Morning Digest: ಇಬ್ಬರು ಹೆಂಡಿರ ಮುದ್ದಿನ ಗಂಡನ ಕೊಲೆ, ಇಳಿಯಿತು ಚಿನ್ನದ ಬೆಲೆ! ಇವು ಇಂದಿನ ಟಾಪ್ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
Crime News: ಇಬ್ಬರು ಹೆಂಡ್ತಿಯ ಮುದ್ದಿನ ಗಂಡನ ಬರ್ಬರ ಹತ್ಯೆ! 20 ವರ್ಷ ಬಿಟ್ಟು ಬಂದ ತಂದೆಯನ್ನು ಕೊಂದ ಮಗ

ಯಾದಗಿರಿ(ಜೂ.02): ಆತ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ (PU College) ಉಪನ್ಯಾಸಕನಾಗಿ (Lecturer) ಕೆಲಸ ಮಾಡ್ತಾಯಿದ್ದ. ಇನ್ನೇನು ಎರಡು ತಿಂಗಳು ಕಳೆದ್ರೆ ನಿವೃತ್ತಿ (Retirement) ಕೂಡ ಆಗ್ತಾಯಿದ್ದ. ನಿವೃತ್ತಿ ಅಂಚಿನಲ್ಲಿದ್ದ ಉಪನ್ಯಾಸಕ ಮಟ ಮಟ ಮಧ್ನಾಹ್ನದಲ್ಲೇ ಬರ್ಬರ್ ವಾಗಿ ಕೊಲೆಯಾಗಿದ್ದಾನೆ. ಕೊಲೆ ನಡೆದ 19 ದಿನಗಳ ಬಳಿಕ ಪೊಲೀಸರು (Police) ಕೊಲೆಗಡುಕರನ್ನ ಹೆಡೆಮುರಿ ಕಟ್ಟಿದ್ದಾರೆ. ಕಳೆದ 19 ದಿನಗಳ ಹಿಂದೆ ಅಂದ್ರೆ ಇದೇ ಮೇ 12 ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ ಬಿ ಸಮೀಪ ಒಂದು ಕೊಲೆ ಘಟನೆ ನಡೆದಿತ್ತು. ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲೂಕಿನ ಗೋಪಾಳಪುರ ಗ್ರಾಮದ 59 ವರ್ಷದ ಮಾನಪ್ಪನನ್ನ ಪಾಪಿಗಳು ಬರ್ಬರವಾಗಿ ಕೊಲೆ ಮಾಡಿದ್ರು.

ಸಿದ್ದರಾಮೋತ್ಸವ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ!

ಬೆಂಗಳೂರು: ಹಾಲಿ ವಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ (Ex CM) ಸಿದ್ದರಾಮಯ್ಯ (Siddaramaiah) ಶೀಘ್ರವೇ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಮುಂಬರುವ ಆಗಸ್ಟ್ 12ರಂದು ಸಿದ್ದರಾಮಯ್ಯ ಅವರಿಗೆ ಭರ್ತಿ 75 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ 3 ದಿನಗಳ ಕಾಲ ದಾವಣಗೆರೆಯಲ್ಲಿ (Davanagere) ‘ಸಿದ್ದರಾಮೋತ್ಸವ’ (Siddaramotsava) ಹೆಸರಿನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ (Birthday) ಆಚರಣೆಯಂತೆ ಕಾಣಿಸುತ್ತದೆ. ಆದರೆ ಇದರ ಒಳ ಲೆಕ್ಕಾಚಾರ (Strategy) ಬೇರೆಯೇ ಇದೆ. ಸಿದ್ದರಾಮೋತ್ಸವ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ (Political power Show) ಮುಂದಾಗಿದ್ದಾರೆ ಅಂತ ರಾಜಕೀಯ ತಜ್ಞರು (Political experts) ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: Siddaramaiah: ಸಿದ್ದರಾಮೋತ್ಸವ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ! ಇದರ ಹಿಂದಿರೋ ಲೆಕ್ಕಾಚಾರವೇ ಬೇರೆ

ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್! ಮಾಜಿ ಶಾಸಕರ ಬರ್ತ್​ಡೇ ಬಾಡೂಟಕ್ಕೆ ಮುಗಿಬಿದ್ದ ಜನ!

ಕೋಲಾರ(ಜೂ.02) ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಮಾಜಿ ಶಾಸಕ ವೈ ಸಂಪಂಗಿ ಬೆನ್ನಿಗೆ ಸದಾ ನಿಲ್ಲುವುದಾಗಿ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ವೇದಿಕೆ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ. ಇತ್ತೀಚೆಗೆ ಸಂಸದ ಮುನಿಸ್ವಾಮಿ ಹಾಗು ಕೆ.ಜಿ.ಎಪ್ ಬಿಜೆಪಿ ಘಟಕ (BJP Unit),  ಮಾಜಿ ಶಾಸಕ (Former MLA) ಸಂಪಂಗಿ ರನ್ನ ಪರಿಗಣಿಸದೆ ಕೆಲ ಕಾರ್ಯಕ್ರಮ ನಡೆಸಿದ್ದರು. ಈ ಬಗ್ಗೆ ಹೈ ಕಮಾಂಡ್ ನಾಯಕರಿಗೆ ಸಂಪಂಗಿ ದೂರು ನೀಡಿದ್ದರು ಎನ್ನಲಾಗಿದೆ. ಇದೀಗ ಕೆಜಿಎಪ್ ತಾಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಪಂಗಿ ಬಣದ ಮುಖಂಡರು ಆಯೋಜಿಸಿದ್ದ ಸಂಪಂಗಿ ಅವರ, 52 ನೇ  ಹುಟ್ಟು ಹಬ್ಬದ ಅದ್ದೂರಿ ಕಾರ್ಯಕ್ರಮದಲ್ಲಿ, ಬಿಜೆಪಿ ನಾಯಕರ ದಂಡೇ ಭಾಗಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಮಂಜುನಾಥ್ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ವೇಣುಗೋಪಾಲ್ ಸೇರಿದಂತೆ, ನೂರಾರು ಬಿಜೆಪಿ ನಾಯಕರು, ಹಾಗು 2 ಸಾವಿರಕ್ಕು ಅಧಿಕ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಇಂದು ಬಂಗಾರ-ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ!

Gold and Silver Price on June 2, 2022: ಜಾಗತಿಕ ಮಾರುಕಟ್ಟೆಯಲ್ಲಿನ (International Market) ನಡೆಯುತ್ತಿರುವ ಬದಲಾವಣೆ ಹಿನ್ನೆಲೆಯಲ್ಲಿ ಏರಿಕೆಯ ಹಾದಿಯಲ್ಲಿ ಸಾಗಿರುವ ಚಿನ್ನದ ಬೆಲೆ (Gold Price) ಇಂದು ಮತ್ತೆ ಇಳಿಕೆ ಕಂಡಿದೆ. ಚಿನ್ನ, ಬೆಳ್ಳಿ ದರದಲ್ಲಿ (Silver Price) ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ಕಳೆದೆರೆಡು ದಿನಗಳಲ್ಲಿ ಚಿನ್ನ ಕೊಂಚ ಇಳಿಕೆ ಕಾಣುತ್ತಿರುವುದು ಖರೀದಿಗೆ ಮುಂದಾಗಿರುವವರಿಗೆ ಖುಷಿ ತಂದಿದೆ. ಚಿನ್ನ ಖರೀದಿಸುವ ಮುನ್ನ ಬೆಲೆಯನ್ನು ಒಮ್ಮೆ ತಿಳಿದುಕೊಳ್ಳುವುದು ಉತ್ತಮ. ಭಾರತದ ಮಾರುಕಟ್ಟೆಯಲ್ಲಿ (Indian Market) ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,775 ಇದ್ದದ್ದು ಇಂದು 4,750 ರೂಪಾಯಿಯಾಗಿದ್ದು, ಕಳೆದೆರೆಡು ದಿನಗಳಲ್ಲಿ ಏರಿಳಿತಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,500 ಆಗಿದೆ.

ಇದನ್ನೂ ಓದಿ: Gold and Silver Price: ಇಂದು ಬಂಗಾರ-ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ! ನಿಮ್ಮೂರಲ್ಲಿ ಬೆಲೆ ಎಷ್ಟಿದೆ ತಿಳಿದುಕೊಳ್ಳಿ

CM ಅಂದ್ರೆ Common Man ಅಂತ ಮತ್ತೆ ಪ್ರೂವ್ ಮಾಡಿದ ಬಸವರಾಜ ಬೊಮ್ಮಾಯಿ!

ಮೂಡಬಿದಿರೆ, ದಕ್ಷಿಣ ಕನ್ನಡ: ರಾಜ್ಯದ ಮುಖ್ಯಮಂತ್ರಿ (CM) ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿಎಂ ಅಂದ್ರೆ ಕಾಮನ್ ಮ್ಯಾನ್ (Common Man) ಎನ್ನುವುದನ್ನು ಮತ್ತೆ ನಿರೂಪಿಸಿದ್ದಾರೆ.  ಆಳ್ವಾಸ್ ಕಾಲೇಜಿನಲ್ಲಿ (Alva’s College) ನಡೆದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಮಕ್ಕಳ ಹಾಗೆ ಬೆರೆತು ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು (Students) ನೆರೆದಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಉತ್ಸಾಹಭರಿತರಾಗಿ ಸಂವಾದ ಮಾಡಿದ್ದಾರೆ.
Published by:Annappa Achari
First published: