Morning Digest: ಪಿಎಸ್ಐ ಎಕ್ಸಾಂ ಹಗರಣದ ಅಪ್‌ಡೇಟ್ಸ್, ಮೇ 19ರವರೆಗೆ ಸಿಗಲ್ಲ ಎಣ್ಣೆ! ಯಶ್ ಮುಂದಿನ ಸಿನಿಮಾ ಯಾವುದು?

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದ (PSI Exam Scam) ತನಿಖೆ (Enquiry) ಮುಂದುವರೆದಿದೆ. ಪ್ರಕರಣದ ಕಿಂಗ್ ಪಿನ್ (King Pin) ದಿವ್ಯಾ ಹಾಗರಗಿ (Divya Hagaragi) ಬಂಧನದ ಬಳಿಕ ಆಕೆಯ ವಿಚಾರಣೆ ತೀವ್ರ ಗೊಂಡಿದೆ. ಈ ನಡುವೆ ಕೆಲವೊಂದು ಸುಳಿವಿನ ಆಧಾರದ ಮೇಲೆ ಅನೇಕ ಆರೋಪಿಗಳನ್ನು (Accused) ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ದಿವ್ಯಾ ಹಾಗರಗಿ ಸೇರಿದಂತೆ ಆರೋಪಿಗಳ ಬಣ್ಣ ಬಣ್ಣದ ಬದುಕಿನ ವಿಚಾರಗಳು ಒಂದೊಂದಾಗೇ ಹೊರಕ್ಕೆ ಬರುತ್ತಿವೆ. ಪಿಎಸ್ಐ ಪರೀಕ್ಷೆ ಮುಗಿದ ಮೇಲೆ ಆರೋಪಿಗಳು ಕಿಂಗ್ ಪಿನ್ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ (Group Photo) ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಸಂಬಂಧ ಫೋಟೋ ಒಂದು ಓಡಾಡುತ್ತಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಎಸ್ಐ ಕಿಂಗ್ ಪಿನ್ ದಿವ್ಯಾ ಹಾಗರಗಿ ಜೊತೆ ಅಧಿಕಾರಿಗಳ ಗ್ರೂಪ್ ಫೋಟೋ ಇದು ಎನ್ನಲಾಗುತ್ತಿದೆ. ಪಿಎಸ್ಐ ಪರೀಕ್ಷೆಗೆ ದಿವ್ಯಾ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ, ಸಿಬ್ಬಂದಿ ವರ್ಗದ ಗ್ರೂಪ್ ಫೋಟೋ ಇದಾಗಿದ್ದು, ಎಕ್ಸಾಂ ಮುಗಿದ್ಮೇಲೆ ಪಿಎಸ್ಐ ಡೀಲರ್ಸ್ ಗ್ರೂಪ್ ಫೋಟೋ ತೆಗೆಸಿದ್ರಾ ಎಂಬ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ: PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

Love Jihad: ದಲಿತ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಲವ್ ಜಿಹಾದ್‌ಗಾಗಿ ನಡೆದಿತ್ತಾ ವಾಮಾಚಾರ?

ಮಂಗಳೂರು: ಕೇರಳ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್ ಗೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ಮೇ 4 ರಂದು ನಡೆದ ಘಟನೆಯೂ ಸೇರಿಕೊಂಡಿದೆ.

ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಲಿತ ಸಮುದಾಯದ ಸಂಜೀವ ಮತ್ತು ಗೀತಾ ದಂಪತಿಗಳ 14 ವರ್ಷದ ಪುತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.  14 ವರ್ಷ ಪ್ರಾಯದ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆತ್ಮಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿಗೆ ಅನ್ಯಕೋಮಿನ ಯುವಕ ಕಾರಣ ಎಂದು ಬಾಲಕಿ ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Crime News: ಓವರ್ ಹೆಡ್ ಟ್ಯಾಂಕ್​ನಲ್ಲಿ ಮಹಿಳೆಯ ಮೃತದೇಹ, ತುಂಡಾದ ಕಾಲು! ಬೆಚ್ಚಿಬೀಳಿಸೋ ಮರ್ಡರ್​ ಸ್ಟೋರಿ ರಿವೀಲ್

ರಾಮನಗರ(ಮೇ.06): ಕಳೆದ ವರ್ಷ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಕೆಲವೇ ದಿನಗಳಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತೇವೆಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ಚನ್ನಪಟ್ಟಣ ಕೋರ್ಟ್ (Court) ಪಕ್ಕದಲ್ಲಿ ಸಿಕ್ಕಿರುವ ಅಪರಿಚಿತ ಮಹಿಳೆಯ ಮೃತ ದೇಹದ (Dead body) ಚಹರೆ ಕೊನೆಗೂ ಪತ್ತೆಯಾಗಿದೆ. ಕೊಲೆಯಾದ ಮಹಿಳೆ (Woman) ಯಾರು ಬಗ್ಗೆ ಸುಳಿವು ದೊರೆತಿದೆ. ಪೊಲೀಸ್ ಇಲಾಖೆಗೆ ಕಠಿಣ ಸವಾಲಾಗಿದ್ದ ಈ ಪ್ರಕರಣವನ್ನ (Case) ಭೇದಿಸುವಲ್ಲಿ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Liquor Vendors Strike: ಮದ್ಯ ಪ್ರಿಯರಿಗೆ ಶಾಕ್; ರಾಜ್ಯದಲ್ಲಿ ಮೇ 19ರವರೆಗೆ ಸಿಗೋದಿಲ್ಲ ಎಣ್ಣೆ

ಇಂದಿನಿಂದ ಮೇ 19 ರವರೆಗೂ ಮದ್ಯ ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದು, ಹೊಸಪೇಟೆ, ಬೆಳಗಾವಿ, ಮೈಸೂರು, ಮಂಗಳೂರು ವಿಭಾಗದಲ್ಲಿ ಮದ್ಯ ಸಿಗೋದಿಲ್ಲ. ಈ ಕುರಿತು ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಿಸಿದ್ದಾರೆ. ಒಂದು ದಿನ ಮದ್ಯ ಖರೀದಿ ಮಾಡದಿದ್ರೆ ರಾಜ್ಯ ಸರ್ಕಾರಕ್ಕೆ 70 ಕೋಟಿ ರೂಪಾಯಿ ನಷ್ಟವಾಗುತ್ತೆ. ಹೀಗಾಗಿ ವಿಭಾಗ ಮಟ್ಟದಲ್ಲಿ ಮದ್ಯ ಖರೀದಿಯನ್ನು ನಿಲ್ಲಿಸಲು ನಿರ್ಧಾರ ಮಾಡಲಾಗಿದೆ.

Yash: ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿ ಭಾಯ್​, ಡೈರೆಕ್ಟರ್​ ಫಿಕ್ಸ್​-ಕ್ಯಾರೆಕ್ಟರ್​ ಕೂಡ ರಿವೀಲ್​!

ಕೆಜಿಎಫ್ 2  ಸಿನಿಮಾ ನಂತ್ರ ರಾಕಿಂಗ್ ಸ್ಟಾರ್ ಯಶ್ ಹವಾ ನಮ್ಮ ನುಡಿ ಮತ್ತು ಗಡಿ‌ ಎರಡನ್ನು ದಾಟಿ ನಿಂತಿದೆ. ರಾಕಿಗೆ ಸಿನಿಮಾ ಮಾಡಲು ನಾ ಮುಂದು ತಾ ಮುಂದು ಅಂತ ಪ್ಯಾನ್ ಇಂಡಿಯಾ ಪ್ರೊಡಕ್ಷನ್ ಹೌಸ್​ಗಳು ಕ್ಯೂ ನಿಂತಿವೆ. ಆದ್ರೆ ರಾಕಿ ನಡೆ ಮಾತ್ರ ಇನ್ನೂ ನಿಗೂಢವಾಗಿದ್ದು, ಯಶ್ ಯಾವ ನಿರ್ದೇಶಕ‌ನ ಜೊತೆ ಯಾವ ನಿರ್ಮಾಪಕರ ಅಂಗಳದಲ್ಲಿ ಕಾಣಿಸ್ತಾರೆ ಅನ್ನೋದು ಇನ್ನು ಮೀನಿನಿ ಹೆಜ್ಜೆಯಂತಾಗಿದೆ.

ಇದನ್ನೂ ಓದಿ: Yash: ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿ ಭಾಯ್​, ಡೈರೆಕ್ಟರ್​ ಫಿಕ್ಸ್​-ಕ್ಯಾರೆಕ್ಟರ್​ ಕೂಡ ರಿವೀಲ್​!

ಈ ಗ್ಯಾಪ್​​ನಲ್ಲಿ ನ್ಯೂಸ್ 18 ಕನ್ನಡಕ್ಕೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೆಜಿಎಫ್ ಚಿತ್ರಕ್ಕೆ ಯಶ್ ತಮ್ಮನ್ನ ಸಂಪೂರ್ಣವಾಗಿ ಅರ್ಪಿಸಿ ಕೊಂಡಿದ್ರು. ಅಲ್ಲದೆ ಯಶ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು  ಈಗ  ಯಶ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಕಿಂಗ್ ಆಗಿ ದರ್ಬಾರ್ ಮಾಡ್ತಿದ್ದಾರೆ. ಜೊತೆಗೆ ತೆರೆ ಮರೆಯಲ್ಲೇ ರಾಕಿ ಮುಂದಿನ ಚಿತ್ರಕ್ಕೆ ಸಜ್ಜಾಗ್ತಿದ್ಧಾರೆ.
Published by:Annappa Achari
First published: