• Home
  • »
  • News
  • »
  • state
  • »
  • Morning Digest: ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕೊಡಗಿನಲ್ಲಿ ಭೂಕಂಪನ; ಮಳೆಗಾಗಿ ಶವದ ಬಾಯಿಗೆ ನೀರು! ಈ ಹೊತ್ತಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

Morning Digest: ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕೊಡಗಿನಲ್ಲಿ ಭೂಕಂಪನ; ಮಳೆಗಾಗಿ ಶವದ ಬಾಯಿಗೆ ನೀರು! ಈ ಹೊತ್ತಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ಹೆಂಡತಿ ಸಾವಿನ ನಂತರ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ


ಜೈಪುರ(ಜು.9): ಹೆಣ್ಣು ಈಗ ಸ್ವತಃ ತನ್ನ ಮನೆಯಲ್ಲಿಯೂ ಸುರಕ್ಷಿತಳಲ್ಲ. ಹೆಣ್ಣು ಮಕ್ಕಳ ಸುರಕ್ಷತೆಗೆ ಎಷ್ಟೇ ಕಾನೂನುಗಳು ಬಂದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕೊನೆಯಾಗಿಲ್ಲ. ಅಪ್ರಾಪ್ತ ಹೆಣ್ಣುಮಕ್ಕಳು, ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಯುವ ಪ್ರಕರಣಗಳು ಇಂದೂ ವರದಿಯಾಗುತ್ತಲೇ ಇದೆ. ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಮಗಳ (Minor Daughter) ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಸ್ವಂತ ಮಗಳನ್ನು ತಂದೆ (Father) ಅತ್ಯಾಚಾರ ಮಾಡುತ್ತಿದ್ದು ಈ ವಿಚಾರ ಬಯಲು ಮಾಡಿದರೆ ಆಕೆಯನ್ನು ಕೊಲ್ಲುವುದಾಗಿಯೂ ಬೆದರಿಸಿದ್ದಾನೆ.


ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನದ ಅನುಭವ!


ಕೊಡಗು: ಕಾವೇರಿಯ (Cauvery) ತವರೂರು ಕೊಡಗಿನ (Kodagu) ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಒಂದೆಡೆ ಭಾರೀ ಮಳೆಯಿಂದಾಗಿ (Heavy Rain) ಪ್ರವಾಹದ (Flood) ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ವಿಪರೀತ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಭೂಕುಸಿತ (Land Slides) ಉಂಟಾಗುತ್ತಿದೆ. ಇವು ಸಾಲದು ಎಂಬಂತೆ ಜಿಲ್ಲೆಯ ಹಲವೆಡೆ ಭೂಕಂಪನದ (Earth quake) ಅನುಭವ ಆಗುತ್ತಿದೆ. ಇಂದೂ ಕೂಡ ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ ಜನರ ಗಮನಕ್ಕೆ ಬಂದಿದೆ. ಕೊಡಗಿನ ಗಡಿ ಗ್ರಾಮ‌ ಚೆಂಬು ಸುತ್ತ-ಮುತ್ತ ನಿನ್ನೆ ರಾತ್ರಿ ಭೂಮಿಯಿಂದ ಜೋರಾದ ಶಬ್ದ (Sound) ಕೇಳಿಬಂದಿತ್ತು. ಇದೀಗ ಇಂದು ಮುಂಜಾನೆ 6:24ರ ಸಮಯದಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಮತ್ತೊಂದೆಡೆ ದಕ್ಷಿಣ ಕನ್ನಡ (Dakhsina Kannada) ಜಿಲ್ಲೆಯ ಸುಳ್ಯ (Sullya) ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಅಂತ ವರದಿಯಾಗಿದೆ.


ಇದನ್ನೂ ಓದಿ: Earthquake: ಕೊಡಗು, ಸುಳ್ಯ ಭಾಗದಲ್ಲಿ ಭೂಕಂಪನದ ಅನುಭವ! ಭಾರೀ ಮಳೆಯಿಂದಾಗಿ ಹೈರಾಣಾದ ಜನ


ಇಂದು, ನಾಳೆ ಛತ್ರಿಯಿಲ್ಲದೇ ಆಚೆ ಬರಬೇಡಿ! 


Karnataka Weather Report: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಭಾರೀ ಮಳೆ (Heavy Rainfall) ಸುರಿಯುತ್ತಿದ್ದು, ಸದ್ಯಕ್ಕೆ ಮಳೆ (Rain) ನಿಲ್ಲುವ ಯಾವುದೇ ಸಾಧ್ಯತೆ ಇಲ್ಲ. ರಾಜ್ಯ (State) ದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಪರದಾಡುತ್ತಿದ್ದಾರೆ.  ಕರಾವಳಿ (Coastal) ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ರಾಜ್ಯಾದ್ಯಂತ ಮುಂದಿನ 2 ದಿನಗಳ ಕಾಲ ಮಳೆ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು!


ವಿಜಯಪುರ: ವಿಜಯಪುರ (Vijayapur) ಜಿಲ್ಲೆಯ ಕೆಲ ಭಾಗಗಳಲ್ಲಿ ಈ ಮಳೆಗಾಲದಲ್ಲೂ ಸಹ ಬೇಸಿಗೆಯ (Summer) ಪರಿಸ್ಥಿತಿ ಇದೆಯಂತೆ. ಹೀಗಾಗಿ ಇಲ್ಲಿನ ಜನ ಮಳೆಗಾಗಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಬಾರದಿದ್ದರೆ ಒಂದಿಷ್ಟು ವಿಶೇಷ ಆಚರಣೆಗಳನ್ನು (Special Rituals) ಕೈಗೊಳ್ಳುತ್ತಾರೆ. ಕತ್ತೆ ಮದುವೆ (Donkey Marriage) ಮಾಡಿಸುವುದು, ಕಪ್ಪೆ ಮದುವೆ (Frog wedding) ಮಾಡಿಸುವುದು, ಗ್ರಾಮದ ದೇವರಿಗೆ (God) ಮೆಣಸಿನ ಕಾಯಿಯ ಖಾರ ಪೌಡರ್ ಹಚ್ಚುವುದು ಇತ್ಯಾದಿ ಮಾಡುತ್ತಾರೆ. ಹೀಗೆ ಮಾಡಿದ್ರೆ ಕೂಡಲೆ ಮಳೆ ಸುರಿಯುತ್ತದೆ ಎನ್ನುವುದು ನಂಬಿಕೆ. ಆದರೆ ವಿಜಯಪುರದ ಈ ಗ್ರಾಮದಲ್ಲಿ ಮಳೆ ಬರಲಿ ಅಂತ ಗ್ರಾಮಸ್ಥರೆಲ್ಲ ಶವದ (Dead Body) ಮೊರೆ ಹೋಗಿದ್ದಾರಂತೆ!


ಇದನ್ನೂ ಓದಿ: No Rain: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆ ಬರುತ್ತೆ ಅಂತ ಕಾದವರಿಗೆ ಆಗಿದ್ದೇನು?


ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ!


ತಿರುಪತಿ, ಆಂಧ್ರಪ್ರದೇಶ: ಮದುವೆ (Marriage) ಸ್ವರ್ಗದಲ್ಲೇ (Heaven) ನಿಶ್ಚಯವಾಗುತ್ತದೆ ಅಂತಾರೆ. ಆದ್ರೆ ಇಲ್ಲಿ ಮದುವೆ ಮೇಕಪ್‌ನಿಂದಾಗಿ (Make Up) ನಿಶ್ಚಯವಾಗಿತ್ತು. ತಾನು 30ರ ತರುಣಿ (Young Girl) ಅಂತ ಪೋಸ್ ಕೊಡುತ್ತಿದ್ದ 52ರ ವಯಸ್ಸಿನ ಆಂಟಿ (Aunty) ಈ ಕಥೆಯ ಕೇಂದ್ರ ಬಿಂದು. ಈಕೆ 30ರ ಹುಡುಗಿಯಂತೆ ಸ್ಪೆಷಲ್ (Special) ಆಗಿ ಮೇಕಪ್ ಮಾಡಿಕೊಂಡು, ಮದುವೆಯಾಗದ ನವ ತರುಣರನ್ನು (Young Boys) ಯಾಮಾರಿಸ್ತಾ ಇದ್ದಳು. ಒಂದಲ್ಲ, ಎರಡಲ್ಲ ಅಂತ ಮೂರು ಮದುವೆ ಆಗಿದ್ದಾಳೆ. ಇದೀಗ ಮೂರನೇ ಮದುವೆ ವೇಳೆ ಆಕೆಯ ಆಧಾರ್ ಕಾರ್ಡ್ (Aadhar Card) ನೋಡಿ ಆಕೆ ನಿಜವಾದ ವಯಸ್ಸು ಗೊತ್ತಾಗಿದೆ. ಆಕೆಗೆ 30 ವರ್ಷ ವಯ್ಸಸಲ್ಲ, 52 ವರ್ಷ ಅನ್ನೋದು ಗೊತ್ತಾಗಿದೆ. ಮೇಕಪ್‌ ಹಾಕಿದ್ದ ಆಕೆಯ ಅಂದ ನೋಡಿ ಮೆಚ್ಚಿಕೊಂಡು ಮದುವೆಯಾಗಿದ್ದ 3ನೇ ಗಂಡ (Husband), ಈಗ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾನೆ.

Published by:Annappa Achari
First published: