Morning Digest: ಮುರುಘಾಶ್ರೀ ಜೈಲುಪಾಲು, ಕಿಚ್ಚ ಸುದೀಪ್ ಜನ್ಮದಿನ- ಬೆಳಗಿನ ಟಾಪ್ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Murugha Mutt Case: ಮುರುಘಾಶ್ರೀ ಜೈಲುಪಾಲು, ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ!

ಚಿತ್ರದುರ್ಗ(ಸೆ.02): ಪೋಕ್ಸೋ ಕೇಸ್​​ನಲ್ಲಿ (POCSO case against Murugha Mutt) A 1 ಆರೋಪಿಯಾಗಿದ್ದ ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Shivamurthy Murugha Sharanaru) ಕೊನೆಗೂ ಜೈಲುಪಾಲಾಗಿದ್ದಾರೆ. ಗುರುವಾರ ರಾತ್ರಿ ಮಠದಲ್ಲೇ ಶ್ರೀಗಳನ್ನು ವಿಚಾರಣೆ ನಡೆಸಿ ಬಂಧಿಸಿದ್ದ ಪೊಲೀಸರು, ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರುಪಡಿಸಿದ್ದರು. ಇಲ್ಲಿ ವಿಚಾರಣೆ ನಡೆಸಿದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯದ ಜಡ್ಜ್ ಬಿ.ಕೆ.ಕೋಮಲಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೀಗಾಗಿ ಮಧ್ಯರಾತ್ರಿ 2.50ರ ಸುಮಾರಿಗೆ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಜೈಲಿಗೆ ರವಾನಿಸಲಾಗಿದೆ.

Kiccha Sudeep Birthday: ಇಂದು 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​, ಐರನ್​ ಲೆಗ್​ ಟು ಗೋಲ್ಡನ್​ ಮ್ಯಾನ್​!

ಸ್ಯಾಂಡಲ್​ವುಡ್​ ಬಾದ್​ಷಾ (Sandalwood Badshah) ಅಂದರೆ ಯಾರಿಗೆ ಇಷ್ಟ ಇಲ್ಲ. ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ (Kiccha Sudeep)​ ಅಂದರೆ ನೂರು ರೂಪಾಯಿ ನೋಟು ನೋಡಿದ ಹಾಗೇ ಇರುತ್ತೆ. ಯಾಕೆ ಗೊತ್ತಾ? 100 ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆ ಇರುವ ಹಾಗೆ, ಕಿಚ್ಚನ ನೋಡಿದರೆ ಪರಿಪೂರ್ಣ ನಟ ಎಂದರೆ ಅತಿಶೋಕ್ತಿಯಲ್ಲ. ಹೀರೋ (Hero) , ವಿಲನ್ (Villain) ​, ಸಪೋರ್ಟಿಂಗ್​ ಕ್ಯಾರಕ್ಟರ್​, ಗೆಸ್ಟ್​ ಕ್ಯಾರೆಕ್ಟರ್​ ಹೀಗೆ ಕಿಚ್ಚ ಮಾಡದೇ ಇರುವ ಪಾತ್ರವೇ ಇಲ್ಲ ಅನ್ನಬಹುದು. ಇಂಥಹ ನಟನಿಗೆ ಇಂದು ಜನ್ಮದಿನ (Kiccha Sudeep Birthday) ದ ಸಂಭ್ರಮ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ.

Karnataka Weather Report: ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ, ಕೊಡೆ ಇಲ್ಲದೇ ಬೆಂಗಳೂರು ಮಂದಿ ಮನೆಯಿಂದ ಆಚೆ ಬರಬೇಡಿ!

Karnataka Weather Report: ರಾಜ್ಯದಲ್ಲಿ ಇಂದೂ ಸೇರಿದಂತೆ ಎರಡು ದಿನ ಜೋರು ಮಳೆ ಸುರಿಯಲಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳಲ್ಲಿ ಸೆಪ್ಟೆಂಬರ್ 3ರವರೆಗೂ ವರ್ಷಧಾರೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಳೆರಾಯ (Karnataka Rains) ಶಾಂತವಾಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವರುಣನ (Heavy Rainfall) ಅಬ್ಬರ ಹೆಚ್ಚಾಗುತ್ತಲೇ ಇದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜಲರಾಶಿಯೇ ಕಾಣುತ್ತಿದೆ. ಪರಿಣಾಮ ರಾಜ್ಯದ ಎಲ್ಲಾ ಜಲಾಶಯಗಳು (Dams) ಭರ್ತಿಯಾಗಿ, ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಅಂಡರ್​ಪಾಸ್​ಗಳು (Underpass) ಜಲಾವೃತಗೊಂಡಿವೆ. ಕೆರೆ (Lake) ಕೋಡಿಗಳು ಒಡೆದ ಪರಿಣಾಮ ಕೃಷಿ ಜಮೀನುಗಳು ಜಲಾವೃತಗೊಂಡು ಬೆಳೆಗಳು (Crops) ನಾಶವಾಗಿವೆ.

Gold-Silver Price Today: ಚಿನ್ನದ ದರದಲ್ಲಿ ಮತ್ತೆ ಭರ್ಜರಿ ಇಳಿಕೆ, ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ: ಹೀಗಿದೆ ಇಂದಿನ ದರ

Gold and Silver Price on September 02, 2022: ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,650 ಆಗಿದೆ.

Petrol-Diesel Price Today: ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಉಳಿದೆಡೆ ಹೇಗಿದೆ?

ಇಂದು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol Diesel Price) ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದರೂ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಶಿವಮೊಗ್ಗದಲ್ಲಿ (Shivamogga) ಪೆಟ್ರೋಲ್ ಬೆಲೆ 1 ರೂ. 2 ಪೈಸೆಗಳಷ್ಟು ಇಳಿದಿದ್ದು ಮಿಕ್ಕೆಲ್ಲ ಕಡೆ ನಿತ್ಯದಂತೆ ಅಲ್ಪ ಏರಿಳಿತಗಳಿವೆ. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ (Crude Oil) ಬೆಲೆ ಇದೀಗ ಮತ್ತೆ ನಿಧಾನವಾಗಿ ಸುಧಾರಿಸುತ್ತಿದೆ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ. ಅಷ್ಟಕ್ಕೂ, ಈ ಹಿಂದೆ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು, ಏಕೆಂದರೆ ಪೆಟ್ರೋಲ್-ಡೀಸೆಲ್ ದರಗಳು ಅಷ್ಟು ದುಬಾರಿಯಾಗಿದ್ದವು. ತದನಂತರ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.
Published by:Sandhya M
First published: