Morning Digest: ಪ್ರಧಾನಿ ಮೋದಿ ಯೋಗ, ಕಾಂಗ್ರೆಸ್ ಪ್ರತಿಭಟನೆ, ಚಿನ್ನದ ಬೆಲೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1. Yoga Day: ಸಾಂಸ್ಕೃತಿಕ ನಗರಿಯಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ; 15 ಸಾವಿರ ಜನರ ಜೊತೆ ಯೋಗ ಪ್ರದರ್ಶನ

ಎಂಟನೇ ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಿದರು. ಮೈಸೂರು ಅರಮನೆ ಮೈದಾನದಲ್ಲಿ ಪ್ರಧಾನಿಗಳು ಯೋಗಭ್ಯಾಸ ಮಾಡಿದರು. ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಅವರು ರಾಜಮಾತೆ ಪ್ರಮೋದಾ ದೇವಿ ಅವರಿಗೆ ನಮಸ್ಕರಿಸಿ, ಜನರತ್ತ ಕೈಬೀಸಿದರು. ಯದುವೀರ್ ಒಡೆಯರ್, ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು. ಸೂರ್ಯ ನಮಸ್ಕಾರದಿಂದ ಎಲ್ಲ ಆಸನಗಳನ್ನು ಅಭ್ಯಾಸ ಮಾಡಲಾಯ್ತು. 15 ಸಾವಿರಕ್ಕೂ ಹೆಚ್ಚು ಪಟುಗಳು ಪ್ರಧಾನಿಗಳ ಜೊತೆಯಲ್ಲಿ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.

2.Bengaluru Police: ತಾಯಿ ಮಗಳನ್ನು ಒಂದು ಮಾಡಿದ ಪೊಲೀಸರು; ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಠಾಣೆ

ಸದಾ ಮಕ್ಕಳು ನನ್ನ ಜೊತೆಯಲ್ಲಿ ಇರಬೇಕು ಅನ್ನೋದು ಅಮ್ಮನ ಬಯಕೆ. ಆದ್ರೆ ಗಂಡು ಮಕ್ಕಳು ಕೆಲಸ ಅರಸಿ ಮಹಾನಗರಗಳತ್ತ ಬಂದ್ರೆ, ಹೆಣ್ಣು ಮಕ್ಕಳು ಕೊಟ್ಟ ಮನೆಗೆ ಹೋಗಿರ್ತಾರೆ. ಆದರೂ ಅಮ್ಮನಿಗೆ ಮಕ್ಕಳನ್ನು ಕಾಣುವ ಇಚ್ಛೆ ಇದ್ದೆ ಇರುತ್ತದೆ. ದೂರದ ಊರುಗಳಲ್ಲಿರುವ ಮಕ್ಕಳಿಗೆ ಸರ್ಪ್ರೈಸ್ ನೀಡಲು ಪೋಷಕರು ಬರುತ್ತಾರೆ. ಹೀಗೆ ಬಂದು ಒಂದೆರಡು ದಿನ ಕಳೆದು ಮತ್ತೆ ಹೋಗುತ್ತಾರೆ. ದೂರದ ತಮಿಳುನಾಡಿನಿಂದ ಮಗಳನ್ನು ನೋಡಲು ಬೆಂಗಳೂರಿಗೆ ಬಂದ ವೃದ್ಧೆ ವಿಳಾಸ ತಿಳಿಯದೇ ಪುತ್ರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ತಾಯಿ ಮಗಳನ್ನು ಪೊಲೀಸರು ಒಂದು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

3. Congress Protest: ಅಗ್ನಿಪಥ್, ರಾಹುಲ್ ಗಾಂಧಿ ED ವಿಚಾರಣೆ; ದೆಹಲಿಯಲ್ಲಿ ಇಂದು ಕೂಡ ಪ್ರತಿಭಟನೆ, ಡಿಕೆಶಿ ಭಾಗಿ

ಕೇಂದ್ರ ಸರ್ಕಾರವು ಹೊಸದಾಗಿ ಮಿಲಿಟರಿ ನೇಮಕಾತಿಗಾಗಿ ರೂಪಿಸಿರುವ ಅಗ್ನಿಪಥ್ (Agnipath) ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರಿಯುತ್ತಿದೆ. ಈ ಬಗ್ಗೆ ಜೂನ್ 19ರಿಂದ ದೆಹಲಿಯ ಜಂತರ್ ಮಂತರ್ ನಲ್ಲಿ (Janthar Mantar) ಸತ್ಯಾಗ್ರಹ ಹಮ್ಮಿಕೊಂಡಿರುವ ಕಾಂಗ್ರೆಸ್ ಇಂದು ಕೂಡ ಸತ್ಯಾಗ್ರಹವನ್ನು ಮುಂದುವರಿಸಲಿದೆ. ಇನ್ನೊಂದೆಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಜಾರಿ ನಿರ್ದೇಶನಾಲಯದ (Enforcement Directorate) ವಿಚಾರಣೆ ವಿರೋಧಿಸಿ ಕೂಡ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೆಹಲಿಯೂ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

4.Hubballi: ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಕಿರಿ ಕಿರಿ; ಪಾಲಿಕೆ ಅಧಿಕಾರಿಗಳ ದಿವ್ಯ ಮೌನ

ವಾಣಿಜ್ಯ ನಗರಿ ಹುಬ್ಬಳ್ಳಿಯ (Hubballi) ಜನತೆಗೆ ಪಾರ್ಕಿಂಗ್ ಸಮಸ್ಯೆ (Parking Problem) ಕಾಡ್ತಿದೆ. ಬೃಹತ್ ಕಟ್ಟಡಗಳಿದ್ದರೂ ಪಾರ್ಕಿಂಗ್ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ (Building) ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಅನ್ನೋದು ವಿಶೇಷ. ಆದ್ರೂ ಪಾಲಿಕೆ ಅಧಿಕಾರಿಗಳು (Officers) ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ಜನತೆ ಆರೋಪಿಸಿದೆ. ಕಳೆದ 5 ವರ್ಷಗಳ ಹಿಂದೆಯೇ ಪಾರ್ಕಿಂಗ್ ವ್ಯವಸ್ಥೆ (Parking Arrangement) ಇಲ್ಲದ ಕಟ್ಟಡಗಳಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು. ಸರ್ವೇ ಮೂಲಕ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನೂ ಪಾಲಿಕೆ ನೀಡಿತ್ತು. ಇದರಿಂದಾಗಿ ನಗರದ ವಿವಿಧೆಡೆ ಪಾರ್ಕಿಂಗ್ ತೊಂದರೆ ಎದುರಿಸುವಂತಾಗಿದೆ. ಪಾರ್ಕಿಂಗ್ ಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

5.Gold Price: 10 ಗ್ರಾಂ ಚಿನ್ನದ ಮೇಲೆ ಕೊಂಚ ಏರಿಕೆ; ದರ ಮತ್ತಷ್ಟು ಹೆಚ್ಚಾಗುವ ಮುನ್ನ ಇಂದೇ ಖರೀದಿಸಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ (Gold Price) ಸ್ವಲ್ಪ ಮಟ್ಟಿಗಿನ ಏರಿಕೆಯಾಗಿದೆ. ನಿನ್ನೆಗೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,765 ಇದ್ದದ್ದು ಇಂದು 4,775 ರೂಪಾಯಿಗಳಿಗೆ ತಲುಪಿ ಪ್ರತಿ ಗ್ರಾಂಗೆ ಹತ್ತು ರೂ. ಏರಿಕೆಯಾದಂತಾಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,780 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,780 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,850, ರೂ. 47,750, ರೂ. 47,780 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,780 ರೂ. ಆಗಿದೆ.
Published by:Mahmadrafik K
First published: