Morning Digest: ವಿಮಾನಕ್ಕೆ ಹಕ್ಕಿ ಡಿಕ್ಕಿ, ವಧು-ವರರೇ ಅದಲು ಬದಲು, ಚಿನ್ನದ ಬೆಲೆ ಏರಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Belagavi: ಬೆಳಗಾವಿಯಿಂದ ಹೊರಟಿದ್ದ 187 ಪ್ರಯಾಣಿಕರಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ

ಬೆಳಗಾವಿಯಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿರುವ ಘಟನೆ ಸೋಮವಾರ ನಡೆದಿದೆ. ಹಕ್ಕಿ ಡಿಕ್ಕಿಯಾದ ಪರಿಣಾಮ ಇಂಜಿನ್ ಬ್ಲೇಡ್ ಗೆ ಹಾನಿಯುಂಟಾಗಿದೆ. ಈ ವಿಮಾನದಲ್ಲಿ 187 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸ್ಪೈಸ್ ಜೆಟ್ ಬಿ737 ಬೆಳಗಾವಿಯಿಂದ ದೆಹಲಿಯತ್ತ ಪ್ರಯಾಣ ಬೆಳೆಸಿತ್ತು. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಹಕ್ಕಿ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಹಕ್ಕಿ ಡಿಕ್ಕಿಯಾದ್ರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದೇ ವಿಮಾನ ಬೆಳಗ್ಗೆ 11.55ಕ್ಕೆ ಓಡಿಶಾಸದ ಝುರ್ಸಗುಡೆಗೆ ಪ್ರಯಾಣ ಬೆಳೆಸಬೇಕಿತ್ತು. ಆದ್ರೆ ತಾಂತ್ರಿಕ ಕಾರಣದಿಂದ ಮತ್ತೊಂದು ವಿಮಾನ ಓಡಿಶಾಗೆ ತೆರಳಿದೆ.

2.Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ ಕೊಟ್ಟಿದ್ದರಿಂದ ವಧುಗಳು ಅದಲು ಬದಲಾಗಿದ್ದಾರೆ. ಮದುವೆ ದಿನ ಅಕ್ಕ ಹಾಗೂ ತಂಗಿ ಇಬ್ಬರೂ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರಿಂದ ಅವರ ಮನೆಯವರಿಗೂ ಈ ವಿಷಯ ಗಮನಕ್ಕೆ ಬಂದಿಲ್ಲ. ವಧುಗಳು ತಮ್ಮ ಗಂಡನ ನಿವಾಸವನ್ನು ತಲುಪಿದಾಗ ಅವರಿಬ್ಬರು ಅದಲು ಬದಲಾಗಿರೋದು ಕುಟುಂಬಗಳ ಗಮನಕ್ಕೆ ಬಂದಿದೆ.

3.Chitradurga: ಕಾಮದಾಸೆಗಾಗಿ ಗಂಡನಿಗೆ ಚಟ್ಟ ಕಟ್ಟಿದ್ದ ಪತ್ನಿ ಅಂದರ್; ಶವದ ಮುಂದೆ ಗಳಗಳನೇ ಅತ್ತಿದ್ದ ಹೆಂಡ್ತಿ

ಕಳೆದ ಏಪ್ರಿಲ್ 24ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ (Challakere) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀರದಿಮ್ಮನಹಳ್ಳಿ ಗ್ರಾಮದ ಗೋಪಾಲ್ ನಾಯ್ಕ್ ಎಂಬ ವ್ಯಕ್ತಿ ಮೂರ್ಛೆ ರೋಗ ಬಂದು ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿತ್ತು. ಮೃತಪಟ್ಟ ಪತಿಯ ಶವದ (Husband Deadbody) ಮುಂದೆ ಪತ್ನಿ ಚಂದ್ರಕಲಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಳು‌. ನನಗ್ಯಾರು ಗತಿ ಅಂತ ರೋದಿಸುತ್ತಲೇ ಮೃತ ದೇಹವನ್ನ ವೀರದಿಮ್ಮನ ಹಳ್ಳಿಗೆ ತೆಗೆದುಕೊಂಡು ಹೋಗಿ ಕುಟುಂಬದವರ ಮುಂದೆ ಮೂರ್ಛೆ ರೋಗದಿಂದ ನನ್ನ ಗಂಡ ಸತ್ತ ಅಂತ ಹೇಳಿದ್ದಳು. ಇವಳ ಈ ಆಕ್ರಂದನಕ್ಕೆ ಕರಗಿದ ಗ್ರಾಮದ ಜನರು ಆಕೆಯನ್ನ ಸಮಧಾನಪಡಿಸಿ ಸಾಂತ್ವನ ಹೇಳಿದ್ರು. ಬಳಿಕ ಸಂಪ್ರದಾಯದಂತೆ ಮೃತದೇಹವನ್ನ ಸುಟ್ಟು ಅಂತ್ಯಕ್ರಿಯೆ ಮಾಡಿದ್ದರು.

4.Sri Lanka Crisis: ಕೊತ ಕೊತ ಕುದಿಯುತ್ತಿದೆ ಶ್ರೀಲಂಕಾ! ಪ್ರಧಾನಿ ರಾಜಪಕ್ಸ ನಿವಾಸಕ್ಕೆ ಪ್ರತಿಭಟನಾಕಾರರಿಂದ ಬೆಂಕಿ

ಶ್ರೀಲಂಕಾ: ಆರ್ಥಿಕ (Economic) ಹಾಗೂ ರಾಜಕೀಯ ಬಿಕ್ಕಟ್ಟಿನಿಂದ (Political Crisis) ಕಂಗೆಟ್ಟಿರುವ ಶ್ರೀಲಂಕಾದಲ್ಲಿ (Sri Lanka) ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈ ಮೀರುತ್ತಿದೆ. ಜನರ ತಾಳ್ಮೆ ಮಿತಿಮೀರುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆ (Protest) ಹಿಂಸಾತ್ಮಕ (Violent) ರೂಪ ಪಡೆದಿದೆ. ಪ್ರತಿಭಟನಾಕಾರರು ಸಿಕ್ಕ ಸಿಕ್ಕಲ್ಲಿ, ಸಿಕ್ಕ ಸಿಕ್ಕ ವಸ್ತುಗಳಿಗೆ ಬೆಂಕಿ (Fire) ಹಚ್ಚಿ, ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆಯಷ್ಟೇ ಗಲಾಟೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ (MP) ಸಾವನ್ನಪ್ಪಿದ್ದರು. ಇದಾದ ಬಳಿಕ ಪ್ರಧಾನಿ ಮಹಿಂದ ರಾಜಪಕ್ಸ (Prime Minister Mahinda Rajapaksa) ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡಿದ್ದರು. ಆದರೂ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಿಲ್ಲ. ಇದೀಗ ಉದ್ರಿಕ್ತರು ಪ್ರಧಾನಿ ಮಹಿಂದ ರಾಜಪಕ್ಸ ಅವರ ನಿವಾಸಕ್ಕೆ (House) ಬೆಂಕಿ ಹಚ್ಚಿದ್ದಾರೆ.

5.Gold Price: ಅಲ್ಪ ಬೆಲೆ ಏರಿಕೆ ಕಂಡ ಚಿನ್ನ, ಇಳಿಕೆ ಕಂಡ ಬೆಳ್ಳಿ! ಇಂದಿನ ದರಗಳ ವಿವರ ಹೀಗಿದೆ

ನಿನ್ನೆ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು 4,740 ರೂಪಾಯಿ ಇದ್ದದ್ದು ಇಂದು 4,750 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ (Price Hike) ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,500 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,950, ರೂ. 47,500, ರೂ. 47,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,500 ರೂ. ಆಗಿದೆ. ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 665, ರೂ. 6,650 ಹಾಗೂ ರೂ. 66,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 66,500 ಆಗಿದ್ದರೆ ದೆಹಲಿಯಲ್ಲಿ ರೂ. 62,500 ಮುಂಬೈನಲ್ಲಿ ರೂ. 62,500 ಹಾಗೂ ಕೊಲ್ಕತ್ತದಲ್ಲೂ ರೂ. 62,500 ಗಳಾಗಿದೆ.
Published by:Mahmadrafik K
First published: