Morning Digest: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಸಾಧ್ಯತೆ, ನಿರುದ್ಯೋಗಿಗಳಿಗೆ ಬಿಜೆಪಿ ವಕ್ತಾರೆ ಅಚ್ಚರಿಯ ಸಲಹೆ - ಬೆಳಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಂಗಾರ ಪ್ರಿಯರಿಗೆ ಸೂಪರ್ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಹಳದಿ ಲೋಹ ಚಿನ್ನದ ಬೆಲೆಯಲ್ಲಿ (Gold Price) ವ್ಯತ್ಯಾಸ ದಿನದಿಂದ ದಿನಕ್ಕೆ ಸಹಜ. ಪ್ರತಿದಿನ ಭಾರಿ ಮಟ್ಟದಲ್ಲಿ ಅಥವಾ ಸ್ವಲ್ಪ ದುಬಾರಿ ಮತ್ತು ಅಗ್ಗ ಆಗುತ್ತಲೇ ಇರುತ್ತದೆ. ಇಂದು ಚಿನ್ನದ ದರ (Gold Rate) ಮಾರುಕಟ್ಟೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,765 ರೂಪಾಯಿ ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,675 ರೂಪಾಯಿ ಆಗಿದೆ. ಒಂದು ಗ್ರಾಂ ಮೇಲೆ 90 ರೂಪಾಯಿ ಇಳಿಕೆಯಾಗಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (Global Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ಸರ್ಕಾರ ರಚನೆಗೆ ಅವಕಾಶ ಕೇಳಲಿರುವ ಬಿಜೆಪಿ, ನಾಳೆಯೇ ಪ್ರಮಾಣವಚನ?

ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra Chief Minister) ಸ್ಥಾನಕ್ಕೆ ಉದ್ಧವ್ ಠಾಕ್ರೆ (Uddhav Thackery) ಬುಧವಾರ ರಾತ್ರಿ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಬಿಜೆಪಿ (BJP) ಸರ್ಕಾರ ರಚನೆಯ ಕಸರತ್ತು ನಡೆಸಿದೆ. ಇಂದು ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavies) ರಾಜ್ಯಪಾಲ (Governor) ಭಗತ್ ಸಿಂಗ್ ಕೋಶಿಯಾರಿ (Bhagat Singh Kosiayri) ಅವರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಯ ಹಕ್ಕನ್ನು ಪ್ರತಿಪಾದಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿರುದ್ಯೋಗಿಗಳು ವಡಾಪಾವ್, ಮಿರ್ಚಿ ಮಾಡಿ ಮಾರುವಂತೆ ಸಲಹೆ ಕೊಟ್ಟ BJP ವಕ್ತಾರೆ

ನಿರುದ್ಯೋಗಿಗಳು (Unemployed) ವಡಾ ಪಾವ್ (Vadapav) ಮಿರ್ಚಿ ಮಾಡಿ ಮಾರಿದ್ರೆ ತಪ್ಪೇನು ಎಂದು ಬಿಜೆಪಿ (BJ) ರಾಜ್ಯ ವಕ್ತಾರೆ (Spokesperson) ತೇಜಸ್ವಿನಿಗೌಡ (Tejaswini Gowda) ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ  (Unemployment Problem) ತಾಂಡವಾಡುತ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಮ್ಮ ದೇಶದಲ್ಲಿ ನಿರುದ್ಯೋಗ ಇರೋದು ಸತ್ಯ. ವಡಾ ಪಾವ್ ಮಿರ್ಚಿ ಮಾರೋದು ತಪ್ಪೇನಲ್ಲ. ವಡಾ, ಪಾವ್, ಮಿರ್ಚಿ ಮಾಡಿ ಬದುಕು ಸಾಗಿಸಿ ಅಂತ ನಿರುದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ತೆರೆಯಲು ಸರಕಾರ ನಿರ್ಧಾರ

ಅಶಕ್ತ ಗೋವುಗಳು (Cow) ಕಟುಕರ ಕೈ ಸೇರುವುದನ್ನು ತಪ್ಪಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ (Govt Cow shelter)  ತೆರೆಯಲು ಸರಕಾರ ನಿರ್ಧಾರಿಸಲಾಗಿದೆ ಎಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌಹಾನ್ ಹೇಳಿದರು. ಈ ಯೋಜನೆ  ಅಡಿಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿಮುಂದಿನ ಡಿಸೆಂಬರ್ ಅಂತ್ಯಕ್ಕೆ  ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳ್ಳಲಿದೆ. ಗೋಪಾಲಕರು ತಮ್ಮಲ್ಲಿರುವ ಆಶಕ್ತ ಗೋವುಗಳನ್ನು ಈ ಗೋಶಾಲೆಗೆ ನೀಡಿ ಗೋವುಗಳ ರಕ್ಷಣೆ ಮಾಡಬೇಕು ಎಂದರು.

ಪದೇ ಪದೇ ಭೂಕಂಪ ಹಿನ್ನೆಲೆ ಕೊಡಗಿಗೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ

ಕಳೆದ ಐದು ದಿನಗಳ ಅವಧಿಯಲ್ಲಿ ಕೊಡಗಿನಲ್ಲಿ ಮೂರು ಬಾರಿ ಭೂಕಂಪ (Earthquake) ಆಗುತ್ತಿದ್ದಂತೆ ಜಿಲ್ಲೆಗೆ ಬೆಂಗಳೂರಿನಿಂದ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು, ಅಧ್ಯಯನ ಆರಂಭಿಸಿದೆ. ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಚೆಂಬು ಗ್ರಾಮ ಪಂಚಾಯಿತಿಗಳ (Grama Panchayat) ವ್ಯಾಪ್ತಿಯಲ್ಲಿ ಜೂನ್ 25 ಮತ್ತು 29 ರಂದು ಎರಡು ದಿನಗಳಲ್ಲಿ ಮೂರು ಬಾರಿ ಭೂಕಂಪವಾಗಿತ್ತು. ಮಂಗಳವಾರ ನಡೆದಿದ್ದ ಭೂಕಂಪಕ್ಕೆ ಜಿಲ್ಲೆಯ ಹಲವೆಡೆ ಚಿಕ್ಕಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಮಂಗಳವಾರ ಬೆಳಿಗ್ಗೆ 7.45 ಕ್ಕೆ ಚೆಂಬು ಗ್ರಾಮದಲ್ಲಿ 3.0 ರಿಕ್ಟರ್ ಪ್ರಮಾಣದ ಭೂಕಂಪವಾಗಿತ್ತು. ಸಂಜೆ ಮತ್ತೆ ಅದೇ ಸ್ಥಳದಲ್ಲಿ 1.7 ತೀವ್ರತೆಯ ಭೂಕಂಪವಾಗಿತ್ತು.
Published by:Sandhya M
First published: