• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಭಾರತದ ಚಹಾ ವಾಪಸ್, VHP ನಾಯಕನ ವಿವಾದಾತ್ಮಕ ಹೇಳಿಕೆ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಭಾರತದ ಚಹಾ ವಾಪಸ್, VHP ನಾಯಕನ ವಿವಾದಾತ್ಮಕ ಹೇಳಿಕೆ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Hubballi: ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ ಶಸ್ತ್ರ ಹಿಡಿಯಬೇಕು; VHP ನಾಯಕ ಮಿಲಿಂದ್ ಪರಾಂಡೆ ವಿವಾದ


ಶಸ್ತ್ರಧಾರಿ ದೇವರನ್ನು ಪೂಜಿಸೋ ಹಿಂದೂ (Hindu) ಎಂದಿಗೂ ನಿಶ್ಶಸ್ತ್ರನಾಗಿರಬಾರದು. ದೇವರಂತೆ ಶಸ್ತ್ರ ಹಿಡೀಬೇಕು ಎಂದು ಕರೆ ನೀಡೋ ಮೂಲಕ ವಿಶ್ವ ಹಿಂದೂ ಪರಿಷತ್ (Vishwa Hindu Parishat) ಕೇಂದ್ರೀಯ ಮಹಾಮಂತ್ರಿ ಮಿಲಿಂದ್ ಪರಾಂಡೆ (Milind Parande) ವಿವಾದ ಸೃಷ್ಟಿಸಿದ್ದಾರೆ. ನಿನ್ನೆಯಷ್ಟೇ ಧ್ವನಿವರ್ಧಕ (Loudspeaker) ಬಳಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme court) ಆದೇಶ ಪಾಲಿಸದವರ ಮೇಲೆ ನಾನೇ ಗುಂಡು ಹಾರಿಸ್ತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Mutalik) ವಿವಾದಾತ್ಮಕ ಹೇಳಿಕೆ ನೀಡಿದ ಮರುದಿನವೇ ಮಿಲಿಂದ್ ಪರಾಂಡೆ ಹುಬ್ಬಳ್ಳಿಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.


2.Indian Tea Return: ಅತಿಯಾದ ಕೀಟನಾಶಕ ಬಳಕೆ; ಹಲವು ದೇಶಗಳಿಂದ ಭಾರತದ ಚಹಾ ವಾಪಸ್


ಭಾರತದ ಚಹಾಗೆ (Indian Tea) ಇಡೀ ವಿಶ್ವದಲ್ಲಿಯೇ ಉತ್ತಮ ಮಾರುಕಟ್ಟೆ (Market) ಹೊಂದಿದೆ. ಆದ್ರೆ ಅತ್ಯುನ್ನತ ಮತ್ತು ಉತ್ಕೃಷ್ಟ ಚಹಾಗೆ ಈಗ ಕೆಟ್ಟ ಹೆಸರು ಬಂದಿದೆ. ಹೌದು, ಭಾರತದ ಚಹಾದಲ್ಲಿ ಕೀಟನಾಶಕ ಬಳಕೆ (Pesticide use) ಮತ್ತು ರಾಸಾಯನಿಕ ಪ್ರಮಾಣ (Chemical Use) ಅಧಿಕವಾಗಿರೋದು ಕಂಡು ಬಂದಿದ ಎಂದು ವರದಿಯಾಗಿದೆ. ಈ ಕಾರಣದಿಂದ ಅಂತರಾಷ್ಟ್ರೀಯ ಮತ್ತು ದೇಶಿಯ ಮಾರುಕಟ್ಟೆಯು ಭಾರತಕ್ಕೆ ಚಹಾವನ್ನು ಹಿಂದಿರುಗಿಸಿದೆ. ಈ ಮಾಹಿತಿಯನ್ನು ಭಾರತೀಯ ಚಹಾ ರಫ್ತುದಾರರ ಸಂಘದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ (Indian Tea Exporters Association (ITEA) chairman Anshuman Kanoria) ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.


3.Monkeypox Virus: ಅಮೆರಿಕದಲ್ಲಿ ಮಂಕಿಪಾಕ್ಸ್ ವೈರಸ್! ಏರುತ್ತಲೇ ಇದೆ ಕೇಸ್, ಹೆಚ್ಚಿದ ಭೀತಿ


ಅಮೆರಿಕದ ಹೆಚ್ಚಿನ ನಗರಗಳು ಮಂಕಿಪಾಕ್ಸ್ ವೈರಸ್‌ನ (Moneky pox) ಸಂಭವನೀಯ ಪ್ರಕರಣಗಳನ್ನು ವರದಿ ಮಾಡುತ್ತಿವೆ ಎಂದು ಫಾಕ್ಸ್ ನ್ಯೂಸ್ ವರದಿಯಲ್ಲಿ ತಿಳಿಸಿದೆ. ಸಂಭವನೀಯ ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದ ಪ್ರಮುಖ ನಗರಗಳಲ್ಲಿ ಫಿಲಡೆಲ್ಫಿಯಾ, ಅಟ್ಲಾಂಟಾ, ಚಿಕಾಗೋ ಮತ್ತು ಲಾಸ್ ಏಂಜಲೀಸ್ (LA) ಕೌಂಟಿ ಸೇರಿವೆ ಎಂದು ಯುಎಸ್ ಮೂಲದ ಸುದ್ದಿ ಪ್ರಸಾರ ಸಂಸ್ಥೆ ಹೇಳಿದೆ. ಕೊರೋನಾ ನಂತರ ಈಗ ಮತ್ತೊಂದು ಭೀತಿ ಜಗತ್ತನ್ನು ಕಾಡುತ್ತಿದೆ. ಹಲವು ರಾಷ್ಟ್ರಗಳಲ್ಲಿ ಭೀತಿ ಹುಟ್ಟಿಸಿದ್ದ ಮಂಕೀಪಾಕ್ಸ್ ದೊಡ್ಡಣ್ಣ ಅಮೆರಿಕದ ಅಂಗಳಕ್ಕೂ ಕಾಲಿಟ್ಟಾಗಿದೆ.


4.Kirik Party 2: ಮತ್ತೆ ಕಿರಿಕ್ ಮಾಡಲು ರಕ್ಷಿತ್ ಶೆಟ್ಟಿ ರೆಡಿ, ಹೇಗಿರಲಿದೆ ಪಾರ್ಟಿ ಸೀಕ್ವೆಲ್?


ರಕ್ಷಿತ್ ಶೆಟ್ಟಿ (Rakshit Shetty), ರಶ್ಮಿಕಾ ಮಂದಣ್ಣ (Rashmika mandanna) ಹಾಗೂ ಸಂಯುಕ್ತಾ ಹೆಗಡೆ ಅಭಿನಯದ 'ಕಿರಿಕ್​ ಪಾರ್ಟಿ' (Kirik Party) ಸಿನಿಮಾ ಕೇವಲ ಬಾಕ್ಸಾಫಿಸ್​ ಅಲ್ಲದೆ, ಈ ಚಿತ್ರದ ಹಾಡುಗಳು ಯೂಟ್ಯೂಬ್​ನಲ್ಲೂ (You tube) ಹೊಸ ದಾಖಲೆ ಬರೆದಿತ್ತು. ಇಂತಹ ಹಿಟ್​ ಸಿನಿಮಾದ ಸೀಕ್ವೆಲ್​ಗಾಗಿ ಕನ್ನಡದ ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ರಕ್ಷಿತ್​ ಶೆಟ್ಟಿ 'ಕಿರಿಕ್​ ಪಾರ್ಟಿ 2' KP2 ಚಿತ್ರ ಮಾಡುವುದಾಗಿ ಪ್ರಕಟಿಸಿ ಹಲವು ದಿನಗಳು ಕಳೆದಿದ್ದು, ಅಭಿಮಾನಿಗಳು ಚಿತ್ರದ ಅಪ್ಡೆಟ್​ಗಾಗಿ ಕಾಯುತ್ತಿದ್ದಾರೆ. ಇಷ್ಟು ದಿನ ಈ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ, ಆದರೆ ಈಗ ರಕ್ಷಿತ್ ಮತ್ತು ಟೀಮ್ ಈ ಚಿತ್ರದ ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


5.Gold Price: ಆಭರಣ ಪ್ರಿಯರಿಗೆ ಇಂದು ನಿರಾಸೆ, ಚಿನ್ನ-ಬೆಳ್ಳಿ ದರದಲ್ಲಿ ಏರಿಕೆ! ನಿಮ್ಮೂರಲ್ಲಿ ಬೆಲೆ ಎಷ್ಟಿದೆ ತಿಳಿದುಕೊಳ್ಳಿ


ಭಾರತದ ಮಾರುಕಟ್ಟೆಯಲ್ಲಿ (Indian Market) ಇಂದು 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,247 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ (Bengaluru) 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,247 ರೂಪಾಯಿ ನಿಗದಿಯಾಗಿದೆ. ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,100 ರೂಪಾಯಿ ಇದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,470 ರೂಪಾಯಿ ದಾಖಲಾಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,100 ಇದ್ದರೆ, ಮಂಗಳೂರಲ್ಲಿ 48,100 ರೂಪಾಯಿ ಇದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಮೈಸೂರಲ್ಲಿ 52,470 ರೂಪಾಯಿ ಇದ್ದರೆ, ಮಂಗಳೂರಲ್ಲಿ 52,470 ರೂಪಾಯಿ ಬೆಲೆ ಇದೆ.

Published by:Mahmadrafik K
First published: