Morning Digest: ಟೊಮಾಟೋ ಜ್ವರ ಗಡಿಯಲ್ಲಿ ಅಲರ್ಟ್, ಕಾಂಗ್ರೆಸ್ ಚಿಂತನ ಶಿಬಿರ, ಜನತಾ ಜಲಧಾರೆ ಸಮಾರೋಪ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Tomato Flu: ಕೇರಳದಲ್ಲಿ ನಿಗೂಢ ಕಾಯಿಲೆ ಟೊಮಾಟೋ ಜ್ವರ; ಮೈಸೂರು ಗಡಿಯಲ್ಲಿ ಕಟ್ಟೆಚ್ಚರ

ಕೇರಳದ ಕೊಲ್ಲಂ (Kollam, Kerala) ಜಿಲ್ಲೆಯಲ್ಲಿ ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ (Children) ನಿಗೂಢ ಕಾಯಿಲೆ (Rare Viral Disease) ಕಾಣಿಸಿಕೊಂಡಿದೆ. ಮಕ್ಕಳ ಮೈಮೇಲೆ ಕೆಂಪು ಗುಳ್ಳೆ ಕಾಣಿಸಿಕೊಂಡಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. 80ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆಯನ್ನು 'ಟೊಮಾಟೊ ಜ್ವರ' (Tomato flu) ಎಂದು ಕರೆಯಲಾಗಿದೆ. ಹಿನ್ನೆಲೆಯಲ್ಲಿ ಮೈಸೂರು (Mysuru) ಜಿಲ್ಲೆಯ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ (Check Post) ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ರತ್ನಾಂಬಿಕ ,ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ಟಿ.ರವಿಕುಮಾರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2.Janata Jaladhare: ಇಂದು ಜನತಾ ಜಲಧಾರೆ ಸಮಾರೋಪ ಸಮಾವೇಶ; ಗಂಗಾ ಆರತಿಗೆ ವಾರಣಾಸಿಯ ತಂಡ

ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಜೆಡಿಎಸ್​ ನಡೆಸಿದ ಜನತಾ ಜಲಾಧಾರೆ (Janata Jaladhare) ಕಾರ್ಯಕ್ರಮ ಇಂದು ಮುಕ್ತಾಯವಾಗಲಿದೆ. ಇಂದು ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ಹೆದ್ದಾರಿಯ ಪಕ್ಕದ ಬೃಹತ್ ಮೈದಾನದಲ್ಲಿ ಗಂಗಾ ಆರತಿ (Ganga Arati) ಕಾರ್ಯಕ್ರಮದೊಂದಿಗೆ ಕಾರ್ಯಕ್ರಮದ ಸಮಾರೋಪ ಸಮಾವೇಶ ನಡೆಯಲಿದ್ದು, ಸಮಾವೇದಲ್ಲಿ ಮೂರು- ನಾಲ್ಕು ಲಕ್ಷ ಜನ ಸೇರುವ ನಿರೀಕ್ಷೆ ಇದೆ.

3.Congress: ಇಂದಿನಿಂದ 3 ದಿನ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ, 2024ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ!

ನಿರ್ಣಾಯಕವಾಗಿರುವ 2024ರ ಲೋಕಸಭಾ ಚುನಾವಣೆಗೆ (2024 Parliament Elections) ತಯಾರಿ ಆರಂಭಿಸುತ್ತಿರುವ ಕಾಂಗ್ರೆಸ್ ಪಕ್ಷವು (Congress Party) ಪಕ್ಷ ನೀತಿ ನಿಲುವುಗಳನ್ನು ರೂಪಿಸಲು ಇಂದು, ನಾಳೆ ಮತ್ತು ನಾಳಿದ್ದು ರಾಜಸ್ಥಾನದ (Rajasthan) ಉದಯಪುರದಲ್ಲಿ ಚಿಂತನ ಶಿಬಿರ (Chinthana Shivir) ಆಯೋಜಿಸಿದೆ. ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ನೇತೃತ್ವದಲ್ಲಿ ನಡೆಯುವ ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಸೇರಿದಂತೆ 400ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು (Congress Leaders) ಭಾಗಿಯಾಗಲಿದ್ದಾರೆ (Participate) ಎಂದು ತಿಳಿದು ಬಂದಿದೆ.

4.ಅವಳ ಜೊತೆಯಲ್ಲೇ ಮದ್ವೆ ಆಗ್ತೀನಿ: ಪೊಲೀಸರ ಮುಂದೆ ಬಂದ ಗೆಳತಿಯರು

ತುಮಕೂರು ಮೂಲದ ಇಬ್ಬರು ಯುವತಿಯರು ತಮಗೆ ಮದುವೆ ಮಾಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಇಬ್ಬರ ಮದುವೆ ವಿಷಯ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ. ಈ ಇಬ್ಬರು ಯುವತಿರಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ತುಮಕೂರಿನಲ್ಲಿ ವಾಸವಾಗಿದ್ದರು. ಆದ್ರೆ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯರು ದಿಢೀರ್ ಅಂತ ಪ್ರತ್ಯಕ್ಷರಾಗಿದ್ದಾರೆ. ನಾಪತ್ತೆಯಾದಾಗ ಯುವತಿಯರು ಬೆಂಗಳೂರಿನಲ್ಲಿ ವಾಸವಾಗಿದ್ರು ಎಂದು ವರದಿಯಾಗಿದೆ. ಇದೀಗ ತುಮಕೂರಿಗೆ ಬಂದು ಪೊಲೀಸರ ನೆರವು ಕೇಳಿದ್ದಾರೆ.

5.Viral Question Paper: ಆರ್‌ಆರ್‌ಆರ್‌ ಸಿನಿಮಾ ನೋಡಿದ್ದೀರಾ?

ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ(SS Rajamouli) ನಿರ್ದೇಶನದ (Direction) ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ (Jr. NTR) ಹಾಗೂ ರಾಮ್ ಚರಣ್ (Ram Charan) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಾಕ್ಸ್‌ ಆಫೀಸ್ (Box Office) ಕೊಳ್ಳೆ ಹೊಡೆದ ಆರ್‌ಆರ್‌ಆರ್, ಹಲವು ದಾಖಲೆಗಳನ್ನು ಬ್ರೇಕ್ (Records Break) ಮಾಡಿ, ತಾನೇ ಹೊಸ ದಾಖಲೆ ನಿರ್ಮಿಸಿತ್ತು. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೀ ಹಿಂದಿ ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾ, ಎಲ್ಲಾ ಭಾಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇದೀಗ ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ ಎನ್ನುವಂತೆ ಆರ್‌ಆರ್‌ಆರ್‌ ಸಿನಿಮಾ ರಿಲೀ್ಸ್ ಆಗಿ 2 ತಿಂಗಳೇ ಆಗುತ್ತಾ ಬಂದರೂ ಅದು ಮಾಡುತ್ತಿರುವ ಸದ್ದು ಹಾಗೂ ಸುದ್ದಿ ನಿಂತಿಲ್ಲ. ಇದೀಗ ಪಿಯು ಪ್ರಶ್ನೆ ಪತ್ರಿಕೆಯಲ್ಲೂ (PUC Question Paper) ಆರ್‌ಆರ್‌ಆರ್‌ ಕುರಿತ ಪ್ರಶ್ನೆ ಕೇಳಲಾಗಿದ್ದು, ಆ ಪ್ರಶ್ನೆ ಪತ್ರಿಕೆಯೀಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಆಗಿದೆ.
Published by:Mahmadrafik K
First published: