Morning Digest: ಬೆಂಗಳೂರಿಗೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ವಿಚಾರಣೆ, ಮಳೆ ಅಲರ್ಟ್: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.PM Modi @Bengaluru: ಇಂದು ಇಡೀ ದಿನ ಬೆಂಗಳೂರಲ್ಲಿ ಮೋದಿ ಏನೆಲ್ಲಾ ಮಾಡ್ತಾರೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸೋಮವಾರ, ಮಂಗಳವಾರ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ (Karnataka Tour) ನಡೆಸಲಿದ್ದಾರೆ. ಬೆಂಗಳೂರು ಮತ್ತು ಮೈಸೂರಿಗೆ (Bengaluru and Mysore) ಭೇಟಿ ನೀಡಲಿದ್ದು, ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನವಾದ ಇಂದು ಬೆಳಗ್ಗೆ ಅವರು ಮೆದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಐಐಎಸ್‌ಸಿಯಲ್ಲಿ ಬಾಗ್ಚಿ-ಪಾರ್ಥಸಾರಥಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಅಡಿಪಾಯವನ್ನು ಹಾಕುತ್ತಾರೆ. ನಂತರ ಮೋದಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ನ ಹೊಸ ಕ್ಯಾಂಪಸ್ ಅನ್ನು ಪ್ರಾರಂಭಿಸಲಿದ್ದಾರೆ. ಟಾಟಾ ಅವರ ಉದಾರ ಧನಸಹಾಯದೊಂದಿಗೆ ಐಟಿಐಗಳನ್ನು ಉನ್ನತೀಕರಿಸುವ ಮೂಲಕ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆ ಅಭಿವೃದ್ಧಿಪಡಿಸಿದ 150 ತಂತ್ರಜ್ಞಾನ ಕೇಂದ್ರಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

2.Karnataka Rains: ಮತ್ತಷ್ಟು ಚುರುಕು ಆಗಲಿದೆ ಮುಂಗಾರು; ಮತ್ತೆ 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ನಿನ್ನೆಯಷ್ಟೇ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೊಂದು ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಅಪಾಯದ ಸ್ಥಳಗಳಲ್ಲಿರುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಸಂಜೆ ಆಗುತ್ತಿದ್ದಂತೆ ಶುರುವಾಗುವ ಮಳೆ ವಾಹನ ಸವಾರರನ್ನು ಹೈರಾಣಾಗಿಸಿದೆ. ಮುಂದಿನ ನಾಲ್ಕೈದು ದಿನ ನೈಋತ್ಯ ಮುಂಗಾರು ಇನ್ನಷ್ಟು ಪ್ರಬಲಗೊಳ್ಳುವ ಸಾಧ್ಯತೆಗಳಿವೆ. ಭಾನುವಾರ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ 80 ಮಿಮೀ ಮತ್ತು ಬೆಂಗಳೂರಿನಲ್ಲಿ 70 ಮಿಮೀ ಮಳೆಯಾಗಿದೆ.

3. Congress Protest: ಅಗ್ನಿಪಥ್ & ರಾಹುಲ್ ಗಾಂಧಿ ED ವಿಚಾರಣೆ ವಿರೋಧಿಸಿ ಇಂದೂ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರವು ಹೊಸದಾಗಿ ಮಿಲಿಟರಿ ನೇಮಕಾತಿಗಾಗಿ ರೂಪಿಸಿರುವ ಅಗ್ನಿಪಥ (Agneepath) ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆಯುತ್ತಿದೆ. ಈ ಬಗ್ಗೆ ನಿನ್ನೆಯಿಂದ (ಜೂನ್ 19) ದೆಹಲಿಯ ಜಂತರ್ ಮಂತರ್ ನಲ್ಲಿ (Janthar Mantar) ಸತ್ಯಾಗ್ರಹ ಹಮ್ಮಿಕೊಂಡಿರುವ ಕಾಂಗ್ರೆಸ್ ಇಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಇನ್ನೊಂದೆಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಜಾರಿ ನಿರ್ದೇಶನಾಲಯದ (Enforcement Directorate) ವಿಚಾರಣೆ ವಿರೋಧಿಸಿ ಕೂಡ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

4.Agnipath Protest: ಅಗ್ನಿಪಥ್ ಕುರಿತು ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗ್ರೂಪ್​​ಗಳು ಬ್ಯಾನ್; 10 ಮಂದಿ ಅರೆಸ್ಟ್

ಕೇಂದ್ರದ ಹೊಸ ಅಗ್ನಿಪಥ್ ಯೋಜನೆ (Agnipath scheme) ಕುರಿತು ಸುಳ್ಳು ಸುದ್ದಿ (Fake News) ಹಬ್ಬಿಸಿದ ಆರೋಪದ ಮೇಲೆ 35 ವಾಟ್ಸಾಪ್ ಗ್ರೂಪ್​​​ಗಳನ್ನು (WhatsApp groups) ನಿಷೇಧಿಸಲಾಗಿದೆ ಎಂದು ಮೂಲಗಳು CNN-News18 ಗೆ ತಿಳಿಸಿವೆ. ನಕಲಿ ಸುದ್ದಿ ಪ್ರಸಾರ ಮತ್ತು ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ 10 ಜನರನ್ನು ಬಂಧಿಸಲಾಗಿದೆ. ಈ ವರ್ಷ ಪ್ರಾರಂಭವಾಗಲಿರುವ ಸಶಸ್ತ್ರ ಪಡೆಗಳಲ್ಲಿ ಯೋಜಿತ ಅಲ್ಪಾವಧಿಯ ನೇಮಕಾತಿಯ ಕುರಿತು ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆ ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಲಾಗಿದೆ.

5.Today's Gold-Silver Price: ಇಂದು 1 ಗ್ರಾಂ ಬಂಗಾರದ ಬೆಲೆ ಎಷ್ಟು? ಅಲ್ಪ ಇಳಿಕೆ ಕಂಡ ಬೆಳ್ಳಿಯ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,765 ಆಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,680 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,680 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,750, ರೂ. 47,650, ರೂ. 47,680 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,680 ರೂ. ಆಗಿದೆ. ಪ್ರಸ್ತುತ, ಬೆಂಗಳೂರು ನಗರದಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 663, ರೂ. 6,630 ಹಾಗೂ ರೂ. 66,300 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 66,300 ಆಗಿದ್ದರೆ ದೆಹಲಿಯಲ್ಲಿ ರೂ. 60,900 ಮುಂಬೈನಲ್ಲಿ ರೂ. 60,900 ಹಾಗೂ ಕೊಲ್ಕತ್ತದಲ್ಲೂ ರೂ. 60,900 ಗಳಾಗಿದೆ.
Published by:Mahmadrafik K
First published: