Morning Digest: ಭಾರೀ ಮಳೆಗೆ ಎರಡು ಜೀವ ಬಲಿ, ಉಗ್ರ ಅಲ್-ಜವಾಹಿರಿ ಹತ್ಯೆ, ಇಳಿಕೆಯಾದ ಚಿನ್ನ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Rain Effects: ಎರಡು ಎಳೆ ಜೀವ ಬಲಿ ಪಡೆದ ಭಾರೀ ಮಳೆ! ಕೊಲ್ಲಮೊಗು,ಬಾಳುಗೋಡಿನಲ್ಲಿ ಭಾರೀ ನಷ್ಟ

ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಈ ಘಟನೆ ನಡೆದಿದೆ. ಸೋಮವಾರ ಸಂಜೆ ಸುರಿದ ಮಹಾ ಮಳೆಗೆ (Rain) ಸುಬ್ರಹ್ಮಣ್ಯ, ಕೊಲ್ಲಮೊಗರು,ಕಲ್ಮಕಾರು,ಬಾಳುಗೋಡು ಭಾಗದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಮಳೆಯ ಕಾರಣದಿಂದಾಗಿ ಮನೆ ಮೇಲೆ ಗುಡ್ಡ ಕುಸಿದು (Landslide) ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಪರ್ವತಮುಖಿ ನಿವಾಸಿ ಕುಶಾಲಪ್ಪ ಎನ್ನುವವರ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ದಾರುಣ ಸಾವು (Death) ಕಂಡಿದ್ದಾರೆ. ಶ್ರುತಿ (11) ಮತ್ತು ಗಾನ (6) ಸಾವಿಗೀಡಾದ ಮಕ್ಕಳಾಗಿದ್ದಾರೆ.

2.Al-Qaeda Al-Zawahari killed: ಈಗ ನ್ಯಾಯ ಸಿಕ್ಕಿದೆ: ಉಗ್ರ ಅಲ್-ಜವಾಹಿರಿ ಹತ್ಯೆ ಬೆನ್ನಲ್ಲೇ ಬೈಡೆನ್​ ಪ್ರತಿಕ್ರಿಯೆ!

ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು (Al-Qaeda Chief Al-Zawahiri) ಯುಎಸ್ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ಕೊಂದಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಸಮ್ಮೇಳನವೊಂದರಲ್ಲಿ ಇದನ್ನು ದೃಢಪಡಿಸಿದ್ದಾರೆ. 2011 ರಲ್ಲಿ ಅದರ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ (Osama Bin Laden)ಹತ್ಯೆಯ ನಂತರ ಸಂಘಟನೆಗೆ ಇದು ಎರಡನೇ ಹೊಡೆತ ಎಂದು ಯುಎಸ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಅಲ್ ಜವಾಹಿರಿ ಹತ್ಯೆಗೆ $25 ಮಿಲಿಯನ್ ಬಹುಮಾನ ಘೋಷಿಸಲಾಗಿತ್ತು.

3. Siddaramaiah: ಅಧಿಕಾರದ ರುಚಿ ನೋಡಿರೋ ಅಂಕಲ್​ಗೆ ರಾಜಕೀಯ ಕಂಟಿನ್ಯೂ ಮಾಡುವ ಆಸಕ್ತಿ ಇದೆ; Ashwath Narayan

ಆಗಸ್ಟ್ 3ರಂದು ಸಿದ್ದರಾಮೋತ್ಸವ ಆಚರಣೆಗೆ (Siddaramotsva Celebration) ಸಚಿವ ಅಶ್ವಥ್ ನಾರಾಯಣ್ (Minister CN Ashwath Narayan) ವ್ಯಂಗ್ಯವಾಡಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ರಂಗನಾಥ ಸ್ವಾಮಿ (Ranganath Swamy Temple)‌ ದರ್ಶನ ಪಡೆದು ಮಾತನಾಡಿದ ಅಶ್ವಥ್ ನಾರಾಯಣ, ಸಿದ್ದರಾಮಯ್ಯರಿಗೆ (Siddarmaiah) 75 ವರ್ಷ ಆಗಿದೆ ಅದಕ್ಕೆ ಮನೆಗೆ ಹೋಗಪ್ಪಾ ಅಂತ ಕಳಿಸ್ತಿದ್ದಾರೆ. ಗುಡ್ ಬಾಯ್ ಅಂತ ಹೇಳೋದಿಕ್ಕೆ ಕಾರ್ಯಕ್ರಮ ಮಾಡ್ತಿದ್ದಾರೆ. ಹಿಂದೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ತಿನಿ ಅಂದಿದ್ರು, ಅಧಿಕಾರದ ರುಚಿ ನೋಡಿರೋ ಅಂಕಲ್ ಗೆ ರಾಜಕೀಯ ಕಂಟಿನ್ಯೂ ಮಾಡುವ ಆಸಕ್ತಿ ಇದೆ.‌ ಆದರೆ ಜನ ಈ ಕಾಲಕ್ಕೆ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ.‌ ದುರಾಸೆ ಬಿಟ್ಟು ಗೌರವಾನ್ವಿತವಾಗಿ ಯುವಕರಿಗೆ ಅವಕಾಶ ಮಾಡಿಕೊಡಲಿ. ಇನ್ನಾದರೂ ಅವರಿಗೆ ದುರಾಸೆ ಹೋಗಿ ತಿಳುವಳಿಕೆ ಬರಲಿ ಎಂದರು.

4.Gold Price Today: ಮತ್ತೆ ಇಳಿಕೆಯಾಯ್ತು ಚಿನ್ನದ ಬೆಲೆ; ಖರೀದಿಗೂ ಮುನ್ನ ಇವತ್ತಿನ ದರ ಚೆಕ್ ಮಾಡ್ಕೊಳ್ಳಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಇಳಿದಿದೆ. ಕಳೆದ ಹಲವು ದಿನಗಳನ್ನು ಗಮನಿಸಿದರೆ ಚಿನ್ನವು ಮುಂಚೆ ಇದ್ದ ಬೆಲೆಗಿಂತ ಈ ದಿನಮಾನಗಳಲ್ಲಿ ಸ್ವಲ್ಪ ಕುಸಿತದ ಹಾದಿಯಲ್ಲೇ ಸಾಗುತ್ತಿರುವುದು ಕಂಡುಬರುತ್ತದೆ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,150 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,950, ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,250 ರೂ. ಆಗಿದೆ. (ಸಾಂದರ್ಭಿಕ ಚಿತ್ರ)

5.Viral Video: ಪಾರಿವಾಳದ ಬ್ಯಾಕ್ ಫ್ಲಿಪ್ ವೀಡಿಯೋ ಸಖತ್ ವೈರಲ್; ನೋಡಿ ಬೆರಗಾದ ನೆಟ್ಟಿಗರು

ಪ್ರಕೃತಿಯಲ್ಲಿನ ಸೌಂದರ್ಯಕ್ಕೆ ಇಲ್ಲಿರುವ ವಿಭಿನ್ನವಾದ ಪ್ರಾಣಿಗಳು (Animals), ಸಸ್ಯಗಳು (Plants), ಜಲ ರಾಶಿಗಳು, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಪಕ್ಷಿಗಳು ಹೀಗೆ ವೈವಿಧ್ಯಮಯವಾದ ಸಕಲ ಜೀವರಾಶಿಗಳೇ ಪ್ರಮುಖವಾದ ಕಾರಣ. ಅದರಲ್ಲೂ ಪಕ್ಷಿಗಳ (Birds) ಬಣ್ಣ, ನಡಿಗೆ, ಅವುಗಳ ಕುಣಿತ (Bird Dance) ನೋಡುವುದೇ ಚೆಂದ. ಇದೀಗ ಪಾರಿವಾಳ ಬ್ಯಾಕ್ ಫ್ಲಿಪ್ (Backflips) ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದದಲ್ಲಿ (Social Media) ಸಖತ್ತಾಗಿ ವೈರಲ್ (Viral) ಆಗುತ್ತಿದೆ ಮತ್ತು ಇದನ್ನು ನೋಡಿದ ನೆಟ್ಟಿಗರು (Netizens) ಪಾರಿವಾಳದ (Pigeon) ಸೌಂದರ್ಯಕ್ಕೆ ಬೆರಗಾಗಿದ್ದಾರೆ.
Published by:Mahmadrafik K
First published: