Morning Digest: ರೈಲಿನಲ್ಲಿ ಬೆಂಕಿ ಅವಘಡ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ, ಮೇ 9ಕ್ಕೆ ಯುದ್ಧ: ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Railway: ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ; ಕೂದಲೆಳೆಯಲ್ಲಿ ತಪ್ಪಿದ ಭಾರೀ ಅನಾಹುತ

ಮೈಸೂರಿನಿಂದ ಧಾರಾವಾಡಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಳಿ ರಾತ್ರಿ ಸುಮಾರು 12 ಗಂಟೆಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೈಲು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಶನಿವಾರ ರಾತ್ರಿ 12 ಗಂಟೆಗೆ ಮೈಸೂರಿನಿಂದ ಈ ರೈಲು ಹೊರಟಿತ್ತು. ರೈಲಿನ ಮೂರನೇ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಷಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ರೈಲಿನಿಂದ ಕೆಳಗೆ ಇಳಿಯುವಾಗ ತಳ್ಳಾಟ ನೂಕಾಟ ನಡೆದಿದ್ದರಿಂದ ಕೆಲ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ತಕ್ಷಣವೇ ರೈಲ್ವೇ ಸಿಬ್ಬಂದಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.

2.PSI Recruitment Scam: ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ: ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಹೀಗೆ?

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Scam) ಅಕ್ರಮ ಪ್ರಕರಣದ ಕ್ವೀನ್ ಪಿನ್ ದಿವ್ಯಾ ಹಾಗರಗಿ (Divya Hagaragi) ಸಿಐಡಿ ಅಧಿಕಾರಿಗಳ (CID Officer) ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾಳೆ. ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ಒಡತಿಯಾಗಿದ್ದು, ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ (Money) ಪಡೆದ ಬಗ್ಗೆ ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಆರ್ ಡಿ ಪಾಟೀಲ್ (RD Patil Gang) ಆಂಡ್ ಮಂಜುನಾಥ್ ಗ್ಯಾಂಗ್ (Manjunath Gang) ನಿಂದ ದೊಡ್ಡ ಮಟ್ಟದ ಹಣ ಸಂದಾಯ ಆಗಿರುವ ವಿಷಯವನ್ನ ಸಹ ಕ್ವೀನ್ ಪಿನ್ ಒಪ್ಪಿಕೊಂಡಿದ್ದಾಳೆ. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ‌ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಎಂಬಾತನೇ ಆರ್ ಡಿ ಪಾಟೀಲ್ ಆಂಡ್ ಮಂಜುನಾಥ್ ಬಳಿಯಿಂದ ಹಣ ಕೊಡಿಸಿದ್ದ ಎನ್ನಲಾಗಿದೆ. ದಿವ್ಯಾ ಹಾಗರಗಿ , ಆರ್ ಡಿ ಪಾಟೀಲ್ , ಮಂಜುನಾಥ್ ಮಧ್ಯೆ ಮಧ್ಯವರ್ತಿಯಾಗಿ ಕಾಶಿನಾಥ್ ಕೆಲಸ ಮಾಡಿದ್ದನು.

3.Russia-Ukraine: ಅಲ್ಲೊಂದು ಇಲ್ಲೊಂದು ಅಟ್ಯಾಕ್ ಅಲ್ಲ, ಉಕ್ರೇನ್ ವಿರುದ್ಧ ಸಂಪೂರ್ಣ ಸಮರ! ಮೇ 9ಕ್ಕೆ ರಷ್ಯಾ ಯುದ್ಧ ಘೋಷಣೆ

ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಎಂದು ನಿರೀಕ್ಷಿಸಿದ ಜಗತ್ತಿಗೆ ದೊಡ್ಡ ಶಾಕ್ ಕೊಟ್ಟಿದೆ ರಷ್ಯಾ (Russia). ಅಲ್ಲೊಂದು ಇಲ್ಲೊಂದು ದಾಳಿ (Attack) ನಡೆಸುತ್ತಿದ್ದ ರಷ್ಯಾ ಈಗ ಸಂಪೂರ್ಣ ಉಕ್ರೇನ್ ನಾಶಕ್ಕೆ ಸಜ್ಜಾಗಿದೆ. ಮೇ 9ರಂದು ರಷ್ಯಾ ಉಕ್ರೇನ್ (Ukraine) ವಿರುದ್ಧ ಸಂಪೂರ್ಣ ಸಮಯ ಘೋಷಿಸಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಅವರು ಆಕ್ರಮಣದ ಸಮಯದಲ್ಲಿ ತನ್ನ ಮಿಲಿಟರಿಯ ವೈಫಲ್ಯಗಳ "ಪಾವತಿ" ಎಂದು ಉಕ್ರೇನ್ ಮೇಲೆ ಸಂಪೂರ್ಣ ಯುದ್ಧವನ್ನು (War) ಘೋಷಿಸಬಹುದು ಎಂದು ರಷ್ಯಾ ಮತ್ತು ಪಾಶ್ಚಿಮಾತ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ನಾಜಿ ಜರ್ಮನಿಯ (Germany) ಮೇಲೆ ಸೋವಿಯತ್ ಸೈನ್ಯದ ವಿಜಯವನ್ನು ರಷ್ಯಾ ಆಚರಿಸಿದಾಗ ಮೇ 9 ರಂದು ಈ ಯುದ್ಧ ಘೋಷಣೆ ಮಾಡಬಹುದು ಎಂದು ವರದಿಗಳು ಹೇಳಿವೆ. ಪುಟಿನ್ ಉಕ್ರೇನ್ ಆಕ್ರಮಣವನ್ನು 'ವಿಶೇಷ ಕಾರ್ಯಾಚರಣೆ' ಎಂದು ಕರೆದಿದ್ದರು. ಆದರೆ ಇದು ಬರೀ ಕಾರ್ಯಾಚರಣೆಯಾಗಿ ಉಳಿದಿಲ್ಲ ಎನ್ನುವುದನ್ನು ಜಗತ್ತೇ ನೋಡಿದೆ.

4.ಕಿಲಿ ಪೌಲ್‌ ಮೇಲೆ ಹಲ್ಲೆ, ಚಾಕುವಿನಿಂದ ಇರಿದು ಅಪರಿಚಿತರು ಎಸ್ಕೇಪ್!

ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ (Active) ಇದ್ದವರು ಅಷ್ಟೇ ಅಲ್ಲ, ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಬಳಸುವ (Use) ಎಲ್ಲರಿಗೂ ಕಿಲಿ ಪೌಲ್ (Kili Paul) ಅಂದ್ರೆ ಯಾರು ಅಂತ ಗೊತ್ತಿರುತ್ತದೆ. ತಾಂಜೇನಿಯಾದ (Tanzania) ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಈ ಕಿಲಿ ಪೌಲ್. ಇದೇ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್ ಇದೀಗ ಹಲ್ಲೆಗೆ ಒಳಗಾಗಿದ್ದಾರಂತೆ. ಕಿಲಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ (Knife) ದಾಳಿ (Attack) ಮಾಡಿದ್ದಾರೆ. ಬಳಿಕ ದೊಣ್ಣೆಯಿಂದಲೂ ಹೊಡೆದು ಎಸ್ಕೇಪ್ (Escape) ಆಗಿದ್ದಾರೆ.

5.ತಿರುಪತಿಯಲ್ಲಿ ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ

ಸ್ಯಾಂಡಲ್​ವುಡ್​(Sandalwood)ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯುವುದಿಲ್ಲ. ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ದೇವರು (God) ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪ ಹಾಕಿದ್ದರು. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಎಲ್ಲೆ ಹೋಗಲಿ, ಏನೇ ಮಾಡುತ್ತಿರಲಿ ಅಪ್ಪು (Appu) ಅವರ ನೆನಪು ಮರಳಿ ಮರಳಿ ನಮ್ಮ ಕಣ್ಮುಂದೆ ಬಂದು ಕಾಡುತ್ತಿದೆ. ಆದರೆ ಮೊನ್ನೆ ತಿರುಪತಿ (Tirupati) ಯಲ್ಲಿ ನಡೆದ ಒಂದು ಘಟನೆ ಅಪ್ಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಅಪ್ಪು ಅಭಿಮಾನಿಯೊಬ್ಬರ ಕಾರಿ (Car) ನ ಮೇಲಿದ್ದ ಅಪ್ಪು ಸ್ಟಿಕರ್​ (Appu Sticker) ಅನ್ನು ತಿರುಪತಿಯಲ್ಲಿ ತೆಗೆಸಿದ್ದರು. ಇದೀಗ ಈ ವಿಚಾರಕ್ಕೆ ಶಿವರಾಜ್​ಕುಮಾರ್​ (Shiva Rajkumar) ಪ್ರತಿಕ್ರಿಯೆ ಕೊಟ್ಟಿದ್ದಾರೆ.
Published by:Mahmadrafik K
First published: