ಇದೇ 18ರಂದು ರಾಷ್ಟ್ರಪತಿ ಚುನಾವಣೆ (Presidential Election) ನಡೆಯಲಿದೆ. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ (NDA Candidate) ದ್ರೌಪದಿ ಮುರ್ಮು (Daupadi Murmu) ಹಾಗೂ ವಿಪಕ್ಷಗಳ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ (Yashwanth Sinha) ಕಣದಲ್ಲಿದ್ದಾರೆ. ಮತ್ತೊಂದೆಡೆ ಆಗಷ್ಟ್‌ನಲ್ಲಿ (August) ಉಪ ರಾಷ್ಟ್ರಪತಿ ಚುನಾವಣೆ (Vice Presidential Election) ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ (Governor) ಜಗದೀಪ್ ಧನಕರ್ (Jagdeep Dhankhar) ಆಯ್ಕೆಯಾಗಿದ್ದಾರೆ.
200ರ ಗುಜರಾತ್ ಗಲಭೆಯ (Gujarat Riots) ಬಳಿಕ ಅಂದು ರಾಜ್ಯದಲ್ಲಿದ್ದ ನರೇಂದ್ರ ಮೋದಿ ಸರ್ಕಾರವನ್ನು (Narendra Modi Government) ಉರುಳಿಸಲು ಕಾಂಗ್ರೆಸ್ (Congress) ತಂತ್ರ (Plan) ರೂಪಿಸಿತ್ತಾ? ಇಂಥದ್ದೊಂದು ಚರ್ಚೆ ಇದೀಗ ದೇಶದ ರಾಜಕೀಯ ವಲಯದಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ಗುಜರಾತ್ ಪೊಲೀಸ್ ಇಲಾಖೆಯ (Police Department) ವಿಶೇಷ ತನಿಖಾ ತಂಡವು (SIT) ಸೆಷನ್ಸ್ ನ್ಯಾಯಾಲಯಕ್ಕೆ (Sessions Court) ಸಲ್ಲಿಸಿದ ಪ್ರಮಾಣಪತ್ರ. ಅಂದಿನ ಮೋದಿ ನೇತೃತ್ವದ ರಾಜ್ಯ ಬಿಜೆಪಿ (BJP) ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕ (Congress Leader), ದಿ. ಅಹ್ಮದ್ ಪಟೇಲ್ (Late Ahmed Patel) ಅವರು ತೀವ್ರ ತಂತ್ರ ರೂಪಿಸಿದ್ದರು ಅಂತ ಅದರಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಈಗ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರ (BJP Leaders) ನಡುವೆ ಘರ್ಷಣೆಗೆ ಕಾರಣವಾಗಿದೆ.
3.National Highway: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣ ಬಂದ್
ಮಡಿಕೇರಿ (Madikeri) ನಗರದ ಡಿಸಿ ಕಛೇರಿ (DC Office) ಬಳಿ ತಡೆಗೋಡೆ ಕುಸಿಯುವ ಆತಂಕ ಎದುರಾದ ಹಿನ್ನೆಲೆ ಮಡಿಕೇರಿ-ಮಂಗಳೂರು (Madikeri To Mangaluru) ರಾಷ್ಟ್ರೀಯ ಹೆದ್ದಾರಿ 275ನ್ನು (National Highway 275) ನಿನ್ನೆ ರಾತ್ರಿಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಡಿಕೇರಿ ಟೋಲ್ ಗೇಟ್ (Madikeri Toll Gate) ಬಳಿಯೇ ಹೆದ್ದಾರಿ ಬಂದ್ (Highway Bandh) ಮಾಡಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಪರಿಣಾಮ ಮಡಿಕೇರಿ ಮತ್ತು ಮಂಗಳೂರು ನಡುವಿನ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
4.Karnataka Weather Report: ಮುಂದಿನ ಮೂರು ಈ ಭಾಗದಲ್ಲಿ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ಕರಾವಳಿ ಜಿಲ್ಲೆಗಳಲ್ಲಿ (Coastal District) ಮುಂದಿನ ಮೂರು ದಿನ ಮಳೆಯಾಗುವ (Rainfall)ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಎಲ್ಲಾ ನದಿಗಳು (Rivers) ತುಂಬಿ ಹರಿಯುತ್ತಿವೆ. ಜಲಾಶಯಗಳಿಂದ (Dams) ಅಪಾರ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದ್ದು, ನದಿ ತೀರಕ್ಕೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ (Western Hills) ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ (Belagavi) ಸಪ್ತನದಿಗಳು ಭರ್ತಿಯಾಗಿದ್ದು, ಪ್ರವಾಹದ (Flood) ಆತಂಕ ಎದುರಾಗಿದೆ.
5.Meghana Raj: ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ಮೇಘನಾ ರಾಜ್, ಚಿರು ಕನಸು ನನಸು ಮಾಡಿದ ಗೆಳೆಯರು
ನಟಿ ಮೇಘನಾ ರಾಜ್, ತಮ್ಮ ಅದ್ಭುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ಸುಂದರಿ ಕೆಲ ಕಾಲ ಸಿನಿಮಾದಿಂದ ದೂರವಿದ್ದರು. ಪತಿ ಚಿರಂಜೀವಿ ಸರ್ಜಾ ಅಗಲಿಕೆ ಹಾಗೂ ಮಗನ ಜನನದ ನಂತರ ಮೇಘನಾ ಬ್ರೇಕ್ ತೆಗೆದುಕೊಂಡಿದ್ದರು. ನಂತರ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಬಣ್ಣ ಹಚ್ಚಿದ್ದ ನಟಿ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಮೇಘನಾ ಸಿನಿಮಾಗಳನ್ನು ಮಾಡುವುದಾಗಿ ಬಹಳಷ್ಟು ಹಿಂದೆಯೇ ಹೇಳಿದ್ದರು. ಅಲ್ಲದೇ, ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿರುವ ಬಗ್ಗೆ ಸಹ ಮಾಹಿತಿ ನೀಡಿದ್ದರು. ಆದರೆ ಆ ಸಿನಿಮಾಗಳ ಬಗ್ಗೆ ಹೆಚ್ಚು ಅಪ್ಡೇಟ್ ಕೊಟ್ಟಿರಲಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಿನಿಮಾ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ