• Home
  • »
  • News
  • »
  • state
  • »
  • Morning Digest: ಇಂದು MLC ಚುನಾವಣಾ ಫಲಿತಾಂಶ, ಪತಿಗೆ ಚಟ್ಟ ಕಟ್ಟಿದ ಪತ್ನಿ, ಇಳಿಕೆಯಾಯ್ತು ಚಿನ್ನ; ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಇಂದು MLC ಚುನಾವಣಾ ಫಲಿತಾಂಶ, ಪತಿಗೆ ಚಟ್ಟ ಕಟ್ಟಿದ ಪತ್ನಿ, ಇಳಿಕೆಯಾಯ್ತು ಚಿನ್ನ; ಬೆಳಗಿನ ಟಾಪ್ ನ್ಯೂಸ್ ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.MLC Election Results: ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು


ಕರ್ನಾಟಕ ವಿಧಾನ ಪರಿಷತ್ತಿನ (Karnataka Vidhan Parishath) ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ (Election) ಸೋಮವಾರ ನಡೆದಿದ್ದು, ಇಂದು ಫಲಿತಾಂಶ (Election Result) ಪ್ರಕಟವಾಗಲಿದೆ. ನಾಲ್ಕು ಕ್ಷೇತ್ರಗಳಲ್ಲಿ ಶೇ.73ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ ಮತ ಎಣಿಕೆ (Counting) ಆರಂಭವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಶೇ.84 ರಷ್ಟು ಅತಿ ಹೆಚ್ಚು ಮತದಾನವಾಗಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರ ಶೇ.80 ಮತ್ತು ದಕ್ಷಿಣ ಪದವೀಧರರ ಕ್ಷೇತ್ರ ಶೇ.70 ಮತ್ತು ವಾಯವ್ಯ ಪದವೀಧರರ ಕ್ಷೇತ್ರದಲ್ಲಿ ಶೇ.59ರಷ್ಟು ಮತದಾನವಾಗಿದೆ. ಮತಪತ್ರಗಳ ಎಣಿಕೆ ಜೊತೆ ಪ್ರಾಶಸ್ತ್ರ ಮತಗಳ ಎಣಿಕೆ ನಡೆಯೋದರಿಂದ ಇಂದು ಸಂಜೆ ಅಥವಾ ಗುರುವಾರ ಬೆಳಗ್ಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.


2. Hubballi Crime News: ಯುವಕನ ಕೊಲೆ, ಇಬ್ಬರಿಗೆ ಚಾಕು ಇರಿತ; ಏನಾಗ್ತಿದೆ ಹುಬ್ಬಳ್ಳಿಯಲ್ಲಿ?


ಕೇವಲ ಐದು ರೂಪಾಯಿ ಗುಟ್ಕಾಕ್ಕಾಗಿ ಹುಬ್ಬಳ್ಳಿಯಲ್ಲಿ (Hubballi) ಯುವಕನ ಕೊಲೆ (Youth Murder) ನಡೆದು ಹೋಗಿತ್ತು. ಈ ಘಟನೆ ಹಸಿರಿರುವಾಗಲೇ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ ಪ್ರಕರಣ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆ ಯುವಕನ ಬರ್ಬರ ಹತ್ಯೆ ನಡೆದಿದೆ. ವಾಣಿಜ್ಯ ಚಟುವಟಿಕೆಗಳಿಗಿಂತ (Commercial Activities) ಅಪರಾಧ ಚಟುವಟಿಕೆಗಳೇ (Crime Activity) ಹುಬ್ಬಳ್ಳಿಯಲ್ಲಿ ಹೆಚ್ಚಾಗಿ ನಡೀತಿವೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ ಏನಾಗ್ತಿದೆ ಎನ್ನೋ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಹುಬ್ಬಳ್ಳಿಯ ಹೃದಯ ಭಾಗದ ರೈಲ್ವೆ ಟ್ರ್ಯಾಕ್ (Railway Track) ಪಕ್ಕದಲ್ಲಿ ಯುವಕನ ಶವ ಪತ್ತೆಯಾಗಿದೆ. ದೇಸಾಯಿ ಬ್ರಿಡ್ಜ್ (Desai Bridge) ಪಕ್ಕದ ರೈಲ್ವೆ ಟ್ರ್ಯಾಕ್ ನಲ್ಲಿ ಮೃತ ದೇಹ ಪತ್ತೆಯಾಗಿದೆ. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ರೀತಿಯಲ್ಲಿ ಶವ (Deadbody) ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


3.LPG Cylinder: ಜನಸಾಮನ್ಯರಿಗೆ ಬಿಗ್​ ಶಾಕ್​! ಒಂದೇ ಬಾರಿಗೆ ಇಷ್ಟೊಂದು ಬೆಲೆ ಹೆಚ್ಚಳ ಮಾಡಿದ್ರೆ, ಮುಂದೇನು ಗತಿ?


LPG Cylinder: ಅಡುಗೆ ಅನಿಲದ ಬೆಲೆ ಈಗಾಗಲೇ ಕುಸಿಯುತ್ತಿದೆ. ಎಲ್ ಪಿಜಿ ಸಿಲಿಂಡರ್ ದರ ಗಗನಕ್ಕೇರಿದೆ. ಈ ನಿಟ್ಟಿನಲ್ಲಿ ಇಂಧನ ಕಂಪನಿಗಳು ಮತ್ತೊಂದು ಪ್ರಮುಖ ಘೋಷಣೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿವೆ. ಹಾಗಾದರೆ ಆ ನಿರ್ಧಾರವೇನು? ಯಾರಾದರೂ ಹೊಸ LPG ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ ಭದ್ರತಾ ಠೇವಣಿ ಪಾವತಿಸಬೇಕು.ದರೆ, ಇದೀಗಕಂಪನಿಗಳು ಈ ಬೆಲೆಯನ್ನು ದಿಢೀರ್ ಏರಿಸುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿವೆ. ಇಂಧನ ಕಂಪನಿಗಳು ಅಡುಗೆ ಅನಿಲ ಠೇವಣಿ ಮೊತ್ತವನ್ನು ಹೆಚ್ಚಿಸುತ್ತಿರುವುದಾಗಿ ಮಂಗಳವಾರ ಪ್ರಕಟಿಸಿವೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಠೇವಣಿ ಬೆಲೆಯನ್ನು 1,450 ರೂ.ನಿಂದ 2,200 ರೂ.ಗೆ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್‌ಗೆ 800 ರೂ.ನಿಂದ 1,150 ರೂ.ಗೆ ಏರಿಕೆಯಾಗಿದೆ.


4.Hassan Crime News: ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಪಾತಕಿಗೆ ಅಮ್ಮ, ಮಗ ಸಾಥ್​


ಕಳೆದ ಜೂ.5 ರಂದು ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ (Hosalli, Hassan) ಗ್ರಾಮದ ರೈಸ್‌ ಮಿಲ್ ಬಳಿ ರಾಷ್ಟ್ರೀಯ ಹೆದ್ದಾರಿ 376 (National Highway) ಹಾಸನ-ಮೈಸೂರು ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು.‌ ಮೇಲ್ನೋಟಕ್ಕೆ ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಮೃತನ ಸಾವಿನ ಬಗ್ಗೆ ಅನುಮಾನಗೊಂಡ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆಯ ನಂತರ ಸಾವಿನ ರಹಸ್ಯ (Death Secret) ಬಯಲಾಗಿದೆ. ಕುಡಿಯುವ ವಿಚಾರಕ್ಕೆ ಪತ್ನಿ, ಮಗ, ಅತ್ತೆಯೊಂದಿಗೆ ಸೇರಿ ಪತಿಯನ್ನೇ ಕೊಲೆ (Husband Murder) ಮಾಡಿದ್ದಾರೆ. ಹಾಸನ ತಾಲೂಕಿನ, ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ (52) ಕೊಲೆಯಾದ ವ್ಯಕ್ತಿ.


5. Gold Price: ಗೋಲ್ಡನ್ ಸುದ್ದಿ ಇಲ್ಲಿದೆ ನೋಡಿ; ಚಿನ್ನದ ಮೇಲೆ ಬರೋಬ್ಬರಿ 1,050 ರೂ. ಇಳಿಕೆ!


ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,836 ಇದ್ದದ್ದು ಇಂದು 4,740 ರೂಪಾಯಿ ಆಗಿದೆ. ಕಳೆದ ಒಂದು ವಾರದಿಂದ ಬಂಗಾರದ ಬೆಲೆಯಲ್ಲಿ ಏರಿಳಿತ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ. ಇಳಿಕೆ ಆಗುತ್ತಿದೆ ಎನ್ನುವಷ್ಟರಲ್ಲಿ ಏರಿಕೆ ಕಂಡಿದ್ದ ಚಿನ್ನ ಇಂದು ಮತ್ತೆ ಇಳಿಕೆ ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,400 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,550, ರೂ. 47,400, ರೂ. 47,400 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,400 ರೂ. ಆಗಿದೆ.

Published by:Mahmadrafik K
First published: