1.Acid Naga: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ; ಆಸಿಡ್ ನಾಗನ ಕಾಲಿಗೆ ಗುಂಡೇಟು
ಬೆಂಗಳೂರಿನ ಕೆಂಗೇರಿ (Kengeri, Bengaluru) ಮೇಲ್ಸೇತುವೆ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ (Acid Naga) ಕಾಲಿಗೆ ಗುಂಡು (Firing) ಹಾರಿಸಿ ಬಂಧಿಸಲಾಗಿದೆ. ಮೂತ್ರ ವಿಸರ್ಜನೆಗೆ ನಿಲ್ಲಿಸಿ ಅಂತ ನೈಸ್ ರಸ್ತೆಯಲ್ಲಿ ಆರೋಪಿ ನಾಗೇಶ್ ಕೇಳಿಕೊಂಡಿದ್ದನು. ಇದಕ್ಕೆ ಅವಕಾಶ ಕೊಡದ ಪೊಲೀಸರು, ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ರು. ಈ ವೇಳೆ ಪೊಲೀಸರಿಂದ (Police) ತಪ್ಪಿಸಿಕೊಳ್ಳಲು ನಾಗೇಶ್ ಯತ್ನಿಸಿದ್ದಾನೆ. ಆತನನ್ನ ಹಿಡಿಯಲು ಹೋದ ಕಾನ್ಸ್ ಟೇಬಲ್ (Constable) ಮಹಾದೇವಯ್ಯ ಎಂಬವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕಲ್ಲಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ನಾಗ ಪ್ರಯತ್ನಿಸಿದ್ದನು.
2.Monsoon: ಅನ್ನದಾತರಿಗೆ ಗುಡ್ ನ್ಯೂಸ್ ನೀಡಿದ ಹವಾಮಾನ ಇಲಾಖೆ
ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಈ ಬಾರಿಯ ಮಾನ್ಸೂನ್ ಮಳೆ ಎಂಟ್ರಿ ಕೊಡಲಿದೆ. ಮೇ ಅಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರತಿ ವರ್ಷ ಜೂನ್ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಪ್ರವೇಶ ಆಗುತ್ತಿತ್ತು. ಆದ್ರೆ ಈ ಬಾರಿ ಮೇ 27ಕ್ಕೆ ಕೇರಳಕ್ಕೆ, ಬಳಿಕ 3 ದಿನದಲ್ಲಿ ರಾಜ್ಯಕ್ಕೆ ಮಾನ್ಸೂನ್ ಮಾರುತುಗಳು ಕರ್ನಾಟಕವನ್ನು ಪ್ರವೇಶಿಸಲಿವೆ. ಸಾಮಾನ್ಯ ಜನರಿಗೆ ಮಾನ್ಸೂನ್ ಮಳೆ ಬಂದ್ರೆ ಬಿಸಿಲು ಕಡಿಮೆ ಆಗುತ್ತೆ. ಆದರೆ ಈ ಮಳೆ ಕೃಷಿ ವಲಯದಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಮಾನ್ಸೂನ್ ಮಳೆಯ ಜೊತೆಯಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ.
3.Vikram: ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು
ತಮಿಳು (Tamil) ಚಲನಚಿತ್ರೋದ್ಯಮದ ಹಿರಿಯ ನಟ ಕಮಲ್ ಹಾಸನ್ (Kamal Hassan) ಅವರ ಚಲನಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಎಂತಹ ದೊಡ್ಡ ಸಾಲಿನಲ್ಲಿ ನಿಂತಾದರೂ ಟಿಕೆಟ್ (Ticket) ಪಡೆದುಕೊಂಡು ಸಿನಿಮಾ ನೋಡುತ್ತಾರೆ. ಈಗ ಇವರ ಮುಂಬರುವ ಚಿತ್ರವಾದ ‘ವಿಕ್ರಮ್’ (Vikram) ನ ಬಿಡುಗಡೆಗಾಗಿ ಇವರ ಅಭಿಮಾನಿಗಳು (Fans) ಕಾತುರತೆಯಿಂದ ಕಾಯುತ್ತಿದ್ದಾರೆ . ತಮ್ಮ ಹಳೆಯ ಕ್ರೇಜ್ (Craze) ನ ಇನ್ನೂ ಉಳಿಸಿಕೊಂಡು ಬಂದ ನಟರಲ್ಲಿ ಕಮಲ್ ಹಾಸನ್ ಕೂಡ ಒಬ್ಬರು. ಇವರ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಎಂದರೆ ಅಲ್ಲಿ ಹಬ್ಬದ ವಾತಾವರಣ. ಇದೀಗ ವಿಕ್ರಮ್ ಸಿನಿಮಾ ಯಾವಾಗಪ್ಪ ರಿಲೀಸ್ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಇದೀಗ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ. ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.
4.ಜೋಮಾಟೊ, ಸ್ವಿಗ್ಗಿಯಲ್ಲಿ ಆರ್ಡರ್ ಮಾಡುವಾಗ ಈ ಮೆಸೇಜ್ ನಿಮಗೂ ಬಂದಿದ್ಯಾ?
ನೀವು ಸಾಮಾನ್ಯವಾಗಿ ಪ್ರತಿದಿನ ಮನೆಯಲ್ಲಿ ಊಟ ಮಾಡಿ ಮಾಡಿ ಬೋರ್ ಆಗಿದ್ದರೆ, ಸ್ವಲ್ಪ ಬಾಯಿ ರುಚಿಗೆ ಬದಲಾವಣೆ ಇರಲಿ ಅಂತ ನೀವು ಹೊರಗಡೆ ಹೊಟೇಲ್ (Hotel) ನಿಂದ ಆಹಾರವನ್ನು (Food Delivery) ಮನೆಗೆ ತರಿಸಿಕೊಳ್ಳುವುದಕ್ಕೆ ರೆಸ್ಟೋರೆಂಟ್ (Restaurant) ಅಗ್ರಿಗೇಟರ್ ಗಳಾದ ಜೋಮಾಟೊ (Zomato) ಮತ್ತು ಸ್ವಿಗ್ಗಿಯಂತಹ (Swiggy) ಮೊಬೈಲ್ ಅಪ್ಲಿಕೇಷನ್ ನಲ್ಲಿ ಹೋಗಿ ನಿಮ್ಮ ಇಷ್ಟದ ಹೊಟೇಲ್ ನಲ್ಲಿರುವ ಆಹಾರವನ್ನು ಆರ್ಡರ್ (Food Order) ಮಾಡುತ್ತೀರಿ. ಎಷ್ಟೋ ಬಾರಿ ನಮಗೆ ಈ ರೆಸ್ಟೋರೆಂಟ್ ಅಗ್ರಿಗೇಟರ್ ಗಳಾದ ಜೋಮಾಟೊ ಮತ್ತು ಸ್ವಿಗ್ಗಿಯ ಆಹಾರ ಡೆಲಿವರಿ ಮಾಡುವ ಉದ್ಯೋಗಿಗಳು (Employee) ಸರಿಯಾದ ಸಮಯಕ್ಕೆ ಎಂದರೆ ಹೇಳಿದ ಸಮಯಕ್ಕಿಂತ ಮೊದಲೇ ತಂದು ಆಹಾರವನ್ನು ನಮಗೆ ನೀಡುತ್ತಾರೆ .
5.Gold Price Today: ವೀಕೆಂಡ್ ಬಂಪರ್: ಅಬ್ಬಾ ಇಷ್ಟೊಂದು ಇಳಿಕೆಯಾಯ್ತು ಚಿನ್ನ: ಜೇಬಿಗೆ ಹಗುರವಾದ ಗೋಲ್ಡ್
ಇಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,450 ರೂ.ಗಳಾಗಿದ್ದು, 750 ರೂ.ಗಳಷ್ಟು ಇಳಿಕೆಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,670 ರೂ.ಗಳಷ್ಟಿದ್ದು, 820 ರೂ.ಗಳಷ್ಟು ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ (Silver Price) ಬೆಲೆ 587 ರೂ.ಇದೆ. 21 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 58,700 ರೂ.ಗಳಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ. ಇಳಿಕೆಯಾಗಿದ್ದು, 46,450 ರೂ. ಆಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ 50,670 ರೂ. ಗಳಾಗಿದ್ದು, 820 ರೂ. ಇಳಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ