• Home
  • »
  • News
  • »
  • state
  • »
  • Morning Digest: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್, ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ, ನೂಪುರ್ ಶರ್ಮಾ ಅಮಾನತು: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್, ಇಳಿಕೆಯಾಯ್ತು ನೋಡಿ ಚಿನ್ನದ ಬೆಲೆ, ನೂಪುರ್ ಶರ್ಮಾ ಅಮಾನತು: ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Monsoon Rains: ಕರ್ನಾಟಕಕ್ಕೆ ನೈಋತ್ಯ ಮುಂಗಾರು ಆಗಮನ; ಜೂನ್ 8ರವರೆಗೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ಕರ್ನಾಟಕಕ್ಕೆ ನೈಋತ್ಯ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ರಾಜ್ಯಾದ್ಯಂತ ವರುಣರಾಯ ಅಬ್ಬರಿಸುತ್ತಿದ್ದಾನೆ. ಕಳೆದ ಮೂರು ದಿನಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದೆ. ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಮುಂದಿನ ನಾಲ್ಕು ದಿನ ಗುಡುಗು- ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಭಾರೀ ಮಳೆಯಾಗುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.


2.Nupur Sharma: ಪ್ರವಾದಿ ಮೊಹಮ್ಮದ್ ಅವಹೇಳನಕ್ಕೆ ರೊಚ್ಚಿಗೆದ್ದ ಗಲ್ಫ್ ರಾಷ್ಟ್ರಗಳು: ಬಿಜೆಪಿಯಿಂದ ನೂಪುರ್ ಶರ್ಮಾ ಅಮಾನತು


ಬಿಜೆಪಿ (BJP) ತನ್ನ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಮುಂದಿನ ತನಿಖೆಗಾಗಿ ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಸೂಕ್ಷ್ಮ ವಿಷಯಗಳಲ್ಲಿ ಅಧಿಕೃತ ಮಾರ್ಗವನ್ನು ಅನುಸರಿಸದಿದ್ದಕ್ಕಾಗಿ ಮತ್ತೊಬ್ಬ ನಾಯಕ ನವೀನ್ ಕುಮಾರ್ ಜಿಂದಾಲ್ (Naveen Kumar Jindal) ಅವರನ್ನು ಉಚ್ಚಾಟಿಸಿದೆ. ಇರಾನ್, ಕತಾರ್ ಮತ್ತು ಕುವೈತ್‌ನಂತಹ ಇಸ್ಲಾಮಿಕ್ ರಾಷ್ಟ್ರಗಳು ಶರ್ಮಾ ಮಾಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಭಾರತೀಯ ರಾಯಭಾರಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಟೆಲಿವಿಷನ್ ಸಂದರ್ಶನವೊಂದರಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಶರ್ಮಾ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಜೂನ್ 1 ರಂದು ಪ್ರವಾದಿಯನ್ನು ಉಲ್ಲೇಖಿಸಿ ಮಾಡಿದ ಟ್ವೀಟ್‌ನಿಂದ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ತುತ್ತಾಗಿದ್ದರು. ಆದರೆ ಇಬ್ಬರು ನಾಯಕರ ವಿರುದ್ಧ ಅಧಿಕೃತ ಹೇಳಿಕೆ ನೀಡಲಿಲ್ಲ. ಇಬ್ಬರೂ ಮುಖಂಡರು ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ನೋಯಿಸುವ ಗುರಿಯನ್ನು ಹೊಂದಿಲ್ಲ ಎಂದು ಹೇಳಿದರು.


3.Hubballi: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ಮಂಗನಂತೆ ಮಾಡೋದನ್ನ ನೋಡಿ ಪೆಚ್ಚಾದ ಜನ


ಹುಬ್ಬಳ್ಳಿ: ರೈಲು (Train) ಹತ್ತುವಾಗ ಅಥವಾ ಇಳಿಯುವಾಗ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕಂಟಕವಾಗಬಲ್ಲದು. ಸ್ವಲ್ಪದರಲ್ಲಿಯೇ ರೈಲಿನಡಿ ಸಿಲುಕಿ ಅದೆಷ್ಟೋ ಜನ ಸಾವಿಗೀಡಾಗಿರೋದನ್ನು ನಾವು ಕಾಣ್ತೇವೆ. ಇಷ್ಟೆಲ್ಲ ನಮ್ಮ ಕಣ್ಣ ಮುಂದಿದ್ದರೂ ಕೆಲವೊಬ್ಬರು ಮಾಡೋ ಹುಚ್ಚು ಸಾಹಸಗಳು ಅಚ್ಚರಿ ಮೂಡಿಸುತ್ತದೆ. ಚಲಿಸುತ್ತಿರುವ ರೈಲಿನಲ್ಲಿ (Moving Train) ಜೀವದ ಮಹತ್ವವಿಲ್ಲದೆ ಯುವಕನೋರ್ವ (Youth) ಹುಚ್ಚಾಟ ಮೆರೆದ ಘಟನೆ ಮಂಗಳೂರಿನಿಂದ ಹುಬ್ಬಳ್ಳಿ (Managluuru To Hubballi) ಕಡೆಗೆ ಬರುತ್ತಿದ್ದ ರೈಲಿನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಲ್ಲಿ ಯುವಕ ಹುಚ್ಚಾಟ ಮಾಡಿದ ಯುವಕ, ನೋಡುಗರ ಎದೆ ಬಡಿದುಕೊಳ್ಳುವಂತೆ ಮಾಡಿದ್ದಾನೆ. ರೈಲಿನ ಬಾಗಿಲಿನಲ್ಲಿ ನಿಂತ ಯುವಕ, ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವ ದುಸ್ಸಾಹಸ ಮಾಡಿದ್ದಾನೆ.


4.Gold-Silver Price: ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬೆಳ್ಳಿ


ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ (Gold Rate) ಅಲ್ಪ ಇಳಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ 4,775 ಇದ್ದದ್ದು ಇಂದು 4,774 ರೂಪಾಯಿಗೆ ಇಳಿದಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,740 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,740, ರೂ. 47,740, ರೂ. 47,740 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,740 ರೂ. ಆಗಿದೆ. ಪ್ರಸ್ತುತ, ಬೆಂಗಳೂರು ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 675, ರೂ. 6,750 ಹಾಗೂ ರೂ. 67,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,500 ಆಗಿದ್ದರೆ ದೆಹಲಿಯಲ್ಲಿ ರೂ. 61,700 ಮುಂಬೈನಲ್ಲಿ ರೂ. 61,700 ಹಾಗೂ ಕೊಲ್ಕತ್ತದಲ್ಲೂ ರೂ. 61,700 ಗಳಾಗಿದೆ.


5.Baiyyappanahalli Railway Station: ದೇಶದ ಮೊದಲ ಎಸಿ ರೈಲು ನಿಲ್ದಾಣ ಇಂದು ಲೋಕಾರ್ಪಣೆ


ದೇಶದ ಮೊದಲ ಎಸಿ ರೈಲ್ವೇ ನಿಲ್ದಾಣ ಇಂದು ಲೋಕಾರ್ಪಣೆ ಆಗಲಿದೆ. ಈ ರೈಲ್ವೇ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ಹೆಸರಿಡಲಾಗಿದೆ. ಈ ಟರ್ಮಿನಲ್ ನಿಂದ ಸುಮಾರು 50 ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರೈಲ್ವೆ ನಿಲ್ದಾಣ ನಿರ್ಮಾಣಗೊಂಡ ಒಂದು ವರ್ಷದ ಬಳಿಕ ರೈಲುಗಳು ಸಂಚರಿಸಲಿವೆ. ಇನ್ನೂ ಈ ರೈಲ್ವೆ ನಿಲ್ದಾಣಕ್ಕೆ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ಗಳು ಸಂಚರಿಸಲಿವೆ. ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಿಗೆ ಬಸ್ ಗಳ ಸೌಲಭ್ಯ ಇರಲಿದೆ.

Published by:Mahmadrafik K
First published: