Morning Digest: ಡಿಕೆಶಿಗೆ HDK ಟಾಂಗ್, ಸ್ಮೃತಿ ಇರಾನಿ ಗರಂ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

  • Share this:
1.Karnataka Politics: ಸಿಎಂ ಆಗಲು ಬ್ಯಾಕ್ ಗ್ರೌಂಡ್ ಚೆನ್ನಾಗಿರಬೇಕು: ಡಿಕೆಶಿಗೆ HDK ಟಾಂಗ್

ಜನತೆಯ ಆರ್ಶೀವಾದ ಇರುವವರೆಗೆ ಏನು ಆಗಲ್ಲ. ರಾಮನಗರದಲ್ಲಿ (Ramanagara) ಶಿವಕುಮಾರ್ ಅವಕಾಶ ಕೇಳಿರುವುದು ತಪ್ಪಿಲ್ಲ. ಆದರೆ ಜನರ ಕಷ್ಟಸುಖಕ್ಕೆ ಕೆಲಸ ಮಾಡಿದ್ದೇನೆ ಮತ ಕೊಡಿ ಎಂದು ಕೇಳಬಹುದು. ಕೇವಲ ಅಧಿಕಾರಕ್ಕೆ ಮಾತ್ರ ಕೇಳಿದರೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. ಅವರ ಹಿಂದಿನ ಬ್ಯಾಕ್ ಗ್ರೌಂಡ್ ಗಳನ್ನ ನೋಡ್ತಾರೆ, ಯಾವ ತರಹದ ಬ್ಯಾಕ್ ಗ್ರೌಂಡ್ ಬೇಕು ಹೇಳಿ. ಎಲ್ಲಾ ತರಹ ಇದೆ. ಕನ್ನಡಿಯಲ್ಲಿ ತೋರಿಸಿದ್ದಾರೆ. ಕಳೆದ 25 ವರ್ಷದಲ್ಲಿ‌ ಕುಮಾರಸ್ವಾಮಿ ಸೋತಿದ್ದ ಎಂದಿದ್ದಾರೆ. ಅವರು ದೇವೇಗೌಡರ ವಿರುದ್ಧ ಸೋತಿದ್ದಾರೆ.‌ ನಾನು ರಾಜಕೀಯವಾಗಿ ಅಂಬೆಗಾಲು ಇಡುವಾಗ ಸೋತಿದ್ದೆ. ಅವರು ಗೆದ್ದಿದ್ದು ಇತಿಹಾಸ ಇದೆ. ಒಂದು ಕಥೆ ಬರೆಯಬಹುದು ಅವರು ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದರೆ ಜನ‌ತೀರ್ಮಾನ ಮಾಡ್ತಾರೆ. ಇಲ್ಲಿ ಸಿಎಂ ಆಗುವುದು ಮುಖ್ಯವಲ್ಲ, ಅವರ ನಡವಳಿಕೆ, ನಾಡಿನ ಸಮಸ್ಯೆ ಬಗ್ಗೆ ಅರಿವಿರಬೇಕು ಎಂದರು.‌

2.Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

ಕೇಂದ್ರ ಸಚಿವೆ (Central Minister) ಸ್ಮೃತಿ ಇರಾನಿ (Smriti Irani) ಕಾಂಗ್ರೆಸ್ ನಾಯಕರ (Congress Minister) ವಿರುದ್ದ ಕಾನೂನು ಸಮರ (Legal Fight) ಸಾರಿದ್ದಾರೆ. ಸ್ಮೃತಿ ಇರಾನಿ ಪುತ್ರಿ ಜೋಯಿಸ್ ಇರಾನಿ (Zoish Irani) ಗೋವಾದಲ್ಲಿ (Goa) ಸತ್ತವರ ಹೆಸರಲ್ಲಿ ಲೈಸೆನ್ಸ್ (Licence) ಪಡೆದು, ಅಕ್ರಮವಾಗಿ ಬಾರ್ (Illegal Bar) ನಡೆಸುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಆರೋಪ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ (Pawan Khera), ಜೈರಾಮ್ ರಮೇಶ್ (Jairam Ramesh), ನೆಟ್ಟಾ ಡಿಸೋಜಾ (Netta D' Souza) ಅವರಿಗೆ ಲೀಗಲ್ ನೋಟಿಸ್ (Legal Notice) ಕಳುಹಿಸಿದ್ದಾರೆ.

3.Gold and Silver Price: ಏರಿಕೆ ಕಂಡ ಬಂಗಾರದ ಬೆಲೆ, ಬೆಳ್ಳಿ ದರದಲ್ಲಿ ಇಳಿಕೆ! ನಿಮ್ಮೂರಲ್ಲಿ ರೇಟ್ ಎಷ್ಟಿದೆ ತಿಳಿಯಿರಿ

ಇಂದು ಮತ್ತೆ ಮಾರುಕಟ್ಟೆಯಲ್ಲಿ (Market) ಚಿನ್ನ ದುಬಾರಿಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 4,690 ರೂಪಾಯಿ ಆಗಿದೆ. ಕಳೆದೆರೆಡು ದಿನಗಳಿಗೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಮೇಲೆ 90 ರೂ ಹೆಚ್ಚಳವಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,960, ರೂ. 46,900, ರೂ. 46,900 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,960 ರೂ. ಆಗಿದೆ. ಬೆಂಗಳೂರಿನಲ್ಲೂ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಸಾಕಷ್ಟು ಇಳಿಕೆಯಾಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 612, ರೂ. 6,120 ಹಾಗೂ ರೂ. 61,200 ಗಳಾಗಿವೆ.

4.Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ! ಆಡಿಯೋದಲ್ಲಿ ನೋವು ತೋಡಿಕೊಂಡು ಸೂಸೈಡ್

ಪ್ರೀತಿಸಿದ ಯುವತಿ (Girl) ಕೈಕೊಟ್ಟಳು, ಮೋಸ ಮಾಡಿದಳು ಅಂತ ನೊಂದು ಯುವಕನೋರ್ವ (Boy) ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿವಾಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Madiwala Station Limit) ನಡೆದಿದೆ. ಮಣಿಕಂಠ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದು, ಇತ್ತೀಚಿಗೆ ಆಕೆ ಈತನನ್ನು ತೊರೆದು ಹೋಗಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ನೊಂದಿದ್ದ ಮಣಿಕಂಠ ತನ್ನ ರೂಮ್‌ನಲ್ಲೇ ನೇಣಿಗೆ (Hanging) ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ (Audio) ಮಾಡಿದ್ದು, ಅದರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.

5.Bengaluru: ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಮೋಸ: ವಿದ್ಯುತ್ ಬಿಲ್ ಪಾವತಿ ಹೆಸರಲ್ಲಿ ₹2.3 ಲಕ್ಷ ಪೀಕಿದ ಆರೋಪಿಗಳು

ವಿದ್ಯಾರಣ್ಯಪುರದ ನಿವಾಸಿ ಶ್ರೀರಾಮ್ ಕೆ.ವಿ (56) ಎಂಬುವರು, ಜುಲೈ 17ರಂದು ಬೆಸ್ಕಾಂ ಸಿಬ್ಬಂದಿ ಎಂದು ಹೇಳಿಕೊಂಡು ವ್ಯಕ್ತಿಯಿಂದ ಮೋಸ ಹೋಗಿದ್ದು, ಒಂದೂವರೆ ಲಕ್ಷ ಹಣ ಕಳೆದುಕೊಂಡಿದ್ದಾರೆ. ಶ್ರೀರಾಮ್ ಗೆ ಬೆಸ್ಕಾಂ ಪ್ರತಿನಿಧಿಗಳ ಸೋಗಿನಲ್ಲಿದ್ದ ವ್ಯಕ್ತಿಯಿಂದ ಒಂದು ಸಂದೇಶ ಬಂದಿತ್ತು. ಅದನ್ನು ನಂಬಿ ಹಣ ಪಾವತಿಸಿದ್ದೆ ಎಂದು ಶ್ರೀರಾಮ್ ದೂರಿನಲ್ಲಿ ತಿಳಿಸಿದ್ದಾರೆ. ಆ ವ್ಯಕ್ತಿಯು ಬಿಲ್ ಪಾವತಿಯ ಕುರಿತು ನವೀಕರಣವನ್ನು ಕೋರಿದರು. ನವೀಕರಣವನ್ನು ಸಲ್ಲಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದರು ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Published by:Mahmadrafik K
First published: