ಎಂಬುದನ್ನು ಸಮಂತಾ ಸ್ಪಷ್ಟಪಡಿಸಬೇಕು. ರೋಲ್ಸ್ ರಾಯ್ಸ್ ಕಾರು ತುಂಬಾ ದುಬಾರಿ.. ಏಳು ಕೋಟಿಗೂ ಹೆಚ್ಚು.
Published by:Kavya V
First published: