1.BJP MLA Daughter: BMWನಲ್ಲಿ ಸಿಗ್ನಲ್ ಜಂಪ್ ಮಾಡಿದ ಲಿಂಬಾವಳಿ ಪುತ್ರಿ! ಪತ್ರಕರ್ತನಿಗೆ ಹಲ್ಲೆ
ಶಾಸಕ ಅರವಿಂದ ಲಿಂಬಾವಳಿ (Arvind Limbavali) ಪುತ್ರಿ ಕಿರಿಕ್ ಮಾಡಿದ್ದು ಪೋಲಿಸ್ (Police) ಕಾರು ತಡೆದ ಹಿನ್ನೆಲೆ ಹೈಡ್ರಾಮಾ ಕ್ರಿಯೇಟ್ ಆಗಿದೆ. ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿದ್ದು ಇದೀಗ ಬಿಜೆಪಿ ಶಾಸಕರ (BJP MLA) ಉದ್ಧಟತನ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೊತ್ತಾ ಎಂದು ಪ್ರಶ್ನಿಸಿರೋ ಲಿಂಬಾವಳಿ ಮಗಳು ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದಾಳೆ. ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ಗಲಾಟೆ ನಡೆದಿದ್ದು ಅಲ್ಲಿದ್ದ ವರದಿಗಾರ (Reporter) ಮೇಲೆಯೂ ಲಿಂಬಾವಳಿ ಪುತ್ರಿ ರೇಗಾಡಿದ್ದಾರೆ.
2.Rajya Sabha Election: ರಾಜ್ಯಸಭಾ ಚುನಾವಣೆಗೆ ಅಂತಿಮ ಹಂತದ ತಯಾರಿ, ಮೂರೂ ಪಕ್ಷಗಳಿಗೆ ಟೆನ್ಶನ್ ಟೆನ್ಶನ್!
ಬೆಂಗಳೂರು: ರಾಜ್ಯಸಭೆ ಚುನಾವಣೆ (Rajya Sabha Election) ಅಖಾಡ ರಂಗೇರಿದೆ. ಇಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ರಾಜ್ಯ ಚುನಾವಣಾ ಆಯೋಗ (State Election Commission) ಎಲ್ಲ ಸಿದ್ಧತೆ ಕೈಗೊಂಡಿದೆ. ವಿಧಾನಸೌಧದಲ್ಲಿ (Vidhanasoudha) ಕೊಠಡಿ ಸಂಖ್ಯೆ 106ರಲ್ಲಿ (Room No. 106) ಮತದಾನಕ್ಕೆ (Voting) ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಲ್ಲಿಯೇ ಮತ ಎಣಿಕೆಯೂ (Counting) ನಡೆಯಲಿದೆ. ಈ ನಿಟ್ಟಿನಲ್ಲಿ ಚುನಾವಣೆ ಸಂಬಂಧ ಅಧಿಕಾರಿಗಳು ಸಿದ್ಧತೆಯನ್ನು ಕೈಗೊಂಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಸೂಚನಾ ಫಲಕಗಳನ್ನು ಕೊಠಡಿ ಒಳಗೂ ಹೊರಗೂ ಅಳವಡಿಸಲಾಗಿದೆ.
3.Today Gold Price: 25 ರೂ ಏರಿಕೆ ಕಂಡ ಚಿನ್ನ, ನಿಮ್ಮ ನಗರದಲ್ಲಿ ಇಂದಿನ ದರ ಹೀಗಿದೆ
ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Market) ಚಿನ್ನದ (Gold) ಬೆಲೆಯಲ್ಲಿ ಒಂದು ಗ್ರಾಂಗೆ ರೂ. 25ರೂ. ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,770 ಇದ್ದದ್ದು ಇಂದು 4,795 ರೂಪಾಯಿಗೆ ಏರಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,060, ರೂ. 47,950, ರೂ. 47,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,950 ರೂ. ಆಗಿದೆ. ಪ್ರಸ್ತುತ, ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದಿನ ಬೆಲೆಗಳು ಸ್ಥಿರವಾಗಿವೆ. ಅಷ್ಟಕ್ಕೂ ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 680, ರೂ. 6,800 ಹಾಗೂ ರೂ. 68,000 ಗಳಾಗಿವೆ.
4.Sir MV Terminal: Airport ರೀತಿಯ ರೈಲ್ವೇ ನಿಲ್ದಾಣ ನಿರ್ಮಾಣದ ಹಿಂದಿರುವ ಮಹಿಳೆಯರು ಇವರೇ!
ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣ ರೀತಿಯಲ್ಲಿಯೇ ರೈಲ್ವೇ ನಿರ್ಮಾಣಗೊಂಡಿದ್ದು, ಜೂನ್ 6ರಂದು ಲೋಕಾರ್ಪಣೆಗೊಂಡಿದೆ. ರೈಲ್ವೇ ನಿಲ್ದಾಣದ ನೋಟ ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರಿಗೆ ಏರ್ ಪೋರ್ಟ್ ಅನುಭವವನ್ನು ನೀಡುತ್ತಿದೆ. ಬೈಯಪ್ಪನಹಳ್ಳಿಯ ಈ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇರಿಸಲಾಗಿದೆ. ಈ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ವಿನ್ಯಾಸದ ಹಿಂದೆ ಮೂವರು ಮಹಿಳೆಯರು ಇದ್ದಾರೆ. ರೂಪಕಲಾ ಅವರ ತಂಡದಲ್ಲಿ ಸಿ.ಎಸ್.ರೇಷ್ಮಾ, ಕೆ.ವಿ.ಮಧು ಮತ್ತು ಇಂಟಿರೀಯರ್ ಡಿಸನರ್ ರೀತು ಎಂ. ಅವರ ಜೊತೆ ಇಬ್ಬರು ಪುರುಷ ಸ್ಟ್ರಕ್ಚರಲ್ ಇಂಜಿನಿಯರ್ ಗಳಿದ್ದರು.
5.Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?
ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ (Term) ಜುಲೈ 24ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು (Presidential Election) 17 ಜುಲೈ 2017 ರಂದು ನಡೆದಿತ್ತು. ಇದೀಗ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಇಂದು ಸುದ್ದಿಗೋಷ್ಠಿ (Press meet) ನಡೆಸಿದ ಕೇಂದ್ರ ಚುನಾವಣಾ ಆಯೋಗ (Election Commission Of India), ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಅದರಂತೆ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಜುಲೈ 21ಕ್ಕೆ ಮತ ಎಣಿಕೆ ಕಾರ್ಯ (Counting) ನಡೆಯಲಿದೆ. ಇನ್ನು ರಾಮನಾಥ್ ಕೋವಿಂದ್ ನಂತರ ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ