Morning Digest: ಬೆಂಗಳೂರಿನಲ್ಲಿ ಸ್ಟಾರ್ ನಟನ ಪುತ್ರ ಅರೆಸ್ಟ್, ವಿಧಾನ ಪರಿಷತ ಚುನಾವಣೆ, ಬಂಗಾಳದಲ್ಲಿ ರೈಲು ಧ್ವಂಸ; ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Drugs Case: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಮಗ ಅರೆಸ್ಟ್

ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ (Five Star Hotel) ಮೇಲೆ ಹಲಸೂರು ಪೊಲೀಸರು ದಾಳಿ (Police Raide) ನಡೆಸಿದ್ದಾರೆ. ರಾಜಕೀಯ ನಾಯಕರ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಜಿಟಿ ಮಾಲ್ ಮುಂಭಾಗದಲ್ಲಿರುವ "THE PARK" 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆದಿದ್ದು, ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ (Drugs Party) ನಡೆಸುತ್ತಿದ್ದ ಅನುಮಾನ ಹಿನ್ನೆಲೆ ದಾಳಿ ನಡೆದಿದೆ. ಈ ಐದು ಜನರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಬಾಲಿವುಡ್ ನಟನ ಮಗ ಕೂಡ ಸಿಕ್ಕಿ ಬಿದ್ದಿದ್ದು, ಡರ್ಗ್ಸ್ ತೆಗೆದುಕೊಂಡಿರುವುದು ಪತ್ತೆಯಾಗಿದೆ ಎನ್ನಲಾಗುತ್ತಿದೆ. ಹೌದು, ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿರುವುದು ಸಾಬೀತಾಗಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ರಕ್ತದ್ಲಲಿ ಡ್ರಗ್ಸ್ ಪತ್ತೆಯಾಗಿದೆ. ನಟ ಸಿದ್ದಾಂತ್ ಕಪೂರ್ ಬಾಲಿವುಡ್​ನ ಹಿರಿಯ ನಟ ಶಕ್ತಿ ಕಪೂರ್ ಮಗ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರ.

2.MLC Election: ವಿಧಾನ ಪರಿಷತ್ ಚುನಾವಣೆ, ಮತದಾನ ಆರಂಭ; 49 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಜೂನ್ 15 ರಂದು ಮತ ಎಣಿಕೆ ನಡೆಯಲಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನು ಚುನಾವಣಾ ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗೆ ಸೇರಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ವಾಯುವ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಿಲ್ಲ. ಜುಲೈ ನಾಲ್ಕರಂದು ಬಿಜೆಪಿಯ ಹಣಮಂತ ನಿರಾಣಿ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಅರುಣ್ ಶಹಾಪುರ ಮತ್ತು ಮತ್ತು ಜೆಡಿಎಸ್‌ ನ ಬಸವರಾಜ ಹೊರಟ್ಟಿ ಅವರ ಅವಧಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ಚುನಾವಣೆ ನಡೆಯುತ್ತಿದೆ.

3. Train Vandalised: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ: ಬಂಗಾಳದಲ್ಲಿ ರೈಲನ್ನು ಧ್ವಂಸಗೊಳಿಸಿದ ಪ್ರತಿಭಟನಾಕಾರರು

ಅಮಾನತುಗೊಂಡಿರುವ ಬಿಜೆಪಿ (BJP) ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ (Prophet Muhammad) ಬಗೆಗಿನ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ರೈಲನ್ನು ಧ್ವಂಸಗೊಳಿಸಿದ್ದಾರೆ. ನಾಡಿಯಾ ಜಿಲ್ಲೆಯ ಬೆಥುವಾಧಾರಿ ರೈಲ್ವೇ ನಿಲ್ದಾಣದಲ್ಲಿ ಸುಮಾರು 1,000 ಜನರ ಗುಂಪು ಲಾಲ್ಗೋಲಾ-ರಣಘಾಟ್ರೈನ್ ಸ್ಥಳೀಯ ರೈಲಿಗೆ ಕಲ್ಲು ತೂರಾಟ ನಡೆಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1,000ಕ್ಕೂ ಹೆಚ್ಚು ಜನರ ಗುಂಪೊಂದು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿತು. ಕೆಲವರು ಗಾಯಗೊಂಡಿದ್ದಾರೆ. ಸದ್ಯಕ್ಕೆ ಯಾವುದೇ ರೈಲು ಅಲ್ಲಿ ಓಡುತ್ತಿಲ್ಲ, ನಾವು ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ರೈಲ್ವೆ ಪೊಲೀಸರು ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.

4.Today Gold Price: ಸೋಮವಾರವಾದ ಇಂದು 1 ಗ್ರಾಂ ಚಿನ್ನದ ದರ, ಬೆಳ್ಳಿಯ ರೇಟು ಇಷ್ಟಾಗಿದೆ ನೋಡಿ

ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,835 ಇದ್ದದ್ದು ಇಂದು 4,836 ರೂಪಾಯಿಗೆ ಏರಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 48,360 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,060, ರೂ. 47,950, ರೂ. 47,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,950 ರೂ. ಆಗಿದೆ.

5.777 Charlie Collection: ಮೂರನೇ ದಿನವೂ ಮುಂದುವರಿದ ಚಾರ್ಲಿ ಅಬ್ಬರ, ಟಿಕೆಟ್​ ಸಿಗದೇ ಅಭಿಮಾನಿಗಳಿಗೆ ನಿರಾಸೆ

ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಬಿಡುಗಡೆಯಾಗಿ ಬಹಳ ಸದ್ದು ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಮೂರು ದಿನವಾಗಿದ್ದು, ಚಾರ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ. ಅದರಲ್ಲೂ ವೀಕೆಂಡ್​ಗಳಲ್ಲಿ (Weekend) ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಟಿಕೆಟ್​ ಸಿಗದೆ ಹಲವರಿಗೆ ಬೇಸರ ಉಂಟಾಗಿರುವುದು ಸಹ ಇದೆ. ಮೀಡಿಯಂ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಸಿನಿಪ್ರಿಯರ ಮನ ಗೆಲ್ಲುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಮನುಷ್ಯ ಮತ್ತು ನಾಯಿಯ ನಡುವಿನ ಭಾವನಾತ್ಮಕ ಸಂಬಂಧದ ಕಥೆಯಾಗಿದ್ದು, ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ.
Published by:Mahmadrafik K
First published: