Morning Digest: ಕೊಡಗಿನಲ್ಲಿ ಜಲಸ್ಫೋಟ, ಕೊಪ್ಪಳದಲ್ಲೊಬ್ಬ ಪಾಪಿ ಮಗ, ಚಿನ್ನದ ಬೆಲೆ ಇಳಿಕೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Siddaramotsva: ಈ ಒಗ್ಗಟ್ಟು ಎಷ್ಟು ದಿನ ಇರುತ್ತೆ ನೋಡೋಣ: ಸಿ ಟಿ ರವಿ ಪ್ರಶ್ನೆ

ರಾಜ್ಯದಲ್ಲಿ ಮಳೆಯಿಂದ (Rainfall) 13 ಜನ ಮೃತಪಟ್ಟಿದ್ದಾರೆ. ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ (Siddaramaiah Amrith Mahotsava) ಕಾರ್ಯಕ್ರಮ ನಡೆಸಿದ್ದು ಎಷ್ಟು ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (BJP General Secretary CT Ravi) ಪ್ರಶ್ನಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಸಂವೇದನಾ ಶೀಲತೆ ಕಳೆದುಕೊಂಡಿದೆಯೇ ಎಂದ ಅವರು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು (National Leaders) ಬಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಡಿ ಹೊಗಳೋದು ಮಾನವೀಯತೆ ಇರುವರಿಗೆ ಶೋಭೆ ತರುವುದಿಲ್ಲ ಎಂದರು.ಒಗ್ಗಟ್ಟು ಎಷ್ಟು ದಿನ ಇರುತ್ತದೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ಇವತ್ತು ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇವರು ಪರಮೇಶ್ವರ್ ಅವರನ್ನು ಸೋಲಿಸಿದರು. ಈ ಒಗ್ಗಟ್ಟು ಎಷ್ಟು ದಿನ ಇರುತ್ತೇ ನೋಡೋಣ ಎಂದು ಲೇವಡಿ ಮಾಡಿದರು.

2.Mother: ಹೆತ್ತಮ್ಮನಿಗೆ ತುತ್ತು ಅನ್ನ ಹಾಕದ ಪಾಪಿ, ದೇವಸ್ಥಾನದಲ್ಲಿ ಬಿಟ್ಟು ಹೋದ! ಮಗನ ದಾರಿ ಕಾಯುತ್ತ ಕುಳಿತ ವೃದ್ಧ ತಾಯಿ

ವೃದ್ಧಾಪ್ಯದಲ್ಲಿದ್ದ ತಾಯಿಗೆ ತುತ್ತು ಅನ್ನ ಹಾಕಲು ಸಾಧ್ಯವಾಗದ ಬೇಜವಾಬ್ದಾರಿ ಮಗ, ಆಕೆಯನ್ನು ದೇವಸ್ಥಾನದಲ್ಲಿ (Temple) ಬಿಟ್ಟು ಹೋಗಿದ್ದಾನೆ. ಮಗ ಬರುತ್ತಾನೆ ಅಂತ ಕಾದು ಕುಳಿತ ತಾಯಿ, ಎಷ್ಟು ಹೊತ್ತಾದರೂ ಮಗ ವಾಪಸ್ ಬಾರದಿದ್ದಾಗ ಕಂಗಲಾಗಿದ್ದಾಳೆ. ಪಾಪಿ ಪುತ್ರನೊಬ್ಬ ತನ್ನ ವದ್ಧ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು, ಮೊಬೈಲ್ ನಂಬರ್ ಅಂತ ಖಾಲಿ ಹಾಳೆ ಕೊಟ್ಟು, ಈಗ ಬರುತ್ತೀನಿ ಅಂತ ಹೊರಟು ಹೋಗಿದ್ದಾನೆ. ಇತ್ತ ಮಗನನ್ನು ಕಾಣದೇ ತಾಯಿ ಕಂಗಾಲಾಗಿದ್ದಾಳೆ. ಇಂಥದ್ದೊಂದು ಘಟನೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ನಡೆದಿದೆ.

3.Gold and Silver Price: ಹಬ್ಬಕ್ಕೂ ಮುನ್ನವೇ ವರ ಕೊಟ್ಟ ಮಹಾಲಕ್ಷ್ಮೀ! ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,200 ಆಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,715 ಆಗಿದೆ. ಭಾರತದ ಮಾರುಕಟ್ಟೆಯಲ್ಲಿ ಇಂದು ಒಂದು ಗ್ರಾಂ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,715, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,144 ಆಗಿದೆ. ಎಂಟು ಗ್ರಾಂ (8GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,720, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,152 ಆಗಿದೆ.

4.Kodagu Rain: ಭಾರೀ ಶಬ್ಧದೊಂದಿಗೆ ಜಲಸ್ಫೋಟ, ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ನೀರು

ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ (Kodagu Rain) ದೊಡ್ಡ ಅವಘಡಗಳೇ ಸಂಭವಿಸುತ್ತಿವೆ. ಚೆಂಬು ಗ್ರಾಮ ಪಂಚಾಯಿತಿ (Chembu Gram Panchayt) ವ್ಯಾಪ್ತಿಯ ದಬ್ಬಡ್ಕ ಮತ್ತು ಅರೆಕಲ್ಲು ಭಾಗದಲ್ಲಿ ಜಲಸ್ಫೋಟವಾಗಿದ್ದು, ಜನರು ಆತಂಕದಲ್ಲಿದ್ದಾರೆ. ಬುಧವಾರ ಬೆಳಗ್ಗೆ 8.30 ರವರೆಗೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 128 ಮಿ.ಮೀ. ಮಳೆಯಾಗಿದೆ. ದಬ್ಬಡ್ಕದಲ್ಲಿ ಮಂಗಳವಾರ ತಡರಾತ್ರಿ ಹನ್ನೆರಡು ಗಂಟೆ ವೇಳೆಗೆ ಜಲಸ್ಫೋಟವಾಗಿದೆ.

5.Traveler: ಸ್ಕೇಟಿಂಗ್ ಬೋರ್ಡ್​ನಲ್ಲಿ ಕಾಶ್ಮೀರಕ್ಕೆ ಹೊರಟಿದ್ದ ಕೇರಳದ ಯುವಕ ಹರಿಯಾಣದಲ್ಲಿ ಸಾವು!

ಕೇರಳದ ಯುವಕನೊಬ್ಬ ಕಾಲ್ನಡಿಗೆಯಲ್ಲಿ ಮೆಕ್ಕಾಗೆ ಹೊರಟಿದ್ದ ಸುದ್ದಿ ವೈರಲ್ ಆಗಿತ್ತು. ಆದರೆ ಇಂಥಹ ಪ್ರಯಾಣ ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೋ ಅಷ್ಟೇ ಅಪಾಯಕಾರಿಯೂ ಹೌದು. ವಿಪರೀತ ಎಚ್ಚರಿಕೆಯಿಂದ ಪ್ರಯಾಣಿಸಬೇಕಾಗುತ್ತದೆ. ಆಘಾತಕಾರಿ ಘಟನೆಯೊಂದರಲ್ಲಿ, ಮಂಗಳವಾರ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಕೇರಳದ (Kerala) ಯುವಕ ಮೃತಪಟ್ಟಿದ್ದಾನೆ. ಸ್ಕೇಟ್‌ಬೋರ್ಡ್‌ನಲ್ಲಿ (Skateboard) ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ (Kashmir) ಪ್ರಯಾಣಿಸುತ್ತಿದ್ದ ಕೇರಳದ ಯುವಕ ಅನಾಸ್ ಹಜಾಸ್ ಅವರು ಟ್ರಕ್ (Truck) ಡಿಕ್ಕಿ ಹೊಡೆದು ಪ್ರಾಣ (Death) ಕಳೆದುಕೊಂಡಿದ್ದಾರೆ. ಅನಸ್ ಅವರು ಪಂಚಕುಲದ (Haryana) ಪಿಂಜೋರ್‌ನಿಂದ ನಲಗಢಕ್ಕೆ (Himachala Pradesh) ಹೋಗುತ್ತಿದ್ದರು.
Published by:Mahmadrafik K
First published: