Morning Digest: ಕಡಿಮೆಯಾಯ್ತು ಹಳದಿ ಲೋಹದ ಬೆಲೆ, ಏರಿಕೆ ಕಂಡ ಪೆಟ್ರೋಲ್ ದರ: ಬೆಳಗಿನ ಟಾಪ್​​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today: ರಾಜ್ಯದಲ್ಲಿ ಮುಂದುವರಿದ ಚಳಿ: ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ?

Karnataka Weather Report, Dec 22, 2021: ರಾಜ್ಯದಲ್ಲಿ ಇವತ್ತು ಸಹ ಚಳಿ (Cold) ಇರಲಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದಿನ ಎರಡ್ಮೂರು ದಿನ ಇದೇ ರೀತಿಯ ವಾತಾವರಣ ಇರಲಿದೆ. ಈ ವರ್ಷ ಮಳೆಗಾಲ ಮುಗಿದ್ರೂ ವರುಣನ (Rainfall) ಅಬ್ಬರ ಕಡಿಮೆ ಆಗಿರಲಿಲ್ಲ, ಡಿಸೆಂಬರ್ ಮೊದಲ ವಾರದವರೆಗೂ ರಾಜ್ಯದಲ್ಲಿ ಮಳೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆ ಪ್ರಮಾಣ ಇಳಿಕೆಯಾಗಿದ್ದು, ಶೀತಗಾಳಿ ಶುರುವಾಗಿದೆ. ಕರಾವಳಿ (Coastal Karnataka) ಭಾಗದಲ್ಲಿ ಶುಷ್ಕ ವಾತಾವರಣದ ಜೊತೆ ಶೀತ ಹವಾಮಾನ (Cold Wave) ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 26 ಮತ್ತು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. 

Gold Price Today: ಇವತ್ತಿನ ಚಿನ್ನದ ಬೆಲೆ ಕೇಳಿದ್ರೆ ನೀವೂ ಖರೀದಿಗೆ ಹೋಗೋದು ಫಿಕ್ಸ್!

Gold Rate on Dec 22, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,640 ರೂ.ಇತ್ತು,ಇಂದು 230 ರೂ. ಇಳಿಕೆಯಾಗಿದ್ದು 47,410 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,640 ರೂ. ಇತ್ತು, ಇಂದು 230 ರೂ. ಇಳಿಕೆಯಾಗಿದ್ದು, 48,410 ರೂ. ಆಗಿದೆ.

Petrol And Diesel Price: ನಿಮ್ಮ ಜಿಲ್ಲೆಯ ಇವತ್ತಿನ ಪೆಟ್ರೋಲ್, ಡೀಸೆಲ್ ದರದ ಮಾಹಿತಿ ಇಲ್ಲಿದೆ

Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

Afghanistan: ಸುಮ್ಮನಿರಲಾರದೇ ತಜಕಿಸ್ತಾನಕ್ಕೆ 6 ಕೋಟಿ ಹಣ ವರ್ಗಾವಣೆ ಮಾಡಿ ಇಂಗು ತಿಂದ ಮಂಗನಂತೆ ಆದ ಅಫ್ಘನ್ ತಾಲಿಬಾನ್ ಸರ್ಕಾರ

ತಾಲಿಬಾನ್‌ (Taliban) ಉಗ್ರರು, ಅಫ್ಘಾನಿಸ್ತಾನ (Afghanistan) ವಶಪಡಿಸಿಕೊಂಡ ಬಳಿಕ ಇಡೀ ದೇಶವ ಜೈಲಿನಂತಾಗಿದೆ. ನಾಗರಿಕರೆಲ್ಲಾ ಬದುಕಿದ್ದರೂ ಸತ್ತವರಂತೆ ಜೀವನ (Life) ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಒಂದೆಡೆ ತಾಲಿಬಾನ್ ಉಗ್ರರು ದಾಳಿ ಹಾಗೂ ಕಟ್ಟು ನಿಟ್ಟಾದ ಷರಿಯಾ (Shariya) ನಿಯಮ (Law), ಮತ್ತೊಂದೊಡೆ ಬಾಂಬ್ ಸ್ಫೋಟಗಳಿಂದ ಜನರು ಅಕ್ಷರಶಃ ನರಕದಲ್ಲಿ ದಿನದೂಡುತ್ತಿದ್ದಾರೆ. ಇದರ ನಡುವೆ ಆಡಳಿತ ನಡೆಸಲು ಬರೆದ ತಾಲಿಬಾನ್ ಉಗ್ರರು ಪ್ರತಿನಿತ್ಯ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.. ಆರಂಭದಲ್ಲಿ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಚಿಕ್ಕ ಮಕ್ಕಳಂತೆ ಆಡಿ ವಿಶ್ವದ ಮುಂದೆ ನಗೆಪಾಟಲಿಗೆ ಈಡಾಗಿದ್ದ ತಾಲಿಬಾನ್ ಉಗ್ರರು ಈಗ ಹಣಕಾಸು ವಿಷಯದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡು, ಬಾಲ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದಾರೆ.
Published by:Sandhya M
First published: