Morning Digest: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೂಸೈಡ್, ಸಲ್ಲು ಹತ್ಯೆಗೆ ಸಂಚು, ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Tumakuru: ಹಾಸ್ಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ

ತಡರಾತ್ರಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. 21 ವರ್ಷದ ಕವಿತಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕವಿತಾ ತುಮಕೂರು ನಗರದ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಫೈನಲ್ ಇಯರ್ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕವಿತಾ, ಕಾಲೇಜು ಹಾಸ್ಟೆಲ್ ನ ಸಂಗಮಿತ್ರ ಬ್ಲಾಕ್ ನಲ್ಲಿ ವಾಸವಾಗಿದ್ದರು. ರಾತ್ರಿ ಸುಮಾರು 12.30ರ ವೇಳೆಗೆ ಈ ಘಟನೆ ನಡೆದಿದೆ. ಮೈಸೂರು ಮೂಲದವರಾಗಿರುವ ಕವಿತಾ ಪೋಷಕರಿಗೆ ಸಾವಿನ ವಿಷಯ ತಿಳಿಸಲಾಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕವಿತಾ ಆತ್ಮಹತ್ಯೆಹೆ ನಿಖರ ಕಾರಣ ತಿಳಿದು ಬಂದಿಲ್ಲ. ಕವಿತಾ ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕವಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಫೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕೋಣೆಯಲ್ಲಿ ಡೆತ್ ನೋಟ್ ಏನಾದ್ರೂ ಇದೆಯಾ ಎಂಬುದರ ಬಗ್ಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇತ್ತ ಕವಿತಾ ಗೆಳತಿಯರು ಮತ್ತು ಹಾಸ್ಟೆಲ್ ಸಿಬ್ಬಂದಿಯಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

2.Salman Khan: ಸಲ್ಮಾನ್ ಖಾನ್ ಹತ್ಯೆಗೆ ಯತ್ನ, ಸಲ್ಲು ಮನೆ ಎದುರೇ ಇದ್ರಂತೆ ಶಾರ್ಪ್ ಶೂಟರ್!

ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆಯನ್ನು ಹತ್ಯೆ ಮಾಡುವುದಾಗಿ ಕೆಲ ದಿನಗಳ ಹಿಂದೆ ಅನಾಮಧೇಯ ಪತ್ರ ಬಂದಿದ್ದು, ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದರ ಮುಂದುವರೆದು ಸಲ್ಲು ಭಾಯ್​ ಅವರ ಕೊಲೆಗೆ ಯತ್ನ ಸಹ ನಡೆದಿದೆ ಎಂದು ಕೇಳಿಬರುತ್ತಿದೆ. ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆಯನ್ನು ಹತ್ಯೆ ಮಾಡುವುದಾಗಿ ಕೆಲ ದಿನಗಳ ಹಿಂದೆ ಅನಾಮಧೇಯ ಪತ್ರ ಬಂದಿದ್ದು, ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದರ ಮುಂದುವರೆದು ಸಲ್ಲು ಭಾಯ್​ ಅವರ ಕೊಲೆಗೆ ಯತ್ನ ಸಹ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗಷ್ಟೇ ಪಂಜಾಬ್ ನಲ್ಲಿ ಖ್ಯಾತ ಗಾಯಕ ಸಿಧು ಅವರನ್ನು ಹತ್ಯೆ ಮಾಡಲಾಗಿತ್ತು. ಆದಾಗ್ಯೂ, ಅವರ ಹತ್ಯೆಯ ನಂತರ, ಇತರ ಕೆಲವು ಸೆಲೆಬ್ರಿಟಿಗಳು ಸಹ ದುಷ್ಕರ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬ ಊಹಾಪೋಹಗಳು ಇದ್ದವು. ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಕೂಡ ಇದ್ದಾರೆ ಎನ್ನಲಾಗಿದೆ. ಇದೇ ವೇಳೆ ಅವರಿಗೆ ಬೆದರಿಕೆ ಪತ್ರ ಸಹ ಬಂದಿತ್ತು. ಹೀಗಾಗಿ ಅವರಿಗೆ ಭಧ್ರತೆಯನ್ನು ಹೆಚ್ಚಿಸಿದೆ.

3.Modi's Teacher: ಬಾಲ್ಯದ ಶಿಕ್ಷಕರನ್ನು ಭೇಟಿಯಾದ ಮೋದಿ

ಗುಜರಾತ್ ಪ್ರವಾಸದಲ್ಲಿದ್ದ (Gujrat Tour) ಪ್ರಧಾನಿ ನರೇಂದ್ರ ಮೋದಿ ಬಾಲ್ಯದಲ್ಲಿ (Childhood) ತಮಗೆ ಅಕ್ಷರ ಕಲಿಸಿದ ಶಿಕ್ಷಕರೊಬ್ಬರ ಮನೆಗೆ ತೆರಳಿದ್ದಾರೆ. ಅವರ ಆಶೀರ್ವಾದ (Blessings) ಪಡೆದು, ಆರೋಗ್ಯ (Health) ವಿಚಾರಿಸಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಗುರುಗಳು, ಮೋದಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಗುರು ಶಿಷ್ಯನ ಬಾಂಧವ್ಯದ (Relationship) ಅಪರೂಪದ ಫೋಟೋಗಳು (Photos) ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಫುಲ್ ವೈರಲ್ (Viral) ಆಗಿವೆ. ಗುಜರಾತ್‌ನ ನವಸಾರಿಯ ವಡ್‌ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಬಾಲ್ಯದ ಶಿಕ್ಷಕ ಜಗದೀಶ್ ನಾಯಕ್ ಅವರ ಮನೆಗೆ ತೆರಳಿದ ಪ್ರಧಾನಿ, ಅವರ ಆಶೀರ್ವಾದ ಪಡೆದಿದ್ದಾರೆ.

4.Marijuana Legalized: ಥೈಲ್ಯಾಂಡ್​ನಲ್ಲಿ ಗಾಂಜಾ ಕಾನೂನುಬದ್ಧ!

ಗಾಂಜಾ (Ganja) ಅಥವಾ ಮರಿಜುವಾನಾ (Marijuana) ಎಂದು ಕರೆಯಲ್ಪಡುವ ಮಾದಕ ವಸ್ತು ಈಗ ಥೈಲ್ಯಾಂಡ್​ನಲ್ಲಿ (Thailand) ಕಾನೂನು ಬದ್ಧ. ಹೌದು, ಏಷ್ಯಾದಲ್ಲಿಯೇ (Asia) ಗಾಂಜಾವನ್ನು ಲೀಗಲೈಸ್ಡ್​ ಮಾಡಿದ ಮೊದಲ ದೇಶವಾಗಿ ಥೈಲ್ಯಾಂಡ್​ ಹೊರಹೊಮ್ಮಿದೆ. ಥೈಲ್ಯಾಂಡ್ ಗುರುವಾರದಿಂದ ಗಾಂಜಾವನ್ನು ಬೆಳೆಸಲು ಮತ್ತು ಹೊಂದಲು ಇರುವ ಅವಕಾಶವನ್ನು ಕಾನೂನುಬದ್ಧಗೊಳಿಸಿದೆ. ಪ್ರಸಿದ್ಧ ಥಾಯ್ ಸ್ಟಿಕ್ ವೈವಿಧ್ಯದಲ್ಲಿದ್ದ ಕಿಕ್ ಅನ್ನು ನೆನಪಿಸಿಕೊಳ್ಳುವ ಪಾಟ್ ಸ್ಮೋಕರ್​ಗಳ (Pot Smoker) ಕನಸು ನನಸಾಗುವಂತೆ ಮಾಡಿದ ಈ ಹೊಸ ನಿಯಮ. ಶುಕ್ರವಾರದಿಂದ ಪ್ರಾರಂಭವಾಗುವಂತೆ 1 ಮಿಲಿಯನ್ ಗಾಂಜಾ ಮೊಳಕೆಗಳನ್ನು ವಿತರಿಸಲು ದೇಶದ ಸಾರ್ವಜನಿಕ ಆರೋಗ್ಯ ಮಂತ್ರಿಯ ನಿರ್ಧಾರವು ಥೈಲ್ಯಾಂಡ್ ಗಾಂಜಾ ಪ್ರೇಮಿಗಳ ಸ್ವರ್ಗವಾಗಿ ಬದಲಾಗುತ್ತಿರುವುದರ ಸ್ಪಷ್ಟ ಸೂಚನೆಯನ್ನು ಕೊಟ್ಟಿದೆ.

5.Gold Price: ಗುಡ್ ನ್ಯೂಸ್, ಗುಡ್ ನ್ಯೂಸ್, ಗುಡ್ ನ್ಯೂಸ್! ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆ ಹಾಗೂ ಬೆಳ್ಳಿಯ ದರದಲ್ಲಿ (Silver price) ಇಳಿಕೆಯಾಗಿದೆ. ಚಿನ್ನದ ಬೆಲೆ ಇಂದು 210 ರೂಪಾಯಿ ಇಳಿಕೆಯಾಗಿದ್ರೆ, ಬೆಳ್ಳಿ ಬೆಲೆಯಲ್ಲಿ 1,200 ರೂಪಾಯಿ ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇದ್ದುದು ಇಂದು 47,750 ರೂ. ಆಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ 52,310 ರೂ. ಇದ್ದಿದ್ದು, ಇಂದು 52,100 ರೂ. ಆಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,750 ರೂಪಾಯಿ ಆಗಿದೆ. ಅತ್ತ ಮೈಸೂರಿನಲ್ಲಿ 47,750 ರೂ. ಬೆಲೆ ಇದ್ದರೆ, ಮಂಗಳೂರಲ್ಲೂ 47,750 ರೂಪಾಯಿ ಬೆಲೆ ನಿಗದಿಯಾಗಿದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಬಂಗಾರಕ್ಕೆ ಬೆಂಗಳೂರಲ್ಲಿ ಬೆಂಗಳೂರು- 52,100 ರೂಪಾಯಿ ಆಗಿದೆ. ಅತ್ತ ಮಂಗಳೂರಿನಲ್ಲಿ 52,100 ರೂ. ಇದ್ದರೆ, ಮೈಸೂರಿನಲ್ಲಿಯೂ 52.100 ರೂಪಾಯಿ ಇದೆ.
Published by:Mahmadrafik K
First published: