• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Morning Digest: ಬಾಯ್ಲರ್ ಸ್ಫೋಟದಲ್ಲಿ 12 ಸಾವು, ಪಂಜಾಬ್ ನಲ್ಲಿ ಆಪರೇಷನ್ ಕಮಲ, ನವವಿವಾಹಿತೆ ಸೂಸೈಡ್: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಬಾಯ್ಲರ್ ಸ್ಫೋಟದಲ್ಲಿ 12 ಸಾವು, ಪಂಜಾಬ್ ನಲ್ಲಿ ಆಪರೇಷನ್ ಕಮಲ, ನವವಿವಾಹಿತೆ ಸೂಸೈಡ್: ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 • Share this:

1.Boiler Explosion: ಬಾಯ್ಲರ್ ಸ್ಫೋಟದಲ್ಲಿ 12 ಮಂದಿ ಸಾವು, 21 ಮಂದಿ ಗಾಯ


ಶನಿವಾರ ಮಧ್ಯಾಹ್ನ ಪಶ್ಚಿಮ ಉತ್ತರ ಪ್ರದೇಶದ (Uttar Pradesh) ಹಾಪುರ್ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ (Explosion) ಪರಿಣಾಮ ಕನಿಷ್ಠ 12 ಕಾರ್ಮಿಕರು ಸಾವನ್ನಪ್ಪಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿದಾಗ ರಾಷ್ಟ್ರ ರಾಜಧಾನಿಯಿಂದ (National Capital) ಸುಮಾರು 80 ಕಿಮೀ ದೂರದಲ್ಲಿರುವ ಧೋಲಾನಾದಲ್ಲಿನ ಯುಪಿಎಸ್‌ಐಡಿಸಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಪೀಡಿತ ಪ್ರದೇಶದಲ್ಲಿ ಸುಮಾರು 30 ಜನರು ಇದ್ದರು ಎಂದು ಅವರು ಹೇಳಿದರು. ಸ್ಫೋಟದ ಪ್ರಭಾವ ಎಷ್ಟು ತೀವ್ರವಾಗಿದೆ ಎಂದರೆ ಸುತ್ತಮುತ್ತಲಿನ ಕೆಲವು ಕಾರ್ಖಾನೆಗಳ ಮೇಲ್ಛಾವಣಿಗಳು ಹಾನಿಗೊಳಗಾಗಿವೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮೂರು ಗಂಟೆ ಬೇಕಾಯಿತು.


2.Punjab BJP: ಕಾಂಗ್ರೆಸ್​ಗೆ ಹೊಡೆತ, ಅಮಿತ್ ಶಾ ಸಮ್ಮುಖದಲ್ಲಿ ಐವರು ನಾಯಕರು ಬಿಜೆಪಿಗೆ ಸೇರ್ಪಡೆ


ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಸಿಕ್ಕಿದ್ದು ಇತ್ತೀಚಿನ ಬೆಳವಣಿಗೆಯಲ್ಲಿ, ಪಂಜಾಬ್‌ನಲ್ಲಿ (Punjab) ಐದು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಚಂಡೀಗಢದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಐವರು ಕಾಂಗ್ರೆಸ್ ಮುಖಂಡರಯ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಿದರು. ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡವರು ಮಾಜಿ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ (Congress Leaders)ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಸುಂದರ್ ಶಾಮ್ ಅರೋರಾ ಮತ್ತು ಗುರುಪ್ರೀತ್ ಸಿಂಗ್ ಕಂಗರ್. ಬರ್ನಾಲದ ಮಾಜಿ ಕಾಂಗ್ರೆಸ್ ಶಾಸಕ ಕೆವಾಲ್ ಧಿಲ್ಲೋನ್ ಕೂಡ ಬಿಜೆಪಿಗೆ ಬಂದಿದ್ದಾರೆ. ಇವರ ಜೊತೆಗೆ ಪಕ್ಷದ ನಾಯಕ ಕಮಲಜೀತ್ ಎಸ್ ಧಿಲ್ಲೋನ್ ಕೂಡ ಬಿಜೆಪಿ ಸೇರಿದ್ದಾರೆ. ಇವರಲ್ಲದೆ, ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಮಾಜಿ ಶಾಸಕ ಸರೂಪ್ ಚಂದ್ ಸಿಂಗ್ಲಾ ಮತ್ತು ಪಕ್ಷದ ಉಚ್ಛಾಟಿತ ನಾಯಕಿ ಮೊಹಿಂದರ್ ಕೌರ್ ಜೋಶ್ ಕೂಡ ಬಿಜೆಪಿ ಸೇರಿದರು. ಮೊಹಾಲಿ ಮೇಯರ್ ಅಮರಜೀತ್ ಎಸ್ ಸಿಧು ಕೂಡ ಆ ದಿನ ಪಕ್ಷಕ್ಕೆ ಸೇರ್ಪಡೆಗೊಂಡರು.


3.Crime News: ನೇಣಿಗೆ ಕೊರಳೊಡ್ಡಿದ ನವವಿವಾಹಿತೆ, ಇತ್ತ ವಿಷ ಸೇವಿಸಿದ ಗರ್ಭಿಣಿ


ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನವವಿವಾಹಿತೆ (Newly Married Woman) ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. 26 ವರ್ಷದ ಅಂಜು ಅಂಜನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತ ಅಂಜು ಚಿಕ್ಕಮಗಳೂರು ಜಿಲ್ಲೆ ಬೋಳನಹಳ್ಳಿಯ ಮೂಲದವರಾಗಿದ್ದು, ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ (Engineer) ಅಗಿ ಕೆಲಸ ಮಾಡುತ್ತಿದ್ದರು. ಅಂಜನ್ ಕಣಿಯಾರ್ (28) ಎಂಬಾತನನ್ನ ಪ್ರೀತಿಸಿ (Love) ನಾಲ್ಕು ತಿಂಗಳ ಹಿಂದೆ ಪೋಷಕರನ್ನು ಒಪ್ಪಿಸಿ ಅಂಜು ಮದುವೆಯಾಗಿದ್ದರು. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಂಜು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಅಂಜನ್ ಪೋಷಕರಿಗೆ ವಿಷಯ ತಿಳಿಸಿದ್ದಾರೆ.


4.Kodagu: ಅಪಘಾತವಾಗಿ ಶವಗಾರ ಸೇರಿದ್ದ ಯುವಕ ಅಂತರ್ ರಾಜ್ಯ ವಿವಿ ಮಟ್ಟದ ಹಾಕಿಯಲ್ಲಿ ಸಾಧನೆ


ಕಾರ್ ಮತ್ತು ಲಾರಿ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ (Accident) ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ದೇಹಗಳನ್ನು ಶವಗಾರಕ್ಕೆ (Mortuary) ಸಾಗಿಸಿದ್ದರು. ವಿಷಯ ತಿಳಿದು ಕೆಲಸದ ಸ್ಥಳದಿಂದಲೇ ಓಡೋಡಿ ಬಂದ ತಂದೆ ನಾಲ್ವರಲ್ಲಿ ನನ್ನ ಮಗನ ದೇಹ ಯಾವುದು ಎಂದು ಶವಗಾರದಲ್ಲಿ ಹುಡುಕಾಡಿದ್ದರು. ಇನ್ನೇನು ಮರಣೋತ್ತರ ಪರೀಕ್ಷೆ ಮಾಡಬೇಕೆಂದು ಸಿದ್ಧತೆ ನಡೆಸಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಗೆ (Police Inspector) ಯುವಕನೊಬ್ಬನ ದೇಹದಲ್ಲಿ ಬೆರಳು ಅಲ್ಲಾಡಿದ್ದು ಕಂಡಿತ್ತು. ತಕ್ಷಣವೇ ಯುವಕನನ್ನು ಮೈಸೂರು ಆಸ್ಪತ್ರೆಗೆ (Mysuru Hospital) ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು.


5.Monkeypox in India: ಭಾರತಕ್ಕೂ ಕಾಲಿಟ್ಟೇ ಬಿಡ್ತಾ ಮಂಕಿಪಾಕ್ಸ್? 5 ವರ್ಷದ ಬಾಲಕಿ ಮೇಲೆ ತೀವ್ರ ನಿಗಾ!

top videos


  ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಯಿಲೆಯ (Monkeypox disease) ಅಬ್ಬರ ಮುಂದುವರೆದಿದೆ. ಒಂದೆಡೆ ಕರೋನಾ (Corona) ಆರ್ಭಟ ಜೋರಾಗಿದ್ದರೆ, ಮತ್ತೊಂದೆಡೆ ಮಂಕಿಪಾಕ್ಸ್ ಸೋಂಕು ಹೆಚ್ಚಾಗುತ್ತಿದೆ. ಆಫ್ರಿಕಾ (Africa), ಬ್ರಿಟನ್ (Britain) ಸೇರಿದಂತೆ ಹಲವೆಡೆ ಈಗಾಗಲೇ ಮಂಕಿಪಾಕ್ಸ್ ಸೋಂಕು ನಿಧಾನಕ್ಕೆ ಹೆಚ್ಚುತ್ತಿದೆ. ಈ ನಡುವೆಯೇ ಭಾರತೀಯರೂ (Indians) ಕೂಡ ಆತಂತಕ್ಕೆ ಒಳಗಾಗುವ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದ್ರೆ ಮಂಕಿಪಾಕ್ಸ್ ಮಾರಿ ಭಾರತಕ್ಕೂ (India) ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶ (Uttar Pradesh) ರಾಜ್ಯದ ಗಾಜಿಯಾಬಾದ್‌ನ (Ghaziabad) 5 ವರ್ಷದ ಹುಡುಗಿಯಲ್ಲಿ (Girl) ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿವೆ. ಇದೀಗ ಬಾಲಕಿಯ ರಕ್ತದ ಮಾದರಿಗಳನ್ನು (Blood Samples) ಪ್ರಯೋಗಾಲಯಕ್ಕೆ (Laboratory) ಕಳಿಸಲಾಗಿದ್ದು, ಆಕೆ ಮೇಲೆ ಆರೋಗ್ಯ ಇಲಾಖೆ (Health Department) ತೀವ್ರ ನಿಗಾ ಇರಿಸಿದೆ.

  First published: