• Home
  • »
  • News
  • »
  • state
  • »
  • Morning Digest: ರಾಜ್ಯದಲ್ಲಿ ಭೂಕಂಪನದ ಅನುಭವ, ಇನ್ನೂ 3 ದಿನ ಮಳೆ! ಈವರೆಗಿನ ಪ್ರಮುಖ ಸುದ್ದಿಗಳು ಇಲ್ಲಿವೆ

Morning Digest: ರಾಜ್ಯದಲ್ಲಿ ಭೂಕಂಪನದ ಅನುಭವ, ಇನ್ನೂ 3 ದಿನ ಮಳೆ! ಈವರೆಗಿನ ಪ್ರಮುಖ ಸುದ್ದಿಗಳು ಇಲ್ಲಿವೆ

ಈವರೆಿೃಗಿನ ಪ್ರಮುಖ ಸುದ್ದಿಗಳು

ಈವರೆಿೃಗಿನ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ


ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಭಾರೀ ಮಳೆ (Heavy Rainfall) ಸುರಿಯುತ್ತಿದ್ದು, ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಸಾಧ್ಯತೆ ಇಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆಡ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಪರದಾಡುತ್ತಿದ್ದಾರೆ.  ಕರಾವಳಿ (Coastal) ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇನ್ನು ಹವಾಮಾನ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗಲಿದೆ.


ವಿಜಯಪುರ, ಬಾಗಲಕೋಟೆಯಲ್ಲಿ ಭೂಕಂಪನದ ಆತಂಕ


ಬಾಗಲಕೋಟೆ: ಬೆಳ್ಳಂಬೆಳಗ್ಗೆ (Early Morning) ರಾಜ್ಯದ ಎರಡು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ (Earth Quake) ಅನುಭವವಾಗಿದೆ. ವಿಜಯಪುರ (Vijayapur) ಜಿಲ್ಲೆಯ ವಿಜಯಪುರ ನಗರ ಹಾಗೂ ತಿಕೋಟ (Tikota) ತಾಲೂಕಿನಲ್ಲಿ ಇಂದು ಮುಂಜಾನೆ ಎರಡು ಬಾರಿ ಭೂಮಿ ಕಂಪಿಸಿದೆ. ಜೊತೆಗೆ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ (Jamakhandi) ತಾಲೂಕಿನ ತುಬುಚಿ ಸೇರಿದಂತೆ ಹಲವು ಗ್ರಾಮಗಳಲ್ಲಿ 2 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಜಮಖಂಡಿ ತಾಲೂಕಿನ ತುಬುಚಿ, ಶೂರ್ಪಲ್ಲಿ, ಜಂಬಗಿ, ಟಕ್ಕೊಡ, ಟಕ್ಕಳಕಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪನವಾಗಿದೆ. ಅತ್ತ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕಂಪನದ ಕೇಂದ್ರ ಬಿಂದು ಇರುವುದು ಗೊತ್ತಾಗಿದೆ. ಇನ್ನು ಇತ್ತ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಿಂದ ಪ್ರವಾಹ (Flood) ಭೀತಿ ಎದುರಾಗಿದೆ. ಅತ್ತ ಉತ್ತರ ಕರ್ನಾಟಕ ಭಾಗದಲ್ಲಿ ಭೂಕಂಪನ ಉಂಟಾಗಿದೆ. ಹೀಗಾಗಿ ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದಾರೆ.


ಇದನ್ನೂ ಓದಿ: Earthquake: ಇತ್ತ ಪ್ರವಾಹದ ಭೀತಿ, ಅತ್ತ ಭೂಕಂಪನ ಅನುಭವ! ವಿಜಯಪುರ, ಬಾಗಲಕೋಟೆಯಲ್ಲಿ ಆತಂಕ


18 ಜಿಲ್ಲೆಗಳಲ್ಲಿಂದು ಪೆಟ್ರೊಲ್ ಬೆಲೆ ಇಳಿಕೆ


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನGold and Silver Price on July 9, 2022: ವೀಕೆಂಡ್‌ನಲ್ಲಿ (Weekend) ಚಿನ್ನ (Gold)  ಅಥವಾ ಬೆಳ್ಳಿ (Silver) ಖರೀದಿಸಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ಆಭರಣ (Jewellery) ಖರೀದಿ ಮಾಡುವ ಬಗ್ಗೆ ಇಂದು ಯೋಚಿಸಬಹುದು. ಯಾಕೆಂದ್ರೆ ಇಂದು ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಅಂದರೆ ನಿನ್ನೆಯಷ್ಟೇ ಬೆಲೆ ಇಂದೂ ಇದೆ.ಬೆಳ್ಳಿ ಬೆಲೆಯಲ್ಲಿ ಕೊಂಚ ಮಟ್ಟಿಗಿನ ಏರಿಕೆ ಕಂಡುಬಂದಿದೆ. ಇಂದು ಭಾರತೀಯ ಚೀನಿವಾರ ಪೇಟೆಯಲ್ಲಿ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,111 ರೂಪಾಯಿ ಇದೆ. ಅದೇ ರೀತಿ 22 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 4,688 ರೂಪಾಯಿಗಳು ದಾಖಲಾಗಿದೆ. ಇನ್ನು ಇಂದು ಒಂದು ಕೆಜಿ ಬೆಳ್ಳಿ ಬೆಲೆ 57,000 ರೂಪಾಯಿ ಇದೆ.


ಇದನ್ನೂ ಓದಿ: Gold Rate: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆ


ವೃಕ್ಷಮಾತೆಯ ಗ್ರಾಮದಲ್ಲಿ ಸೇತುವೆ ಇಲ್ಲದೇ ಪರದಾಟ


ಅಂಕೋಲಾ, ಉತ್ತರ ಕನ್ನಡ: ವೃಕ್ಷ ಮಾತೆ ಎಂದೇ ಖ್ಯಾತಿ ಪಡೆದ, ಪದ್ಮಶ್ರೀ (Padmashree) ಗೌರವದಿಂದ ಪುರಸ್ಕೃತರಾದ ತುಳಸಿ ಗೌಡ (Tulasi Gowda) ಅವರು ಮಳೆಗಾಲದಲ್ಲಿ (Rainy Season) ಸಂಕಷ್ಟ ಅನುಭವಿಸುತ್ತಿದ್ದಾರಂತೆ. ಹಾಲಕ್ಕಿ ಸಮುದಾಯದ (Halakki Community) ತುಳಸಿಗೌಡರ ಊರು ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ತುಳಸಿ ಗೌಡ ಅವರ ಮನೆಯೆದುರು ತೊರೆಯೊಂದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಕೂಡ ಮನೆಯಿಂದ ಹೊರಕ್ಕೆ ಪೇಟೆಗಾಗಲಿ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಾಗಲಿ (Hospital), ಮಕ್ಕಳು ಶಾಲೆಗೆ (School) ಹೋಗ್ಬೇಕಂದ್ರೆ ಈ ತುಂಬಿದ ತೊರೆಯನ್ನೇ ಜೀವಭಯದಲ್ಲೇ ದಾಟಿ ಹೋಗ್ಬೇಕಿದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಗ್ರಾಮಕ್ಕೆ ಒಂದು ಸೇತುವೆ (Bridge) ಕಟ್ಟಿಸಿಕೊಡಬೇಕು ಅಂತ ತುಳಸಿ ಗೌಡ ಅವರು ಮನವಿ ಮಾಡಿದ್ದಾರೆ.

Published by:Annappa Achari
First published: