Morning Digest: ರಾಜ್ಯದಲ್ಲಿ ಇಂದು ಮೋಡ ಕವಿದ ವಾತಾವರಣ- ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ದರ: ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ಚಳಿಗಾಲ ಇದ್ರೂ ರಾಜ್ಯದಲ್ಲಿ ಮಳೆ; ಹಲವೆಡೆ ಮೋಡ ಕವಿದ ವಾತಾವರಣ

Karnataka Weather Report: ಚಳಿಗಾಲ ಇದ್ರೂ ರಾಜ್ಯದ ಹಲವು ಕಡೆ ಮಳೆ(Rainfall)ಯಾಗುತ್ತಿದೆ. ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur) ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಯ ಪ್ರತ್ಯೇಕ ಕಡೆ ಮಳೆಯಾಗುತ್ತಿರುವ ವರದಿಗಳು ಆಗುತ್ತಿವೆ. ಈ ನಡುವೆ ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಸಹ ಎಂದಿನಂತೆ ಮುಂದುವರಿದಿದೆ. ಬೀದರ್, ಯಾದಗಿರಿ ಭಾಗದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಜ್ಯದಲ್ಲಿಯ ಹವಾಮಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು, ಮೋಡ ಕವಿದ ವಾತಾವರಣದ ಜೊತೆ ಬೆಳಗಿನ ಜಾವ ಇಬ್ಬನಿ ಸಹ ಬೀಳುತ್ತಿದೆ.

Gold And Silver Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ: ಇಲ್ಲಿದೆ ನೋಡಿ ಇವತ್ತಿನ ಬೆಲೆ

Gold Rate on Jan 15, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಯಥಾಸ್ಥಿತಿ ಇದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,980 ರೂ. ಇತ್ತು. ಇಂದು 100 ರೂ. ಏರಿಕೆಯಾಗಿದ್ದು 47,080 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,980 ರೂ. ಇತ್ತು. ಇಂದು 100 ರೂ. ಏರಿಕೆಯಾಗಿ 49,080 ರೂ. ಆಗಿದೆ.

Petrol And Diesel Price Today: ರಾಜ್ಯದ ಎಲ್ಲಾ ನಗರಗಳ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಇಂಧನ ಬೆಲೆ ಏರಿಳಿತ ಕಂಡಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ

SBI ಗ್ರಾಹಕರಿಗೆ ಶುಭ ಸುದ್ದಿ: FD ದರದಲ್ಲಿ ಹೆಚ್ಚಳ: ಮೊದಲು ಎಷ್ಟಿತ್ತು? ಈಗ ಎಷ್ಟಿದೆ?

ನಿಮ್ಮ ಖಾತೆಯು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank Of India) ಅಂದರೆ ಇದು ನಿಮಗೆ ಒಳ್ಳೆಯ ಸುದ್ದಿಯಾಗಿದೆ. ವಾಸ್ತವವಾಗಿ, ಎಸ್‌ಬಿಐ ಸ್ಥಿರ ಠೇವಣಿಗಳ ಬಡ್ಡಿದರಗಳನ್ನು (SBI FD Interest Rate) ಅಂದರೆ ಎಫ್‌ಡಿಯನ್ನು ಶನಿವಾರ ಹೆಚ್ಚಿಸಲು ಘೋಷಿಸಿದೆ. ಇತ್ತೀಚೆಗೆ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಕೂಡ ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಬ್ಯಾಂಕ್ ಈ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು (10 Basis Points) ಅಂದರೆ ಶೇಕಡಾ 0.10 ರಷ್ಟು ಹೆಚ್ಚಿಸಿದೆ.

Election Commissionನಿಂದ ಮಹತ್ವದ ಘೋಷಣೆ: ಐದು ರಾಜ್ಯಗಳಲ್ಲಿ ಜ. 22ರವೆಗೂ ಚುನಾವಣಾ ಸಮಾವೇಶಗಳಿಗೆ ನಿಷೇಧ

ಪಂಚ ರಾಜ್ಯಗಳಲ್ಲಿ ಈಗಾಗಲೇ ಚುನಾವಣಾ ದಿನಾಂಕ ಪ್ರಕಟಿಸಿ ಆಯೋಗ (Election Commission) ಘೋಷಣೆ ಹೊರಡಿಸಿದೆ. ಈ ಬೆನ್ನಲ್ಲೇ ಉತ್ತರಖಂಡ, ಗೋವಾ, ಪಂಜಾಬ್​, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗೆದರಿದೆ. ಚುನಾವಣೆಗೆ ಇನ್ನೇನು ತಿಂಗಳು ಬಾಕಿ ಇರುವ ಹಿನ್ನಲೆ ಪಂಚ ರಾಜ್ಯಗಳಲ್ಲಿ (Five State Election) ಅಭ್ಯರ್ಥಿಗಳ ಪಟ್ಟಿಯನ್ನು ಅನೇಕ ಪಕ್ಷಗಳು ಹೊರಡಿಸಿದೆ. ಮತದಾರರ ಸೆಳೆಯಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದೀಗ ಚುನಾವಣಾ ಆಯೋಗ ಬಿಗ್​ ಶಾಕ್​ ನೀಡಿದೆ. ದೇಶದಲ್ಲಿ ಕೋವಿಡ್​ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಚುನಾವಣಾ ಸಮಾವೇಶ, ರೋಡ್​ ಶೋ ಮೇಲೆ ನಿಷೇಧ ವಿಧಿಸಿ ಚುನಾವಣಾ ಆಯೋಗ ಘೋಷಣೆ ಹೊರಡಿಸಿದೆ.
Published by:Sandhya M
First published: