Morning Digest: ಸಮುದ್ರಕ್ಕೆ ನುಗ್ಗಿದ ಕಾರ್, ಮಾಜಿ ಶಾಸಕ ಅರೆಸ್ಟ್, ಮೈಸೂರಿನಲ್ಲಿ ಪವಿತ್ರಾ-ನರೇಶ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Pavitra Lokesh: ಒಂದೇ ರೂಮಲ್ಲಿ ಇದ್ದಾರಾ ನರೇಶ್-ಪವಿತ್ರಾ ಲೋಕೇಶ್? ಹೋಟೆಲ್‌ ಮುಂದೆಯೇ ಕುಳಿತಿದ್ದಾರಂತೆ ರಮ್ಯಾ ರಘುಪತಿ!

ತೆಲುಗು ಸೂಪರ್ ಸ್ಟಾರ್ ಕೃಷ್ಣ (Telugu Super Star Krishna) ಅವರ ಪುತ್ರನೂ ಆಗಿರುವ ಪೋಷಕ ನಟ ನರೇಶ್ ಹೆಂಡತಿಗೆ (Wife) ಡಿವೋರ್ಸ್ (Divorce) ನೀಡದೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ (Marriage) ಎನ್ನುವ ಗುಸುಗುಸು ಕೇಳಿ ಬಂದಿತ್ತು. ಅಲ್ಲಿಂದ ಶುರುವಾದ ವಿವಾದ ಮೂವರ ಬಾಳಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ರಮ್ಯಾ ರಘುಪತಿ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ರೆ, ಅತ್ತ ರಮ್ಯಾ ರಘುಪತಿ ಇವರಿಬ್ಬರ ಮೇಲೆ ಪ್ರತ್ಯಾರೋಪ ಮಾಡಿದ್ರು. ಇದೀಗ ಮೈಸೂರಿನ (Mysore) ಖಾಸಗಿ ಹೋಟೆಲ್‌ನ (Hotel) ಒಂದೇ ರೂಮ್‌ನಲ್ಲಿ (Room) ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ನರೇಶ್ ಪತ್ನಿ ರಮ್ಯಾ ರಘುಪತಿ ಕೂಡ ಅದೇ ಹೋಟೆಲ್‌ನ, ಅದೇ ಕೋಣೆ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಈ ಹಿಂದೆ ಅವರಿಬ್ಬರು ಒಂದೇ ಮನೆಯಲ್ಲಿದ್ದಾರೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು, ಒಂದೇ ಹೋಟೆಲ್‌ನಲ್ಲಿದ್ದಾರೆ ಎಂಬ ಬಗ್ಗೆ ವದಂತಿ ಕೇಳಿ ಬರುತ್ತಿದೆ.

2.Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ

ಸಮುದ್ರದಲ್ಲಿ ಕಾರ್ ಕೊಚ್ಚಿ ಹೋದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ಮರವಂತೆ ಕಡಲತೀರದಲ್ಲಿ ನಡೆದಿದೆ. ವೀರಾಜ್ ಆಚಾರ್ಯ(28) ಮೃತ ಯುವಕ. ವೀರಾಜ್ ಆಚಾರ್ಯ ಕೋಟೇಶ್ವರ ಗ್ರಾಮದ ನಿವಾಸಿಯಾಗಿದ್ದು, ಸಮುದ್ರಪಾಲಾದ ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನಿನ್ನೆ ಸಂಜೆ ಸುಮಾರಿಗೆ ನಾಲ್ಗರು ಕಾರ್ ನಲ್ಲಿ ಮರವಂತೆ ಬೀಚ್ ಬಳಿ ಬಂದಿದ್ದರು. ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ಸಮುದ್ರಕ್ಕೆ ನುಗ್ಗಿದೆ. ಕಳೆದ ಒಂದು ವಾರದಿಂದ ಮಳೆ ಮತ್ತು ಗಾಳಿ ವೇಗ ಹೆಚ್ಚಾಗಿದ್ದರಿಂದ ಸಮುದ್ರ ಪ್ರಕ್ಷುಬ್ದಗೊಂಡಿದೆ. ಸಮುದ್ರದ ಅಲೆಗಳ ರಭಸಕ್ಕೆ ಕಾರ್ ಕೊಚ್ಚಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ

3.Ex-Minister Arrested: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಶಾಸಕ ಅರೆಸ್ಟ್

ಸೋಲಾರ್ ಪ್ಯಾನಲ್ ಪ್ರಕರಣದಲ್ಲಿ ಆರೋಪಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯದ (Sexual Assult) ದೂರಿನ ಆಧಾರದ ಮೇಲೆ ಕೇರಳದ (Kerala) ಹಿರಿಯ ರಾಜಕಾರಣಿ ಮತ್ತು ಮಾಜಿ ಶಾಸಕ (Ex-MLA) ಪಿಸಿ ಜಾರ್ಜ್ (PC George) ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 10 ರಂದು ಪಿಸಿ ಜಾರ್ಜ್ ತನ್ನನ್ನು ತೈಕಾಡ್‌ನಲ್ಲಿರುವ ಅತಿಥಿ ಗೃಹಕ್ಕೆ ಆಹ್ವಾನಿಸಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ನಂತರ, ಅವರು ರಾಜಕಾರಣಿಯಿಂದ ಅನುಚಿತ ಸಂದೇಶಗಳನ್ನು ಸ್ವೀಕರಿಸುವುದನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

4.Shiva Rajkumar: ಶಿವಣ್ಣನಿಗೂ ಟ್ರೋಲ್​ಗಳ ಕಾಟ! ಬೇಸರಗೊಂಡು ಈ ರೀತಿ ನಿರ್ಧಾರ ಮಾಡಿದ್ರಾ ಹ್ಯಾಟ್ರಿಕ್ ಹೀರೋ?

ಸ್ಯಾಂಡಲ್​ವುಡ್​ನ (sandalwood) ಹ್ಯಾಟ್ರಿಕ್​ ಹೀರೋ ನಟ ಶಿವರಾಜ್ ಕುಮಾರ್ (Shiva Rajkumar) ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋ, ಸಿನಿಮಾ ಎಂದೆಲ್ಲಾ ಬ್ಯುಸಿ ಇದ್ದಾರೆ. ಆದರೆ ಟ್ರೋಲ್​ (troll) ವಿಚಾರದಲ್ಲಿ ಶಿವಣ್ಣ ಸ್ವಲ್ಪ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೌದು, ಎಲ್ಲರನ್ನೂ ಟ್ರೊಲ್ ಮಾಡುವ ಟ್ರೋಲಿಗರು ಶಿವರಾಜ್ ಕುಮಾರ್ ಅವರನ್ನು ಬಿಟ್ಟಿಲ್ಲ. ನಟ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭದಲ್ಲಿ ಭಾಗಿಯಾಗಿದ್ದರೂ ಅಲ್ಲಿನ ವಿಡಿಯೋಗಳು ಫುಲ್ ವೈರಲ್ ಆಗುತ್ತಿದ್ದು, ಟ್ರೋಲ್ ಮಾಡಲಾಗುತ್ತಿದೆ.

5. Gold Price: ಸಂಡೇ ಶಾಕ್ ಕೊಟ್ಟ ಚಿನ್ನ; ಬೆಳ್ಳಿ ಬೆಲೆ ಇಳಿಕೆ!

ಭಾರತದ ಚೀನಿವಾರ ಪೇಟೆಯಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52340 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 48,050 ರೂಪಾಯಿ ನಿಗದಿಯಾಗಿದೆ. ಅದೇ ರೀತಿ ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 63,500 ರೂಪಾಯಿ ದಾಖಲಾಗಿದೆ. ಇನ್ನು ದೇಶದ ಇತರೇ ಪ್ರಮುಖ ನಗರಗಳಾದ ಚೆನ್ನೈ 47,920 (22 ಕ್ಯಾರೆಟ್‌) - 52,280 (24 ಕ್ಯಾರೆಟ್‌), ದೆಹಲಿ 48,100 (22 ಕ್ಯಾರೆಟ್‌) - 52,400 (24 ಕ್ಯಾರೆಟ್‌), ಹೈದರಾಬಾದ್‌ 48,000 (22 ಕ್ಯಾರೆಟ್‌) - 52,340 (24 ಕ್ಯಾರೆಟ್‌), ಕೋಲ್ಕತಾ 48,000 (22 ಕ್ಯಾರೆಟ್‌) - 52,340 (24 ಕ್ಯಾರೆಟ್‌), ಹಾಗೂ ಮುಂಬೈನಲ್ಲಿ 48,000 (22 ಕ್ಯಾರೆಟ್‌) - 52,340 (24 ಕ್ಯಾರೆಟ್‌) ರೂಪಾಯಿ ಬೆಲೆ ನಿಗದಿಯಾಗಿದೆ.
Published by:Mahmadrafik K
First published: