Morning Digest: ಕಿಮ್ಸ್ ಮಗು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್; ಚಿನ್ನ-ಬೆಳ್ಳಿ ದರ ಸೇರಿದಂತೆ ಬೆಳಗಿನ ಸುದ್ದಿಗಳು ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಿಮ್ಸ್​​ ಮಗು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ : ಕಿಮ್ಸ್ (Kims) ಆವರಣದಲ್ಲಿ ಮಗು ಕಳ್ಳತನ ಪ್ರಕರಣಕ್ಕೆ (Child Theft Case) ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಕಳ್ಳತನದ ಕಥೆ ಹಿಂದಿನ ಅಸಲಿಯತ್ತು ಬಹಿರಂಗಗೊಂಡಿದೆ. ಹೆತ್ತಮ್ಮಳಿಂದಲೇ (Mother) ನಡೆದ ನೀಚ ಕೃತ್ಯ  ಜಗಜ್ಜಾಹೀರಾಗಿದೆ. ಕಳ್ಳತನ ಡ್ರಾಮಾ ಕ್ರಿಯೇಟ್ ಮಾಡಿದ ತಾಯಿ ಸಲ್ಮಾಳೇ ಇಲ್ಲಿ ವಿಲನ್ ಆಗಿದ್ದಾಳೆ. ಕಳ್ಳತನ ಕಹಾನಿಯ (Theft Story) ಹಿಂದಿನ ಅಸಲಿಯತ್ತನ್ನು ಹುಬ್ಬಳ್ಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ 40 ದಿನದ ಹೆಣ್ಣು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಕುಂದಗೋಳ ಪಟ್ಟಣದ ಸಲ್ಮಾ ಮತ್ತು ಹುಸೇನ್ ಶೇಖ್ ಎಂಬುವರಿಗೆ ಸೇರಿದ್ದ 40 ದಿನಗಳ ಹೆಣ್ಣು ಮಗುವಿಗೆ ಬಾಯಿಯಲ್ಲಿ ರಕ್ತ ಬರುತ್ತಿದೆ ಅನ್ನೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಿಸ್ಚಾರ್ಜ್ ಮಾಡುವ ದಿನವೇ ಮಗು ಮಾಯವಾಗಿತ್ತು. ತನ್ನ ಮಗುವನ್ನು ಯಾರೋ ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿದ್ದಾನೆಂದು ತಾಯಿ ಸಲ್ಮಾ ದೂರು ನೀಡಿದ್ದಳು. ಕಪ್ಪು ವರ್ಣದ ವ್ಯಕ್ತಿ ತನ್ನ ಮಗುವನ್ನು ಕಿತ್ತುಕೊಂಡ ಹೋದನೆಂದು ಹೇಳಿದ್ದಳು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Child Theft Case: ಕಿಮ್ಸ್​​ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್; ತಾಯಿಯೇ ಇಲ್ಲಿ ವಿಲನ್, ಹೀಗೆಲ್ಲಾ ಮಾಡ್ತಾರಾ?

BMTCಯಿಂದ ಮತ್ತೊಂದು ಸಾಹಸ

ಎಲೆಕ್ಟ್ರಿಕ್ ಬಸ್‌ಗಳು (Electrical Buses) ಬಿಎಂಟಿಸಿಯನ್ನ (BMTC) ಉದ್ದಾರ ಮಾಡುವ ಬದಲಿಗೆ ಮುಳುಗಿಸ್ತವೆ ಅನ್ನೋ ಮಾತು ಕೇಳಿಬರ್ತಿದೆ. ಈ ಆರೋಪ ಇದೀಗ ನಿಜ ಎಂಬಂತ ಬೆಳವಣಿಗೆಗಳು ನಡೆಯುತ್ತಿದೆ. ಉದ್ದಾರ ಮಾಡಿ ಅಂದರೆ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿ, ವೋಲ್ವೋ ಬಸ್ ಗಳಿಗೆ (Volvo Buses) ಒಂದು ಗತಿ ಕಾಣಿಸಲು ಮುಂದಾಗಿದೆ.  ಮೊದಲಿಗೆ 90. ಆನಂತರ 300. ಈಗ 921. ಹೀಗೆ ಮೇಲಿಂದ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸುತ್ತಿದೆ. ಆದರೆ ಈ ರೀತಿ ಜಿಸಿಸಿ ಮಾಡೆಲ್ ಅಡಿ ಎಲೆಕ್ಟ್ರಿಕ್ ಬಸ್ ಖರೀದಿಸಿದರೆ ನಿಗಮಕ್ಕೆ ಭಾರಿ ನಷ್ಟ ಸಂಭವಿಸುತ್ತೆ ಅನ್ನೋದೂ ಈಗಾಗಲೇ ಸಾಭೀತಾಗಿದೆ. ಈ ಹಿನ್ನಲೆಯಲ್ಲಿ ಖರೀದಿಸಿದ ಎಲೆಕ್ಟ್ರಿಕ್ ಬಸ್‌ಗಳನ್ನು ಯಾವ ರೂಟ್‌ನಲ್ಲಿ ಓಡಿಸೋದು ಅನ್ನೋದು ನಿಗಮಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ.

ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್

ಚಿನ್ನ (Gold) ಖರೀದಿ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದವರಿಗೆ ನಿನ್ನೆಯಿಂದ ಶುಭಸೂಚನೆ ಸಿಗುತ್ತಿದ್ದಂತೆ ಕಾಣುತ್ತಿದೆ. ನಾಲ್ಕೈದು ದಿನಗಳಿಂದ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದ್ದ ಬಂಗಾರದ ಬೆಲೆ (Gold Price) ನಿನ್ನೆಯಿಂದ ದರದಲ್ಲಿ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,740 ಇದ್ದದ್ದು ಇಂದು 4,715 ರೂಪಾಯಿ ಆಗಿದೆ. ಕಳೆದ ಒಂದು ವಾರದಿಂದ ಬಂಗಾರದ ಬೆಲೆಯಲ್ಲಿ (Gold Rate) ಏರಿಳಿತ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ. ಇಳಿಕೆ ಆಗುತ್ತಿದೆ ಎನ್ನುವಷ್ಟರಲ್ಲಿ ಏರಿಕೆ ಕಂಡಿದ್ದ ಚಿನ್ನ ಇಂದು ಮತ್ತೆ ಇಳಿಕೆ ಆಗಿದ್ದು ಖರೀದಿದಾರರಿಗೆ ಖುಷಿ ನೀಡಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Gold Price: ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ನಿನ್ನೆಯಂತೆ ಇಂದೂ ಸಹ ಬೆಲೆಯಲ್ಲಿ ಇಳಿಕೆ ಕಂಡ ಬಂಗಾರ

ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ (National Herald) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಫೆಡರಲ್ ಏಜೆನ್ಸಿ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.‌ ಕೊವಿಡ್ ಪಾಸಿಟಿವ್ (Covid Positive) ಆದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ವಿಚಾರಣೆಯಿಂದ ವಿನಾಯಿತಿ ಪಡೆದಿದ್ದಾರೆ. ರಾಹುಲ್ ಗಾಂಧಿ ಅವರು ಜೂನ್ 13ರಿಂದ ನಿರಂತರವಾಗಿ 3 ದಿನ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. 3 ದಿನದ ಬಳಿಕ ಇಂದು ಒಂದು ದಿನದ ವಿನಾಯಿತಿ ಸಿಕ್ಕಿದ್ದು ನಾಳೆ (ಜೂನ್ 17l)  ಮತ್ತೆ ವಿಚಾರಣೆಗೆ ಬರುವಂತೆ ಅವರಿಗೆ ಸೂಚನೆ ನೀಡಲಾಗಿದೆ‌.

ರಿಯಲ್ಲಾಗೇ ಸ್ಕ್ವಿಡ್ ಗೇಮ್ ರಿಯಾಲಿಟಿ ಶೋ

ನೆಟ್‍ಫ್ಲಿಕ್ಸ್ ನಲ್ಲಿ (Netflix) ಪ್ರಸಾರವಾಗಿದ್ದ ಸ್ಕ್ವಿಡ್ ಗೇಮ್ ವೆಬ್ ಸರಣಿ (Squid Game Web Series) ವಿಶ್ವದಾದ್ಯಂತ ಜನಪ್ರಿಯವಾಗಿ, ಮೆಚ್ಚುಗೆ ಗಳಿಸಿತ್ತು. ದೊಡ್ಡ ಮೊತ್ತದ ಬಹುಮಾನಕ್ಕಾಗಿ (Prize) ಸ್ಫರ್ಧಿಗಳು ಬಾಲ್ಯದ ಆಟಗಳನ್ನು ಆಡುವುದರ ಕುರಿತ ಅತ್ಯಂತ ಕುತೂಹಲಕಾರಿ ಕಥೆಯನ್ನು ಹೊಂದಿದ್ದ ಕೊರಿಯನ್ ವೆಬ್ ಸರಣಿ (Korean Web Series) ಇದು. ಇದೀಗ, ಸ್ಕ್ವಿಡ್ ಗೇಮ್ ವೆಬ್ ಸರಣಿಯ ಅದ್ಭುತ ಯಶಸ್ಸಿನಿಂದ ಪ್ರೇರಣೆಗೊಂಡು, ನೆಟ್‍ಫ್ಲಿಕ್ಸ್ ಈ ಸರಣಿಯನ್ನು ಆಧರಿಸಿದ ರೀಯಾಲಿಟಿ ಶೋ (Reality Show) ಒಂದನ್ನು ಹೊರತರುವ ಯೋಜನೆ ಹಾಕಿಕೊಂಡಿದೆ.  ಅಂದರೆ, ಈ ರಿಯಾಲಿಟಿ ಶೋನಲ್ಲೂ ಕೂಡ ಸೋತ ಸ್ಪರ್ಧಿಗಳನ್ನು (Contestant) ಕೊಲ್ಲಲಾಗುತ್ತದೆಯೇ ಎಂದು ಗಾಬರಿಗೊಳ್ಳಬೇಡಿ. ಇದು ಕಥೆಯಲ್ಲ, ರಿಯಾಲಿಟಿ ಶೋ.
Published by:Kavya V
First published: