Morning Digest: ಗೆಲುವಿಗೆ ಕಮಲ ಹರಸಾಹಸ, ಅಗ್ನಿ-4 ಬ್ಯಾಲಿಸ್ಟಿಕ್ ಕ್ಷಿಪಣಿ, ಚಿರು ಪುಣ್ಯಸ್ಮರಣೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
1.Karnataka Politics: ಬಿಜೆಪಿಗೆ ಬಿಸಿ ತುಪ್ಪವಾದ ಈಶ್ವರಪ್ಪ ಮಾಜಿ ಪಿಎ; ಗೆಲುವಿಗಾಗಿ ಕಮಲ ಹರಸಾಹಸ

ದಕ್ಷಿಣ ಪಧವೀಧರ ಪರಿಷತ್ ಚುನಾವಣೆಗೆ (Karnataka Legislative Council) ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ನಿಂದ ಮಧು ಮಾದೇಗೌಡ (Madhu Madegowda), ಜೆಡಿಎಸ್ ನಿಂದ ರಾಮು (JDS Ramu) ಮತ್ತು ಬಿಜೆಪಿಯಿಂದ ಮೈ.ಸಿ.ರವಿಶಂಕರ್ (BJP Mai. Si Ravishankar) ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa_ ಅವರ ಪಿಎ ಎನ್.ಎಸ್.ವಿನಯ್ (NS Vinay) ಕಣದಲ್ಲಿರೋದು ಬಿಜೆಪಿಗೆ (BJP) ಬಿಸಿ ತುಪ್ಪವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಆರಕ್ಕೂ ಅಧಿಕ ಸಚಿವರು ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaaraj Bommai) ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

2.Chaddi War: ಚಡ್ಡಿಗಳು ಚಡ್ಡಿ ಕೆಲಸ ಮಾಡದೇ ಮತ್ತೇನು ಮಾಡ್ತಾರೆ? ಸಿದ್ದರಾಮಯ್ಯ ಪ್ರಶ್ನೆ

ಕರ್ನಾಟಕದಲ್ಲಿ ಚಡ್ಡಿ ಜಟಾಪಟಿ ಜೋರಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ (BJP Congress Leaders) ವಕ್ಸಮರ ತೀವ್ರಗೊಂಡಿದೆ. ಚಡ್ಡಿ ವಿಷಯವನ್ನು ನಾನು ಬಹಳ ವರ್ಷದಿಂದಲೂ ಮಾತನಾಡುತ್ತಿದ್ದು ನಾನು ಇದುವರೆಗೂ ಸುಟ್ಟಿಲ್ಲ, ಅವರೇ ಸುಟ್ಟು ಹೋಗ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ತಿಳಿಸಿದ್ದಾರೆ. ಬಿಜಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Karnataka BJP President Nalin Kumar Kateel) ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಚಡ್ಡಿಗಳು ಚಡ್ಡಿ ಕೆಲ್ಸ ಮಾಡ್ದೆ ಮತ್ತೇನ್ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಆರ್.ಎಸ್.ಎಸ್. ಬಗ್ಗೆ ನಾನು ಮಾತನಾಡ್ತಿರೋದು ಇದೇ ಮೊದಲಲ್ಲ. ಈ ಮೊದಲೂ ಸಹ ಟೀಕಿಸಿದ್ದೇನೆ. ಮೊದಲಿಂದಲೂ ಕೋಮುವಾದಿ ಸಂಘಟನೆ ಅಂತ ಹೇಳುತ್ತಲೇ ಬಂದಿದ್ದೇನೆ. ನನ್ನ ಆರೋಪಕ್ಕೆ ಯಾವೊಬ್ಬ ಆರ್.ಎಸ್.ಎಸ್ ನಾಯಕರು (RSS Leaders) ಪ್ರತಿಕ್ರಿಯಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

3.Agni-4 Ballistic Missile: ಅಗ್ನಿ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! 4 ಸಾವಿರ ದೂರದ ಟಾರ್ಗೆಟ್ ಹೊಡೆಯಬಲ್ಲದು ಈ ಕ್ಷಿಪಣಿ

ಅಸೋಮವಾರ ಒಡಿಶಾದ (Odisha) ಎಪಿಜೆ ಅಬ್ದುಲ್ ಕಲಾಂ (APJ Abdul Kalam) ದ್ವೀಪದಿಂದ (Island) ಪರಮಾಣು (Nuclear) ಸಾಮರ್ಥ್ಯದ ಅಗ್ನಿ-4 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ (Ballistic Missile) ತರಬೇತಿ ಉಡಾವಣೆ ಭಾರತ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸಂಕ್ಷಿಪ್ತ ಹೇಳಿಕೆಯಲ್ಲಿ, ರಕ್ಷಣಾ ಸಚಿವಾಲಯವು ರಾತ್ರಿ 7:30 ರ ಸುಮಾರಿಗೆ ಪರೀಕ್ಷೆಯನ್ನು ನಡೆಸಲಾಯಿತು ಎಂದು ಹೇಳಿದೆ. ಅಗ್ನಿ-4 ರ ಯಶಸ್ವಿ ಪರೀಕ್ಷೆಯು "ವಿಶ್ವಾಸಾರ್ಹ ತಡೆ" ಸಾಮರ್ಥ್ಯ ಹೊಂದಿರುವ ಭಾರತದ ನೀತಿಯನ್ನು ಪುನರುಚ್ಚರಿಸುತ್ತದೆ ಎಂದು ಅದು ಹೇಳಿದೆ. "ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಜೂನ್ 6 ರಂದು ಸುಮಾರು 19:30 ಗಂಟೆಗೆ ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ, ಅಗ್ನಿ-4 ರ ಯಶಸ್ವಿ ತರಬೇತಿ ಉಡಾವಣೆ ನಡೆಸಲಾಯಿತು" ಎಂದು ಸಚಿವಾಲಯ ತಿಳಿಸಿದೆ.

4.Boris Johnson: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸದ್ಯಕ್ಕೆ ಸೇಫ್, ಅವಿಶ್ವಾಸ ಮತವನ್ನು ಗೆದ್ದೇ ಬಿಟ್ಟರು

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (British Prime Minister Boris Johnson) ಸೋಮವಾರ ನಡೆದ ಅವಿಶ್ವಾಸ ಮತವನ್ನು (No Confidence Vote) ಗೆದ್ದಿದ್ದಾರೆ. ಬಂಡಾಯದ ಹೊರತಾಗಿಯೂ ಅಧಿಕಾರದಲ್ಲಿ ಉಳಿಯಲು ತಮ್ಮ ಪಕ್ಷದಲ್ಲಿ ಸಾಕಷ್ಟು ಬೆಂಬಲವನ್ನು ಪಡೆದರು. ಡೌನಿಂಗ್ ಸ್ಟ್ರೀಟ್‌ನಲ್ಲಿನ ಪಾರ್ಟಿಗೇಟ್ ಹಗರಣದ ಹೆಚ್ಚಿನ ವಿವರಗಳು ಹೊರಹೊಮ್ಮಿದ ಕೆಲವು ದಿನಗಳ ನಂತರ ಗೊಂದಲಕ್ಕೊಳಗಾದ PM ಬೋರಿಸ್ ಜಾನ್ಸನ್ ವಿಶ್ವಾಸ ಮತವನ್ನು ಎದುರಿಸಿದರು. ಇದಕ್ಕೂ ಮೊದಲು, 1922ರ ಸಮಿತಿಯು ಸ್ವೀಕರಿಸಿದ ಅವಿಶ್ವಾಸ ಪತ್ರಗಳನ್ನು ಒಟ್ಟುಗೂಡಿಸುವ ಉಸ್ತುವಾರಿ ವಹಿಸಿರುವ ಸರ್ ಗ್ರಹಾಂ ಬ್ರಾಡಿ, ಟೋರಿ ಸಂಸದೀಯ ಪಕ್ಷದ 15 ಪ್ರತಿಶತದಷ್ಟು ಅಥವಾ 54 ಸಂಸದರ ಮಿತಿಯನ್ನು ಪೂರೈಸಲಾಗಿದೆ ಎಂದು ಹೇಳಿದರು.

4.Chiranjeevi Sarja Death Anniversary: ಚಿರು ಮರೆಯಾಗಿ ಆಗಲೇ 2 ವರ್ಷ, ರಾಯನ್ ನಗುವಲ್ಲಿ ಅವರಿನ್ನೂ ಜೀವಂತ

Chiranjeevi Sarja: ಸ್ಯಾಂಡಲ್ ವುಡ್​​ನಲ್ಲಿ ಕಳೆದ 2 ವರ್ಷದಿಂದ ಕರಿ ಛಾಯೆ ಮೂಡಿರುವುದು ಸುಳ್ಳಲ್ಲ. ಒಬ್ಬರ ನಂತರ ಒಬ್ಬ ಅದ್ಭುತ ನಟರನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರ ನೆಚ್ಚು ನಟ ಚಿರಂಜೀವಿ ಸರ್ಜಾ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಲ್ಲದೇ ಇಂದಿಗೆ 2 ವರ್ಷ. ಮುದ್ದಾದ ಸಂಸಾರದ ಕನಸನ್ನು ಹೊಂದಿದ್ದ ಚಿರು ನೆನಪು ಇಂದಿಗೂ ಅಜರಾಮರ. ನಟ ಚಿರಂಜೀವಿ ಸರ್ಜಾ ನಗು ಮುಖದ ವ್ಯಕ್ತಿ. ಅವರಿಲ್ಲ ಎಂಬ ಸತ್ಯವನ್ನು ಇಂದಿಗೂ ಅರಗಿಸಿಕೊಳ್ಳುವುದು ಬಹಳ ಕಷ್ಟ. ಕುಟುಂಬ ಹಾಗೂ ಅಭಿಮಾನಿಗಳ ಪಾಲಿಗೆ ಇಂದು ಕರಾಳ ದಿನ. ಇಂದಿಗೆ 2 ವರ್ಷದ ಹಿಂದೆ ಅಂದರೆ 2020ರಲ್ಲಿ ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ, ಸ್ಯಾಂಡಲ್​ವುಡ್​ನಲ್ಲಿ ಎಲ್ಲರ ಫೇವರೇಟ್​ ಎಂದರೆ ತಪ್ಪಾಗಲಾರದು.

5.Gold-Silver Price: ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ ದರ: ಇಂದಿನ ದರಗಳ ವಿವರ ಹೇಗಿದೆ ನೋಡಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Rate) ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,774 ಇದ್ದದ್ದು ಇಂದು 4,785 ರೂಪಾಯಿಗೆ ಏರಿದೆ. ಈ ಮೂಲಕ ಪ್ರತಿ ಗ್ರಾಂ ಬೆಲೆಯಲ್ಲಿ 11 ರೂ. ಏರಿಕೆಯಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,850 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,900, ರೂ. 47,850, ರೂ. 47,850 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,850 ರೂ. ಆಗಿದೆ.
Published by:Mahmadrafik K
First published: