Morning Digest: ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ತಾರಾ ಮಾಜಿ ಶಾಸಕ? ಇತ್ತ ಶಂಕಿತ ಉಗ್ರನ ಸಂಪರ್ಕಿತರಿಗೆ ಶಾಕ್! ಈವರೆಗಿನ ಟಾಪ್ ನ್ಯೂಸ್ ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
JDS ಬಿಟ್ಟು BJP ಸೇರ್ತಾರಾ ಮಾಜಿ ಶಾಸಕ ವೆಂಕಟಶಿವಾರೆಡ್ಡಿ?

ಶ್ರೀನಿವಾಸಪುರ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಆಯೋಜಿಸಿದ್ದ ಬಿಜೆಪಿ ಪೂರ್ವಭಾವಿ ಸಭೆಗೆ ಆಗಮಿಸಿದ ಸಚಿವ ಸುಧಾಕರ್ ರಿಗೆ, ಶ್ರೀನಿವಾಸಪುರ ಪಟ್ಟಣದ ಇಂದಿರಾ ಭವನ ವೃತ್ತದಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅದ್ದೂರಿಯಾಗಿ ಸ್ವಾಗತ ಕೋರಿದರು, ಜೆಡಿಎಸ್ ಜಿಲ್ಲಾಧ್ಯಕ್ಷ್ಯರಾಗಿ ವೆಂಕಟಶಿವಾರೆಡ್ಡಿ, ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿಯೂ ಆಗಿದ್ದಾರೆ. ಆದರೆ ಸಚಿವ ಸುಧಾಕರ್ ಆಗಮಿಸಿದ ವೇಳೆ ಆತ್ಮೀಯವಾಗಿ ಬರಮಾಡಿಕೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜೆಡಿಎಸ್ ಗೆ ಗುಡ್ ಬೈ ಹೇಳಿ, ಬಿಜೆಪಿ ಸೇರ್ತಾರಾ ಎನ್ನುವ ಚರ್ಚೆಗಳು ಆರಂಭವಾಗಿದೆ.

ಶಂಕಿತ ಉಗ್ರನ ಸಂಪರ್ಕದಲ್ಲಿದ್ದವರಿಗೆ ಶಾಕ್!

ಬೆಂಗಳೂರು: ರಾಜ್ಯಧಾನಿ ಬೆಂಗಳೂರಲ್ಲಿ (Bengaluru) ಫುಡ್ ಡೆಲಿವರಿ ಬಾಯ್ (Food Delivery Boy) ಆಗಿ ಕೆಲಸ ಮಾಡುತ್ತಲೇ, ಉಗ್ರ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಶಂಕಿತ ಉಗ್ರನನ್ನು (suspected terrorist) ನಿನ್ನೆ ಸಿಸಿಬಿ ಪೊಲೀಸರು (CCB Police) ಅರೆಸ್ಟ್ (Arrest) ಮಾಡಿದ್ದರು. ಇದೀಗ ಆತನ ವಿಚಾರಣೆ (Enquiry) ಮುಂದುವರೆದಿದೆ. ಇದೀಗ ತನಿಖೆಯ ಭಾಗವಾಗಿ ಆತನ ಜೊತೆ ಸಂಪರ್ಕದಲ್ಲಿ ಇದ್ದ ಯುವಕರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಡರಾತ್ರಿ ತಮಿಳುನಾಡಿಂದ (Tamil Nadu) ಯುವಕನೊಬ್ಬನನ್ನು ಕರೆತಂದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇನ್ನುಳಿದಂತೆ ಆತನೊಂದಿಗೆ ಬಾಡಿಗೆ ಮನೆಯಲ್ಲಿದ್ದ (Rent House) ಯುವಕರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Terrorists in Bengaluru: ಶಂಕಿತ ಉಗ್ರನ ಸಂಪರ್ಕದಲ್ಲಿದ್ದವರಿಗೆ ಶಾಕ್! ಸಿಸಿಬಿಯಿಂದ ನಾಲ್ವರ ವಿಚಾರಣೆ

ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮೇಕೆದಾಟು ವಿಚಾರಣೆ

ದೆಹಲಿ(ಜು. 26): ಬೆಂಗಳೂರು (Bangalore) ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ಯೋಜನೆಯ ಕುರಿತು ಸುಪ್ರೀಂ ಕೋರ್ಟಿನಲ್ಲಿ (Supreme Court) ಇರುವ ಮೂಲ ಅರ್ಜಿ ಇತ್ಯರ್ಥ ಆಗುವವರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority) ಸಭೆಯು ಮೇಕೆದಾಟು ವಿಸ್ತ್ರತ ಯೋಜನಾ ವರದಿಗೆ (Detail Project Report) ಒಪ್ಪಿಗೆ ನೀಡಬಾರದೆಂದು ತಮಿಳುನಾಡು ಸರ್ಕಾರ (Tamil Nadu Government) ತಕರಾರು ತೆಗೆದಿದ್ದು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ.

ಇಂದು ಮತ್ತೊಮ್ಮೆ ಸೋನಿಯಾ ಗಾಂಧಿಗೆ ಇಡಿ ವಿಚಾರಣೆ!

ದೆಹಲಿ(ಜು.26): ಜು. 21: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (National Herald Money Laundering Case) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress Present Sonia Gandhi) ಅವರನ್ನು ಕಳೆದ ವಾರ (ಜುಲೈ 21ರಂದು) ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮತ್ತೆ ಜುಲೈ 25ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ಮತ್ತೆ ದಿನಾಂಕ ಬದಲು ಮಾಡಿ ಜುಲೈ 26ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಇಡಿ ಅಧಿಕಾರಿಗಳ ಸೂಚನೆಯಂತೆ ಸೋನಿಯಾ ಗಾಂಧಿ ಅವರು ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಬಂದಿದೆ.

ಇದನ್ನೂ ಓದಿ: National Herald Case: ಇಂದು ಮತ್ತೊಮ್ಮೆ ಸೋನಿಯಾ ಗಾಂಧಿಗೆ ಇಡಿ ವಿಚಾರಣೆ!

ಟಾಪ್​ ನಟಿಯರ ಲಿಸ್ಟ್​ನಲ್ಲಿ ರಮ್ಯಾ

ಸ್ಯಾಂಡಲ್​ ವುಡ್​ ಕ್ವೀನ್​ (Sandalwood Queen) ರಮ್ಯಾ (Ramya) ಕಳೆದ 8 ವರ್ಷದಿಂದ ಸಿನಿಮಾ ರಂಗದಿಂದ (Film Industry) ದೂರವಿದ್ದಾರೆ. ಆದರೆ ಅವರ ಬಗ್ಗೆ ಅಭಿಮಾನ ಮಾತ್ರ ಇಂದಿಗೂ ಒಂದಿಂಚೂ ಕಡಿಮೆಯಾಗಿಲ್ಲ. ಈಗಲೂ ಅವರೆಂದರೆ ಅದೇ ಪ್ರೀತಿ ಜನರಿಗಿದೆ. ಅವರು ರಾಜಕೀಯಕ್ಕೆ ಇಳಿದ ನಂತರ ಸಿನಿಮಾದಿಂದ ದೂರವಿದ್ದರು. ಈಗ ರಾಜಕೀಯ (Politics) ಹಾಗೂ ಸಿನಿಮಾ ಎರಡಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇತ್ತೀಚೆಗಷ್ಟೇ ಸಿನಿಮಾ ರಂಗಕ್ಕೆ ಮರಳಿ ಬರುವುದಾಗಿ ಹೇಳಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಸದ್ಯ ರಮ್ಯಾ ಸಿನಿಮಾ ರಂಗದಲ್ಲಿ ಇಲ್ಲದಿದ್ದರೂ ಅವರ ಹವಾ ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
Published by:Annappa Achari
First published: