• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಬೆಳಗಾವಿಯಲ್ಲಿ ಹಿಂಸಾಚಾರ, ಮಳೆ ಅಲರ್ಟ್, ರಾಹುಲ್ ಗಾಂಧಿ ಸಂದೇಶ: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಬೆಳಗಾವಿಯಲ್ಲಿ ಹಿಂಸಾಚಾರ, ಮಳೆ ಅಲರ್ಟ್, ರಾಹುಲ್ ಗಾಂಧಿ ಸಂದೇಶ: ಬೆಳಗಿನ ಟಾಪ್ ನ್ಯೂಸ್ ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Belagavi: ಸಾಮಾಜಿಕ ಕಾರ್ಯಕರ್ತನ ಕೊಲೆ; ನಾಲ್ಕು ಕಾರ್, ಟ್ರ್ಯಾಕ್ಟರ್, ಎರಡು ಟೆಂಪೋ ಸೇರಿ ಮೇವಿನ ಬಣವೆಗಳಿಗೆ ಬೆಂಕಿ


ಬೆಳಗಾವಿ ತಾಲೂಕಿನ ಗೌಂಡವಾಡ (Goundavada, Belagavi) ಗ್ರಾಮದಲ್ಲಿ ನಡೆದ ಕೊಲೆ (Murder) ಸಂಬಂಧ ಇಡೀ ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಉದ್ರಿಕ್ತರ ಗುಂಪು 10ಕ್ಕೂ ಹೆಚ್ಚು ವಾಹನಗಳು (Vehicles), ಮೇವಿನ (Fodder) ಬಣವೆಗಳಿಗೆ ಬೆಂಕಿ ಹಾಕಿದೆ. ಕಾರು ಪಾರ್ಕಿಂಗ್ (Car Parking) ವಿಚಾರ‌ಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ‌ಗೈದ ಬಳಿಕ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 37 ವರ್ಷದ ಸತೀಶ್ ಪಾಟೀಲ್ ಕೊಲೆಯಾದ ವ್ಯಕ್ತಿ. ಕೊಲೆಯಾದ ಸತೀಶ್ ಗ್ರಾಮದಲ್ಲಿಯ ಒಂದು ಗುಂಪಿನೊಂದಿಗೆ ವೈಷಮ್ಯ ಹೊಂದಿದ್ದರು. ಕಾರ್ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆ ಹಳೆಯ ವೈಷಮ್ಯಕ್ಕೆ ತಿರುಗಿಕೊಂಡಿದೆ. ಈ ವೇಳೆ ದುಷ್ಕರ್ಮಿಗಳು ಸತೀಶ್ ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.


2.Rahul Gandhi: ತಮ್ಮ ಹುಟ್ಟುಹಬ್ಬ ಆಚರಿಸದಂತೆ ರಾಹುಲ್ ಗಾಂಧಿ ಮನವಿ!


ಕೇಂದ್ರ ಸರ್ಕಾರವು ಹೊಸದಾಗಿ ಮಿಲಿಟರಿ ನೇಮಕಾತಿಗಾಗಿ ರೂಪಿಸಿರುವ ಅಗ್ನಿಪಥ (Agnipath) ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ನಿರುದ್ಯೋಗಿ ಯುವಕರು, ಪೂರ್ಣಾವಧಿಗೆ ಸೇನೆ ಸೇರಬೇಕೆಂದು ಕನಸು ಕಂಡಿದ್ದ ಯುವಕರು ಮತ್ತವರ ಕುಟುಂಬದವರು ಈಗ ಆಕ್ರೋಶಭರಿತರಾಗಿದ್ದು ಇದರ ಪರಿಣಾಮವಾಗಿ ಕೆಲವು ಕಡೆ ಹಿಂಸಾಚಾರ, ಸಾವು, ನೋವು, ಸಾರ್ವಜನಿಕ ಆಸ್ತಿಗಳ ನಷ್ಟವಾಗಿದೆ. ಕಾಂಗ್ರೆಸ್ ಪಕ್ಷ (Congress Party) ಕೂಡ ಯುವಕರ ಅಳಲಿಗೆ ದನಿಗೂಡಿಸಿ ಇಂದು ದೆಹಲಿಯಲ್ಲಿ (Delhi) ಸತ್ಯಾಗ್ರಹ ನಡೆಸಲಿದೆ. ಅಷ್ಟೇ ಅಲ್ಲದೆ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಂಭ್ರಮಾಚರಣೆ ಬೇಡ ಎಂದಿದ್ದಾರೆ. “ಯುವಕರು ಸಂಕಷ್ಟದಲ್ಲಿರುವಾಗ ತಮ್ಮ ಹುಟ್ಟುಹಬ್ಬದ ಹಬ್ಬದ ಸಂಭ್ರಮಾಚರಣೆ ಬೇಡ” ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.


3. Bengaluru Rains: ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆ


ಶುಕ್ರವಾರ ತಡರಾತ್ರಿ ಸುರಿದ ಮಳೆಗೆ (Bengaluru Rains) ರಾಜಕಾಲುವೆಯಲ್ಲಿ (Rajakaluve) ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ (Shivamogga) ಮೂಲದ ಮಿಥುನ್ ನಾಲ್ಕೈದು ಗೆಳೆಯರೊಂದಿಗೆ ಕೆಆರ್ ಪುರಂನ ಗಾಯಿತ್ರಿ ಬಡವಾಣೆಯಲ್ಲಿ ವಾಸವಾಗಿದ್ದರು. ಮಿಥುನ್ ಕೆಆರ್ ಪುರಂ ವಲಯದ ಬಿಬಿಎಂಪಿಯಲ್ಲಿ (BBMP_ ಕಾಂಟ್ರಾಕ್ಟ್ ಇಂಜಿನಿಯರ್ (Contract Engineer) ಕೆಲಸ ಮಾಡುತ್ತಿದ್ದರು. ಗಾಯತ್ರಿ ಬಡವಾಣೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ (Bike) ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ನೀರಿನ ಜೊತೆ ಕೊಚ್ಚಿಹೋಗಿದ್ದರು.


4.Karnataka Rains: ಮುಂದಿನ ಮೂರು ದಿನ ಮಳೆ ;13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದ್ದು, ಹವಾಮಾನ ಇಲಾಖೆ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನುಳಿದ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಜೊತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿರಲಿದೆ. ಇಂದಿನಿಂದ ಜೂನ್ 22ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಜಾರಿ ಮಾಡಿದೆ.


5.Mekedatu Project: ಜೂ 23ಕ್ಕೆ CWMA ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ, ಸ್ಟಾಲಿನ್ ಆಕ್ರೋಶ


ಬೆಂಗಳೂರು (Bengaluru) ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ಯೋಜನೆಯ ವಿಸ್ತ್ರತ ಯೋಜನಾ ವರದಿಗೆ (Detail Project Report) ಅನುಮತಿ ನೀಡುವ ಬಗ್ಗೆ ಜೂನ್ 23ರಂದು ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಸಭೆಯಲ್ಲಿ ಚರ್ಚೆ ಆಗಲಿದೆ. ಕರ್ನಾಟಕದ ಮನವಿ ಮೇರೆಗೆ ಸಭೆಯ ಅಜೆಂಡಾದಲ್ಲಿ ಮೇಕೆದಾಟು ಡಿಪಿಆರ್ ವಿಷಯವನ್ನು ಸೇರಿಸಲಾಗಿದೆ. ಇದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ‌. ಸ್ಟಾಲಿನ್ (Tamilnadu Chief Minister M.K. Stalin) ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು