Morning Digest: ಮತ್ತೆ ED ಮುಂದೆ ರಾಹುಲ್ ಗಾಂಧಿ, ಜೋಗ ಜಲಪಾತದಲ್ಲಿ ವಿಸ್ಮಯ, ಭೂಕುಸಿತ; ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Prophet Remarks Row:‘ಎಲ್ಲವನ್ನೂ ತಿಳಿದುಕೊಳ್ತಾರೆ, ಆದರೆ ಏನು ಮಾಡಲ್ಲ; ಮೋದಿ ಕಲಿಯುಗದ ಧೃತರಾಷ್ಟ್ರ’

ಮುಸ್ಲಿಮರನ್ನು ಜೈಲಿಗೆ ಹಾಕಲಾಗುತ್ತಿದೆ, ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ಅವರ ಮಕ್ಕಳ ಮೇಲೆ ಗುಂಡು ಹಾರಿಸಲಾಗುತ್ತಿದೆ. ಆದರೆ ನೂಪುರ್ ಶರ್ಮಾ (ಬಿಜೆಪಿ ಮಾಜಿ ವಕ್ತಾರೆ) ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅವರು ಪ್ರಶ್ನಿಸಿದರು. ಆಕೆಯನ್ನು ಬಂಧಿಸುವವರೆಗೂ ಮುಸ್ಲಿಮರು ಶಾಂತಿಯಿಂದ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಾಭಾರತವನ್ನು ಉಲ್ಲೇಖಿಸಿ ರಾಝಾ ಅವರು ಪ್ರಧಾನಿಯವರ ವಿರುದ್ಧ ವಾಗ್ದಾಳಿ ನಡೆಸಿದರು. "...ಈ ದೇಶದ ನಾಯಕನಿಗೆ ಎಲ್ಲವೂ ತಿಳಿದಿದೆ, ಅವನು ಎಲ್ಲವನ್ನೂ ಕೇಳುತ್ತಾನೆ ... ಅವನು ಕಲಿಯುಗದ ಧೃತರಾಷ್ಟ್ರ ... ಎಲ್ಲಿಯವರೆಗೆ ಅವರು ನೂಪುರ್ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ದೇಶದ ವಾತಾವರಣ ಸುಧಾರಿಸಲ್ಲ.’’ ಎಂದು ಉತ್ತರ ಪ್ರದೇಶ ಮೂಲದ ಇಸ್ಲಾಮಿಕ್ ಧರ್ಮಗುರು ಮೌಲಾನಾ ತೌಕೀರ್ ರಜಾ ಎಚ್ಚರಿಸಿದರು.

2.Jog Falls: ಜೋಗ ಜಲಪಾತದಲ್ಲಿ ವಿಸ್ಮಯ; ನೀವೂ ನೋಡಿಲ್ವಾ? ಈ ವಿಡಿಯೋ ನೋಡಿ

ಜೋಗ ಜಲಪಾತದಲ್ಲಿ (Jog Falls) ನೀರು ಎತ್ತರದಿಂದ ಕೆಳಗೆ ಬೀಳುವದನ್ನು ನೋಡಲು ವಿದೇಶಗಳಿಂದಲೂ ಜನರು ಬರುತ್ತಾರೆ. ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ಶರಾವತಿಯ ನದಿಯ (Sharavati River) ಮನಮೋಹಕ ದೃಶ್ಯ ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು. ಆದ್ರೆ ಈ ಜೋಗ ಜಲಪಾತದಲ್ಲಿ ವಿಸ್ಮಯ ನಡೆಯುತ್ತಿದೆ. ಈ ವಿಸ್ಮಯದ ವಿಡಿಯೋಗಳು (Jog Falls Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ನೀರು ಕೆಳಗೆ ಬೀಳುವದರ ಜತೆಗೆ ಮೇಲಕ್ಕೆ ಚಿಮ್ಮುತ್ತಿದೆ. ಗಾಳಿಯಲ್ಲಿ ಮೇಲ್ಮುಖವಾಗಿ ನೀರು ಚಲಿಸುತ್ತಿರುವ ದೃಶ್ಯಗಳನ್ನು ಕಾಣಲು ಜನರು ಜೋಗದತ್ತ ಆಗಮಿಸುತ್ತಿದ್ದಾರೆ. ಬಿರುಗಾಳಿಯ ರಭಸಕ್ಕೆ ಗುರುತ್ವಾಕರ್ಷಣೆಗೆ (Gravity) ವಿರುದ್ಧವಾಗಿ ನೀರು ಮೇಲ್ಮುಖವಾಗಿ ಹಾರಾಡುತ್ತಿದೆ.

3.Sushant Singh Rajput: ಸುಶಾಂತ್ ಇಲ್ಲದೇ ಇಂದಿಗೆ 2 ವರ್ಷ, ಜನಮಾನಸದಲ್ಲಿ ಮಾನವ್ ನೆನಪು ಎಂದಿಗೂ ಅಜರಾಮರ

Sushant Singh Rajput Death Anniversary: ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಇಂದಿಗೆ 2 ವರ್ಷಗಳು ಕಳೆದಿವೆ. ಅವರ ಪ್ರೀತಿಯ ವ್ಯಕ್ತಿತ್ವ, ಹೊಸ ವಿಷಯಗಳನ್ನು ಕಲಿಯುವ ಕುತೂಹಲ ಅವರನ್ನೊಬ್ಬ ಪರಿಪೂರ್ಣ ಆಕ್ಟರ್ ಮಾಡಿದೆ. ತನ್ನ ಆಲೋಚನೆಗಳ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದ್ದ ಸುಶಾಂತ್ ಅವರಿಗಿದ್ದ ಜೀವನದ ಬಗೆಗಿನ ತನ್ನ ದೃಷ್ಟಿಕೋನ ವಿಭಿನ್ನ. ಅಭಿಮಾನಿಗಳಲ್ಲಿ ಸ್ಪೂರ್ತಿ ಹೆಚ್ಚಿಸುವ ಅವರ ಕೆಲ ಮಾತುಗಳು ಇಲ್ಲಿದೆ. ಸುಳ್ಳು ಮತ್ತು ನಮ್ಮನ್ನ ನೋವಿನಲ್ಲಿ ದೂಡುವ ಸಂಗತಿಗಳ ನಡುವಿನ ವ್ಯತ್ಯಾಸ ನಮ್ಮ ನಂಬಿಕೆ. ನಂಬಿಕೆಯೇ ಜೀವನದ ಆಧಾರ ಎಂದು ಸುಶಾಂತ್ ಯಾವಾಗಲೂ ಹೇಳುತ್ತಿದ್ದರಂತೆ. ನಗು ಮೊಗದ ಸರದಾರನ ಮಾತುಗಳು ಇಂದಿಗೂ ಅವರ ಅಭಿಮಾನಿಗಳ ಮನಸ್ಸಲ್ಲಿ ಹಸಿರಾಗಿರುತ್ತದೆ. ಯಾವಾಗಲೂ ಆಕ್ಟೀವ್​ ಇರುತ್ತಿದ್ದ ಸುಶಾಂತ್ ಪ್ರಕಾರ ಸಂತೋಷದ ವಿರುದ್ದ ಪದ ಬೇಸರವಲ್ಲ, ಬೋರ್ ಆಗುವುದು ಎನ್ನುತ್ತಿದ್ದರಂತೆ. ಅವರ ಪ್ರಕಾರ ನಾವು ಒಂದು ಕೆಲಸವನ್ನು ಸಂತೋಷಪಟ್ಟು ಮಾಡುತ್ತಿದ್ದರೆ ಬೇಸರವಾಗುವುದಿಲ್ಲ.

4.Landslide: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆ, ದತ್ತಪೀಠ ರಸ್ತೆ ಕುಸಿತ; ಆತಂಕದಲ್ಲಿ ಕಾಫಿನಾಡಿಗರು

ಕಾಫಿನಾಡು ಚಿಕ್ಕಮಗಳೂರಿನಲ್ಲಿನ (Chikkamagaluru) ಇನ್ನು ಪೂರ್ಣ ಪ್ರಮಾಣದಲ್ಲಿ ಮಳೆಗಾಲ (Rain Season) ಆರಂಭವೇ ಆಗಿಲ್ಲ. ಈಗಲೇ, ಆಗಾಗ್ಗೆ-ಅಲ್ಲಲ್ಲೇ ಸುರಿಯುವ ಮಳೆಗೆ ರಸ್ತೆಗಳು ಕುಸಿಯುತ್ತಿದ್ದು (Landslide) ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಸುರಿದ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ (Dattapeetha Route) ಅರ್ಧ ರಸ್ತೆಯೇ ಕುಸಿದು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತಪೀಠದ ಮಾರ್ಗದಲ್ಲಿ ರಸ್ತೆ ಕುಸಿತವಾಗಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ.

5. National Herald Case: ಇಂದು ಮತ್ತೆ ED ಅಧಿಕಾರಿಗಳಿಂದ ರಾಹುಲ್ ಗಾಂಧಿ ವಿಚಾರಣೆ; ಭುಗಿಲೇಳಲಿದೆಯಾ ಕಾಂಗ್ರೆಸ್ಸಿಗರ ಕೋಪ?

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಫೆಡರಲ್ ಏಜೆನ್ಸಿ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.‌ ಕೊವಿಡ್ ಪಾಸಿಟಿವ್ (Covid Positive) ಆದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ವಿಚಾರಣೆಯಿಂದ ವಿನಾಯಿತಿ ಪಡೆದಿದ್ದಾರೆ. ರಾಹುಲ್ ಗಾಂಧಿ ಅವರನ್ನು ನಿನ್ನೆ (ಜೂನ್ 13) ತಡರಾತ್ರಿವರೆಗೂ ಇಡಿ ವಿಚಾರಣೆ ನಡೆಸಲಾಗಿದೆ. ಇಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ‌.

6. Today Gold Price: ಬಂಗಾರದ ಬೆಲೆ ಕೊಳ್ಳುವವರಿಗೆ ಭಾರವಾಯಿತೇ? ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,836 ಇದ್ದದ್ದು ಇಂದು ಸಹ 4,836 ರೂಪಾಯಿ ಆಗಿದ್ದು, ಅದೇ ಬೆಲೆಯನ್ನು ಉಳಿಸಿಕೊಂಡಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,360 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,430, ರೂ. 48,360, ರೂ. 48,360 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,360 ರೂ. ಆಗಿದೆ.
Published by:Mahmadrafik K
First published: