Morning Digest: ಸಿಐಡಿ ನೋಟಿಸ್‌ಗೆ ಪ್ರಿಯಾಂಕ್ ಖರ್ಗೆ ಉತ್ತರ, ರಾಹುಲ್ ಬಗ್ಗೆ ಬಿಜೆಪಿ ವ್ಯಂಗ್ಯ! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಇಂದಿನ ಟಾಪ್ ಸುದ್ದಿಗಳು

ಇಂದಿನ ಟಾಪ್ ಸುದ್ದಿಗಳು

  • Share this:
Priyank Kharge: ಸಿಐಡಿ ನೋಟಿಸ್‌ಗೆ ಉತ್ತರ ಕೊಟ್ಟ ಪ್ರಿಯಾಂಕ್ ಖರ್ಗೆ, 6 ಪುಟಗಳ ಸುದೀರ್ಘ ಪತ್ರದಲ್ಲಿ ಏನಿದೆ?

ಬೆಂಗಳೂರು: ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಪಿಎಸ್‌ಐ ಅಕ್ರಮ ಪರೀಕ್ಷೆ ಹಗರಣದ (PSI Exam Scam) ತನಿಖೆ (Enquiry) ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ (Main Accused) ದಿವ್ಯಾ ಹಾಗರಗಿ (Divya Hagaragi) ಸೇರಿದಂತೆ ಅನೇಕರನ್ನು ಬಂಧಿಸಿರುವ ಸಿಐಡಿ (CID), ಅವರದಿಂದ ಮಹತ್ವದ ದಾಖಲೆ ಕಲೆಹಾಕುತ್ತಿದೆ.

ಈ ನಡುವೆ ಕಾಂಗ್ರೆಸ್ ನಾಯಕ (Congress Leader), ಮಾಜಿ ಸಚಿವ (Ex Minister) ಹಾಗೂ ಕಲಬುರಗಿಯ (Kalaburagi) ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ (MLA) ಆಗಿರುವ ಪ್ರಿಯಾಂಕ್ ಖರ್ಗೆ (Priyank Kharge), ಸಿಡಿಐ ನೀಡಿದ್ದ ಮೂರೂ ನೋಟಿಸ್‌ಗೂ (Notice) ಲಿಖಿತ (Written) ರೂಪದಲ್ಲಿ ಉತ್ತರ ನೀಡಿದ್ದಾರೆ. 6 ಪುಟಗಳ ಲಿಖಿತ ಉತ್ತರದ ಪತ್ರವನ್ನು ತಮ್ಮ ಸಹಾಯಕರ ಮೂಲಕ ಸಿಐಡಿ ಅಧಿಕಾರಿಗಳಿಗೆ ತಲುಪಿಸಿದ್ದಾರೆ.

"WHO data ಹಾಗೂ ಕಾಂಗ್ರೆಸ್ 'ಬೇಟಾ' ಎರಡೂ ತಪ್ಪು"! ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ವ್ಯಂಗ್ಯ

ನವದೆಹಲಿ: ಭಾರತದಲ್ಲಿ (India) ಕೋವಿಡ್‌ನಿಂದ (Covid) ಉಂಟಾದ ಸಾವಿನ (Death) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ವರದಿ (Report) ಈಗ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಕೋವಿಡ್‌ ವೈರಸ್‌ ಸೋಂಕಿನಿಂದ ಗರಿಷ್ಠ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಜಾಗತಿಕ ಮಟ್ಟದಲ್ಲಿ ಕೂಡ ದಾಖಲಾದ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿನ ಸಾವು ಭಾರತದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ. ಅದರ ವರದಿ ಪ್ರಕಾರ ಭಾರತದಲ್ಲಿ ಕೋವಿಡ್‌ನಿಂದ ಬರೋಬ್ಬರಿ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತ ಸರ್ಕಾರ (Indian Government) ಅಧಿಕೃತವಾಗಿ ಘೋಷಿಸಿದ್ದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಇದೀಗ ರಾಹುಲ್‌ ವಿರುದ್ಧ ಬಿಜೆಪಿ (BJP) ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: "WHO data ಹಾಗೂ ಕಾಂಗ್ರೆಸ್ 'ಬೇಟಾ' ಎರಡೂ ತಪ್ಪು"! ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ವ್ಯಂಗ್ಯ

Mohan Juneja: KGF 2 ಖ್ಯಾತಿಯ ನಟ ಮೋಹನ್ ಜುನೇಜ ಇನ್ನಿಲ್ಲ

ಹೆಸರಾಂತ ಹಾಸ್ಯ ಕಲಾವಿದ  ಮೋಹನ್ ಜುನೇಜ (Mohan Juneja) ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ (Sapthagiri Hopsital) ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ (Treatment) ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ (Bengaluru) ಸಪ್ತಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೋಗಿ ಸಿನಿಮಾ ಸೇರಿದಂತೆ ಹಲವು‌ ಸಿನಿಮಾ (Cinema) ಹಾಗು ಧಾರವಾಹಿಗಳಲ್ಲಿ (Serial) ‌ನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ! ನಿಮ್ಮೂರಲ್ಲಿ ಆಭರಣಗಳ ಬೆಲೆ ಎಷ್ಟಿದೆ ನೋಡಿ

Gold and Silver Price on May 7, 2022: ನೀವು ಆಭರಣ (Jewellery) ಪ್ರಿಯರೇ ಅಥವಾ ಚಿನ್ನ (Gold) ಖರೀದಿಯಲ್ಲಿ (Buy) ಆಸಕ್ತಿ ಹೊಂದಿದ್ದೀರೆ? ಇಂದು ಚಿನ್ನ ಅಥವಾ ಬೆಳ್ಳಿ (Silver) ಖರೀದಿಸಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್ (Good News) ಇಲ್ಲಿದೆ. ವೀಕೆಂಡ್‌ನಲ್ಲಿ (Weekend) ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ (Price) ಕೊಂಚ ಇಳಿಕೆಯಾಗಿದೆ.

ನಿನ್ನೆ ದೇಶದ ಅನೇಕ ನಗರಗಳಲ್ಲಿ ಏರಿಕೆಯಾಗಿ ಗ್ರಾಹಕರಿಗೆ (Customers) ಶಾಕ್ ನೀಡಿದ್ದ ಚಿನ್ನಾಭರಣ, ಇಂದು ಮತ್ತೆ ತನ್ನ ಬೆಲೆಯನ್ನು ಇಳಿಸಿಕೊಂಡಿದೆ. ಇಂದು ಭಾರತದ ಚಿನ್ನದ ಮಾರುಕಟ್ಟೆಯಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,138 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿಯೂ (Bengaluru) 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,138 ರೂಪಾಯಿ ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ: Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ! ನಿಮ್ಮೂರಲ್ಲಿ ಆಭರಣಗಳ ಬೆಲೆ ಎಷ್ಟಿದೆ ನೋಡಿ

Kiccha Sudeep: ಕನ್ನಡ ಸಿನಿಮಾ ನೋಡಿ ಕೊಂಡಾಡಿದ ಕಿಚ್ಚ! 'ಆ' ನಟನ ಪರ್ಫಾಮೆನ್ಸ್​ಗೆ ಸುದೀಪ್​ ಫಿದಾ

ಕಿಚ್ಚ ಸುದೀಪ್​ ಮೊದಲಿನಿಂದಲೂ ಯಂಗ್​ ಟ್ಯಾಲೆಂಟ್ಸ್​​ಗೆ ಸರ್ಪೋಟ್​ ಮಾಡಿಕೊಂಡು ಬಂದಿದ್ದಾರೆ. ಸಮಯ ಸಿಕ್ಕಾಗೆಲ್ಲ ಕಿಚ್ಚ ಹೊಸಬರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ. ಮಂಗಳಾದೇವಿಯ ರಕ್ತ ಸಿಕ್ತ ಕಥೆ ಹೊಂದಿರುವ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಹೊಗಳಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾವನ್ನು ನಿನ್ನೆಯಷ್ಟೆ (ಮೇ 05) ರಂದು ವೀಕ್ಷಿಸಿರುವ ಸುದೀಪ್, ಟ್ವಿಟ್ಟರ್‌ನಲ್ಲಿ ಉದ್ದದ ಪತ್ರವೊಂದನ್ನು ಬರೆದು ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Annappa Achari
First published: