Morning Digest: ಬಸವಕಲ್ಯಾಣದಲ್ಲಿ ಬೃಹತ್ ಸಮಾವೇಶ, ಪ್ರಿಯಕರನ ನೋಡಲು ಬಂದು ಶವವಾದ್ಳು, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Basavakalyana: ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ; ಇಂದು ಬೃಹತ್ ಸಮಾವೇಶ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ (Basavakalyana) ಇಂದು ಮಠಾಧೀಶರ ನಡೆ ಮೂಲ ಅನುಭವ ಮಂಟಪದ (Anubhava Mantapa) ಕಡೆ ಬೃಹತ್ ಸಮಾವೇಶ (Rally) ನಡೆಯಲಿದೆ. ಪೀರ್ ಪಾಶಾ ದರ್ಗಾವೇ (Peer Pasha Dargah) ಮೂಲ ಅನುಭವ ಮಂಟಪವಾಗಿದ್ದು, ಅದನ್ನು ಹಿಂದೂಗಳ (Hindu) ವಶಕ್ಕೆ ನೀಡಬೇಕೆಂದು ಒತ್ತಾಯಿಸಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯ ನಂತರ ಸಮಾವೇಶ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲು ಬಸವ ಕೇಂದ್ರದಲ್ಲಿ (Basava Kendra) ಇಷ್ಟಲಿಂಗದ ಪೂಜೆ ನಡೆಯಲಿದೆ. ಪೂಜೆ ಬಳಿಕ ಮಠಾಧೀಶರು ತೇರು ಮೈದಾನಕ್ಕೆ ಆಗಮಿಸಿ, ಅಲ್ಲಿಯ ಸಭಾ ಭವನದಲ್ಲಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

2. Amit Shah: ಆದ್ಯತೆಯಲ್ಲಿ ರೇಪ್, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಅಮಿತ್ ಶಾ ಸೂಚನೆ

ದೇಶದಲ್ಲಿ ಅತ್ಯಾಚಾರ (Rape) ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೈದರಾಬಾದ್​ನಲ್ಲಂತೂ (Hyderabad) ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆದರೆ ಅತ್ಯಾಚಾರ ಪ್ರಕರಣಗಳ ತನಿಖೆ, ವಿಚಾರಣೆ, ಶಿಕ್ಷೆ (Punishment) ಎಷ್ಟು ತಡವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಸಂತ್ರಸ್ತ ಕುಟುಂಬವು ಹಲವು ವರ್ಷ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಪರಿಸ್ಥಿತಿ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶನಿವಾರ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ತನಿಖೆಗೆ ಸೂಚನೆ ಕೊಟ್ಟಿದ್ದಾರೆ. ಇಂತಹ ಪ್ರಕರಣಗಳ ತನಿಖೆ ಶೀಘ್ರವಾಗಿ ನಡೆಸಿ ಅಪರಾಧಿಗಳ ವಿರುದ್ಧ ಕಾಲಮಿತಿಯಲ್ಲಿ ಕಠಿಣ ಶಿಕ್ಷೆ ಸಿಗುವಂತೆ ಮಾಡಲು ಒತ್ತಾಯಿಸಿದ್ದಾರೆ.

3.Karnataka Politics: ಕರ್ನಾಟಕ ಕಾಂಗ್ರೆಸ್‌ನ ಪಾದದಡಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇದೆ; ಹೆಚ್.ಡಿ.ರೇವಣ್ಣ ವಾಗ್ದಾಳಿ

ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್‌ ನ ಪಾದದಡಿಯಲ್ಲಿದೆ. ಸೋನಿಯಾ ಗಾಂಧಿ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್‌ನ ಪಾದದಡಿಯಿದೆ. ರಾಷ್ಟ್ರೀಯ ಕಾಂಗ್ರೆಸ್ ನ್ನು ಕರ್ನಾಟಕ ಕಾಂಗ್ರೆಸ್‌ ನ ಪಾದಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್-ಬಿಜೆಪಿಯವರು ಸೇರಿಕೊಂಡು ನಮ್ಮನ್ನು ಆಟ ಆಡಿಸಬೇಕು ಅಂತ ನನ್ನ ಮತ ಅಸಿಂಧುಗೊಳಿಸಲು ಮನವಿ ಮಾಡಿದರು. ನಾನು ಪಕ್ಷದ ಏಜೆಂಟ್‌ ರಿಗೆ ತೋರಿಸಿಯೇ ಡಬ್ಬಕ್ಕೆ ಹಾಕಿದ್ದೆ, ಏನಾದರು ಇದ್ದರೆ ಅಲ್ಲೇ ಹೇಳಬೇಕಿತ್ತು ಎಂದರು.

4.Gold Price: ಚಿನ್ನ ಖರೀದಿಸುವ ಮುನ್ನ ನೂರು ಬಾರಿ ಯೋಚಿಸಿದ್ರೆ ಚೆನ್ನ ! ಇಂದು ಬೆಳ್ಳಿ-ಬಂಗಾರದ ಬೆಲೆಯಲ್ಲಿ ಏರಿಕೆ

ನಿನ್ನೆ ಕೊಂಚ ಇಳಿಕೆ ಕಂಡಿದ್ದ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,275 ರೂ. ಆಗಿದೆ. ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,000 ರೂಪಾಯಿ ದಾಖಲಾಗಿದೆ. ಇಂದು ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,275 ರೂಪಾಯಿ ನಿಗದಿಯಾಗಿದೆ. ಇನ್ನು ಬೆಂಗಳೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌), ಮಂಗಳೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌), ಮೈಸೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌) ಬೆಲೆ ನಿಗದಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮೊನ್ನೆ 1 ಕೆಜಿ ಬೆಳ್ಳಿಯ ದರ 62,200 ರೂಪಾಯಿ ಇತ್ತು. ನಿನ್ನೆ ಕೊಂಚ ಇಳಿಕೆಯಾಗಿ 61,000 ರೂಪಾಯಿ ಬೆಲೆ ನಿಗದಿಯಾಗಿತ್ತು. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿಗೆ 62,000 ರೂಪಾಯಿ ಬೆಲೆ ನಿಗದಿಯಾಗಿದೆ.

5.ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ಮಾಗಡಿ ಬಾಲಕೃಷ್ಣ! BJP ಸೇರುವ ಮುನ್ಸೂಚನೆ?

ಸಿದ್ಧಗಂಗಾ ಶ್ರೀಗಳ (Siddaganga Sri) ಮೊರೆ ಹೋದ ಮಾಗಡಿ ಮಾಜಿ ಶಾಸಕ (Ex MLA) ಪಕ್ಷಾಂತರಕ್ಕೆ ಮುಂದಾದರ ಎಂಬ ಅನುಮಾನ‌ ಮೂಡಿದೆ. ‌ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಶ್ರೀ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದಾರೆ ಮಾಜಿ ಶಾಸಕ ಬಾಲಕೃಷ್ಣ ರಾಜಸಭೆ ಚುನಾವಣೆ ಬಳಿಕ ರಾತ್ರಿ ವೇಳೆ ಸ್ವಾಮಿಜಿ ಭೇಟಿ ಮಾಡಿದ್ದು ಪಕ್ಷ ಬದಲಿಸುವ ನಿರ್ಧಾರಕ್ಕೆ ಸಿದ್ಧಗಂಗಾ ಶ್ರೀ ಮೊರೆ ಹೋದ್ರಾ ಎಂಬ ಚರ್ಚೆ ಪ್ರಾರಂಭವಾಗಿದೆ. ಕೆಲ ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆಸಿದ್ದು ಬಿಜೆಪಿ ಸೇರಲು ಶ್ರೀಗಳ ಸಲಹೆಗೆ ಮುಂದಾದ್ರಾ ಬಾಲಕೃಷ್ಣ ಎಂಬ ಚರ್ಚೆ ನಡೆಯುತ್ತಿದೆ. ಕೈ ಗೆ ಗುಡ್ ಬೈ ವದಂತಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಿರುವ ಬಾಲಕೃಷ್ಣ ನಿನ್ನೆ ರಾತ್ರಿ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.

6.Girl Death: ಪ್ರಿಯಕರನ ನೋಡಲು ಸೀರೆ ಹತ್ತಿ ಬಾಲ್ಕನಿಗೆ ಹೋದವಳು ಕೈ ಜಾರಿ ಕೆಳಕ್ಕೆ ಬಿದ್ದಳು! ನೋಡ ನೋಡುತ್ತಿದ್ದಂತೆ ಅನಾಹುತ

ತಮಿಳುನಾಡಿನ ಚೆನ್ನೈನಲ್ಲಿ ಬಹುಮಹಡಿ ಕಟ್ಟಡದ ಮೂರನೇ ಫ್ಲೋರ್ ಬಾಲ್ಕನಿಯಿಂದ ಬಿದ್ದು, ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಮಕ್ಕಲ್ ಜಿಲ್ಲೆಯ, 25 ವರ್ ವಯಸ್ಸಿನ ಮಖಿಲಮತಿ ಎಂಬಾಕೆಯೇ ಮೃತ ಯುವತಿ. ಮೃತ ಮಖಿಲಮತಿ ಯುವಕನೊಬ್ಬನನ್ನು ಪ್ರೀತಿಸುತ್ತಾ ಇದ್ದಳು ಎನ್ನಲಾಗಿದೆ. ಆಕೆಯ ಪ್ರಿಯಕರ ಐಟಿ ಉದ್ಯೋಗಿಯಾಗಿದ್ದು, ಅದೇ ಅಪಾರ್ಟ್‌ಮೆಂಟ್​​​​​ನಲ್ಲಿ ವಾಸವಾಗಿದ್ದ. ಮಖಿಲಮತಿ ಮತ್ತು ಆ ಯುವಕ ಅಪಾರ್ಟ್‌ಮೆಂಟ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ನಿನ್ನೆಯೂ ಸಹ ಪ್ರಿಯಕರನನ್ನು ನೋಡಲು ಆತ ಇರುವ ಮೂರನೇ ಫ್ಲೋರ್‌ಗೆ ಸೀರೆ ಕಟ್ಟಿಕೊಂಡು ಹೋಗಿದ್ದಾಳೆ.
Published by:Mahmadrafik K
First published: