Morning Digest: ಮಾಜಿ ಸಚಿವ ಎಂ ರಘುಪತಿ ನಿಧನ, ರಾಜಕಾಲುವೆ ಪಾಲಾದ ಯುವಕ, ಗಡ್ಡ ಬಿಟ್ರೆ ಹೆಣ್ಣು ಕೊಡಲ್ಲ; ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.M Raghupathy: ಮಾಜಿ ಸಚಿವ ಎಂ ರಘುಪತಿ ನಿಧನ; ಶಾಲೆಗಳಿಗೆ ಸಮವಸ್ತ್ರ ಪರಿಚಯಿಸಿದ್ದು ಇವರೇ

ಮಾಜಿ ಸಚಿವ ಎಂ.ರಘುಪತಿ ಅವರು ಇಂದು ಬೆಳಗಿನ ಜಾವ ಮಲ್ಲೇಶ್ವರಂ ನಿವಾಸದಲ್ಲಿ ನಿಧನರಾಗಿದ್ದಾರೆ. ರಘುಪತಿ ಅವರಿಗೆ 81 ವರ್ಷ ಆಗಿತ್ತು. ಕಳೆದ ಎಂಟು ದಿನಗಳಿಂದ ಕರುಳಿನ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ರಘುಪತಿ ಅವರ ಮೃತದೇಹವನ್ನ ಮಲ್ಲೇಶ್ವರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಕುಟುಂಬದವರು ವ್ಯವಸ್ಥೆ ಮಾಡಿದ್ದಾರೆ. ರಾಜಕೀಯ ಗಣ್ಯರು ಸೇರಿದಂತೆ ಅಪಾರ ಕಾರ್ಯಕರ್ತರು ಅಂತಿಮ ದರ್ಶನ ಪಡೆಯಲಿದ್ದಾರೆ. ನಾಳೆ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ. ಜನತಾ ಪರಿವಾರದ ಹಿರಿಯ ರಾಜಕೀಯ ನಾಯಕರಾಗಿದ್ದ ಎಂ.ರಘುಪತಿ ಅವರು ಶಿವಾಜಿ ನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಅಯ್ಕೆಯಾಗಿದ್ದರು.

2.Bengaluru Rain: ರಾಜಕಾಲುವೆಯಲ್ಲಿ ಕೊಚ್ಚಿ ಹೋದ 24 ವರ್ಷದ ಯುವಕ

ಶುಕ್ರವಾರ ರಾತ್ರಿ ಬೆಂಗಳೂರಿನ (Bengaluru Rains) ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ವಸತಿ ಪ್ರದೇಶಗಳಿಗೆ (Residential Area) ನೀರು ನುಗ್ಗಿರುವ ವರದಿಗಳು ಬಂದಿವೆ. ರಾತ್ರಿ ಏಳು ಗಂಟೆಯಿಂದ ಆರಂಭವಾದ ಮಳೆ, 1 ಗಂಟೆವರೆಗೆ ಸುರಿದಿದೆ. ಬೆಳಗಿನ ಜಾವವೂ ಸಹ ಅಲ್ಲಲ್ಲಿ ತುಂತುರು ಮಳೆಯಾಗಿದೆ. ತಡರಾತ್ರಿ ಸುರಿದ ಮಳೆಗೆ 24 ವರ್ಷದ ಯುವಕನೋರ್ವ ರಾಜಕಾಲುವೆಯ (Rajakaluve) ಪಾಲು ಆಗಿದ್ದಾನೆ. ಶಿವಮೊಗ್ಗ (Shivamogga) ಮೂಲದ ಮಿಥುನ್ ನೀರು ಪಾಲಾದ ಯುವಕ. ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ (Gayatri Badavane, KR Pura) ಈ ಘಟನೆ ನಡೆದಿದೆ. ಗಾಯತ್ರಿ ಬಡವಾಣೆಯಲ್ಲಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು.

3.Beard Boys: ಗಡ್ಡ ಬಿಟ್ಟ ಗಂಡಸಿಗೆ ಡಿಮ್ಯಾಂಡಿಲ್ಲ ಡಿಮ್ಯಾಂಡು! ಇಲ್ಲಿ ಗಡ್ಡಪ್ಪಂದಿರ ಮದ್ವೆಗೆ ಹೆಣ್ಣೇ ಕೊಡೋದಿಲ್ಲ!

ರಾಜಸ್ಥಾನದ ಸಮುದಾಯವೊಂದು ಗಡ್ಡ ಬಿಟ್ಟ ಯುವಕರನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಜ್ಯದ ಪಾಲಿ ಜಿಲ್ಲೆಯ 19 ಗ್ರಾಮಗಳ ಕುಮಾವತ್ ಸಮುದಾಯವು ಅಂಗೀಕರಿಸಿದ ನಿರ್ಣಯದಲ್ಲಿ ಕ್ಲೀನ್ ಶೇವ್ ಹೊಂದಿರುವ ಯುವಕರಿಗೆ ಮಾತ್ರ ಮದುವೆಯಾಗಲು ಅವಕಾಶವಿದೆ ಎಂದು ಹೇಳಿದೆ. ಮದುವೆ ಸಂಸ್ಕಾರ ಮತ್ತು ಕೆಲವು ಧಾರ್ಮಿಕ ಆಚರಣೆಗಳಲ್ಲಿ ವರನನ್ನು ರಾಜನಂತೆ ಕಾಣಲಾಗುತ್ತದೆ. ಹಾಗಾಗಿ ಪುರುಷರು ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇದರೊಂದಿಗೆ 19 ಗ್ರಾಮಗಳ ಪಂಚಾಯಿತಿಯು ಮದುವೆಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಅವುಗಳನ್ನು ಸರಳಗೊಳಿಸಲು ಹಲವು ನಿಯಮಗಳನ್ನು ಮಾಡಿವೆ.

4.Gold: ಬ್ರೆಡ್‌ನ ಬದಲು ಚಿನ್ನ ಕೊಟ್ಟ ಮಹಿಳೆ, ಗಟ್ಟಿಯಾಗಿದೆ ತಿನ್ನೋದಕ್ಕೆ ಆಗಲ್ಲ ಅಂತ ಎಸೆದು ಹೋದ ಭಿಕ್ಷುಕಿ!

ಗುರುವಾರ ಜೂನ್ 16 ರಂದು ಮುಂಬೈ ಪೊಲೀಸರು ಮುಂಬೈನ ಗೋಕುಲಧಾಮ್ ಕಾಲೋನಿ ಬಳಿಯ ಕಸದ ತೊಟ್ಟಿಯಲ್ಲಿ ಇಲಿಗಳ ಹಿಡಿತದಲ್ಲಿದ್ದ ಬರೋಬರಿ 5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ನಂತರ ಅದನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಮುಂಬೈನಲ್ಲಿ ವಾಸಿಸುತ್ತಿದ್ದ ಸುಂದರಿ ಎಂಬ ಮಹಿಳೆ ಈ ರೀತಿ ಬ್ರೆಡ್ ಅಂತ ತಿಳಿದು ಚಿನ್ನದ ಗಟ್ಟಿ ಕೊಟ್ಟು ಯಡವಟ್ಟು ಮಾಡಿಕೊಂಡಿದ್ದಳು. ಈಕೆ ತನ್ನ ಮಗಳ ಮದುವೆಗಾಗಿ ತನ್ನ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡಮಾನ ಇಡಲು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಭಿಕ್ಷುಕಿಯೊಬ್ಬಳು ಸಿಕ್ಕಿ, ಭಿಕ್ಷೆ ಕೇಳಿದ್ದಾಳೆ. ಆಗ ಅವಸರದಲ್ಲಿದ್ದ ಮಹಿಳೆ ತನ್ನ ಬ್ಯಾಗ್‌ನಲ್ಲಿದ್ದ ಚಿನ್ನದ ಗಟ್ಟಿಯನ್ನು ಬ್ರೆಡ್ ಎಂದು ತಪ್ಪಾಗಿ ಭಾವಿಸಿ, ಭಿಕ್ಷುಕಿಗೆ ಅದನ್ನು ಕೊಟ್ಟಿದ್ದಾಳೆ.

5.Heeraben Modi Birthday: 100 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ತಾಯಿ ಹೀರಾಬೆನ್

PM Narendra Modi Mother Birthday: ಜೂನ್ 18 ರಂದು ಎರಡು ದಿನಗಳ ಭೇಟಿಗಾಗಿ ಮೋದಿ ಗುಜರಾತ್‌ನಲ್ಲಿ ಇರಲಿದ್ದಾರೆ. ತಮ್ಮ ತಾಯಿಯ 100ನೇ ಜನ್ಮದಿನದಂದು ಅವರು ಅಮ್ಮನನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಜೂನ್ 18 ರಂದು,ಅಂದರೆ ಇಂದು ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀರಾಬೆನ್ ಅವರು ಜೂನ್ 18, 1923 ರಂದು ಜನಿಸಿದ್ದ ಅವರು ಶತಾಯುಶಿಯಾಗಿದ್ದಾರೆ. ಹೀರಾಬೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
Published by:Mahmadrafik K
First published: